ಕೊರೋನಾ ವಿಚಾರದಲ್ಲಿ ಬೆಂಗಳೂರು, ಮಂಗಳೂರು ಸೇಫ್ ಅಲ್ಲ..!! ಇನ್ನು ನಿಮ್ಮೂರು..? ಇಲ್ಲಿದೆ ನೋಡಿ ಹಾಟ್ ಸ್ಪಾಟ್ ಪಟ್ಟಿ..

ದೆಹಲಿ: ಯಮದೂತ ಕೊರೋನಾ ವೈರಾಣು ಇಂದು ಜಗತ್ತಿನಾದ್ಯಂತ ಮರಣ ಮೃದಂಗವನ್ನೇ ಭಾರಿಸುತ್ತಿದೆ. ಸಾವಿನ ಸರಣಿ ಮುಂದುವರಿಯಲು ಕಾರಣವಾಗಿರುವ ಕೋವಿಡ್-19 ವೈರಾಣು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ ಎಂದು ಮನಗಂಡಿರುವ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. . ಈ ಕಾರಣಕ್ಕಾಗಿಯೇ ಭಾರತದಲ್ಲೂ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ.

ದೇಶಾದ್ಯಂತ ಕೊರೋನಾ ಭೀತಿಯ ಅಲೆಯನ್ನೇ ಎಬ್ಬಿಸಿದೆ. ಅದರಲ್ಲೂ ದೇಶದ ಹಲವು ನಗರಗಳು ಈ ಕೊರೋನಾ ವೈರಾಣು ಹರಡುವ ಹಾಟ್ ಸ್ಪಾಟ್ ಎಂದೇ ಗುರುತಾಗಿವೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟುತ್ತಿದ್ದಂತೆಯೇ ಈ ಹಾಟ್ ಸ್ಪಾಟ್ ತಾಣಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯನ್ನು ಗಮನಿಸಿದರೆ ಸಿಲಿಕಾನ್ ಸಿಟಿ ಬೆಂಗಳೂರು ಒಂದು ಹಾಟ್ ಸ್ಪಾಟ್ ಆಗಿದೆ. ಇದೆ ವೇಳೆ ಕೇರಳಕ್ಕೆ ಹೊಂದಿಕೊಂಡಿರುವ ಕಾಸರಗೋಡು ಕೂಡಾ ಅತ್ಯಂತ ಡೇಂಜರಸ್ ಸ್ಪಾಟ್ ಆಗಿರುವುದರಿಂದ ಮಂಗಳೂರು ಕೂಡಾ ಸೇಫ್ ಅಲ್ಲ ಎಂಬುದು ತಜ್ಞರ ಅಭಿಪ್ರಾಯ.

ಸದ್ಯಕ್ಕೆ ಬಿಡುಗಡೆಯಾಗಿರುವ ಈ ಹಾಟ್ ಸ್ಪಾಟ್ ನಗರಗಳ ಪಟ್ಟಿ ಇಂತಿದೆ.

 • ದೆಹಲಿ : ದಿಲ್ಶಾದ್ ಗಾರ್ಡನ್,
 • ದೆಹಲಿ : ನಿಜಾಮುದ್ದೀನ್
 • ಉತ್ತರ ಪ್ರದೇಶ : ನೋಯ್ಡಾ
 • ಉತ್ತರ ಪ್ರದೇಶ : ಮೀರತ್,
 • ಮಹಾರಾಷ್ಟ್ರ : ಮುಂಬೈ,
 • ಮಹಾರಾಷ್ಟ್ರ : ಪುಣೆ,
 • ರಾಜಸ್ಥಾನ : ಭಿಲ್ವಾರಾ,
 • ರಾಜಸ್ಥಾನ : ಜೈಪುರ
 • ಕೇರಳ : ಪಥನಮತ್ತಟ್ಟ,
 • ಕೇರಳ : ಕಾಸರಗೋಡು,
 • ಕರ್ನಾಟಕ : ಬೆಂಗಳೂರು,
 • ತಮಿಳುನಾಡು : ಈರೋಡ್,
 • ಮಧ್ಯಪ್ರದೇಶ: ಇಂದೋರ್,
 • ಪಂಜಾಬ್ : ನವಾನ್‌ಶಹರ್,
 • ಗುಜರಾತ್ : ಅಹಮದಾಬಾದ್,
 • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಭಾರತದಲ್ಲಿ ಇತರ ರಾಷ್ಟ್ರಗಳಂತೆ ಸಮುದಾಯದಲ್ಲಿ ಹರಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸದ್ಯಕ್ಕೆ ಸೇಫ್ ಝೋನ್ ಎಂದು ಗುರುತಾಗಿದ್ದರೂ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಹಾಗಾಗಿಯೇ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜನರು ಮನೆಯಲ್ಲೇ ಇದ್ದಾರೆ ಸಮಾಜಕ್ಕೂ ಕ್ಷೇಮಾ ತಾವೂ ಕ್ಷೇಮ ಎಂಬ ಜಾಗೃತಿ ಮೊಳಗಿಸಲಾಗುತ್ತಿದೆ.

ಇದನ್ನೂ ಓದಿ..  ಲಾಕ್ ಡೌನ್ ನಂತರವೂ ಹಲವು ನಿರ್ಬಂಧ; ಕೇಂದ್ರದ ಮುಂದಿನ ಕ್ರಮ ಏನು ಗೊತ್ತಾ? ಇಲ್ಲಿದೆ EXCLUSIVE ಮಾಹಿತಿ.

Related posts