ಯೆಸ್​ ಬ್ಯಾಂಕ್, ಫೋನ್ ಪೇ ಗ್ರಾಹಕರು ನಿರಾಳ

ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ ಬಳಿಕ ಸ್ಥಗಿತಗೊಂಡಿದ್ದ ಯೆಸ್​ ಬ್ಯಾಂಕ್ ಸೇವೆ ನಿಧಾನಗತಿಯಲ್ಲಿ ಪುನರಾರಂಭವಾಗುತ್ತಿದೆ. ಸ್ಥಗಿತವಾಗಿದ್ದ ಫೋನ್ ಪೇ ಸೇವೆ ಕೂಡ ಆರಂಭವಾಗಿದೆ.

ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯೆಸ್​ ಬ್ಯಾಂಕ್ ಆಡಳಿತ ಮಂಡಳಿಯನ್ನು ಬರ್ಕ್ಕಸ್ತ್ ಮಾಡಿರುವ ಆರ್.ಬಿ.ಐ. ನೂತನ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ಅನಂತರ ಎಟಿಎಂ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ತಬ್ಧಗೊಳಿಸಲಾಗಿತ್ತು. ಇದೀಗ ಎಟಿಎಂ ಸೇವೆ ಪುನರಾರಂಭದ ಭರವಸೆ ಸಿಕ್ಕಿದ್ದು, ಜೊತೆಗೆ ಫೋನ್ ಪೇ ಸೇವೆ ಕೂಡ ಆರಂಭವಾಗಿದೆ.

ಈ ಕುರಿತಂತೆ ತನ್ನ ಟ್ವಿಟರ್ ಮಾಡಿರುವ ಪೋನ್ ಪೇ ಸಂಸ್ಥೆ, ನಾವು ಸೇವೆಗೆ ಮರಳಿರುವುದಾಗಿ ಹೇಳಿದೆ. ಈ ವರೆಗೂ ಯೆಸ್ ಬ್ಯಾಂಕ್ ಇದ್ದ ವಹಿವಾಟನ್ನುಸ್ಥಗಿತಗೊಳಿಸಿ ಐಸಿಐಸಿಐ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಫೋನ್ ಪೇ ಹೇಳಿದೆ.

Related posts