ದೆಹಲಿ: ಪೆಟ್ರೋಲ್ ಡೀಸೆಲ್ ದರ ಏರುತ್ತಲೇ ಇದೆ. ಲಾಕ್’ಡೌನ್ ನಿಯಮ ಸಡಿಲಿಕೆ ನಂತರ ತೈಲ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ 25 ಪೈಸೆ ತುಟ್ಟಿಯಾದರೆ ಡೀಸೆಲ್ ದರವೂ 21 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆಗಿಂತ ಡೀಸೆಲ್ ದರವೇ ಹೆಚ್ಚಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 80.38 ರೂಪಾಯಿ ಹಾಗೂ ಡೀಸೆಲ್ ದರ 80.40 ರೂಪಾಯಿ. ಮುಂಬೈ, ಬೆಂಗಳೂರು, ಚೆನ್ನೈ ಸಹಿತ ಎಲ್ಲಾ ನಗರಗಳಲ್ಲೂ ತೈಲ ದರ ಏರಿಕೆಯಾಗಿದೆ.
Year: 2020
ದೇಶದಲ್ಲಿ 5 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ದೆಹಲಿ: ಜಗತ್ತಿನ 200ಕ್ಕೂ ಹೆಚ್ಚು ದೇಶಗಳನ್ನು ನಡುಗಿಸುತ್ತಿರುವ ಅಗೋಚರ ಕೊರೋನಾ ವೈರಸ್ ಭಾರತದಲ್ಲಂತೂ ತಲ್ಲಣ ಸೃಷ್ಟಿಸಿದೆ. ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದ್ದು ಶುಕ್ರವಾರದ ವರದಿ ಬೆಚ್ಚಿ ಬೀಳಿಸುವಂತಿದೆ. ದಾಖಲೆ ಎಂಬಂತೆ ಒಂದೇ ದಿನ 18,552 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ 24 ಗಂಟೆಗಳಲ್ಲಿ 384 ಮಂದಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆಂದು ಹೇಳಿದೆ. ಭಾರತದಲ್ಲಿ ಈವರೆಗೆ ಸಾವಿನ ಸಂಖ್ಯೆ 15685ಕ್ಕೆ ತಲುಪಿದೆ.
ಕೇರಳದಲ್ಲಿದೆ ಕಮ್ಯುನಿಸ್ಟ್ ಪ್ರೇಮದ ‘ಚೀನಾ ಜಂಕ್ಷನ್’; ನೆಹರೂ ಇಟ್ಟ ಹೆಸರು ಬದಲಾವಣೆಗೆ ಹೆಚ್ಚಿದ ಒತ್ತಡ
ತಿರುವನಂತಪುರಂ: ಕೊರೋನಾ ವೈರಾಣು ತಲ್ಲಣದ ಸನ್ನಿವೇಶದ ಜೊತೆಯಲ್ಲೇ ಚೀನಾ ಭಾರತದ ಭೂಭಾಗ ಪ್ರವೇಶಕ್ಕೆ ಯತ್ನ ನಡೆಸುತ್ತಲೇ ಇದೆ. ಈ ಕಾರಣದಿಂದಾಗಿಯೇ ಲಡಾಖ್ ಬಳಿ, ಗಲ್ವಾನ್ ಕಣಿವೆಯಲ್ಲಿ ಸಮರಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಕುಪಿತರಾಗಿರುವ ಭಾರತೀಯರು ಚೀನೀ ವಸ್ತುಗಳ ಬಹಿಷ್ಕಾರದ ಅಭಿಯಾನವನ್ನೇ ಆರಂಭಿಸಿದ್ದಾರೆ. ಈ ಅಭಿಯಾನ ಇದೀಗ ಕಮ್ಯುನಿಸ್ಟರ ನಾಡು ಕೇರಳದಲ್ಲಿ ಪ್ರತಿಧ್ವನಿಸಿದೆ. ನೆಹರೂ ನಾಮಕರಣ ಮಾಡಿರುವ ಗ್ರಾಮವೊಂದರ ಹೆಸರನ್ನು ಬದಲಿಸಬೇಕೆಂದು ಅಲ್ಲಿನ ಜನರು ಮುಂದಿಟ್ಟಿರುವ ಒತ್ತಾಯ ಈಗ ದೇಶವ್ಯಾಪಿ ಸದ್ದಾಗುತ್ತಿದೆ. ಕೇರಳದ ಪತ್ತನಂತಿಟ್ಟ ಸಮೀಪ ಗ್ರಾಮವೊಂದಿದೆ. ಆ ಗ್ರಾಮಕ್ಕೆ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ‘ಚೀನಾ ಮುಕ್ಕು’ ಎಂದು ಹೆಸರಿಸಿದ್ದರು. ಇದೀಗ ಚೀನಾ ವಿರುದ್ಧ ಅಭಿಯಾನ ನಡೆಯುತ್ತಿರುವಾಗ ನಮ್ಮ ಊರಿನ ಹೆಸರಿಗಿರುವ ಚೀನಾ ದೇಶದ ಸ್ಪರ್ಶವೂ ತೊಲಗಲಿ ಎಂಬ ಕೂಗು ಅಲ್ಲಿ ಎದ್ದಿದೆ. ತಮ್ಮೂರಿನ ಹೆಸರನ್ನು ಬದಲಾವಣೆ ಮಾಡಲು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಏನಿದು…
ದಿಗಂತ್, ಐಂದ್ರಿತಾ ಟೀಮ್ ಮತ್ತು 2 ನಾಯಿ.. ವೀಡಿಯೋಗೆ ಸಕತ್ ಲೈಕ್
ಕೊರೋನಾ ಲಾಕ್’ಡೌನ್ ಸಂದರ್ಭದಲ್ಲಿ ಮನೆಯೊಳಗೇ ಬಂಧಿಯಾಗಿದ್ದ ದಿಗಂತ್ ಮತ್ತು ಐಂದ್ರಿತಾ ರೇ, ಲಾಕ್’ಡೌನ್ ನಿಯಮಗಳು ಸಡಿಲವಾಗಿದ್ದೆ ತಡ ಜಾಲಿ ಮೂಡ್’ಗೆ ಜಾರಿದ್ದಾರೆ. ಊರೂರು ತಿರುಗುತ್ತಾ ಪ್ರಕೃತಿ ಮಡಿಲಲ್ಲಿ ತೇಲಾಡುತ್ತಿರುವ ಈ ತಾರಾ ಜೋಡಿ ತಮ್ಮ ಪ್ರಯಾಣ ಕಾಲದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. View this post on Instagram A post shared by Aindrita Ray (@aindrita_ray) ಪ್ರಕೃತಿಯ ಸೌಂದರ್ಯದ ಮಧ್ಯೆ ರಿಲ್ಯಾಕ್ಸ್ ಮೂಡ್’ನಲ್ಲಿರುವ ದಿಗಂತ್ ಮತ್ತು ಐಂದ್ರಿತಾ ಜೊತೆ ಪೋಷಕರು ಕೂಡ ಈ ಟ್ರಿಪ್ ಸಂದರ್ಭವನ್ನು ಎಂಜಾಯ್ ಮಾಡುತ್ತಿದ್ದಾರೆ. ಟ್ರಿಪ್‍ಗೆ ತಾವಷ್ಟೇ ಅಲ್ಲ ತಮ್ಮ ಪ್ರೀತಿಯ ಎರಡು ನಾಯಿಗಳನ್ನೂ ಕರೆದೊಯ್ದಿದ್ದು ಅವರ ಫೋಟೋಗಳು ಫಾಲೊವೆರ್ಸ್ ಗಮನ ಸೆಳೆದಿವೆ. ಇದನ್ನೂ ಓದಿ.. ಕೇರಳದಲ್ಲಿದೆ ಕಮ್ಯುನಿಸ್ಟ್ ಪ್ರೇಮದ ‘ಚೀನಾ ಜಂಕ್ಷನ್’; ನೆಹರೂ ಇಟ್ಟ ಹೆಸರು ಬದಲಾವಣೆಗೆ ಹೆಚ್ಚಿದ ಒತ್ತಡ
ನೆಚ್ಚಿನ ವ್ಯಕ್ತಿಯ ಹುಟ್ಟುಹಬ್ಬ ಪ್ರಯುಕ್ತ ಕೊರೋನಾ ರೋಗಿಗಳ ಸೇವೆ
