ಲಾಕ್ ಡೌನ್ ನಂತರವೂ ಹಲವು ನಿರ್ಬಂಧ; ಕೇಂದ್ರದ ಮುಂದಿನ ಕ್ರಮ ಏನು ಗೊತ್ತಾ? ಇಲ್ಲಿದೆ EXCLUSIVE ಮಾಹಿತಿ.

ದೆಹಲಿ: ಭಾರತದಲ್ಲಿ ಕೊರೋನಾ ಹೆಚ್ಚುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಈ ವರೆಗೂ ಸುಮಾರು 1300 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂಬುದು ಆರೋಗ್ಯ ಇಲಾಖೆ ಹೇಳುತ್ತಿರುವ ಮಾಹಿತಿ. ಇಷ್ಟೂ ಕೂಡಾ ಹೊಸ ಪ್ರಕರಣಗಳಲ್ಲ. ಬದಲಾಗಿ ಹಲವು ದಿನಗಳ ಹಿಂದೆಯೇ ಶಂಕಿತ ರೋಗಿಗಳಾಗಿ ದಾಖಲಾದವರಲ್ಲಿ ಕೋವಿಡ್-19 ದೃಢ ಪಟ್ಟಿರುವುದು. ಅಂದರೆ ವೈರಾಣು ಇದೀಗ ಹರಡಿದ್ದಲ್ಲ, ಬದಲಾಗಿ ಈ ಹಿಂದೆಯೇ ಅಂದರೆ ವಾರದ ಹಿಂದೆಯೇ ಆಸ್ಪತ್ರೆಗೆ ದಾಖಲಾದವರಲ್ಲೇ ಹೆಚ್ಚಾಗಿ ಈ ಸೋಂಕು ದೃಢಪಟ್ಟಿರುವುದು.

ಲಾಕ್ ಡೌನ್ ಪರಿಣಾಮಕಾರಿ: ಮೋದಿ ಕ್ರಮಕ್ಕೆ ಮೆಚ್ಚುಗೆ

ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ಘೋಷಣೆಗೂ ಮೊದಲು ಸೋಂಕಿತರ ಸಂಪರ್ಕವಾದವರಲ್ಲಿ ಮಾತ್ರ ವೈರಾಣು ಹರಡಿದೆ. ಅನಂತರ ಹರಡಿದಿರುವ ಸಾಧ್ಯತೆಗಳು ಕಡಿಮೆ. ಹೀಗಿರುವಾಗ ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ಈ ಸೋಂಕು ಹಬ್ಬುವ ಪ್ರಕ್ರಿಯೆ ದೂರವಾಗಬಹುದು ಎನ್ನುತ್ತಿದ್ದಾರೆ ತಜ್ಞರು. ಈ ವರೆಗೂ ದೇಶದಲ್ಲಿನ ಪ್ರಕರಣಗಲ್ಲಿ ವಿದೇಶದಲ್ಲಿ ಸೋಂಕು ಅಂಟಿಸಿಕೊಂಡು ಬಂದವರೇ ಹೆಚ್ಚು. ಸೋಂಕಿತರ ಮನೆಯಲ್ಲೇ ಕೆಲವರಿಗೆ ಸೋಂಕು ಹರಡಿದರೆ, ಆಸ್ಪತ್ರೆ ಹಾಗೂ ಕಾರ್ಕಾನೆಗಳಲ್ಲಿ ಈ ವೈರಾಣು ಹಬ್ಬಿದ್ದಿದೆ. ದೆಹಲಿಯ ಪ್ರಾರ್ಥನಾ ಮಂದಿರದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವರಿಗೆ ಈ ಸೋಂಕು ಹರಡಿದ್ದನ್ನು ಬಿಟ್ಟರೆ ಸಮುದಾಯದಲ್ಲಿ ಹಬ್ಬಿರುವ ಪ್ರಕರಣ ಬೆರಳೆಣಿಕೆಯಷ್ಟೇ ಎಂಬುದು ಸಮಾಧಾನಕರ ಸಂಗತಿ. ಹಾಗಾಗಿಯೇ ಪ್ರಧಾನಿ ಮೋದಿಯವರು ಕೈಗೊಂಡ ಲಾಕ್ ಡೌನ್ ಆದೇಶ ಅರ್ಥಪೂರ್ಣ, ಸಕಾಲಿಕ ಹಾಗೂ ಪರಿಣಾಮಕಾರಿಯಾಗಿದೆ ಎಂಬುದು ವೈದ್ಯಲೋಕ ಮತ್ತು ವಿಜ್ಞಾನ ಲೋಕದ ಪಂಡಿತರ ವಿಶ್ಲೇಷಣೆ.

