ಭಾರತದಲ್ಲೂ ಕೊರೋನಾ ತಲ್ಲಣ[ ಕೇರಳದಲ್ಲಿ ಐವರಲ್ಲಿ ಸೋಂಕು ಪತ್ತೆ

ತಿರುವನಂತಪುರಂ: ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೋನಾ ವೈರಸ್, ಇತ್ತ ಭಾರತದಲ್ಲೂ ತಲ್ಲಣ ಸೃಷ್ಟಿಸಿದೆ. ಭಾರತದ ಹಲವು ನಗರಗಳಲ್ಲಿ ಶಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು ಭೀತಿ ಆವರಿಸಿದೆ.

ಇದೆ ವೇಳೆ, ಕೇರಳದ ವಿವಿಧೆಡೆ ಸುಮಾರು ಐವರಿಗೆ ಕೋರೋಣ ವೈರಸ್ ಸೋಂಕು ಹರಡಿರುವುದು ದೃಢಪಟ್ಟಿದೆ. ಐವರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ಕೇರಳ ಸರ್ಕಾರ ಹೇಳಿದೆ.

ಈ ಬಗ್ಗೆ ವಿವರ ಬಹಿರಂಗಪಡಿಸಿರುವ ಆರೋಗ್ಯ ಸಚಿವೆ ಆರ್.ಕೆ.ಶೈಲಜಾ, ಇತ್ತೀಚಿಗೆ ಇಟಲಿಯಿಂದ ಬಂದಿರುವ ಮೂವರು ಹಾಗೂ ಅವರ ಇಬ್ಬರು ಸಂಬಂಧಿಕರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಇವರೆಲ್ಲರೂ ಪಾತನಂತಿಟ್ಟ ಜಿಲ್ಲೆಯವರಾಗಿದ್ದು ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Related posts