ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ಆರಂಭ; ತೀರ್ಥ, ಪ್ರಸಾದದ ವಿತರಣೆ ಇಲ್ಲ

ಬೆಂಗಳೂರು: ಲಾಕ್’ಡೌನ್ ಕಾರಣದಿಂದಾಗಿ ಮುಚ್ಚಲಾಗಿದ್ದ ದೇವಾಲಯಗಳು ಇದೀಗ ತೆರೆದಿವೆ. ಬಹುತೇಕ ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ಆರಂಭವಾಗಿವೆ. ಮೈಸೂರಿನ ಚಾಮುಂಡೇಶ್ವರಿನ ನಂಜನಗೂಡು ನಂಜುಂಡೇಶ್ವರ, ಪೊಳಲಿ ರಾಜರಾಜೇಶ್ವರಿ, ಧರ್ಮಸ್ಥಳ ಮಂಜುನಾಥನ ಸನ್ನಿಧಿ ಸಹಿತ ಬಹುತೇಕ ದೇವಾಲಯಗಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಮಾರ್ಗಸೂಚಿಯನ್ನು ಪಾಲಿಸಲೇಬೇಕಿದೆ ಎಂಬ ಸೂಚನೆಯನ್ನು ದೇವಾಲಯ ಸಿಬ್ಬಂದಿ ನೀಡುತ್ತಿದ್ದ ದೃಶ್ಯ ಕಂಡುಬರುತ್ತಿತ್ತು.

ಮಸೀದಿಗಳಲ್ಲೂ ಪ್ರಾರ್ಥನೆಗೆ ಅವಕಾಶ ಲಭಿಸಲಿದ್ದು ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಕ್ಯಾಥೊಲಿಕ್ ಚರ್ಚ್ ಗಳು ಜೂನ್ 13ರಿಂದ ಆರಂಭವಾಗುತ್ತವೆ.

ಮಾರ್ಗಸೂಚಿ ನಿಯಮಗಳೇನು?

  • ಭಕ್ತರಿಗೆ ತೀರ್ಥ, ಪ್ರಸಾದದ ವಿತರಣೆ ಇಲ್ಲ
  • 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ
  • ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
  • ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
  • ಪ್ರವೇಶ ದ್ವಾರದ ಸಮೀಪ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು
  • ಪ್ರವೇಶ ದ್ವಾರ ಬಳಿ ಸೋಪ್, ಸ್ಯಾನಿಟೈಸರ್ ಇಟ್ಟಿರಬೇಕು

ಇದನ್ನೂ ಓದಿ.. ಪೊಳಲಿ ಕ್ಷೇತ್ರದಲ್ಲಿ ವಿಶೇಷತೆ ಏನು? 

 

Related posts