ಮಹಾದೇವ್ ಬೆಟ್ಟಿಂಗ್ ಜಾಲ: ಪ್ರಮುಖ ಆರೋಪಿ ಸೌರಭ್ ಚಂದ್ರಾಕರ್ ನನ್ನು ಒಮಾನ್‌ನಲ್ಲಿ ಬಂಧಿಸಿ ಕರೆತಂದ ಸಿಬಿಐ

ನವದೆಹಲಿ: ಸುಮಾರು ₹6,000 ಕೋಟಿ ಮೌಲ್ಯದ ಮಹಾದೇವ್ ಆನ್‌ಲೈನ್ ಬುಕ್ ಅಕ್ರಮ ಬೆಟ್ಟಿಂಗ್ ಜಾಲದ ಪ್ರವರ್ತಕ ಎಂದು ಆರೋಪಿಸಲಾದ ಸೌರಭ್ ಚಂದ್ರಾಕರ್‌ನನ್ನು ಸಿಬಿಐ ಒಮಾನ್‌ನಿಂದ ಭಾರತಕ್ಕೆ ಕರೆತಂದಿದೆ.

ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟಿಸ್ ಆಧರಿಸಿ ರಾಯಲ್ ಒಮಾನ್ ಪೊಲೀಸರು ಚಂದ್ರಾಕರ್‌ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ಬಳಿಕ ಆತನನ್ನು ಭಾರತಕ್ಕೆ ಕರೆತರಲು ಸಿಬಿಐ ತಂಡ ಮಸ್ಕತ್‌ಗೆ ತೆರಳಿತ್ತು.

ಚಂದ್ರಾಕರ್‌ನನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ನ್ಯಾಯಾಲಯದ ನಿರ್ದೇಶನದಂತೆ ಹೆಚ್ಚಿನ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Related posts