‘ಪೇರಳೆ ಚಿಗುರು ತಂಬುಳಿ’; ಕಾಯಿಲೆಗಳಿಗೆ ತಡೆ

ವೃದ್ದಾಪ್ಯ ತಡೆಯುವ ಪ್ರಯತ್ನವೇ? ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೇ? ‘ಚಿಗುರೆಲೆ ತಂಬುಳಿ’ ಇದಕ್ಕೆ ಸೂಕ್ತ.. ಅದರಲ್ಲೂ ‘ಪೇರಳೆ ಚಿಗುರು ತಂಬುಳಿ’ ಎಲ್ಲಕ್ಕಿಂತ ಉತ್ತಮ. ಇದನ್ನು ಮಾಡುವ ವಿಧಾನವೂ ಬಲು ಸುಲಭ.. ಬೇಕಾದ ಸಾಮಾಗ್ರಿ: ತೆಂಗಿನತುರಿ 1 ಕಪ್ ಜೀರ 1 ಚಮಚ ಕಾಯಿಮೆಣಸು 1 ಪೇರಳೆ ಚಿಗುರು 2 ಕಪ್ ಮಜ್ಜಿಗೆ ಅಥವಾ ಮೊಸರು 1 ಕಪ್ ಎಣ್ಣೆ 2 ಚಮಚ ಬೆಳ್ಳುಳ್ಳಿ 4 ( ಬೇಕಾದಲ್ಲಿ) ಕೆಂಪು ಮೆಣಸು 1 ಸಾಸಿವೆ 1 s ಕರಿಬೇವು ಉಪ್ಪು ರುಚಿಗೆ ತಕ್ಕಸ್ಟು ಮಾಡುವ ವಿಧಾನ:  ಮೊದಲಿಗೆ ಪೇರಳೆ ಚಿಗುರನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ. ಒಂದು ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಜೀರಿಗೆ, ಕಾಯಿಮೆಣಸು, ಬೇಯಿಸಿದ ಪೇರಳೆ ಚಿಗುರು, ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಒಂದು…

Uncategorized

ಹೆಂಡ್ತೀ ಮದುವೆ.. ‘ಅಶ್ವಿನಿ ನಕ್ಷತ್ರ’ ನಟಿ ಮಯೂರಿ ವಿವಾಹ; ವರ ಯಾರು ಗೊತ್ತಾ?

ಬೆಂಗಳೂರು: ಕಿರುತೆರೆ, ಬೆಳ್ಳಿ ತೆರೆಗಳಲ್ಲಿ ನಟಿಸಿರುವ ತಾರೆ ಮಯೂರಿ ವಿವಾಹವಾಗಿದ್ದಾರೆ. ತನ್ನ ಬಾಲ್ಯದ ಗೆಳೆಯನ ಕೈಹಿಡಿದಿರುವ ಅವರು ತಮ್ಮ ಮದುವೆಯ ಸಂಗತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ‘ಕೃಷ್ಣ ಲೀಲಾ’ ಸಿನಿಮಾ ಹಾಗೂ ಅಶ್ವಿನಿ ನಕ್ಷತ್ರ’ ಧಾರವಾಹಿ ಮೂಲಕ ನಟಿ ಮಯೂರಿ ಮನೆಮಾತಾಗಿದ್ದಾರೆ. ಐಟಿ ಉದ್ಯೋಗಿ ಅರುಣ್ ಹಾಗೂ ಮಯೂರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. https://www.instagram.com/p/CBUazPjAbao/?utm_source=ig_embed  

