ಕೊರೋನಾ ವಿಚಾರ; ಸಂಜೀವಿನಿಯಾದ ಎಸಿಪಿಗೆ ನಾಡಿನ ಸೆಲ್ಯೂಟ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ಸವಾಲಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾಗುತ್ತಿದ್ದು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ ಮಾಡಿದೆ.

ಈ ನಡುವೆ ಮಾರಣಾಂತಿಕ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಸಂಜೀವಿನಿಯಾಗಬಲ್ಲ ಪ್ಲಾಸ್ಮಾವನ್ನು ದಾನ ಮಾಡುವ ಮೂಲಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಸತೀಶ್ ರಾಜ್ಯದ ಗಮನಸೆಳೆದಿದ್ದಾರೆ. ಪ್ರಸ್ತುತ ದೇವನಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿರುವ ಸತೀಶ್ ಅವರ ಕೋವಿಡ್ ನಿಂದ ಗುಣಮುಖರಾದ ನಂತರ ಅವರು ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಎಸಿಪಿ ಸತೀಶ್ ಅವರ ಈ ಮಾನವೀಯ ನಡೆ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಹರಿದಾಡುತ್ತಿವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡಾ ಪೊಲೀಸ್ ಅಧಿಕಾರಿ ಸತೀಶ್ ಅವರ ಸೇವಾ ಮನೋಭಾವವನ್ನು ಹಾದಿ ಹೋಗಲಿ ಟ್ವೀಟ್ ಮಾಡಿದ್ದಾರೆ. ಕೊರೊನಾದಿಂದ ಗುಣಮುಖರಾದವರ ಪ್ಲಾಸ್ಮಾ ಮತ್ತೊಬ್ಬರ ಜೀವ ಉಳಿಸಬಹುದು. ಕೊರೊನಾ ಗೆದ್ದ ಪ್ರತಿಯೊಬ್ಬರೂ, ಅದರಲ್ಲೂ ಯುವಕರು, ಪ್ಲಾಸ್ಮಾ ದಾನ ಮಾಡಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಕೂಡಾ ಎಸಿಪಿ ಸತೀಶ್ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ.. ಮಹಿಳಾ ಪೊಲೀಸ್ ಟ್ರೈನಿಂಗ್ ವೇಳೆ ಜಿಂಗ್ ಚಕ್ ಜಿಂಗಿಂಗ್ ಚಕ್; ವೀಡಿಯೋ ವೈರಲ್

Related posts