ಬರಲಿದೆ ‘ಫಿಶ್ ವೇಪರ್ಸ್’; ಕರಾವಳಿ ಮೂಲದ ಉದ್ಯಮಿ ಸಾಧನೆಗೆ ಸಿಎಂ ಫುಲ್ ಖುಷ್

ಬೆಂಗಳೂರು: ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಕಾರ್ಯವೈಖರಿಗೆ ಹೊಸ ಆಯಾಮ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮೀನುಗಾರರ ಪಾಲಿಗೆ ಆಶಾವಾದಿಯಾಗಿದ್ದಾರೆ. ಮತ್ಯೋದ್ಯಮ ಉತ್ತೇಜನ ಉದ್ದೇಶದಿಂದ ವಿನೂತನ ಉದ್ದಿಮೆಗೆ ಮುನ್ನುಡಿ ಬರೆದಿದ್ದಾರೆ. ಮೀನಿನಿಂದ ಚಿಪ್ಸ್ ತಯಾರಿಸುವ ಸುಧಾರಿತ ಅವಿಷ್ಕಾರ ಈ ಉದ್ಯಮಿಯ ಗರಡಿಯಲ್ಲಿ ಸಾಧ್ಯವಾಗಿದ್ದು, ಇದೀಗ ಎಲ್ಲರ ಕುತೂಹಲ ಈ ಚಿಪ್ಸ್‌ನತ್ತ ನೆಟ್ಟಿದೆ.

ಏನಿದು ಫಿಷ್ ವೇಪರ್ಸ್?

ಮೀನುಗಾರಿಕೆ ಕರಾವಳಿಯ ಸಾಂಪ್ರದಾಯಿಕ ಕಸುಬುಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಆಹಾರ ಕ್ಷೇತ್ರಕ್ಕಷ್ಟೇ ಅಲ್ಲ, ಫಿಷ್ ಆಯಿಲ್ ಸಹಿತ ವಿವಿಧ ಉತ್ಪನ್ನಗಳಿಗಾಗಿ ರಫ್ತಾಗುತ್ತವೆ. ಆದರೂ ಮತ್ಯೋದ್ಯಮ ಕ್ಷೇತ್ರ ಆರ್ಥಿಕವಾಗಿ ಬಡವಾಗಿದ್ದು ಮೀನಿಗೆ ಬೇಡಿಕೆ ಸೃಷ್ಟಿಸಿ ಮೀನುಗಾರ ಕುಟುಂಬಕ್ಕೆ ವರದಾನವಾಗುವ ರೀತಿ ಉದ್ದಿಮೆ ಸ್ಥಾಪಿಸುವಲ್ಲಿ ದೇಶದ ಪ್ರತಿಷ್ಟಿತ ಆಹಾರೋದ್ಯಮ ಸಂಸ್ಥೆ ‘ಶೆಫ್ ಟಾಕ್’ ಸಂಸ್ಥೆಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ‘ಮತ್ಸ್ಯ ಬಂಧನ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ನೂತನ ಸಂಸ್ಥೆಯು ಮೀನಿನಿಂದಲೇ ವೇಪರ್ಸ್ ತಯಾರಿಸಲಿದೆ.

ಸದ್ಯ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಉತ್ಪಾದನೆ ಆರಂಭವಾಗಿದ್ದು ಈ ಹೊಸ ರೀತಿಯ ಫಿಷ್ ವೇಪರ್ಸ್ ಸಂಶೋಧಕರು ಹಾಗೂ ಆಹಾರೋದ್ಯಮ ಕ್ಷೇತ್ರದ ಗಣ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹೊಸ ಚಿಪ್ಸ್ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಫಷ್ ವೇಪರ್ ತಯಾರಿಕೆಯ ಸಾಧನೆ ಬಗ್ಗೆ ಶಹಬ್ಬಾಸ್ ವ್ಯಕ್ತಪಡಿಸಿದ್ದಾರೆ.

ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರಾಭಿವೃದ್ಧಿ ಮಂತ್ರಿ ಬೈರತಿ ಬಸವರಾಜ್ ಮೊದಲಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರಷ್ಟೇ ಅಲ್ಲ, ತಮ್ಮ ಇಲಾಖೆಯ ಶ್ರೀಮಂತಿಕೆ ಬಗ್ಗೆ ಹೊಂಗನಸು ಹೊತ್ತಿರುವ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಎಲ್.ದೊಡ್ಡಮನಿ ಹಾಗೂ ಅಧಿಕಾರಿಗಳೂ ಕೂಡಾ ಫುಲ್ ಖುಷ್.

ಇದನ್ನೂ ಓದಿ.. ಹಳ್ಳಿಗೆ ಜೀವಜಲ ಹರಿಸಿದ ‘ಭಗೀರಥ’; ಎಲ್ಲೆಲ್ಲೂ ChefTalk ‘ಪೂಜಾರಿ’ದ್ದೇ ಮಾತು

ಕರಾವಳಿಯಲ್ಲೂ ನೆಲೆ

‘ಶೆಫ್ ಟಾಕ್’ನ ಅಂಗ ಸಂಸ್ಥೆಯಾಗಿರುವ ‘ಮತ್ಸ್ಯಬಂಧನ’ ಸಂಸ್ಥೆ ಸದ್ಯ ಬೆಂಗಳೂರಿನಲ್ಲೇ ಫಿಷ್ ವೇಪರ್ಸ್ ಉತ್ಪಾದಿಸಲಿದ್ದು ಇನ್ನು ಕೆಲವೇ ತಿಂಗಳಲ್ಲಿ ಮೀನುಗಾರಿಕಾ ವಲಯ ವ್ಯಾಪ್ತಿಯ ಬೈಂದೂರಿನಲ್ಲೂ ಉತ್ಪಾದನಾ ಘಟಕ ಆರಂಭಿಸಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.

ಇದನ್ನೂ ಓದಿ.. ಯುವಜನರ ಸಬಲೀಕರಣಕ್ಕೆ ಮುನ್ನುಡಿ ಬರೆದ ಸೊಸೈಟಿ: ಕರಾವಳಿ ಮೂಲದ ಉದ್ಯಮಿಯ ಸಾಹಸಗಾಥೆ

 

Related posts