ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆ

ದೆಹಲಿ: ಪೆಟ್ರೋಲ್ ಡೀಸೆಲ್ ದರ ಏರುತ್ತಲೇ ಇದೆ. ಲಾಕ್’ಡೌನ್ ನಿಯಮ ಸಡಿಲಿಕೆ ನಂತರ ತೈಲ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‍ 25 ಪೈಸೆ ತುಟ್ಟಿಯಾದರೆ ಡೀಸೆಲ್‍ ದರವೂ 21 ಪೈಸೆ ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆಗಿಂತ ಡೀಸೆಲ್ ದರವೇ ಹೆಚ್ಚಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ದರ 80.38 ರೂಪಾಯಿ ಹಾಗೂ ಡೀಸೆಲ್ ದರ 80.40 ರೂಪಾಯಿ.

ಮುಂಬೈ, ಬೆಂಗಳೂರು, ಚೆನ್ನೈ ಸಹಿತ ಎಲ್ಲಾ ನಗರಗಳಲ್ಲೂ ತೈಲ ದರ ಏರಿಕೆಯಾಗಿದೆ.

Related posts