ಶಕ್ತಿ’ ಯೋಜನೆ.. ಸರ್ಕಾರಕ್ಕೆ ಶಹಬ್ಬಾಸ್ ಗಿರಿ, KSRTC ನಿರ್ವಾಹಕರಿಗೆ ಕಿರಿಕಿರಿ..!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಕರುನಾಡಿನ ಕೋಟ್ಯಂತರ ಸ್ತ್ರೀಯಯರ ಪಾಲಿಗೆ ಆರಾಮದಾಯ ಅನ್ನಿಸಿರುವ ಈ ‘ಶಕ್ತಿ’ ಯೋಜನೆ ರಾಜ್ಯ ಸರ್ಕಾರಿ ಸ್ವಾಮ್ಯದ ‘ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC)’ ಪಾಲಿಗೂ ಬಹಳಷ್ಟು ಆದಾಯದಾಯಕ ಎನಿಸಿದೆ. ಸರ್ಕಾರದ ಎಲ್ಲಾ ಗ್ಯಾರೆಂಟಿಗಳಲ್ಲಿಯೇ ಅತೀ ಹೆಚ್ಚು ಯಶಸ್ವಿಯಾಗಿರುವುದೂ ‘ಶಕ್ತಿ’ ಯೋಜನೆ. ರಾಜ್ಯ ಸರ್ಕಾರದ ಈ ಯೋಜನೆಯು ಮುನ್ನುಡಿ ಬರೆದ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದೂ ಇದೆ. ಆದರೆ ಇದೀಗ ಈ ‘ಶಕ್ತಿ’ ಯೋಜನೆಯು KSRTC ನಿರ್ವಾಹಕರ ಪಾಲಿಗೆ ಪ್ರಯಾಸದ ಕೆಲಸವಾಗಿ ಪರಿಣಮಿಸಿದೆ. ‘ಶಕ್ತಿ’ ಯೋಜನೆ ಜಾರಿಯಾದ ನಂತರ ರಾಜ್ಯದ ಸಾರಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಸುಲಭ ದಾರಿಯನ್ನು ಕರುಣಿಸಿದೆ. ಸಾಮಾನ್ಯ ಹಾಗೂ ಎಕ್ಸ್ಪ್ರೆಸ್ ಬಸ್ಸುಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಹಾಗಾಗಿ ನಿತ್ಯವೂ KSRTC…

ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್​ ಅಕ್ರಮ್ ಘಾಜಿ ಹತ್ಯೆ

ಇಸ್ಲಮಾಬಾದ್ : ಕುಖ್ಯಾತ ಭಯೋತ್ಪಾದಕ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್​ ಅಕ್ರಮ್ ಘಾಜಿ ಹತ್ಯೆಯಾಗಿದ್ದಾನೆ. ಈತನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್​ ಖಾನ್​ ಅಲಿಯಾಸ್​ ಅಕ್ರಮ್ ಘಾಜಿ ಪಾಕಿಸ್ತಾನದ ಬಜೌರ್​ ಎಂಬಲ್ಲಿ ಅವಿತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಪರಿಚಿತನೊಬ್ಬ ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಅಕ್ರಮ್ ಘಾಜಿ ಲಷ್ಕರ್‌ ಸಂಘಟನೆಯಲ್ಲಿ ಯುವ ಉಗ್ರರಿಗೆ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ.‌

