ದೆಹಲಿ: ಕೊರೋನಾ ಅಟ್ಟಹಾಸ ಜಗತ್ತನ್ನೇ ತತ್ತರಿಸುವಂತೆ ಮಾಡಿದೆ. ಸೋಕಿನ ವೇಗ ಮತ್ತಷ್ಟು ಹೆಚ್ಚಿದ್ದು, ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 63 ಲಕ್ಷ ದಾಟಿದೆ. ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವವರ ಸಂಖ್ಯೆಯೂ ಹೆಚ್ಚುತ್ತಲಿದ್ದು ಈವರೆಗೆ ಸುಮಾರು 3.76 ಲಕ್ಷ ಜನರು ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ 63,30,069 ಜನರಿಗೆ ಕೊರೊನಾ ಸೋಂಕು 3,76,005 ಜನರು ಸೋಂಕಿಗೆ ಬಲಿ 28.83 ಲಕ್ಷ ಮಂದಿ ಗುಣಮುಖ ಪಾಶ್ಚಾತ್ಯ ರಾಷ್ಟ್ರಗಳಲ್ಲಷ್ಟೇ ಅಲ್ಲ ಪ್ರಸಕ್ತ ಬಹುತೇಕ ರಾಷ್ಟ್ರಗಳು ಕೋವಿಡ್-೧೯ ವೈರಾಣುವಿನ ಬಿಗಿ ಮುಷ್ಟಿಯಲ್ಲಿವೆ. ಅದರಲ್ಲೂ ಅಮೆರಿಕಾದಲ್ಲಿ ಸೋಂಕಿನ ವೇಗ ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿವೆ. ಭಾರತದಲ್ಲಿಯೂ ಕರೋನಾ ವ್ಯಾಪಕವಾಗಿ ಹರಡಿದ್ದು, ವಿಶ್ವದ ಅತಿ ಹೆಚ್ಚು ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ 18,46,123 ಸೋಂಕಿತರು ಬ್ರೆಜಿಲ್ ನಲ್ಲಿ ಐದು ಲಕ್ಷ ಸೋಂಕಿತರು ರಷ್ಯಾದಲ್ಲಿ 4,14,878 ಸೋಂಕಿತರು ಇಂಗ್ಲೆಂಡ್ ನಲ್ಲಿ 2,76,332 ಸೋಂಕಿತರು ಇಟಲಿಯಲ್ಲಿ 2,33,197 ಸೋಂಕಿತರು ಭಾರತದಲ್ಲಿ 1,98,317 ಸೋಂಕಿತರು…
Year: 2020
ಜೂನ್ 19ರಂದು ರಾಜ್ಯಸಭೆ ಚುನಾವಣೆ
ಬೆಂಗಳೂರು: ರಾಜ್ಯಸಭೆಯಲ್ಲಿ ತೆರವಾಗಲಿರುವ 18 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಕುರಿತು ಆಯೋಗ ಆದೇಶ ಪ್ರಕಟಿಸಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಗುಜರಾತ್’ನಿಂದ ತಲಾ ನಾಲ್ಕು, ಜಾರ್ಖಂಡ್’ನಿಂದ ಎರಡು, ಮಧ್ಯಪ್ರದೇಶ, ರಾಜಸ್ಥಾನದಿಂದ ತಲಾ ಮೂರು, ಮಣಿಪುರ ಹಾಗೂ ಮೇಘಾಲಯದಿಂದ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಈ ವರೆಗೂ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬಿ.ಕೆ. ಹರಿಪ್ರಸಾದ್, ಪ್ರಭಾಕರ್ ಕೋರೆ, ರಾಜೀವ್ ಗೌಡ ಮತ್ತು ಕುಪೇಂದ್ರ ರೆಡ್ಡಿ ಅವರ ರಾಜ್ಯಸಭೆ ಅವಧಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಅವರಿಂದ ತೆರವಾಗುವ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ಘೋಷಿಸಲಾಗಿದೆ. ಜೂನ್ 9ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಜೂನ್ 10ರಂದು ನಾಮಪತ್ರ ಪರಿಶೀಲನೆ ಜೂನ್ 13ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ಇದನ್ನೂ ಓದಿ.. ಲಡಾಖ್ ಎಲ್‌ಎಸಿ ಬಳಿ ಶಸ್ತಾಸ್ರ ಜಮಾವಣೆ; ಚೀನಾ-ಭಾರತ…
ಕೇಪುಳ ಹೂವಿನ ತಂಬುಳಿ ಬಗ್ಗೆ ನಿಮಗೆ ಗೊತ್ತಾ?
ಕೇಪುಳ ಹೂವಿನ ತಂಬುಳಿ ಬಗ್ಗೆ ನಿಮಗೆ ಗೊತ್ತಾ? ಅದನ್ನು ಮಾಡುವ ವಿಧಾನ (TrendyAngel Kitchen) ಗೊತ್ತಾ? ಈ ತಂಬುಳಿ ತನ್ನದೇ ಆದ ವಿಶಿಷ್ಟ ರುಚಿ ಹೊಂದಿದ್ದು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನೊಳಗೊಂಡಿದೆ. ಇವುಗಳ ಸೇವನೆಯಿಂದ ಬಿಸಿಲ ಬೇಗೆಗೆ ದೇಹ ತಂಪಾಗುವ ಜೊತೆಗೆ ಜೀರ್ಣಶಕ್ತಿಯೂ ಹೆಚ್ಚುತ್ತದೆ. ಬೇಕಾದ ಸಾಮಾಗ್ರಿ ತೆಂಗಿನತುರಿ 1 ಕಪ್ ಜೀರ 1 ಚಮಚ ಹಸಿಮೆಣಸು 1 ಕೇಪುಳ ಹೂ 2 ಕಪ್ ಮಜ್ಜಿಗೆ ಅಥವಾ ಮೊಸರು 1 ಕಪ್ ಎಣ್ಣೆ 2 ಚಮಚ ಬೆಳ್ಳುಳ್ಳಿ 4 (ಬೇಕಾದಲ್ಲಿ) ಕೆಂಪು ಮೆಣಸು 1 ಸಾಸಿವೆ 1 s ಕರಿಬೇವು ಉಪ್ಪು ರುಚಿಗೆ ತಕ್ಕಸ್ಟು ಮಾಡುವ ವಿಧಾನ ಮೊದಲಿಗೆ ಕೇಪುಳ ಹೂವುವನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ. ಒಂದು ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಜೀರಿಗೆ,…
ಸಾಕಷ್ಟು ಕುತೂಹಲ ಸೃಷ್ಟಿಸುತ್ತಿದೆ ‘ಶಾರ್ದೂಲ’ ಟ್ರೇಲರ್
ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾರಾಮ್, ಹೀಗೆ ಸಾಕಷ್ಟು ಹೊಸ ಪ್ರತಿಭೆಗಳನ್ನು ಬೆಳ್ಳಿ ತೆರೆಗೆ ಪರಿಚಯಿಸಿರುವ ಅರವಿಂದ್ ಕೌಶಿಕ್ ಇದೀಗ ‘ಶಾರ್ದೂಲ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತೆರೆ ಕಾಣಲು ಸಿದ್ದವಾಗಿರುವ ‘ಶಾರ್ದೂಲ’ ಚಿತ್ರದ ಟ್ರೇಲರ್ ಬಿಡುಗರೆಯಾಗಿದ್ದು ಈ ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಕಲ್ಯಾಣ್ ಮತ್ತು ರೋಹಿತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರವಿತೇಜ, ಚೇತನ್ ಚಂದ್ರ , ಐಶ್ವರ್ಯಾ, ಕೃತಿಕಾ ರವೀಂದ್ರ ಮೊದಲಾದ ನಟ ನಟಿಯರ ಬಳಗ ಅಭಿನಯಿಸುತ್ತಿದೆ. ನಮ್ ಏರಿಯಾಲ್ ಒಂದಿನ, ತುಘಲಕ್, ಹುಲಿರಾಯ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದವರು ಅರವಿಂದ್ ಕೌಶಿಕ್, ‘ಶಾರ್ದೂಲ’ ಚಿತ್ರದಲ್ಲೂ ಸಾಕ್ಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ.. ‘ಭೋಜರಾಜ್ MBBS’ ಕ್ಲೈಮ್ಯಾಕ್ಸ್; ಹಾಸ್ಯರತ್ನ ಕಂಪೌಂಡರ್ ಬಗ್ಗೆ ಕುತೂಹಲ ಏಕೆ ಗೊತ್ತಾ?
