ಕರುನಾಡಲ್ಲಿ ಕೊರೋನಾ ಸ್ಫೋಟ; ಒಂದೇ ದಿನ ಬರೋಬ್ಬರಿ 248 ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಒಂದೇ ದಿನ 248 ಪಾಸಿಟಿವ್ ಕೇಸುಗಳು ವರದಿಯಾಗುವ ಮೂಲಕ ಕೋವಿಡ್-19 ಬೆಳವಣಿಗೆ ರಾಜ್ಯದ ಜನರ ಆತಂಕವನ್ನು ಹೆಚ್ಚಿಸಿದೆ.

ಗುರುವಾರ ಸಂಜೆ 5 ಗಂಟೆ ನಂತರ ಶುಕ್ರವಾರ ಸಂಜೆ ವರೆಗಿನ ರಾಜ್ಯದ ವಿವಿಧ ಜಿಲ್ಲೆಗಳ ಕೊರೋನಾ ವಿದ್ಯಮಾನಗಳನ್ನಾಧರಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಬಹಿರಂಗಪಡಿಸಿರುವ ಅಂಕಿ ಅಂಶ ಜನರನ್ನು ಬೆಚ್ಚಿ ಬೀಳಿಸುವಂತಿದೆ. 28 ತಾಸುಗಳಲ್ಲಿ 248 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ತಲಾ 60ಕ್ಕೂ ಹೆಚ್ಚು ಕೇಸ್’ಗಳು ಪಟ್ಟಿ ಸೇರಿವೆ.

 • ರಾಯಚೂರು – 62 ಹೊಸ ಕೇಸ್
 • ಕಲಬುರಗಿ – 61 ಹೊಸ ಕೇಸ್
 • ಯಾದಗಿರಿ – 60 ಹೊಸ ಕೇಸ್
 • ಉಡುಪಿ – 15 ಹೊಸ ಕೇಸ್
 • ಬೆಂಗಳೂರು ನಗರ – 12 ಹೊಸ ಕೇಸ್
 • ಬಳ್ಳಾರಿ – 9 ಹೊಸ ಕೇಸ್
 • ಚಿಕ್ಕಬಳ್ಳಾಪುರ – 5 ಹೊಸ ಕೇಸ್
 • ವಿಜಯಪುರ – 4 ಹೊಸ ಕೇಸ್
 • ದಾವಣಗೆರೆ – 4 ಹೊಸ ಕೇಸ್
 • ಹಾಸನ – 4 ಹೊಸ ಕೇಸ್
 • ತುಮಕೂರು – 2 ಹೊಸ ಕೇಸ್
 • ಚಿಕ್ಕಮಗಳೂರು – 2 ಹೊಸ ಕೇಸ್
 • ಮಂಡ್ಯ – 2 ಹೊಸ ಕೇಸ್
 • ಮೈಸೂರು – 2 ಹೊಸ ಕೇಸ್
 • ಧಾರವಾಡ – 1 ಹೊಸ ಕೇಸ್
 • ಚಿತ್ರದುರ್ಗ – 1 ಹೊಸ ಕೇಸ್
 • ಶಿವಮೊಗ್ಗ – 1 ಹೊಸ ಕೇಸ್
 • ಬೆಂಗಳೂರು ಗ್ರಾಮೀಣ – 1 ಹೊಸ ಕೇಸ್

ಈ ಪೈಕಿ ಬಹುಪಾಲು ಮಂದಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯವರೆಂದು ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ.. ‘ಪವರ್ ಸ್ಟಾರ್’ ಮುಂದಿನ ಸಿಎಂ..? ರಾಜ್ಯ ರಾಜಕಾರಣದಲ್ಲಿ ‘ಕೈ ಸೂತ್ರ’ದ ಕೌತುಕ

Related posts