ಸಾಮಾಜಿಕ ಜಾಲತಾಣಗಳಲ್ಲಿ ‘ಜೂನಿಯರ್ ರಾಜಾಹುಲಿ’ಗೆ ಸಕತ್ ಲೈಕ್ಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿ ಲೋಕವನ್ನು ತನ್ನದಷ್ಟೇ ಆದ ಶೈಲಿಯಲ್ಲಿ ಆಕರ್ಷಿಸುತ್ತಿರುತ್ತಾರೆ. ಅದರಲ್ಲೂ ಕೆಜಿಎಫ್ ಸಿನಿಮಾ ನಂತರವಂತೂ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ‘ಜೂನಿಯರ್ ರಾಜಾಹುಲಿ’ ಮೂಲಕ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ.

ಯಶ್ ಅವರ ತಾರಾಪತ್ನಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಕ್ಕಳ ಫೋಟೋವನ್ನು ಹರಿಯಬಿಡುತ್ತಾ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ತನ್ನ ಮುದ್ದು ಕಂದಮ್ಮಗಳ ಫೋಟೋಗಳನ್ನು ಪೋಸ್ಟ್ ಮಾಡಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.

View this post on Instagram

My Favourite Boys ❤ #nimmaRP #radhikapandit

A post shared by Radhika Pandit (@iamradhikapandit) on

ಇನ್‍ಸ್ಟಾಗ್ರಾಂನಲ್ಲಿ ಯಶ್ ಮತ್ತು ಮಗನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ‘ನನ್ನ ನೆಚ್ಚಿನ ಹುಡುಗರು’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಕ್ಯಾಪ್ಶನ್ ಎಲ್ಲರ ಗಮನಕೇಂದ್ರೀಕರಿಸಿದೆ.

ಇದನ್ನೂ ಓದಿ.. ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್’ 

 

Related posts