ಹಲಸಿನ ಹಣ್ಣು ಎಷ್ಟು ಟೆಸ್ಟೋ ಜನರಿಗೂ ಅಷ್ಟೇ ಇಷ್ಟ. ಈ ಹಣ್ಣಿನ ಉಪಯೋಗ ಒಂದೆರಡಲ್ಲ. ಇನ್ಸ್ಟಾಂಟ್ ಟೇಸ್ಟೀ ಫುಡ್ ಎಂದೇ ಗುರುತಾಗಿರುವ ಹಲಸಿನ ಹಣ್ಣು ಬಗೆಬಗೆಯ ಖಾದ್ಯಗಳಿಗೂ ಸೂಕ್ತ. ಅದರಲ್ಲೂ ತುಳುನಾಡ ಖಾದ್ಯ ಹಲಸಿನ ಹಣ್ಣಿನ ದೋಸೆಯಂತೂ ಭಾರೀ ಫೇಮಸ್ಸು. ಈ ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನವೂ ಬಲು ಸುಲಭ. ಕರಾವಳಿ ಫ್ಲೇವರ್ ತಂಡ ‘ಹಲಸಿನ ಹಣ್ಣಿನ ದೋಸೆ’ ತಯಾರಿಸುವ ಸರಳ ವಿಧಾನವನ್ನು ತೋರಿಸಿಕೊಟ್ಟಿದೆ. ಇದನ್ನೂ ಓದಿ.. ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು
Year: 2020
ಯೋಗಿ ಆದಿತ್ಯನಾಥ್ ಸರ್ಕಾರ ವಜಾಕ್ಕೆ ಕಾಂಗ್ರೆಸ್ ಆಗ್ರಹ
ಬೆಂಗಳೂರು: ಉತ್ತರ ಪ್ರದೇಶ ಕಾರ್ಮಿಕರು ಇತರ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವಂತಿಲ್ಲ ಎಂದು ಆದೇಶಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ಧಾರದ ಕುರಿತಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭಾರತವು ಒಕ್ಕೂಟ ವ್ಯವಸ್ಥೆಯಾಗಿದ್ದು, ಪ್ರತಿಯೊಬ್ಬ ನಾಗರೀಕನಿಗೂ ನಮ್ಮ ಸಂವಿಧಾನ ಒಂದಷ್ಟು ಹಕ್ಕುಗಳನ್ನು ನೀಡಿದೆ. ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಸರ್ವಾಧಿಕಾರಿ ಧೋರಣೆ ತೋರುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿವೆ. ಇದಕ್ಕೆ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ ಒಂದು ಉದಾಹರಣೆಯಾಗಿದೆ ಎಂದು ಡಿಕೆಶಿ ಹೇಳಿದ್ದಾರೆ. ಆದಿತ್ಯನಾಥ ಅವರನ್ನು ಸಿಎಂ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಇಡೀ ದೇಶಾದ್ಯಾಂತ ಉಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. UP CM Yogi Adityanath's…
ಕ್ವಾರಂಟೈನ್ ತಂದ ಬೇಸರ; ಯುವಕ ಆತ್ಮಹತ್ಯೆ
ಬೀದರ್: ಕೊರೋನಾ ವಿಚಾರ ಜನರ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತಿದೆಯೇ? ಹಲವಾರು ಸನ್ನಿವೇಶಗಳನ್ನು ಗಮನಿಸಿದರೆ ಇಂಥದ್ದೊಂದು ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ರಾಜ್ಯದಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ನಡೆದಿದೆ. ಬೀದರ್ ಜಿಲ್ಲೆ ಔರಾದ್ ಬಳಿ ಕ್ವಾರಂಟೈನ್‍ನಲ್ಲಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದಲ್ಲಿ ಮಹಾರಾಷ್ಟ್ರದಿಂದ ವಾಪಾಗಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಸಾವಿಗೆ ಶರಣಾಗಿದ್ದಾನೆ. ಮಂಗಳವಾರ ಬೆಳಗ್ಗೆ ಇ ಘಟನೆ ನಡೆದಿದೆ. ಮಹಾರಾಷ್ಟ್ರದ ಮುಂಬೈನಿಂದ ತನ್ನ ಪತ್ನಿಯೊಂದಿಗೆ ಜಿಲ್ಲೆಗೆ ವಾಪಸ್ಸಾದ ಹಿನ್ನೆಲೆಯಲ್ಲಿ ದಂಪತಿಯನ್ನು ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಬೆಳಿಗ್ಗೆ ಈತ ನೇಣಿಗೆ ಶರಣಾಗಿದ್ದಾನೆನ್ನಲಾಗಿದೆ. ಮೃತ ವ್ಯಕ್ತಿ ನಾರಾಯಣಪುರ ಗ್ರಾಮದವನೆನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಮತ್ತೆ 100 ಹೊಸ ಕೇಸ್; ಕೊರೋನಾ ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಕರಾಳ ದಿನ. ಮತ್ತೊಮ್ಮೆ ಶತಕದ ವರದಿಯ ತಲ್ಲಣ ಸೃಷ್ಟಿಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ನೂರು ಹೊಸ ಕೋವಿಡ್-19 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿರುವುದನ್ನು ಬಹಿರಂಗಪಡಿಸಿದೆ. ಸೋಮವಾರ ಸಂಜೆ ನಂತರ ಮಂಗಳವಾರ ಮಧ್ಯಾಹ್ನದವರೆಗೆ ರಾಜ್ಯದ ವಿವಿಧೆಡೆ ನೂರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ, 2,282ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ. ◼️ ಕೋಲಾರದಲ್ಲಿ 2 ಹೊಸ ಕೇಸ್ ◼️ ಯಾದಗಿರಿಯಲ್ಲಿ 14 ಹೊಸ ಕೇಸ್ ◼️ ದಕ್ಷಿಣ ಕನ್ನಡದಲ್ಲಿ 3 ಹೊಸ ಕೇಸ್ ◼ ಬಾಗಲಕೋಟೆಯಲ್ಲಿ 1 ಹೊಸ ಕೇಸ್ ◼️ ವಿಜಯಪುರದಲ್ಲಿ 5 ಹೊಸ ಕೇಸ್ ◼️ ದಾವಣಗೆರೆಯಲ್ಲಿ 11 ಹೊಸ ಕೇಸ್ ◼️ ಬೀದರ್‌ನಲ್ಲಿ 10 ಹೊಸ ಕೇಸ್ ◼️ ಹಾಸನದಲ್ಲಿ 13 ಹೊಸ ಕೇಸ್…
ಕೊರೋನಾ ಮರಣ ಮೃದಂಗ: ಮುಂಬೈನಲ್ಲಿ ಒಂದೇ ದಿನ 60 ಬಲಿ
ಮುಂಬೈ: ದೇಶಾದ್ಯಂತ ಕೊರೋನಾ ವೈರಸ್ ಮರಣಮೃದಂಗ ಭಾರಿಸುತ್ತಿದ್ದು ಮಹಾರಾಷ್ಟ್ರದಲ್ಲಂತೂ ಜನರನ್ನು ಹೈರಾಣಾಗಿಸಿದೆ. ಸೋಮವಾರ ಮಹಾರಾಷ್ಟ್ರದಲ್ಲಿ 60 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಈ ಬೆಳವಣಿಗೆಯಿಂದಾಗಿ ಇಡೀ ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ನಿನ್ನೆ ದೇಶಾದ್ಯಂತ 146 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರದ್ದೇ ಹೆಚ್ಚು