ಪಾದರಾಯನಪುರ ರಾಕ್ಷಸೀ ಕೃತ್ಯ: ಕೈ ಶಾಸಕ ಜಮೀರ್ ಅಹ್ಮದ್ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಪಾದರಾಯನಪುರ ಘಟನೆ ಬಗ್ಗೆ ಸಾಮಾಜಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಗಲಭೆಗೂ ಮುನ್ನ ಅಲ್ಲಿ ನೆರೆದಿದ್ದ ಜನರು ಶಾಸಕ ಜಮೀರ್ ಅಹ್ಮದ್ ಆಗಮಿಸುವವರೆಗೂ ಕ್ವಾರಂಟೈನ್’ಗೆ ಬರಲ್ಲ ಎಂದಿದ್ದರು. ಅನಂತರ ಕೊರೋನಾ ವಾರಿಯರ್ಸ್ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿ ರಾಕ್ಷಸೀ ಪ್ರವೃತ್ತಿ ತೋರಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಕಾಂಗ್ರೆಸ್ ಶಾಸಕ ಬಿ.ಜೆಡ್. ಜಮೀರ್ ಅಹ್ಮದ್, ಕೊರೋನಾ ವಾರಿಯರ್ಸ್ ಮೇಲಿನ ದಾಳಿಯನ್ನು ಖಂಡಿಸಿದರು. ಆದರೆ ಪೊಲೀಸರು ರಾತ್ರಿ ಹೊತ್ತು ಅಲ್ಲಿ ಹೋಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಗಲಭೆ ನಡೆದಿರುವ ಪ್ರದೇಶ ಅತ್ಯಂತ ಸೂಕ್ಷ್ಮ ಸ್ಥಳ. ಅಲ್ಲಿರುವವರು ಕೂಲಿಕಾರ್ಮಿಕರೇ ಹೆಚ್ಚು ಮಂದಿ. ಅಲ್ಲಿಗೆ ಪೊಲೀಸರು ಹಗಲು ಹೊತ್ತಲ್ಲಿ ಹೋಗಬೇಕಿತ್ತು ಎಂದು ಜಮೀರ್ ಹೇಳಿದ್ದಾರೆ.

ಇದಕ್ಕೂ ಮುನ್ನ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕ ಬಿ.ಜೆಡ್ ಜಮೀರ್ ಅಹ್ಮದ್ ಖಾನ್, ಪಾದರಾಯನಪುರ ಬಡಾವಣೆಯಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆಗೆ ಯತ್ನಿಸಿರುವುದು ದುಃಖಕರ. ಸರ್ಕಾರ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿರುವುದು ನಿಮ್ಮ ಕ್ಷೇಮಕ್ಕಾಗಿ. ಅವರೊಂದಿಗೆ ಸಹಕರಿಸಿ, ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದರು.

ಮತ್ತೊಂದು ಟ್ವೀಟ್’ನಲ್ಲಿ ಜಮೀರ್ ಅಹಮದ್ ಅವರು, ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ.

ಇನ್ನೊಂದು ಟ್ವೀಟ್’ನಲ್ಲಿ ಅವರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ.. ಪಾದರಾಯನಪುರ ಗಲಭೆ; ಆ ಲೇಡಿ ಡಾನ್ ಯಾರು ಗೊತ್ತಾ?

 

 

Related posts