ಬಿರುಬೇಸಿಗೆ ಕಾಲದಲ್ಲಿ ತಂಪಾಗಿಸುತ್ತೆ ‘ಫ್ರೂಟ್ಸ್ ಫಾಲೋಡ’

ಇದು ಬಿರು ಬೇಸಿಗೆಯ ಕಾಲ. ಎಷ್ಟು ತಂಪು ಪಾನೀಯ ಕುಡಿದರೂ ದೂರವಾಗದ ಬಾಯಾರಿಕೆ. ಇಂತಹಾ ಸಮಯದಲ್ಲಿ ತಂಪು ಪಾನೀಯದ ಮೊರೆ ಹೋಗದೆ ಹಣ್ಣಿನ ರಸ, ಎಳನೀರಿನಂತಹಾ ಪದಾರ್ಥಗಳ ಮೊರೆ ಹೋಗಿ. ಬಾಯಾರಿಕೆಯೂ ದೂರವಾಗುತ್ತೆ; ಆರೋಗ್ಯವೂ ಸುಧಾರಿಸುತ್ತೆ. ಅಂತಹಾ ನಳಪಾಕವೊಂದು ಇಲ್ಲಿದೆ. ಅದುವೇ ‘ಫ್ರೂಟ್ಸ್ ಫಾಲೋಡ’.

ಸ್ವಾದಿಷ್ಟ ‘ಫ್ರೂಟ್ಸ್ ಫಾಲೋಡ’ ಮಾಡುವ ವಿಧಾನ ಹೀಗಿದೆ.

ಬೇಕಾದ ಸಾಮಗ್ರಿ:

  • ಪಪ್ಪಾಯ ಅರ್ಧ ಕಪ್
  • ಕಲ್ಲಂಗಡಿ ಅರ್ಧ ಕಪ್
  • ಬಾಳೆಹಣ್ಣು ಅರ್ಧ
  • ಕಸ್ ಕಸ್ 3
  • ಸಕ್ಕರೆ 1
  • ಉಪ್ಪು ಒಂದು ಚಿಟಿಕೆ
  • ಚಿಕ್ಕು ಇಸ್ ಕ್ರೀಮ್ 3 ಸ್ಕೂಪ್
  • ಜೇನುತುಪ್ಪ 3 ಚಮಚ

ಮಾಡುವ ವಿಧಾನ:

ಮೊದಲಿಗೆ ಹಣ್ಣುಗಳನ್ನು ಸಣ್ಣ ಸಣ್ಣಗೆ ಹಚ್ಚಿ ಇಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕಸ್ ಕಸ್ ಸಿದ್ಧಮಾಡಿಕೊಳ್ಳಬೇಕು. ಅಮೇಲೇ ಒಂದು ಲೋಟ ತೆಗೆದುಕೊಂಡು ಅದಕ್ಕೆ ಒಂದರ ಮೇಲೆ ಒಂದು ಹಚ್ಚಿಕೊಂಡ ಹಣ್ಣು, ಸಕ್ಕರೆ, ಜೇನುತುಪ್ಪ, ಕಸ್ ಕಸ್ ಹಾಕಿದರೆ ತಂಪಾದ ಹಣ್ಣುಗಳ ಫಾಲೋಡ ಸವಿಯಬಹುದು.

ಇದನ್ನೂ ಓದಿ.. ತುಂಬು ಗರ್ಭಿಣಿಯಿಂದ ಜನರ ಸೇವೆ; ನರ್ಸ್’ಗೆ ಕರೆ ಮಾಡಿ ಅಭಿನಂದಿಸಿದ ಸಿಎಂ

 

Related posts