ಪೌರಕಾರ್ಮಿಕರಲ್ಲಿ ಭಗವಂತನನ್ನು ಕಂಡ ‘ಪೂಜಾರಿ’; ಬೆಂಗಳೂರಿನಲ್ಲೊಂದು ಅನನ್ಯ ಕಾರ್ಯಕ್ರಮ

ಬೆಂಗಳೂರು: ರಾಜಧಾನಿಯ ಪೌರ ಕಾರ್ಮಿಕರ ಮೊಗದಲ್ಲಿ ಅದೇನೋ ಹೊಸತನದ ಸಂತಸ. ತಮಗೆ ಸಿಕ್ಕಿದ ಅಪೂರ್ವ ಗೌರವ ಕಂಡು ಎಂದಿಲ್ಲದ ಪುಳಕ. ಸರ್ಕಾರ ಕೊಡುವ ಸಂಬಳಕ್ಕಿಂತಲೂ ಹೆಚ್ಚಿನ ಭಕ್ತಿ, ಸಮ್ಮಾನದ ಕೊಡುಗೆ ಸಿಕ್ಕಾಗ ನಿಜವಾಗಿಯೂ ತಾವು ಧನ್ಯ ಎಂಬ ಮನೋಭಾವ.

ಹೌದು, ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಪೌರ ಕಾರ್ಮಿಕರ ಪಾಳಯದಲ್ಲಿ ಈ ಸಾಮಾಜಿಕ ಕಾರ್ಯಕರ್ತನ ಜನ್ಮ ದಿನ ಸಮಾರಂಭವು ತಾವೆಂದೂ ಕಾಣದ ಅಪರೂಪದ ಸಂತಸಕ್ಕೆ ಕಾರಣವಾಗಿತ್ತು.

ಉದ್ಯಮಿಯೂ ಆಗಿರುವ ಸಾಮಾಜಿಕ ಕಾರ್ಯಕರ್ತ ಗೋವಿಂದ ಬಾಬು ಪೂಜಾರಿಯವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಪೌರ ಕಾರ್ಮಿಕರ ಪಾಲಿಗೆ ಆಶಾದಾಯಕ ಸನ್ನಿವೇಶವನ್ನು ಸೃಷ್ಟಿಸಿ, ಖುಷಿ ಪಡಿಸಿ, ಆಮೂಲಕ ತಾನೂ ಖುಷಿಪಡುವ ರೀತಿಯಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿ ಅಲ್ಲಿದ್ದವರಲ್ಲೆರನ್ನೂ ಮೂಕವಿಸ್ಮಿತರನ್ನಾಗಿಸಿದ್ದಾರೆ.

ತನ್ನ ಕಾರ್ಯಕ್ಷೇತ್ರ ಇರುವ ಪ್ರದೇಶವಾದ ಬೊಮ್ಮನಹಳ್ಳಿ ಸುತ್ತಮುತ್ತಲ ಸಾವಿರಾರು ಪೌರ ಕಾರ್ಮಿಕರನ್ನು ತನ್ನ ಸಂಸ್ಥೆಗೆ ಕರೆಸಿಕೊಂಡು, ಅವರಿಗೆ ಸರ್ಕಾರ ಕೊಡುವ ವೇತನಕ್ಕಿಂತ ಕಡಿಮೆ ಇಲ್ಲದಂತೆ ಧನ ಸಹಾಯ ಮಾಡಿದರು. ತಿಂಗಳು ಸರಿದರೂ ಖಾಲಿಯಾಗದು ಎನ್ನುವಷ್ಟು ಪ್ರಮಾಣದಲ್ಲಿ ಪಡಿತರ ಹಾಗೂ ಅಗತ್ಯ ಸಾಮಾಗ್ರಿಗಳನ್ನೊಳಗೊಂಡ ವಿಶೇಷ ಕಿಟ್’ಗಳನ್ನು ಹಂಚಿದರು.

