ಬೆಂಗಳೂರು: ಬೆಂಗಳೂರು ಉತ್ತರ ಪಾಲಿಕೆಯ ಹೊಸ ಕಚೇರಿ ನಿರ್ಮಾಣ ಮಾಡಬೇಕು ಎಂದು ಮೂರು- ನಾಲ್ಕು ಸ್ಥಳಗಳ ಪ್ರಸ್ತಾವನೆಯಿದೆ. ಸ್ಥಳ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕಿದೆ. ಇದರ ಬಗ್ಗೆ ಮಂತ್ರಿಗಳು, ಶಾಸಕರು ತಮ್ಮದೇ ಆದ ಅಭಿಪ್ರಾಯ ನೀಡಿದ್ದಾರೆ. ಸ್ಥಳ ಪರಿಶೀಲನೆ ನಂತರ ತೀರ್ಮಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಕೆವಿಕೆಯಲ್ಲಿ ನಿರ್ಮಾಣ ಮಾಡಲಾಗುವುದೇ ಎಂದಾಗ, “ಇಲ್ಲ, ಸದ್ಯಕ್ಕೆ ಆ ಆಲೋಚನೆ ಇಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ” ಎಂದು ಉತ್ತರಿಸಿದರು.
ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, “ಬೆಳಗಾವಿ ಜಿಲ್ಲೆಯ ಒಂದಷ್ಟು ನೀರಾವರಿ ಯೋಜನೆಗಳನ್ನು ಚರ್ಚೆ ನಡೆಸಲು ಭೇಟಿ ಮಾಡಿದ್ದರು”ಎಂದರು.

