ಬೆಂಗಳೂರು: ಭೀಕರ ಅಪಘಾತ.. ವಾಹನ ಸವಾರಿ ಎಷ್ಟು ಸೇಫ್..? 

ಬೆಂಗಳೂರು: ಹುಲಿಮಾವು ಬಳಿ ಭೀಕರ ಅಪಘಾತ.. ವಾಹನ ಸವಾರಿ ಎಷ್ಟು ಸೇಫ್..? ವೈರಲ್ ವೀಡಿಯೋ ಬಗ್ಗೆ ನೆಟ್ಟಿಗರಿಂದ ಕಮೆಂಟ್.. VIDEO | Four people were injured after a SUV hit three bikes near Hulimavu in Bengaluru. Police have registered a case and an investigation is underway. More details are awaited. pic.twitter.com/M8Sqg1ysaO — Press Trust of India (@PTI_News) November 13, 2023

ಬಸವರಾಜ ಬೊಮ್ಮಾಯಿ ಅವರ ಆಶೀರ್ವಾದ ಪಡೆದ ಬಿಜೆಪಿಯ ವಿಜಯ ‘ಸಾರಥಿ’

ಬೆಂಗಳೂರು: ನಿಕಟಪೂರ್ವ ಮುಖ್ಯಮಂತ್ರಿ, ನಮ್ಮೆಲ್ಲರ ಹಿರಿಯರಾದ ಬಸವರಾಜ ಬೊಮ್ಮಾಯಿ ಅವರನ್ನು ದೀಪಾವಳಿ ಶುಭ ಸಂದರ್ಭದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ; ಅಲ್ಲದೆ ಮಾರ್ಗದರ್ಶನವನ್ನು ಕೋರಿದ್ದೇನೆ. ಅವರು ಬಹಳ ಸಂತೋಷ ಪಟ್ಟಿದ್ದಾರೆ. ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ರಾಷ್ಟ್ರೀಯ ನಾಯಕರು ಅತ್ಯುತ್ತಮ ನಿರ್ಣಯ ಮಾಡಿದ್ದಾಗಿ ಬೊಮ್ಮಾಯಿಯವರು ಹೇಳಿದ್ದಾಗಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ನೇಮಕದಿಂದ ರಾಜ್ಯಕ್ಕೆ, ರಾಜ್ಯ ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ತಿಳಿಸಿದ್ದಾಗಿ ವಿವರಿಸಿದರು. ನಾನಷ್ಟೇ ಅಲ್ಲ; ಹಿರಿಯರೆಲ್ಲರೂ ನಿನ್ನ ಜೊತೆ ಇರಲಿದ್ದೇವೆ; ಸಹಕಾರ ನೀಡುವ ಮತ್ತು ಮಾರ್ಗದರ್ಶನ ನೀಡುವ ಮಾತನಾಡಿದ್ದಾರೆ ಎಂದರು. ಇಂದು ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾದ ಶ್ರೀ @BYVijayendra ಅವರು ನನ್ನ ಸ್ವಗೃಹಕ್ಕೆ ಆಗಮಿಸಿ,…

ವೀರ ಯೋಧರ ಜೊತೆ ದೀಪಾವಳಿ ಹಬ್ಬಆಚರಿಸಿದ ಪ್ರಧಾನಿ ಮೋದಿ

ದೆಹಲಿ : ದೇಶದ ಗಡಿ ಕಾಯುವ ವೀರ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸುವ ಪ್ರಧಾನಿ ಮೋದಿ, ಈ ಬಾರಿ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಭಾರತೀಯ ಸೇನೆಯ ಯೋಧರ ಜೊತೆ ಬೆಳಕಿನ ಹಬ್ಬ ಆಚರಿಸಿದ್ದಾರೆ. ಭಾರತ ಮತ್ತು ಚೀನಾ ಗಡಿಯ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ದೀಪಾವಳಿ ಸಂಭ್ರಮಾಚರಣೆ ಮೂಲಕ ದೇಶದ ಗಮನ ಸೆಳೆದರು. ಭಾನುವಾರ ಬೆಳಗ್ಗೆ ಸೈನಿಕರಿಗೆ ಸಿಹಿ ಹಂಚಿ, ಉಡುಗೊರೆಗಳನ್ನು ನೀಡಿದರು. ಅವರೊಂದಿಗೆ ಜೊತೆ ಸಂವಾದ ನಡೆಸಿದರು. ಈ ಕುರಿತ ಫೋಟೋಗಳನ್ನೂ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. Spending Diwali with our brave security forces in Lepcha, Himachal Pradesh has been an experience filled with deep emotion and pride. Away from their families, these guardians of our nation illuminate our…