ಕಿಲ್ಲರ್ ಕೊರೋನಾಗೆ ದೇಶದ ಖ್ಯಾತ ಸಂಗೀತ ನಿರ್ದೇಶಕ ಬಲಿ; ಕಳಚಿತು ‘ಸಾಜಿದ್-ವಾಜಿದ್’ ಜೋಡಿ
ಕಿಲ್ಲರ್ ಕೊರೋನಾಗೆ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನರಾಗಿದ್ದಾರೆ. ಅವರಿಗೆ 42 ವರ್ಷ ವಯಸ್ಸಿನ ಅವರು ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಅರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ವಾಜಿದ್ ಖಾನ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗೊಳಪಡಿಸಿದಾಗ ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಬರಬರುತ್ತಾ ಆರೋಗ್ಯ ವಿಷಮ ಸ್ಥಿತಿಯತ್ತ ತಲುಪಿದ್ದರಿಂದಾಗಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಕೆಲವೇ ತಿಂಗಳ ಹಿಂದಷ್ಟೇ ಅವರು ಕಿಡ್ನಿ ಕಸಿಗೆ ಒಳಗಾಗಿದ್ದರು. ಈ ರೀತಿ ಆರೋಗ್ಯ ಏರುಪೇರಾಗಿ ಅವರು ಕೊನೆಯುಸಿರೆಳೆದರೆಂದು ಹೇಳಲಾಗುತ್ತಿದೆ. ಗಾಯಕರಾಗಿಯೂ ಖ್ಯಾತಿಯ ಶಿಖರಕ್ಕೇರಿದ್ದರು. ಸಾಜಿದ್-ವಾಜಿದ್ ಜೋಡಿ ಬಾಲಿವುಡ್ ಲೋಕದಲ್ಲಿ ತನ್ನದೇ ಆದ ಖ್ಯಾತಿಯನ್ನು ಹೊಂದಿತ್ತು.’ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಅವರು ಅನೇಕ ಸಿನಿಮಾ ಹಾಡುಗಳಿಗೆ ಸಹೋದರ ಸಾಜಿದ್ ಖಾನ್ ಜೊತೆಗೆ ಸೇರಿ ಸಂಗೀತ ಸಂಯೋಜಿಸಿದ್ದರು. ಸಾಜಿದ್-ವಾಜಿದ್ ಖ್ಯಾತಿ ಸಂಗೀತ…
ಕಿಲ್ಲರ್ ಕೊರೋನಾ ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನ
ದೆಹಲಿ: ಚೀನಾದಲ್ಲಿ ಸೃಷ್ಟಿಯಾಗಿರುವ ಕೊರೋನಾ ವೈರಾಣು ವಿಶ್ವ ಪರ್ಯಟನೆ ಕೈಗೊಂಡು ಭೀತಿಯ ಕಾರ್ಮೋಡ ಆವರಿಸುವಂತೆ ಮಾಡಿದೆ. ಜಗತ್ತಿನೆಲ್ಲೆಡೆ ಮಾರಣಹೋಮದ ಸ್ಥಿತಿ ಕಂಡುಬರುತ್ತಿದ್ದು ಈ ಕಿಲ್ಲರ್ ವೈರಸ್ ವಿವಿಧ ರಾಷ್ಟ್ರಗಳಲ್ಲಿ ಸುಮಾರು 62 ಲಕ್ಷ ದಾಟಿದ್ದು 3.72 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ 62,08,200 ಜನರಿಗೆ ಸೋಂಕು ಜಗತ್ತಿನಾದ್ಯಂತ 3,72,052 ಜನರ ಸಾವು ಕೊರೋನಾ ಸೋಂಕು ದಿನೇದಿನೇ ಹೆಚ್ಚುತ್ತಲೇ ಇದ್ದು ಅಮೆರಿಕಾದಲ್ಲಿ ಅತೀ ಹೆಚ್ಚುಮಂದಿ ಸೋಂಕಿತರಿದ್ದಾರೆ. ಭಾರತದಲ್ಲೂ ಅತೀ ವೇಗದಲ್ಲಿ ಕೋವಿಡ್-19 ಸೋಂಕು ಹಬ್ಬಿದ್ದು ಇದೀಗ ಅತೀ ಹೆಚ್ಚು ಸೋಂಕು ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನಕ್ಕೇರಿದೆ. ಭಾರತದಲ್ಲಿ 1,89,765 ಜನರಿಗೆ ಸೋಂಕು 5,390 ಕೊರೋನಾ ಸೋಂಕಿಗೆ ಬಲಿ ಇದನ್ನೂ ಓದಿ.. ದೇವಾಲಯ, ಮಸೀದಿಗಳಲ್ಲಿ ಹೇಗಿರಬೇಕು; ಸರ್ಕಾರದಿಂದ ಮಾರ್ಗಸೂಚಿ
ಲಡಾಖ್ ಎಲ್‌ಎಸಿ ಬಳಿ ಶಸ್ತಾಸ್ರ ಜಮಾವಣೆ; ಚೀನಾ-ಭಾರತ ಸಮರ ಸನ್ನದ್ಧ?