ಉಡುಪಿ: ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಸಾಮಾಜಿಕ ಕಾರ್ಯಕರ್ತ, ಉದ್ಯಮಿಯ ಜನ್ಮ ದಿನವನ್ನು ಊರ ನಾಗರಿಕರು ಕೊರೋನಾ ವಾರಿಯರ್ಸ್’ಗಳ ಸೇವೆಯ ಮೂಲಕ ವಿಶಿಷ್ಟವಾಗಿ ಆಚರಿಸಿದರು. ನಾಡಿನ ವಿವಿಧ ಸಂಸ್ಥೆಗಳ ಉದ್ಯೋಗಿಗಳ ಹಸಿವು ನೀಗಿಸುವ ಶೆಫ್ ಟಾಕ್ ಕಂಪೆನಿಯ ಮಾಲೀಕ ಗೋವಿಂದ ಬಾಬು ಪೂಜಾರಿಯವರ ಹುಟ್ಟುಹಬ್ಬ ಶುಕ್ರವಾರ ನೆರವೇರಿತು. ಅವರು ಎಲ್ಲೆಲ್ಲಾ ನಾಡಿನ ಜನರ ಸೇವೆ ಮಾಡಿದ್ದಾರೋ, ಯಾರಿಗೆಲ್ಲಾ ನೆರವಾಗಿದ್ದಾರೋ ಅಲ್ಲೆಲ್ಲಾ ಈ ರೀತಿ ಅನನ್ಯ ಕಾರ್ಯಕ್ರಮ ನೆರವೇರಿತು. ಬೆಂಗಳೂರಿನಲ್ಲಿ ಕೊರೋನಾ ವಾರಿಯರ್ಸ್’ಗಳಿಗೆ ಅಗತ್ಯ ವಸ್ತುಗಳ ಕಿಟ್ ನೀಡಿದ ಗೋವಿಂದ ಬಾಬು ಪೂಜಾರಿಯವರ ಆಪ್ತರು, ಅತ್ತ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸಂತ್ರಸ್ತರ ಸೇವೆಯಲ್ಲಿ ತೊಡಗಿದವರ ಪಾಲಿಗೆ ಆಶಾಕಿರಣವಾದರು. ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ರೊಬರ್ಟ್ ರೆಬೆಲ್ಲೊ ಹಾಗೂ ಡಾ.ನಾಗೇಶ ಅವರಿಗೆ ಈ ಹಣ್ಣು ಹಂಪಲು…
ಬಾಳೆಕಾಯಿ ಹೂವಿನ ದೋಸೆ ಆರೋಗ್ಯಪೂರ್ಣವೂ ಹೌದು
ಬಾಳೆ ಬಹೂಪಯೋಗಿ. ಬಾಳೆಯಲ್ಲಿ ಬಿಸಾಡುವ ಅಂಶಗಳೇ ಇಲ್ಲ. ಬಾಳೆ ಹೂವಿನಿಂದ ಹಿಡಿದು ಹಣ್ಣಿನವರೆಗೆ, ದಿಂಡಿನಿಂದ ಹಿಡಿದು ಎಲೆಯವರೆಗೆ ಎಲ್ಲವೂ ಉಪಯುಕ್ತ. ಬಾಳೆಯ ದಿಂಡು, ಕುಂಡಿಗೆ, ಕಾಯಿ, ಹಣ್ಣು, ಎಲೆ ಹೀಗೆ ಸರ್ವ ಭಾಗಗಳೂ ಆರೋಗ್ಯಕಾರಕ. ಅದರಲ್ಲಿನ ಇರುವ ಆರೋಗ್ಯಕರ ಅಂಶಗಳು ನಮ್ಮ ದೇಹವನ್ನು ಸೇರುತ್ತವೆ. ಅದರಲ್ಲೂ ಬಾಳೆಕಾಯಿ ಹೂವಿನ ದೋಸೆ ರುಚಿಯೂ ಹೌದು, ಆರೋಗ್ಯಪೂರ್ಣವೂ ಹೌದು. ಇದನ್ನು ಮಾಡುವ ವಿಧಾನವೂ ಬಲು ಸುಲಭ. ಬೇಕಾದ ಸಾಮಗ್ರಿ ಬಾಳೆಕಾಯಿ ಹೂ 1 ಕಪ್ ದೋಸೆ ಅಕ್ಕಿ 2 ಕಪ್ ಉದ್ದು ಅರ್ಧ ಕಪ್ ಉಪ್ಪು ರುಚಿಗೆ ತಕ್ಕಸ್ಟು ಮಾಡುವ ವಿಧಾನ ದೋಸೆಅಕ್ಕಿ, ಉದ್ದು 3 ರಿಂದ 4 ಗಂಟೆಗಳ ಕಾಲ ನೆನಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಾಳೆಕಾಯಿ ಹೂವನ್ನು ಸಣ್ಣ ಸಣ್ಣಗೆ ಹೆಚ್ಚಿ ಅದನ್ನು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡದ್ದನ್ನು ಎಲ್ಲವನ್ನು ಚೆನ್ನಾಗಿ ಕಲಸಿ ಬೇಕಾದಷ್ಟು ಉಪ್ಪು ಸೇರಿಸಿ 8 ಗಂಟೆಗಳ ಕಾಲ…
ಕೊರೋನಾ ವಾರಿಯರ್ಸ್’ಗಳಿಗೆ ಗೌರವ.. ವಿಶಿಷ್ಟ ರೀತಿಯಲ್ಲಿ ಉದ್ಯಮಿಯ ಹುಟ್ಟುಹಬ್ಬ
ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಹುಟ್ಟುಹಬ್ಬವನ್ನು ವಿವಿಧ ಸಂಘಟನೆಗಳು ಅರ್ಥಪೂರ್ಣವಾಗಿ ಆಚರಿಸಿದವು. ಬೆಂಗಳೂರಿನ ಇಂದಿರಾ ಕ್ಯಾಂಟೀನ್, ವಿವಿಧ ಸಂಘ ಸಂಸ್ಥೆಗಳಿಗೆ ಊಟೋಪಚಾರ ಮಾಡುವ ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ 43ನೇ ಜನ್ಮ ದಿನವು ಆ ಸಂಸ್ಥೆಯಲ್ಲಿ ದುಡಿಯುತ್ತಿರುವ ಸುಮಾರು 5000 ಉದ್ಯೋಗಿಗಳ ಪಾಲಿಗೆ ಹಬ್ಬದ ಸಂಭ್ರಮವೆನಿಸಿತು. ಸಂಸ್ಥೆಯ ಸಿಬ್ಬಂದಿ ಇಡೀ ದಿನ ತಮ್ಮ ಉದ್ಯೋಗದಾತನ ಪರವಾಗಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು ಅದರಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರೂ ಭಾಗಿಯಾದರು. ಕೊರೋನಾ ವಾರಿಯರ್ಸ್’ಗಳಿಗೆ ಗೌರವ: ಶೆಫ್ ಟಾಕ್ ಮತ್ತು ಮತ್ಸ್ಯ ಬಂಧನ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾದ ಗೋವಿಂದ ಬಾಬು ಪೂಜಾರಿ ಅವರು ಸ್ವತಃ ತಮ್ಮ ಸಹೋದ್ಯೋಗಿಳ ಜೊತೆ ಕೊರೋನ ವಾರಿಯರ್ಸ್’ಗಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾಡಿನ ಹಿತಕ್ಕಾಗಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಆಹಾರ ಕಿಟ್’ಗಳನ್ನು ವಿತರಿಸುವ ಮೂಲಕ…
ರಾಜ್ಯದಲ್ಲಿ ಮತ್ತೆ 445 ಹೊಸ ಕೇಸ್; ಸೋಂಕಿತರ ಸಂಖ್ಯೆ 11005ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಸಾಮಾಜಿಕ ವ್ಯವಸ್ಥೆಗೆ ಸವಾಲಾಗಿದೆ. ಇಂದೂ ಕೂಡಾ ರಾಜ್ಯದಲ್ಲಿ ಆತಂಕಕಾರಿ ಸಂಖ್ಯೆಯಲ್ಲಿ ಸೋಂಕಿನ ವರದಿ ಬಹಿರಂಗಗೊಂಡಿದೆ. ಆರೋಗ್ಯ ಇಲಾಖೆ ಇಂದು ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಹೊಸದಾಗಿ 445 ಹೊಸ ಪಾಸಿಟಿವ್ ಕೇಸ್’ಗಳು ಪತ್ತೆಯಾಗಿದೆ ಎಂದು ಹೇಳಿದೆ. ಗುರುವಾರ ಸಂಜೆಯಿಂದ ಇಂದು ಸಂಜೆವರೆಗಿನ ವಿದ್ಯಮಾನಗಳನ್ನು ಉಲ್ಲೇಖಿಸಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, 445 ಹೊಸ ಕೇಸ್’ಗಳಿಂದಾಗಿ ರಾಜ್ಯದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 11005 ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ 144 ಹೊಸ ಸೋಂಕಿನ ಲೆಕ್ಕ ಸಿಕ್ಕಿದೆ. ಇನ್ನುಳಿದಂತೆ, ಬಳ್ಳಾರಿಯಲ್ಲಿ 47, ಕಲಬುರಗಿಯಲ್ಲಿ 42, ಕೊಪ್ಪಳದಲ್ಲಿ 36, ದಕ್ಷಿಣಕನ್ನಡದಲ್ಲಿ 33, ಧಾರವಾಡ 30, ರಾಯಚೂರಿನಲ್ಲಿ 14, ಗದಗ್’ನಲ್ಲಿ 12, ಚಾಮರಾಜನಗರದಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ. ಸಂಜೆಯ ಪತ್ರಿಕಾ ಪ್ರಕಟಣೆ 26/06/2020.ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ…
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸೀಲ್‌ಡೌನ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸವಾರಿ ಮುಂದುವರಿದಿದ್ದು ಪೊಲೀಸ್ ಸಿಬ್ಬಂದಿಯಲ್ಲೋ ಸೋಂಕು ಪತ್ತೆಯಾಗುತ್ತಿವೆ. ಅನೇಕ ಪೊಲೀಸ್ ಠಾಣೆಗಳನ್ನು ಈ ಕಾರಣಕ್ಕಾಗಿ ಸೀಲ್’ಡೌನ್ ಮಾಡಲಾಗಿದೆ. ಇದೀಗ ಬೆಂಗಳೂರು ಪೊಲೀಸ್ ಕಮೀಷನರ್ ಆಫೀಸ್ ಸರದಿ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಕಮಿಷನರ್ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಮೂರು ದಿನ ಸೀಲ್‌ಡೌನ್ ಮಾಡಲಾಗಿದೆ.
ಜುಲೈ 15ರವರೆಗೆ ಅಂತರಾಷ್ಟ್ರೀಯ ವಿಮಾನ ಸೇವೆ ಇಲ್ಲ
ದೆಹಲಿ: ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಅಂತರಾಷ್ಟ್ರೀಯ ವಿಮಾನ ಸೇವೆ ಜುಲೈ 15ರವರೆಗೆ ಕಾರ್ಯಾರಂಭ ಇಲ್ಲ. ಈ ಸಂಬಂಧ ಜಾರಿಯಲ್ಲಿರುವ ನಿರ್ಬಂಧ ಮುಂದಿನ ತಿಂಗಳವರೆಗೂ ಮುಂದುವರಿಯಲಿದೆ. ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಜುಲೈ 15ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಮಾರ್ಚ್ 25ರಂದು ದೇಶೀ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು. ಮೇ 25ರಿಂದ ದೇಶಿಯ ವಿಮಾನ ಹಾರಾಟ ಆರಂಭವಾಗಿದೆ. ಆದರೆ ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಮುಂದುವರೆಸಲಾಗಿದೆ.