ಬೆಚ್ಚಿ ಬಿದ್ದ ಕರಾವಳಿ; ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

ನಾಡು ದೀಪಾವಳಿ ಸಂಭ್ರಮದಲ್ಲಿರುವಾಗಲೇ ದೇವಳ ನಗರಿ ಉಡುಪಿ ಬೆಚ್ಚಿ ಬಿದ್ದಿದೆ. ಉಡುಪಿ ಸಮೀಪದ ಮಲ್ಪೆ ಬಳಿ ದುಷ್ಕರ್ಮಿಗಳು ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಸುಮಾರು 9 ಗಂಟೆಗೆ ಘಟನೆ ನಡೆದಿದೆ ಎನ್ನಲಾಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಸಮೀಪ ಮನೆಗೆ ನುಗ್ಗಿದ ಹಂತಕರು ಅಲ್ಲಿದ್ದವರನ್ನು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಹಸೀನಾ (46) ಮತ್ತು ಆಕೆಯ ಮಕ್ಕಳಾದ ಅಫ್ನಾನ್ (23), ಅಯ್ನಝ್ (21) ಹಾಗೂ ಆಸಿಂ (12) ಎಂಬವರನ್ನು ಹಂತಕರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಹಸೀನಾ ಅವರ ಪತಿ ಮತ್ಸೋದ್ಯಮದಲ್ಲಿ ತೊಡಗಿದ್ದು, ಪ್ರಸಕ್ತ ವಿದೇಶದಲ್ಲಿದ್ದಾರೆ. ಇವರ ಪರಿವಾರ ಮಕ್ಕಳೊಂದಿಗೆ ಉಡುಪಿ ಸಮೀಪ ಮನೆ ಮಾಡಿ ವಾಸವಿತ್ತು. ಜನವಿರಳ ಪ್ರದೇಶದಲ್ಲಿರುವ ಮನೆಗೆ ನುಗ್ಗಿರುವ ಕೊಲೆಗಡುಕರು ಮಾರಣಹೋಮ ಮಾಡಿದ್ದಾರೆ. ಸುದ್ದಿ ತಿಳಿದು…

‘ಘರ್, ಜಲ, ಉಜ್ವಲ..’, ಕೇಂದ್ರದ ಸಾಧನೆಯನ್ನೇ ವೀಡಿಯೋ‌ ಮಾಡಿ ದೀಪಾವಳಿ ಶುಭಾಶಯ ಕೋರಿದ ಬಿಜೆಪಿ

पहला दीया – घर को,दूसरा दीया – जल को,तीसरा दीया -उज्ज्वला को,चौथा दीया – सम्मान को,पांचवा दीया, उसे जिसने हमें ये सब दिया यानी – कमल को। मोदी परिवार की ओर से दीपावली की हार्दिक शुभकामनाएं। शुभ दीपावली! pic.twitter.com/BNi1FnkciX — BJP (@BJP4India) November 12, 2023

ತುಳುನಾಡಿನ ‘ಸರೋವರ ಕ್ಷೇತ್ರ’ದಲ್ಲಿ ಮತ್ತೊಂದು ಪವಾಡ..! ಅನಂತಪುರ ಕ್ಷೇತ್ರದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ

ಮಂಗಳೂರು: ಕರುನಾಡ ಕರಾವಳಿಯ ದೇವಾಲಯಗಳು ಒಂದಿಲ್ಲೊಂದು ಪವಾಡದಿಂದ ಗಮನಸೆಳೆಯುತ್ತ ಇರುತ್ತದೆ. ಗಡಿಜಿಲ್ಲೆ ಕಾಸರಗೋಡು ಸಮೀಪದ ಅನಂತಪುರದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕೆಲ ಸಮಯದ ಹಿಂದಷ್ಟೇ ದೇವರ ಮೊಸಳೆ ‘ಬಬಿಯಾ’ ಸಾವನ್ನಪ್ಪಿತ್ತು. ದೇವಾಲಯದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ‘ಬಬಿಯಾ’ ಸಾವಿನ ನಂತರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಲ್ಲಿ ಬೇಸರ ಕಂಡುಬರುತ್ತಿತ್ತು. ಇದೀಗ ಅನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಈ ಹೊಸ ಮೊಸಳೆ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಸುಮಾರು ಒಂದು ವಾರದ ಹಿಂದೆ ದೇಗುಲಕ್ಕೆ ಭೇಟಿ ನೀಡಿದ್ದ ಭಕ್ತರೊಬ್ಬರು ಕಲ್ಯಾಣಿಯಲ್ಲಿ ‘ಮೊಸಳೆ ಕಂಡಂತೆ ಆಯಿತು’ ಎಂದು ಹೇಳಿಕೊಂಡಿದ್ದರು. ಆದರೆ ಯಾರೂ ಇದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಮೊಸಳೆ ಇರುವುದನ್ನು ದೇಗುಲದ ಆಡಳಿತ ಮಂಡಳಿಯೇ ಖಚಿತಪಡಿಸಿದೆ. ದೇವರ ಪ್ರತಿಬಿಂಬ ಎಂದೇ ಹೇಳಲ್ಪಡುತ್ತಿರುವ ಮೊಸಳೆ ಈಗ ಕಾಣಿಸಿರುವುದು ಭಕ್ತಾದಿಗಳಲ್ಲಿ ಖುಷಿ ತಂದಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಮಾಜಿ ಸಚಿವ ಸಿ.ಟಿ.ರವಿ, ‘ಸರೋವರ…

ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಗ್ಗೂಡಬೇಕಿದೆ; ಇರಾನ್ ಕರೆ

ರಿಯಾದ್ (ಸೌದಿ ): ಮಧ್ಯಪ್ರಾಚ್ಯ ಬಿಕ್ಕಟ್ಟು ಇದೀಗ ವಿಶ್ವದ ಹಲವು ರಾಷ್ಟ್ರಗಳನ್ನು ಕೆರಳುವಂತೆ ಮಾಡಿದೆ. ಪ್ಯಾಲೆಸ್ತೀನ್ ದಾಳಿಗೆ ಪ್ರತೀಕಾರ ತೀರಿಸುತ್ತಿರುವ ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಮುಗಿಬಿದ್ದಿವೆ. ಹಮಾಸ್ ಮತ್ತು ಇಸ್ರೇಲ್ ನಡುವೆ ಸಮರ ತೀವ್ರಗೊಂಡಿದ್ದು ಭೀಕರ ನರಮೇಧಕ್ಕೆ ಸಾಕ್ಷಿಯಾಗುತ್ತಿದೆ. ಈ ಯುದ್ಧದಲ್ಲಿ ಇಸ್ರೇಲ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿರುವ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಅಚ್ಚರಿಯ ಸಂದೇಶ ನೀಡಿದ್ದಾರೆ. ಸೌದಿ ರಾಜಧಾನಿ ರಿಯಾದ್‌ನಲ್ಲಿ ಶನಿವಾರ ನಡೆದ ಅರಬ್ ಮತ್ತು ಮುಸ್ಲಿಂ ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಇಬ್ರಾಹಿಂ ರೈಸಿ, ಇಸ್ರೇಲ್ ಸೇನೆಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವಂತೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಕರೆ ನೀಡಿದ್ದು, ಇಸ್ರೇಲ್‌ನೊಂದಿಗೆ ಸಂಬಂಧವನ್ನು ಇಸ್ಲಾಮಿಕ್ ದೇಶಗಳು ಮುರಿಯಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಇಸ್ಲಾಮಿಕ್ ರಾಷ್ಟ್ರಗಳು ಒಗ್ಗೂಡಿ ಪ್ಯಾಲೆಸ್ಟೀನನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಎರ್ನಾಕುಲಂ ಬಾಂಬ್ ಸ್ಫೋಟ; ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಕೊಚ್ಚಿ: ಎರ್ನಾಕುಲಂ ಜಿಲ್ಲೆಯಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ ಮತ್ತೊಬ್ಬ ಗಾಯಾಳು ಮೃತಪಟ್ಟಿದ್ದು ಸಾವಿನ ಸಂಖ್ಯೆ 5ಕ್ಕೆ ಏರಿದೆ. ಕೇರಳದ ಕ್ರಿಶ್ಚಿಯನ್ ಧಾರ್ಮಿಕ ಸಭೆಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣ ತಲ್ಲಣ ಸೃಷ್ಟಿಸಿತ್ತು. ಕೇರಳದ ಕಲಮಸ್ಸೆರಿಯ ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರದಲ್ಲಿ ನಡೆದ ಬಹು ಸ್ಫೋಟಗಳ ಸಂದರ್ಭದಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕೆಲವರಿಗೆ ಗಂಭೀರವಾಗಿ ಗಾಯವಾಗಿತ್ತು. ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಎಂಬ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಕೆಇಎ ಪರೀಕ್ಷಾ ಅಕ್ರಮ; ಆರ್.ಡಿ.ಪಾಟೀಲ್ ಸಹಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಿಲುಕಿರುವ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಹಾಗೂ ಇತರ ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಬಂಧಿತ ಆರೋಪಿಗಳಾದ ಆರ್ ಡಿ ಪಾಟೀಲ್, ಸಲೀಂ ಹಾಗೂ ಸಂತೋಷನನ್ನು 2ನೇ ಜೆಎಂಎಫ್ ಸಿ ಕೋರ್ಟ್’ಗೆ ಹಾಜರುಪಡಿಸಿದ ಅಶೋಕನಗರ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯವು ಆರೊಪಿಗಳನ್ನು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.