ದೆಹಲಿ: ಭಾರತ ಮತ್ತು ಚೀನಾ ಸಮಾರಾ ಲಡಾಖ್’ನಲ್ಲಿ ಸಮಾರಾ ಛಾಯೆ ಆವರಿಸಿದೆ. ಈವರೆಗೂ ಪದೇಪದೇ ಕಾಲ್ಕೆರೆಯುತ್ತಾ ಜಗಳಕ್ಕೆ ಬರುತ್ತಿದ್ದ ಚೀನಾ ಈಗ ಗಡಿ ಭಾಗದಲ್ಲಿ ಸೇನೆ ನಿಯೋಜಿಸಿದೆ. ಜೊತೆಗೆ ಶಸ್ತ್ರಾಸ್ತ್ರ ಸಜ್ಜುಗೊಳಿಸಿ ಆತಂಕ ಸೃಷ್ಟಿಸಿದೆ. ಕೆಂಪು ರಾಷ್ಟ್ರದ ಯುದ್ಧ ಪಿತೂರಿಯ ಸುಳಿವರಿತಿರುವ ಭಾರತ ಕೂಡಾ ಗಡಿ ಭಾಗದಲ್ಲಿ ಸೇನೆನೆಯನ್ನು ಸಜ್ಜುಗೊಳಿಸಿದೆ. ಪೂರ್ವ ಲಡಾಖ್‌ನ ಗಡಿ ಭಾಗದಲ್ಲಿ ಸುಮಾರು 25 ದಿನಗಳಿಂದ ಉಪಟಳ ಆರಂಭಿಸಿರುವ ಚೀನಾ ಸೇನೆ, ಭಾರತದ ಸೇನಾ ಯೋಧರಿಗೆ ಕಿರುಕುಳ ನೀಡುತ್ತಿದೆ ಎನ್ನಲಾಗುತ್ತಿದೆ. ಗಡಿಭಾಗದಲ್ಲಿ ಆಗಾಗ್ಗೆ ಅಹಿತಕರ ಘಟನೆಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲೇ ಚೀನಾ ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪದೇ ಕೂಡಾ ತನ್ನ ಭಾಗದಲ್ಲಿ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಚೀನಾ ಸೈನ್ಯವು ಪೂರ್ವ ಲಡಾಕ್‌ನ ಎಲ್.ಎ.ಸಿ ಬಳಿ ಫಿರಂಗಿ ಬಂದೂಕುಗಳು, ಯುದ್ಧ ವಾಹನಗಳು ಮತ್ತು ಭಾರೀ ಮಿಲಿಟರಿ ಉಪಕರಣಗಳನ್ನು ಜಮೆ…
ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು: 2 ಲಕ್ಷ ತಲುಪುವ ಆತಂಕ
ದೆಹಲಿ: ಭಾರತದಲ್ಲಿ ಕೊರೋನಾ ಹಾವಳಿಗೆ ಅಂಕುಶ ಹಾಕಲಾಗುತ್ತಿಲ್ಲ. ದಿನೇ ದಿನೇ ಸೋಂಕು ವ್ಯಾಪಿಸುತ್ತಿದ್ದು, ಶನಿವಾರ ಒಂದೇ ದಿನ ದಾಖಲೆ ಪ್ರಮಾಣದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಷ್ಟೇ ಅಲ್ಲ 193 ಮಂದಿಯನ್ನು ಈ ಕಿಲ್ಲರ್ ಕೊರೋನಾ ಬಲಿತೆಗೆದುಕೊಂಡಿದೆ. ಮಹಾರಾಷ್ಟ್ರ, ಗುಜರಾತ್ ಸಹಿತ ಕೊರೋನಾ ಪೀಡಿತ ರಾಜ್ಯಗಳಲ್ಲಿ ಈಗಿನ್ನೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕಿಗೂ ಈ ರಾಜ್ಯಗಳಿಂದ ಜನ ವಲಸೆ ಹೋಗಿರುವುದೇ ಕಾರಣ ಎನ್ನಲಾಗಿದೆ. ಆರೋಗ್ಯ ಇಲಾಖೆ ಪ್ರಕಾರ ಶನಿವಾರ ಒಂದೇ ದಿನ ದೇಶದಲ್ಲಿ 8,380 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ.