ಸಂಖ್ಯೆ. ಈ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 4,167ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 1,695ಕ್ಕೆ ಏರಿಕೆಯಾಗಿದೆ. ◼️ಮಹಾರಾಷ್ಟ್ರದಲ್ಲಿ ಒಟ್ಟು 1,695 ಮಂದಿ ಸಾವು ◼️ಗುಜರಾತ್‌ನಲ್ಲಿ ಒಟ್ಟು 888 ಮಂದಿ ಸಾವು ◼️ಮಧ್ಯಪ್ರದೇಶದಲ್ಲಿ 300 ಮಂದಿ ಸಾವು ◼️ಪ.ಬಂಗಾಳದಲ್ಲಿ 278 ಮಂದಿ ಬಲಿ ◼️ದೆಹಲಿಯಲ್ಲಿ 276 ಮಂದಿ ಬಲಿ ◼️ರಾಜಸ್ಥಾನದಲ್ಲಿ 167 ಮಂದಿ ಬಲಿ ◼️ಉತ್ತರಪ್ರದೇಶದಲ್ಲಿ 165 ಮಂದಿ ಸಾವು ◼️ತಮಿಳುನಾಡಿನಲ್ಲಿ 118 ಮಂದಿ ಬಲಿ ◼️ಅಂಧ್ರಪ್ರದೇಶ, ತೆಲಂಗಾಣದಲ್ಲಿ 112 ಮಂದಿ ಸಾವು ◼️ಕರ್ನಾಟಕದಲ್ಲಿ…
ನಾಡಿನೆಲ್ಲೆರೆ ರಂಜಾನ್ ಸಡಗರ; ಶುಭಾಶಯಗಳ ವಿನಿಮಯ
ಬೆಂಗಳೂರು: ನಾಡಿನಾದ್ಯಂತ ಇದೀಗ ಮುಸ್ಲಿಮರ ಪವಿತ್ರ ರಂಜಾನ್ ಸಡಗರ. ಲಾಕ್’ಡೌನ್ ಜಾರಿಯಲ್ಲಿರುವುದರಿಂದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಸರಳ ಆಚರಣೆಯಷ್ಟೇ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಕೇರಳ ಮಲಬಾರ್ ತೀರದಲ್ಲಿ ಇಂದೇ ಈದ್ ಉಲ್ ಫಿತ್ರ್ ಆಚರಿಸಲಾಗುತ್ತಿದ್ದು, ಇನ್ನುಳಿದೆಡೆ ಸೋಮವಾರ ಈ ಹಬ್ಬವನ್ನು ಆಸಿಗರಿಸಲಾಗುತ್ತಿದೆ. ಇದೇ ವೇಳೆ, ನಾಡಿನ ಮುಸ್ಲಿಂ ಬಾಂಧವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಶುಭಾಶಯ ಕೋರಿದ್ದಾರೆ. ‘ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಶುದ್ಧಿಗೊಳಿಸುವ ಪವಿತ್ರ ರಂಜಾನ್ ಹಬ್ಬ ಶುಭ ತರಲಿ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ. ರಂಜಾನ್ ಎಂದರೆ ಕೇವಲ ಉಪವಾಸ ಮಾತ್ರವಲ್ಲ. ಅರ್ಹರಿಗೆ, ಅಗತ್ಯವಿರುವವರಿಗೆ ದಾನ, ಧರ್ಮ ಮಾಡಿ ಆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವುದಾಗಿದೆ. ಸದ್ಯ ಜಗತ್ತಿನಲ್ಲಿ ಮಾನವಕುಲಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ನಾವೆಲ್ಲರೂ…
ಲಡಾಕ್ ಗಡಿಯಲ್ಲಿ ಕೆಂಪು ಸೇನೆ ಕಿರಿಕ್; ಭಾರತದ ವಿರುದ್ಧ ಚೀನಾ ಯುದ್ಧಸನ್ನದ್ಧ?
