ಕೇಶವೇಂದ್ರ ಶ್ರೀಗಳ 350ನೇ ಪುಣ್ಯ ತಿಥಿ ಹಿನ್ನೆಲೆ; ನಾಡಿನ ದೇಗುಲಗಳಿಗೆ ಶ್ರೀಗಂಧ ಸಸಿ ವಿತರಣೆ

ಮಂಗಳೂರು: ಯತಿವರ್ಯರಾದ ಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಅವರ 350ನೇ ಪುಣ್ಯ ತಿಥಿ ಆಚರಣೆಯನ್ನು ಪರಿಸರ ಕೈಂಕರ್ಯ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ಶ್ರೀ ಕಾಶೀ ಮಠ ಸಂಸ್ಥಾನ ದ ಗುರು ಪರಂಪರೆಯ ದ್ವಿತೀಯ ಯತಿವರ್ಯ ಶ್ರೀಮದ್ ಕೇಶವೇಂದ್ರ ತೀರ್ಥರ 350ನೇ ಪುಣ್ಯ ತಿಥಿ ವರ್ಷ ಆಚರಣೆ ನೆನಪಿಗಾಗಿ ಸುಮಾರು 350 ಶ್ರೀಗಂಧದ ಗಿಡಗಳನ್ನು ವಿತರಿಸಲು ಸಂಸ್ಥಾನದ ಪೀಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಉದ್ದೇಶಿಸಿದ್ದಾರೆ. ಅದರಂತೆ ಸ್ವಾಮೀಜಿಯ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಶ್ರೀಗಂಧ ಸಸಿಗಳನ್ನು ವಿತರಿಸಿ ಈ ಕೈಂಕರ್ಯಕ್ಕೆ ಮುನ್ನುಡಿ ಬರೆದರು.

 

ಸಮಾಜದ ಎಲ್ಲಾ ದೇವಳಗಳಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ನೀಡಲಾಗುವುದು .  ಜಿ.ಯಸ್ .ಬಿ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಲೆಕ್ಕ ಪರಿಶೋಧಕ ಎಂ. ಜಗನ್ನಾಥ್ ಕಾಮತ್ ಮತ್ತು ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, ಕೋಟಾ ,  ಕೋಟೇಶ್ವರ, ಚೆಂಪಿ, ವಿವಿಧ ದೇವಳಗಳ ಆಡಳಿತ ಮಂಡಳಿ ಪ್ರಮುಖರು  ಹಾಗೂ ಈ ಗಂಧದ ಗಿಡಗಳ ಸೇವಾಧಾರ  ಯು. ರೇಂದ್ರ ನಾಯಕ್ ಉಡುಪಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮಕ್ಕೆ ಆರಂಭ ಸಿಕ್ಕಿತು.

ಇದನ್ನೂ ಓದಿ.. ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ಆರಂಭ; ತೀರ್ಥ, ಪ್ರಸಾದ ಇಲ್ಲ

Related posts