ಜುಲೈ 25ರಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆ

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಕೋರ್ಸ್’ಗಳಿಗಾಗಿ ಪ್ರವೇಶ ಪರೀಕ್ಷೆ ಜುಲೈ 25ರಂದು ನಡೆಯಲಿದೆ. ಈ ಕುರಿತಂತೆ ಕಾಮೆಡ್-ಕೆ ಮಾಹಿತಿ ನೀಡಿದೆ.

ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್‌ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಮೆಡ್‌-ಕೆ ಪರೀಕ್ಷೆ ಜುಲೈ 25ರಂದು ನಡೆಯಲಿದೆ.

ಮೇ 5ರಂದು ಈ ಪ್ರವೇಶ ಪರೀಕ್ಷೆ ನಡೆಯಬೇಕಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅದನ್ನು ಜುಲೈ .15ಕ್ಕೆ ಮುಂದೂಡಲಾಗಿತ್ತು. ಇದೀಗ ಜುಲೈ 25ರಂದು ಈ ಪರೀಕ್ಷೆ ನಡೆಸಲು ಕಾಮೆಡ್-ಕೆ ನಿರ್ಧರಿಸಿದೆ. ಈ ಕುರಿತಂತೆ ಕಾಮೆಡ್‌-ಕೆ ವೆಬ್ಸೈಟ್‘ನಲ್ಲಿ ಮಾಹಿತಿ ಪ್ರಕಟವಾಗಿದೆ.

Related posts