ಪಾದರಾಯನಪುರ ಗಲಭೆ; ಆ ಲೇಡಿ ಡಾನ್ ಯಾರು ಗೊತ್ತಾ?

ಬೆಂಗಳೂರು: ಕೊರೋನಾ ಹಾಟ್’ಸ್ಪಾಟ್ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ನಂತರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಿಳಿದಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತರ ಮೇಲೆ ನಡೆದ ದುರ್ಜನ್ಯ ನಂತರ ಪಾದರಾಯನಪುರದಲ್ಲೂ ಕೊರೋನಾ ವಾರಿಯರ್ಸ್ ಮೇಲೆ ದಾಳಿ ನಡೆದಿರುವುದು ದುರಾದೃಷ್ಟಕರ. ಅದರಲ್ಲೂ ಗಲಭೆ ಸಂದರ್ಭದಲ್ಲಿ ಪೊಲೀಸರು ಕೂಡಾ ಅಸಹಾಯಕರಾಗಿದ್ದರು.

ಈ ಗಲಭೆ ಕುರಿತು ಪರಿಶೀಲನೆಗಿಳಿದಿರುವ ಪೊಲೀಸರು ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಫೂಟೇಜ್’ಗಳನ್ನೂ ಪರಿಶೀಲಿಸಿದ್ದಾರೆ. ಅದನ್ನಾಧರಿಸಿ ರಾತ್ರಿ ಬೆಳಗಾಗುವಷ್ಟರಲ್ಲಿ 50ಕ್ಕೂ ಹೆಚ್ಚು ಪುಡಿ ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಮಹಿಳೆಯೂ ಸೇರಿದ್ದಾಳೆ. ಆಕೆ ಕೂಡಾ ಗಲಭೆಗೆ ಕುಮ್ಮಕ್ಕು ನೀಡಿದ್ದಾಳೆಂಬುದು ಪೊಲೀಸರ ಅಭಿಮತ.

ಈ ನಡುವೆ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಪೊಲೀಸರು ಗಲಭೆಕೋರರ ವಿರುದ್ಧ ಮಧ್ಯ ರಾತ್ರಿಯಿಂದಲೇ ಕಾರ್ಯಾಚರಣೆಗಿಳಿದಿದ್ದಾರೆ. ಮೂವರು ಡಿಸಿಪಿಗಳು, 6 ಎಸಿಪಿಗಳು, 20 ಇನ್’ಸ್ಪೆಕ್ಟರ್’ಗಳು, ಸುಮಾರು 25 ಪಿಎಸ್ಐಗಳು ಈ ಕಾರ್ಯಾಚರಣೆಯಲ್ಲಿ ಸಾಥ್ ನೀಡಿದ್ದಾರೆ. ಜೊತೆಗೆ ಪರಿಸ್ಥಿತಿ ನಿಯಂತ್ರಿಸುವ ಸಂಬಂಧ ೧೦ ಕೆ ಎಸ ಅರ ಪಿ ತೂಕಡಿಗಳನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ.

ಈ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರು ಪಾದರಾಯನಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಜೊತೆ ಸಮಾಲೋಚನೆ ನಡೆಸಿದ ಗೃಹ ಸಚಿವರು, ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದನ್ನೂ ಓದಿ… ಪಾದರಾಯನಪುರ ರಂಪಾಟ ಪ್ರಕರಣ: ಮುಲಾಜಿಲ್ಲದೆ ಕ್ರಮಕ್ಕೆ ಸಿಎಂ ಸೂಚನೆ

Related posts