ದೆಹಲಿ; ಅಗೋಚರ ವೈರಾಣು ಸೃಷ್ಟಿಸಿ ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಸಿರುವ ಕೆಂಪು ರಾಷ್ಟ್ರ ಚೀನಾ ಇದೀಗ ಭಾರತದ ವಿರುದ್ಧ ಸಮರ ಸಾರಿದಂತಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ದೇಶವಾಗಿರುವ ಚೀನಾ, ಲಡಾಖ್ ಗಡಿಭಾಗದಲ್ಲಿ ಆಗಾಗ್ಗೆ ತಕರಾರು ಎತ್ತುತ್ತಲೇ ಇದ್ದು ಇದೀಗ ಮತ್ತೆ ಗುದ್ದಾಟಕ್ಕಿಳಿದಿದೆ. ಕೆಲ ದಿನಗಳ ಹಿಂದೆ ಲಡಾಖ್’ನಲ್ಲಿ ಭಾರತೀಯ ಯೋಧರನ್ನು ಚೀನಾ ಪಡೆ ವಶಕ್ಕೆ ಪಡೆದಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಲಡಾಖ್ ವಿಚಾರದಲ್ಲಿ ಚೀನಾ ದಶಕಗಳಿಂದಲೇ ಕಿರಿಕ್ ಮಾಡುತ್ತಲೇ ಇದ್ದು ಪಿಒಕೆ ಯಲ್ಲಿ ಪಾಕಿಸ್ತಾನ ಯಾವ ರೀತಿ ವರ್ತಿಸುತ್ತೋ ಅದೇ ರೀತಿಯಲ್ಲಿ ಮತ್ತೊಂದೆಡೆ ಚೀನಾ ಪಿತೂರಿ ಮಾಡುತ್ತಲಿದೆ. ಲಡಾಖ್’ನ ಪ್ಯಾಂಗ್ಯಾಂಗ್ ಸರೋವರದ ಬಳಿ ಬಹುದಿನಗಳಿಂದ ದಿನಗಳಿಂದ ಬೀಡು ಬಿಟ್ಟಿರುವ ಚೀನಾ ಸೇನೆ, ಭಾರತದ ಗಡಿಯೊಳಗೆ ನುಗ್ಗಿ ಪುಂಡಾಟ ಪ್ರದರ್ಶಿಸಿದೆ. ಇದಕ್ಕೆ ಎದಿರೇಟು ಕೊಡುವ ಮುನ್ನವೇ ಭಾರತದ ಹಲವು ಸೈನಿಕರನ್ನು ಚೀನಾ ಸೇನಾಪಡೆ ವಶಕ್ಕೆ ಪಡೆದಿದೆ. ಭಾರೀ…
ತೆಂಗಿನಕಾಯಿ ಹಾಲು, ಪೌಡರ್.. ಮಾಡೋ ವಿಧಾನ ಬಲು ಸುಲಭ
ತೆಂಗಿನಕಾಯಿ ಹಾಲು ಅಥವಾ ತೆಂಗಿನಕಾಯಿ ಪುಡಿ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಮಾರುಕಟ್ಟೆಗಳಲ್ಲಿ ಪೈಪೋಟಿ ದರದಲ್ಲಿ ಈ ವಸ್ತು ಸಿಗುತ್ತದೆಯಾದರೂ ಹಳ್ಳಿ ಸೊಗಡಿನ ಪರಿಶುದ್ಧ ತೆಂಗಿನಕಾಯಿ ಹಾಲು ಸಿಗಲಾರದು. ಸಮಯ ಹೊಂದಿಸಿಕೊಂಡಲ್ಲಿ ಮನೆಯಲ್ಲೇ ಇದನ್ನು ತಯಾರಿಸಬಹುದು. ಇದರ ತಯಾರಿಯೂ ಬಲು ಸುಲಭ. ಬೇಕಾದ ಸಾಮಗ್ರಿ ತೆಂಗಿನಕಾಯಿ 1 ಮಾಡುವ ವಿಧಾನ ಮೊದಲಿಗೆ ತೆಂಗಿನಕಾಯಿಯನ್ನು ತುಂಡು ಅಥವಾ ತುರಿದು ಇಟ್ಟುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ಮತ್ತು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಂದು ಬಟ್ಟೆ ಹಾಕಿ ಅದಕ್ಕೆ ರುಬ್ಬಿಕೊಂಡದ್ದನ್ನು ಹಾಕಿ 2-3. ಸಲ ಹಿಂಡಬೇಕು. ಹಾಗೆ ಹಿಂಡಿದಾಗ ತೆಂಗಿನಕಾಯಿ ಹಾಲು ಸಿದ್ಧವಾಗುತ್ತದೆ. ಆ ಬಟ್ಟೆಯಲ್ಲಿ ಉಳಿದ ತೆಂಗಿನಕಾಯಿಯನ್ನು ತೆಗದು ಒಂದು ಬಾಣಲೆಯಲ್ಲಿ 10 ನಿಮಿಷಗಳ ಕಾಲ ಹುರಿಯಬೇಕು. ನಂತರ ಅದನ್ನು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಂಡಾಗ ಪೌಡರ್ ತರಹ ತೆಂಗಿನಕಾಯಿ ಹುಡಿ ಸಿದ್ಧವಾಗುತ್ತದೆ. ಇದನ್ನು…
ಕರುನಾಡಲ್ಲಿ ಕೊರೋನಾ ರಣಕೇಕೆ; ಒಂದೇ ದಿನದಲ್ಲಿ 216 ಹೊಸ ಕೇಸ್