ಇದೀಗ ಕೊರೋನಾ ಸಂಕಷ್ಟ ಕಾಲ. ಅಲ್ಲಲ್ಲಿ ಲಾಕ್’ಡೌನ್, ಇನ್ನೂ ಕೆಲವಡೆ ಸೀಲ್’ಡೌನ್ ಮೂಲಕ ಜನಸಾಮಾನ್ಯರನ್ನು ರಕ್ಷಿಸಲಾಗುತ್ತಿದೆ. ಆದರೆ ಜನಸಾಮಾನ್ಯರ ನಾಳಿನ ಸ್ವಾಸ್ಥ್ಯಕ್ಕಾಗಿ ದುಡಿಯುವ ಪೌರ ಕಾರ್ಮಿಕರಿಗೆ ಅದ್ಯಾವ ಲಾಕ್’ಡೌನ್-ಸೀಲ್’ಡೌನ್ ನಿಯಮಗಳಿಲ್ಲ. ಪ್ರಾಣವನ್ನು ಪಣವಾಗಿಟ್ಟು ಸೂರ್ಯೋದಯಕ್ಕೆ ಮುನ್ನವೇ ಕಾಯಕಕ್ಕೆ ಧುಮುಕುವ ಇವರಿಗೆ ಸರ್ಕಾರ ಕೊಡುತ್ತಿರುವುದು ಅಲ್ಪ ಮೊತ್ತದ ವೇತನ. ಹೀಗಿರುವಾಗ ಇಂತಹಾ ಸ್ವಚ್ಛ ಸೇನಾನಿಗಳ ಬದುಕಿಗೆ ಆಧಾರವಾಗುವ ಕೊಡುಗೆ ನೀಡಬೇಕೆಂಬ ಮಹಾಭಿಲಾಷೆಯಿಂದಾಗಿ ತಮ್ಮ ಹುಟ್ಟು ಹಬ್ಬವವನ್ನು ಗೋವಿಂದ ಬಾಬು ಪೂಜಾರಿಯವರು ವಿಶಿಷ್ಟವಾಗಿ ಆಚರಿಸಿಕೊಂಡರು.


ತಮ್ಮ ಈ ರೀತಿಯ ಆಚರಣೆಯ ಉದ್ದೇಶವನ್ನು ಹೇಳಿಕೊಂಡ ಗೋವಿಂದ ಬಾಬು ಪೂಜಾರಿಯವರು, ತಾನೂ ಒಬ್ಬ ಬಡಪಾಯಿಯಾಗಿದ್ದುಕೊಂಡೇ ಬೆಳೆದು ನಿಂತವನು. ಹಾಗಾಗಿ ನನಗೆ ಬಡವರ ನೋವುಗಳೂ ತಿಳಿದಿದೆ. ಅಂತಹಾ ಅಸಹಾಯಕರಿಗೆ ನೆರವಾಗಿ ಅವರ ಮೊಗದಲ್ಲಿ ಸಂತಸದ ನಗು ಮೂಡಿಸುವುದರಲ್ಲಿ ನನಗೂ ಖುಷಿ ಇದೆ ಎಂದರು.

ತನ್ನ ಉದ್ದಿಮೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾಯಕಯೋಗಿಗಳನ್ನೂ ಈ ಪೂಜಾರಿ ಮರೆತಿಲ್ಲ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 6,500ಕ್ಕೂ ಹೆಚ್ಚು ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡಿ ಅವರ ಮೊಗದಲ್ಲೂ ಸಂತಸದ ಹೊನಲು ಹರಿಸಿದ್ದಾರೆ.

ಬರಲಿದೆ ‘ಫಿಶ್ ವೇಪರ್ಸ್’; ಉದ್ಯಮಿ ಗೋವಿಂದ ಬಾಬು ಪೂಜಾರಿ ಸಾಧನೆಗೆ ಸಿಎಂ ಫುಲ್ ಖುಷ್ 

Related posts