ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ ಬಳಿಕ ಸ್ಥಗಿತಗೊಂಡಿದ್ದ ಯೆಸ್ ಬ್ಯಾಂಕ್ ಸೇವೆ ನಿಧಾನಗತಿಯಲ್ಲಿ ಪುನರಾರಂಭವಾಗುತ್ತಿದೆ. ಸ್ಥಗಿತವಾಗಿದ್ದ ಫೋನ್ ಪೇ ಸೇವೆ ಕೂಡ ಆರಂಭವಾಗಿದೆ.
ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಬರ್ಕ್ಕಸ್ತ್ ಮಾಡಿರುವ ಆರ್.ಬಿ.ಐ. ನೂತನ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ಅನಂತರ ಎಟಿಎಂ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ತಬ್ಧಗೊಳಿಸಲಾಗಿತ್ತು. ಇದೀಗ ಎಟಿಎಂ ಸೇವೆ ಪುನರಾರಂಭದ ಭರವಸೆ ಸಿಕ್ಕಿದ್ದು, ಜೊತೆಗೆ ಫೋನ್ ಪೇ ಸೇವೆ ಕೂಡ ಆರಂಭವಾಗಿದೆ.
ಈ ಕುರಿತಂತೆ ತನ್ನ ಟ್ವಿಟರ್ ಮಾಡಿರುವ ಪೋನ್ ಪೇ ಸಂಸ್ಥೆ, ನಾವು ಸೇವೆಗೆ ಮರಳಿರುವುದಾಗಿ ಹೇಳಿದೆ. ಈ ವರೆಗೂ ಯೆಸ್ ಬ್ಯಾಂಕ್ ಇದ್ದ ವಹಿವಾಟನ್ನುಸ್ಥಗಿತಗೊಳಿಸಿ ಐಸಿಐಸಿಐ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಫೋನ್ ಪೇ ಹೇಳಿದೆ.