ಬೆಂಗಳೂರು: ಕರುನಾಡಲ್ಲಿ ಕೊರೋನಾ ರಣಕೇಕೆ ಮುಂದುವರಿದಿದ್ದು ಇದೀಗ ಮತ್ತಷ್ಟು ಜನರನ್ನು ಈ ವೈರಾಣು ಅಪ್ಪಿಕೊಂಡಿದೆ. ಲಾಕ್ಡೌನ್ ಜಾರಿಯಲ್ಲಿದ್ದರೂ ಸೋಂಕಿನ ವೇಗ ಹೆಚ್ಚಾಗಿದ್ದು ಇಂದು ಒಂದೇ ದಿನದಲ್ಲಿ 216 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆ ನಡುವೆ ವಿವಿಧ ಜಿಲ್ಲೆಗಳಲ್ಲಿನ ಕೊರೋನಾ ಸೋಂಕಿತರ ಪಟ್ಟಿ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ ಇಂಥದ್ದೊಂದು ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಮಧ್ಯಾಹ್ನದ ಹೆಲ್ತ್ ಬುಲೆಟಿನ್’ನಲ್ಲಿ 196 ಪಾಸಿಟಿವ್ ಕೇಸ್’ಗಳ ಅಂಕಿಅಂಶ ಒದಗಿಸಿದ್ದ ಆರೋಗ್ಯ ಇಲಾಖೆ ಸಂಜೆಯಾಗುವಷ್ಟರಲ್ಲಿ ಈ ಸಂಖ್ಯೆ 216 ಕ್ಕೆ ಏರಿಕೆಯಾಗುವುದನ್ನು ವಿವರಿಸಿದೆ. ಯಾದಗಿರಿ – 72 ಹೊಸ ಕೇಸ್ ರಾಯಚೂರು – 40 ಹೊಸ ಕೇಸ್ ಮಂಡ್ಯ – 28 ಹೊಸ ಕೇಸ್ ಚಿಕ್ಕಬಳ್ಳಾಪುರ – 26 ಹೊಸ ಕೇಸ್ ಗದಗ್ – 15 ಹೊಸ ಕೇಸ್ ಧಾರವಾಡ – 5 ಹೊಸ ಕೇಸ್ ಬೆಂಗಳೂರು…
ನಿಮ್ಮೂರಲ್ಲಿ ಬರೋಬ್ಬರಿ 36 ತಾಸು ಕರ್ಫ್ಯೂ ಜಾರಿ; ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಬೆಂಗಳೂರು: ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದೆ. ಲಾಕ್’ಡೌನ್ 4ನೇ ಅವಧಿಯಲ್ಲಿ ಮಾರ್ಗಸೂಚಿ ಸಡಿಲಗೊಳಿಸಲಾಗಿದೆಯಾದರೂ ಕರ್ನಾಟಕದಲ್ಲಿ ಪ್ರತೀ ಭಾನುವಾರ ಮಾತ್ರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಲಾಕ್’ಡೌನ್ ಮುಂದುವರಿದರೂ ಸೋಂಕಿನ ಸಂಖ್ಯೆ ಕಡಿಮೆಯಾಗಿಲ್ಲ. ಆರ್ಥಿಕತೆಗೆ ಚೇತರಿಕೆ ಬರಲೆಂಬ ಉದ್ದೇಶದಿಂದ ಮಾರ್ಗಸೂಚಿಯಲ್ಲಿ ಬದಲಾವಣೆ ತಂದು ಸಾಮಾಜಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಭಾನುವಾರ ಬಹುತೇಕ ಕಚೇರಿಗಳಿಗೆ ರಜೆ ಇರುವುದರಿಂದಾಗಿ ಅಂದು ಇಡೀ ದಿನ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮೇ 31 ರವರೆಗೆ ಲಾಕ್’ಡೌನ್ ೪ನೇ ಅವಧಿಯ ಎಲ್ಲಾ ಭಾನುವಾರ ಈ ಕರ್ಫ್ಯೂ ಜಾರಿಯಲ್ಲಿರಲಿದೆ. ಇದನ್ನೂ ಓದಿ.. ಲಾಕ್’ಡೌನ್ ಸಂದರ್ಭದಲ್ಲೂ ತಿರುಪತಿ ತಿಮ್ಮಪ್ಪನ ಮಹಿಮೆ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಸಮಯದಲ್ಲಿ ಜನರು ಮನೆಯಿಂದ ಹೊರಗೆ ಬಾರದಂತೆ ತಡೆಯಲು ಪೊಲೀಸ್ ಇಲಾಖೆ ನಿಯಮ ರೂಪಿಸಿದೆ. ಈ ಸಂದರ್ಭದಲ್ಲಿ ಏನಿರುತ್ತೆ? ಏನಿರಲ್ಲ?…
