ನಟ ನಾಗ ಚೈತನ್ಯ ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಥ್ರಿಲ್ಲರ್ ‘ವೃಷಕರ್ಮ’ ಡಿಸೆಂಬರ್ 4, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾರ್ತಿಕ್ ದಂಡು ನಿರ್ದೇಶನದ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.
ನಾಗ ಚೈತನ್ಯ ಅವರು ‘ಎಕ್ಸ್’ನಲ್ಲಿ ಬಿಡುಗಡೆಯ ದಿನಾಂಕ ಹಂಚಿಕೊಂಡಿದ್ದು, “ಒಂದು ಪೌರಾಣಿಕ ದೃಶ್ಯವೈಭವ ಅನಾವರಣಗೊಳ್ಳಲಿದೆ” ಎಂದು ಹೇಳಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಹಿರಿಯ ನಟ ಜಯರಾಮ್ ಅವರು ಚಿತ್ರದಲ್ಲಿ ಪ್ರೊಫೆಸರ್ ರಂಗನಾಥ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಈಗಾಗಲೇ ಅವರ ಫಸ್ಟ್‌ಲುಕ್ ಬಿಡುಗಡೆ ಮಾಡಿದ್ದು, ಪಾತ್ರವನ್ನು ಕಥೆಯ ಪ್ರಮುಖ ಮಾರ್ಗದರ್ಶಕ ಶಕ್ತಿಯಾಗಿ ಪರಿಚಯಿಸಿದೆ.

ಕಳೆದ ವರ್ಷ ನಾಗ ಚೈತನ್ಯ ಅವರ ಹುಟ್ಟುಹಬ್ಬದಂದು ಚಿತ್ರದ ಶೀರ್ಷಿಕೆ ಹಾಗೂ ಅವರ ಫಸ್ಟ್‌ಲುಕ್ ಬಿಡುಗಡೆಯಾಗಿತ್ತು. ರಗಡ್ ಹಾಗೂ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದ ಅವರ ಲುಕ್ ಗಮನ ಸೆಳೆದಿತ್ತು.
The mythical stage is set for the world to witness..#Vrushakarma GRAND RELEASE WORLDWIDE ON 04.12.26 ❤️🔥
A MYTHICAL SPECTACLE LIKE NEVER BEFORE 🔱#VrushakarmaOnDec4
Yuvasamrat @chay_akkineni @karthikdandu86 @Meenakshiioffl #SparshShrivastava @BvsnP @aryasukku @AJANEESHB… pic.twitter.com/8z5AAgkJjI
— Annapurna Studios (@AnnapurnaStdios) September 10, 2026
ಚಿತ್ರದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದು, ‘ಲಾಪತಾ ಲೇಡೀಸ್’ ಖ್ಯಾತಿಯ ಸ್ಪರ್ಶ್ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿದ್ದಾರೆ.
ಸುಕುಮಾರ್ ಕಥೆ ಬರೆದಿರುವ ಚಿತ್ರಕ್ಕೆ ನೀಲ್ ಡಿ ಕುನ್ಹಾ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಮತ್ತು ನವೀನ್ ನೂಲಿ ಸಂಕಲನವಿದೆ. ಶ್ರೀ ನಾಗೇಂದ್ರ ತಂಗಲ ನಿರ್ಮಾಣ ವಿನ್ಯಾಸ ನಿರ್ವಹಿಸಿದ್ದಾರೆ.