ಕೇಂದ್ರದ ಬತ್ತಳಿಕೆಯಲ್ಲಿದೆ ಕಠಿಣ ಅಸ್ತ್ರ:

ಈ ನಡುವೆ ಕೊರೋನಾದಿಂದ ಭಾರತ ಮುಕ್ತವಾಗಲು ಕೆಲವೊಂದು ಕಠಿಣ ನಿರ್ಧಾರಗಳು ಅನಿವಾರ್ಯವಾಗಿದೆ ಎಂಬ ಸಲಹೆಗಳೂ ಕೇಳಿಬರುತ್ತಿವೆ.
ಲಾಕ್ ಡೌನ್ ಅವಧಿ ಮುಗಿಯುವ ವರೆಗೂ ಸಮುದಾಯ ಅಂತರ ಅಗತ್ಯ ಲಾಕ್ ಡೌನ್ ಮುಗಿದ ನಂತರವೂ ಸಾಮಾಜಿಕ ಅಂತರ ಕಾಪಾಡುವುದು ಒಳಿತು.

  • ಲಾಕ್ ಡೌನ್ ನಂತರವೂ ಕನಿಷ್ಠ 1 ತಿಂಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಬ್ರೇಕ್.
  • ದೂರ ಪ್ರಯಾಣದ ಬಸ್ಸು, ರೈಲು, ಮೆಟ್ರೋ ಕೆಲಕಾಲ ಇರಬಾರದು.
  • ಜಿಲ್ಲೆ-ಜಿಲ್ಲೆಗಳ ನಡುವೆ ಹಾಗೂ ರಾಜ್ಯ-ರಾಜ್ಯಗಳ ನಡುವೆ ಸಂಪರ್ಕ ನಿರ್ಬಂಧ.
  • ವಿಮಾನಯಾನ ಸೇವೆ ಒಂದೆರಡು ತಿಂಗಳು ಇರಬಾರದು.
  • ಅಂತಾರಾಷ್ಟೀಯ ವಿಮಾನ ಸೇವೆ ಕನಿಷ್ಠ 3 ತಿಂಗಳು ಸ್ಥಗಿತವಾಗಿರಬೇಕು.
  • ವಿದೇಶದಿಂದ ಬರುವವರಿಗೆ ನಿರ್ದಿಷ್ಟ ದಿನ ಕ್ವಾರಂಟೈನ್ ಕಡ್ಡಾಯವಿರಬೇಕು.
  • ಆಮದು ವಸ್ತುಗಳ ಮೇಲೆ ನಿಯಂತ್ರಣವಿರಬೇಕು.
  • ಮದುವೆ, ಉತ್ಸವ, ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧ.
  • ಮಾಲ್, ಸಿನಿಮಾ, ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ವಿಧಿಸಬೇಕು

ಇತ್ಯಾದಿ ಸಲಹೆಗಳನ್ನು ಪಾಲಿಸಿದಲ್ಲಿ ನಮ್ಮ ದೇಶ ಕೊರೋನಾ ಸಂಕಟದಿಂದ ಪಾರಾಗಬಹುದು ಎಂಬುದು ತಜ್ಞರ ಸಲಹೆ. ಕೇಂದ್ರ ಸರ್ಕಾರ ಕೂಡಾ ಅನಿವಾರ್ಯವಾದರೆ ಇದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ.

Related posts