ಚಾಮರಾಜನಗರ: ಗುಂಡ್ಲುಪೇಟೆ ಬಳಿ ಕಾಡಾನೆ ದಾಳಿಗೆ ರೈತ ಬಲಿ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಮಾನವ–ಕಾಡುಪ್ರಾಣಿ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಕಾಡಾನೆ ದಾಳಿಗೆ 65 ವರ್ಷದ ರೈತ ಜನ್ನೂರ ನಾಯಕ ಮೃತಪಟ್ಟಿದ್ದಾರೆ.

ಕೋಟೆಕೆರೆ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ ರೈತನನ್ನು ತುಳಿದು ಕೊಂದು ಹಾಕಿದೆ. ಘಟನೆ ಬಳಿಕ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಾಡಾನೆಗಳ ನಿರಂತರ ಉಪಟಳದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ದೂರಿದ್ದಾರೆ.

ಕಾಡಾನೆಗಳು ಕಾಡಿನಿಂದ ನಾಡಿನತ್ತ ಬರುವುದನ್ನು ತಡೆಯಲು ಸೋಲಾರ್ ಫೆನ್ಸಿಂಗ್ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Related posts