ಜುಲೈ 25ರಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆ

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಕೋರ್ಸ್’ಗಳಿಗಾಗಿ ಪ್ರವೇಶ ಪರೀಕ್ಷೆ ಜುಲೈ 25ರಂದು ನಡೆಯಲಿದೆ. ಈ ಕುರಿತಂತೆ ಕಾಮೆಡ್-ಕೆ ಮಾಹಿತಿ ನೀಡಿದೆ. ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್‌ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಮೆಡ್‌-ಕೆ ಪರೀಕ್ಷೆ ಜುಲೈ 25ರಂದು ನಡೆಯಲಿದೆ. ಮೇ 5ರಂದು ಈ ಪ್ರವೇಶ ಪರೀಕ್ಷೆ ನಡೆಯಬೇಕಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅದನ್ನು ಜುಲೈ .15ಕ್ಕೆ ಮುಂದೂಡಲಾಗಿತ್ತು. ಇದೀಗ ಜುಲೈ 25ರಂದು ಈ ಪರೀಕ್ಷೆ ನಡೆಸಲು ಕಾಮೆಡ್-ಕೆ ನಿರ್ಧರಿಸಿದೆ. ಈ ಕುರಿತಂತೆ ಕಾಮೆಡ್‌-ಕೆ ವೆಬ್ಸೈಟ್‘ನಲ್ಲಿ ಮಾಹಿತಿ ಪ್ರಕಟವಾಗಿದೆ.

ಶ್ರೀಲಂಕಾ ಕ್ರಿಕೆಟ್ ತಂಡದ ಉದ್ದೇಶಿತ ಭಾರತ ಪ್ರವಾಸ ರದ್ದು

ದೆಹಲಿ: ಈ ಜಗತ್ತಿನಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚುತ್ತಿದ್ದು ಭಾರತವಂತೂ ಕೋವಿಡ್-೧೯ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಇದೇ ವೇಳೆ ಶ್ರೀಲಂಕಾ ಕ್ರಿಕೆಟ್ ತಂಡವು ಉದ್ದೇಶಿತ ಭಾರತ ಪ್ರವಾಸವನ್ನು ರದ್ದುಗೊಳಿಸಿದೆ. ಜೂನ್ ತಿಂಗಳ ಕೊನೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿ ನಡೆಯುವ ಬಗ್ಗೆ ಭಾರತ ನಿರೀಕ್ಷೆ ಹೊಂದಿತ್ತು. ಭಾರತ-ಶ್ರೀಲಂಕಾ ನಡುವೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಸಿದ್ಧತೆ ನಡೆದಿತ್ತು. ಆದರೆ ಭಾರತದಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳು ಸೇರಿ ಈ ಕ್ರಿಕೆಟ್ ಸರಣಿಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಚಿರಂಜೀವಿ ಪಾಲಿನ ‘ದೊಡ್ಡೋರು’; ನೋವಿನ ಟ್ರೇಲರ್

ಚಿರಂಜೀವಿ ಸರ್ಜಾ ನಿಧನದಿಂದಾಗಿ ಕನ್ನಡ ಸಿನಿಮಾ ಲೋಕದಲ್ಲಿ ಶೋಕ ಆವರಿಸಿದೆ. ಅವರ ಹೊಸ ಸಿನಿಮಾ ‘ದೊಡ್ಡೋರು’ ನಿರ್ಮಾಣ ಹಂತದಲ್ಲೇ ಇದೆ. ಇನ್ನು ಈ ಸಿನಿಮಾವನ್ನು ಪೂರ್ಣಗೊಳಿಸಲು ಸಾಧ್ಯವೇ ಎಂಬ ಚಿಂತೆಯಲ್ಲಿದೆ ಸಿನಿ ತಂಡ. ಈ ನಡುವೆ, ಸಿನಿಮಾ ತಂಡ ‘ದೊಡ್ಡೋರು’ ಚಿತ್ರ ಕುರಿತಂತೆ ವೀಡಿಯೊ ತುಣುಕೊಂದನ್ನು ಬಿಡುಗಡೆಗೊಳಿಸಿದೆ. ಈ ಸಿನಿಮಾ ವಿಚಾರದಲ್ಲಿ ಒಂದಷ್ಟು ಮಾಹಿತಿಯನ್ನು ಈ ವೀಡಿಯೊ ತುಣುಕು ಮೂಲಕ ಹಂಚಿಕೊಂಡಿದೆ.

