ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿ ಸೀಲ್‌ಡೌನ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸವಾರಿ ಮುಂದುವರಿದಿದ್ದು ಪೊಲೀಸ್ ಸಿಬ್ಬಂದಿಯಲ್ಲೋ ಸೋಂಕು ಪತ್ತೆಯಾಗುತ್ತಿವೆ. ಅನೇಕ ಪೊಲೀಸ್ ಠಾಣೆಗಳನ್ನು ಈ ಕಾರಣಕ್ಕಾಗಿ ಸೀಲ್’ಡೌನ್ ಮಾಡಲಾಗಿದೆ. ಇದೀಗ ಬೆಂಗಳೂರು ಪೊಲೀಸ್ ಕಮೀಷನರ್ ಆಫೀಸ್ ಸರದಿ. ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕಮಿಷನರ್ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಮೂರು ದಿನ ಸೀಲ್‌ಡೌನ್‌ ಮಾಡಲಾಗಿದೆ.

Related posts