ದೇವಾಲಯ, ಮಸೀದಿಗಳಲ್ಲಿ ಹೇಗಿರಬೇಕು; ಸರ್ಕಾರದಿಂದ ಮಾರ್ಗಸೂಚಿ
ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಲೇ ಇದೆ. ಹಾಗಾಗಿ ಲಾಕ್’ಡೌನ್ 5ನೇ ಅವಧಿಗೆ ಮುಂದುವರಿದಿದೆ. ಆದರೆ ಹೆಚ್ಚಿನ ಕಡೆ ಮಾರ್ಗಸೂಚಿಯಲ್ಲಿ ಸಡಿಲಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜೂನ್ 8ರಿಂದ ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಇತರೆ ಪ್ರಾರ್ಥನಾ ಮಂದಿಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ದೇವಾಲಯಗಳಿಗೆ ತೆರಳುವ ಭಕ್ತರು ಮಾಸ್ಕ್ ಧರಿಸಬೇಕು. ದೇವಾಲಯಕ್ಕೆ ಬರುವ ಭಕ್ತರಿಗೆ ಜ್ವರ ಪರಿಶೀಲಿಸಬೇಕು. ಸ್ಯಾನಿಟೈಸರ್ ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಖಡ್ಡಾಯ. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವವರು ಕನಿಷ್ಠ 1 ಮೀಟರ್ ಅಂತರವನ್ನು ಕಾಪಾಡಬೇಕು. ಜ್ವರ ಪರಿಶೀಲಿಸಬೇಕು. ಶುಕ್ರವಾರದ ಪ್ರಾರ್ಥನೆಯನ್ನು 20 ನಿಮಿಷಗಳೊಳಗಾಗಿ ಪೂರ್ಣಗೊಳಿಸಬೇಕು. ಆಹಾರ ವಿತರಣೆಯಂತಹಾ ಕ್ರಮಗಳಿಗೆ ಅವಕಾಶ ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಸೀದಿ ಸೇರುವುದಕ್ಕೆ ಅನುಮತಿಯಿಲ್ಲ ಎಂದು ಸರ್ಕಾರ ಸೂಚಿಸಿದೆ. ಇದನ್ನೂ ಓದಿ.. ಸಿಡಿಲು ಬಡಿದು…
ಬಿಡುಗಡೆಗೆ ಮುನ್ನವೇ ‘ರಾಬರ್ಟ್’ ಹವಾ; ದರ್ಶನ್ ಅಭಿಮಾನಿಗಳು ಫುಲ್ ಖುಷ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ಬಿಡುಗಡೆಗೂ ಮುನ್ನವೇ ಹವಾ ಎಬ್ಬಿಸಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು ಯಜಮಾನನ ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಹೇಳಿದ್ದ ಚಿತ್ರ ತಂಡ ಅದರಂತೆಯೇ ಫಾಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ತರುಣ್ ಸುಧೀರ್ ‘ರಾಬರ್ಟ್’ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದರ ಫರ್ಸ್ಟ್ ಲುಕ್ ಮೋಷನ್ ಪೋಸ್ಟರ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ರೆಸ್ಪಾನ್ಸ್ ಸಿಗುತ್ತಿದೆ. https://www.youtube.com/watch?v=eIk19VVeMdo