ಶುಲ್ಕಕ್ಕಾಗಿ ಒತ್ತಡ ಹೆರುವ ಶಾಲೆಗಳ ವಿರುದ್ಧ ಶಿಕ್ಷಣ ಹಕ್ಕು ಕಾಯಿದೆಯಡಿ ಶಿಸ್ತುಕ್ರಮ

ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಮಾರ್ಗಸೂಚಿ ಜಾರಿಯಲ್ಲಿದ್ದು ಯಾವುದೇ ಶಾಲೆಗಳು ಶುಲ್ಕ ಪಾವತಿಗಾಗಿ ಮಕ್ಕಳ ಹಾಗೂ ಪೋಷಕರ ಮೇಲೆ ಒತ್ತಡ ಹೇರಬಾರದೆಂದು ಸರ್ಕಾರ ಎಚ್ಚರಿಕೆ ನೀಡಿದೆ. ಆದರೂ ಅನೇಕ ಶಾಲೆಗಳು ಶುಲ್ಕ ಸಂಬಂಧ ಒತ್ತಡ ಹೇರುತ್ತಲೇ ಇವೆ. ಈ ಕುರಿತಂತೆ ಶಿಕ್ಷಣಾಧಿಕಾರಿಗಳಿಗೆ ಪೋಷಕರಿಂದ ದೂರುಗಳು ಕೇಳಿಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸರ್ಕಾರ ಶುಲ್ಕ ಪಾವತಿಸಲು ಸಾಧ್ಯವಿಲ್ಲದ ಅಥವಾ ಪಾವತಿಸಲು ನಿರಾಕರಿಸುವ ಪೋಷಕರಿಂದ ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಶುಲ್ಕ ಪಾವತಿಗೆ ಒತ್ತಡ ಹೆರುವ, ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವ ಬೆದರಿಕೆ ಹಾಕುವ ದೂರುಗಳು ಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ಶಿಕ್ಷಣ ಹಕ್ಕು ಕಾಯಿದೆಯಡಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಕೃಷಿಯೇತರರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ

ಬೆಂಗಳೂರು: ಕೃಷಿಯೇತರರು ಇನ್ನು ಮುಂದೆ ಕೃಷಿ ಭೂಮಿ ಖರೀದಿಸಬಹುದು. ಇಂಥದ್ದೊಂದು ಅವಕಾಶ ನೀಡುವ ನಿಟ್ಟಿನಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79-ಎ, 79-ಬಿ, 79-ಸಿ ಮತ್ತು ಸೆಕ್ಷನ್ 80ನ್ನು ರದ್ದುಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಪ್ರತಿ ಕುಟುಂಬಕ್ಕೆ 10 ಘಟಕಗಳಿಂದ 20 ಘಟಕಗಳಿಗೆ ದ್ವಿಗುಣಗೊಳಿಸಲು ಅವಕಾಶ ಸಿಗಲಿದ್ದು, ಪ್ರತಿ ಕುಟುಂಬ ಗರಿಷ್ಠ 108 ಎಕರೆ ಜಮೀನನ್ನು ಹೊಂದಿರಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಕೊರಾನಾ ಸೋಂಕಿತರ ಸಂಖ್ಯೆ: ನಾಲ್ಕನೇ ಸ್ಥಾನಕ್ಕೆ ಜಿಗಿದ ಭಾರತ

ದೆಹಲಿ: ಭಾರತದಲ್ಲಿ ಕಿಲ್ಲರ್ ಕೊರೋನಾ ಹಾವಳಿ ಮುಂದುವರಿದಿದ್ದು ನಿತ್ಯವೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದೀಗ ಜಗತ್ತಿನಲ್ಲಿ ಹೆಚ್ಚು ಕೊರೋನಾ ಸೋಂಕಿತ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ. ಕೇವಲ 18 ದಿನಗಳಲ್ಲಿ 10 ರಿಂದ 4ನೇ ಸ್ಥಾನಕ್ಕೆ ಭಾರತ ಜಿಗಿದಿರುರುವುದು ಆತಂಕಕಾರಿ ಬೆಳವಣಿಗೆ. ಭಾರತದಲ್ಲಿ ಈ ವರೆಗೂ ಒಟ್ಟಾರೆ ಸೋಂಕಿತರ ಸಂಖ್ಯೆ 2,93,754ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ 2,91,588 ಸೋಂಕಿತರನ್ನು ಹೊಂದಿರುವ ಬ್ರಿಟನ್ ದೇಶಕ್ಕಿಂತಲೂ ಹೆಚ್ಚು. 20 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ. 7.72 ಲಕ್ಷ ಸೋಂಕಿತರನ್ನು ಹೊಂದಿರುವ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. 4.93 ಲಕ್ಷ ಸೋಂಕಿತರನ್ನು ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. 2,93,754 ಸೋಂಕಿತರನ್ನು ಹೊಂದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಕೊರೋನಾಗೆ ಮತ್ತೆ ಮೂವರು ಬಲಿ; ಮೃತರ ಸಂಖ್ಯೆ 72ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸವಾರಿ ಮುಂದುವರಿದಿದ್ದು ಗುರುವಾರ ಮತ್ತೆ 204 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಮೂವರು ಬಲಿಯಾಗಿದ್ದು ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 72ಕ್ಕೇರಿಕೆಯಾಗಿದೆ. ಯಾದಗಿರಿಯಲ್ಲಿ 66 ಹೊಸ ಕೇಸ್ ಉಡುಪಿಯಲ್ಲಿ 22 ಹೊಸ ಕೇಸ್ ಬೆಂಗಳೂರು ನಗರದಲ್ಲಿ 17 ಹೊಸ ಕೇಸ್ ಕಲಬುರಗಿಯಲ್ಲಿ 16 ಹೊಸ ಕೇಸ್ ರಾಯಚೂರಿನಲ್ಲಿ 15 ಹೊಸ ಕೇಸ್ ಬೀದರ್‌ನಲ್ಲಿ 14 ಹೊಸ ಕೇಸ್ ಶಿವಮೊಗ್ಗದಲ್ಲಿ 10 ಹೊಸ ಕೇಸ್ ದಾವಣಗೆರೆಯಲ್ಲಿ 9 ಹೊಸ ಕೇಸ್ ಕೋಲಾರದಲ್ಲಿ 6 ಹೊಸ ಕೇಸ್ ಮೈಸೂರು 5 ಹೊಸ ಕೇಸ್ ರಾಮನಗರದಲ್ಲಿ 5 ಹೊಸ ಕೇಸ್ ವಿಜಯಪುರದಲ್ಲಿ 4 ಹೊಸ ಕೇಸ್ ಬಾಗಲಕೋಟೆ 3 ಹೊಸ ಕೇಸ್ ಉತ್ತರಕನ್ನಡದಲ್ಲಿ  3 ಹೊಸ ಕೇಸ್ ದಕ್ಷಿಣ ಕನ್ನಡ 2 ಹೊಸ ಕೇಸ್ ಹಾಸನ…

ಕತ್ತಿ, ಕೋರೆ, ಪ್ರಕಾಶ್ ಶೆಟ್ಟಿಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್; ರಾಜ್ಯಸಭೆಗೆ ಅಚ್ಚರಿಯ ಹೆಸರು ಪ್ರಕಟ

ಬೆಂಗಳೂರು: ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯಲ್ಲಿನ ನಾಲ್ಕು ಸ್ಥಾನಗಳಿಗೆ ಆಯ್ಕೆ ನಡೆಯಲಿದ್ದು ಆಡಳಿತಾರೂಢ ಬಿಜೆಪಿಯಿಂದ ಇಬ್ವರು ಸುಲಭವಾಗಿ ಆಯ್ಕೆಯಾಗಬಹುದು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ನಡುವೆ ಟಿಕೆಟ್’ಗಾಗಿ ಭಾರೀ ಲಾಬಿ ನಡೆದಿದೆ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಒಂದೆಡೆ ಕೇಳಿಬಂದಿದೆಯಾದರೂ ಪ್ರಭಾಕರ ಕೋರೆ ಪುನರಾಯ್ಕೆ ಮಾಡಬೇಕೆಂಬ ಆಗ್ರಹವೂ ಹೆಚ್ಚಿತ್ತು. ಇನ್ನೊಂದೆಡೆ ರಮೇಶ್ ಕತ್ತಿ, ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಕೂಡಾ ಭರ್ಜರಿ ಲಾಬಿಯಲ್ಲಿ ತೊಡಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಇವರಲ್ಲಿ ಯಾರೊಬ್ಬರನ್ನೂ ಪರಿಗಣಿಸಿಲ್ಲ. ಇದೀಗ ಅಚ್ಚರಿಯ ಹೆಸರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ. ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ಪ್ರಕಟಿಸುವ ಮೂಲಕ ಹೈಕಮಾಂಡ್ ಉತ್ತರಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಆದ್ಯತೆ ನೀಡಿರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ. ಇದೇ…