ಪಟಾಕಿ ಬ್ಯಾನ್ ಹಿಂದೂ ಹಬ್ಬಗಳಲ್ಲಿ ಮಾತ್ರ ಯಾಕೆ? ಯತ್ನಾಳ್ ಪ್ರಶ್ನೆ

ಬೆಂಗಳೂರು:  ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೆಮಿಕಲ್ ಪಟಾಕಿಗಳನ್ನು ಹೊರತುಪಡಿಸಿ ಬೇರೆಯಾವುದೇ ಪಟಾಕಿಗಳನ್ನು ಹೊಡೆಯುವುದನ್ನು ನಿಲ್ಲಿಸಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರನ್ನು ಒತ್ತಾಯಿಸಿದ್ದಾರೆ.‌ ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ, ಜನವರಿ 1ಕ್ಕೆ, ರಾಜಕೀಯ ಕಾರ್ಯಕ್ರಮಗಳಿಗೆ ಇಲ್ಲದ ಪಟಾಕಿ ಬ್ಯಾನ್ ಈಗ ಹಿಂದೂ ಹಬ್ಬಗಳಲ್ಲಿ ಯಾಕೆ? ಎಂದವರು ಪ್ರಶ್ನಿಸಿದ್ದಾರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೂ ಹಬ್ಬಗಳಲ್ಲಿ ಮಾತ್ರ ಗಮನಹರಿಸುವುದಾ? ಎಂದು ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿರುವ ಯತ್ನಾಳ್, ಪ್ರಜೆಗಳ ಪ್ರತಿನಿಧಿಯಾಗಿ ನಾನು ಹಿಂದುಗಳಿಗೆ ಹಬ್ಬ ಆಚರಣೆ ಮಾಡಲು ಯಾವುದೇ ತೊಂದರೆ ಕೊಡಬಾರದು, ಅನಾವಶ್ಯಕ ಕೇಸುಗಳನ್ನು ಹಾಕಬಾರದು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೆಮಿಕಲ್ ಪಟಾಕಿಗಳನ್ನು ಹೊರತುಪಡಿಸಿ ಬೇರೆಯಾವುದೇ ಪಟಾಕಿಗಳನ್ನು ಹೊಡೆಯುವುದನ್ನು ವಿಜಯಪುರ ಜಿಲ್ಲಾಡಳಿತ ನಿಲ್ಲಿಸಬಾರದು. ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ, ಜನವರಿ 1ಕ್ಕೆ, ರಾಜಕೀಯ ಕಾರ್ಯಕ್ರಮಗಳಿಗೆ ಇಲ್ಲದ…

ಫೇಕ್ ಡೀಪ್ ಫೊಟೋ ವಿವಾದ; ವಿಜಯ ದೆವರಕೊಂಡ ಆಕ್ಷೇಪ

ಸಾಮಾಜಿಕ ಜಾಲತಾಣಗಳಲ್ಲಿ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಬಗ್ಗೆ ಆಕ್ಷೇಪಾರ್ಹ ಫೊಟೋ ಹಾಕಿರುವ ಬಗ್ಗೆ ದಕ್ಷಿಣ ಭಾರತದ ಖ್ಯಾತ ನಟ ವೊಜಯ ದೇವರಕೊಂಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರಿವ ವಿಜಯ ದೇವರಕೊಂಡ, ಇದು ಭವಿಷ್ಯದ ಅತ್ಯಂತ ಪ್ರಮುಖ ಹಂತವಾಗಿದೆ. ಈ ರೀತಿ ಯಾರಿಗೂ ಆಗಬಾರದು. ಈ ಬಗ್ಗೆ ಸೈಬರ್‌ ಕ್ರೈಮ್‌ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಮೂಡಿಗೆರೆ ಬಳಿ ಕಾಡಾನೆ ಹಾವಳಿಗೆ ಬಲಿಯಾದ ದುರ್ದೈವಿಯ ಕುಟುಂಬಕ್ಕೆ 15 ಲಕ್ಷ ರೂ ಪರಿಹಾರ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿ ಕಾಡಾನೆ ಹಾವಳಿಗೆ ಬಲಿಯಾದ ದುರ್ದೈವಿಯ ಕುಟುಂಬಕ್ಕೆ ಕೂಡಲೇ 15 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಲು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.‌ ಮೂಡಿಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿ, ಮಾತನಾಡಿದರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೀನಾ ಎಂಬ ಕಾರ್ಮಿಕ ಮಹಿಳೆ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿ. ಮೃತ ದುರ್ದೈವಿಯ ಕುಟುಂಬಕ್ಕೆ ಕೂಡಲೇ 15 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಪಟ್ಟಣಕ್ಕೆ ಬಂದಿರುವ ಕಾಡಾನೆಗಳನ್ನು ವಾಪಾಸ್ ಕಾಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅರಣ್ಯ ಸಚಿವರು ಜಿಲ್ಲೆಗೆ ಭೇಟಿನೀಡಿ ಸುದೀರ್ಘ ಸಭೆ…

ಕರ್ನಾಟಕದಿಂದ GST ಸಂಗ್ರಹವಾಗಿದ್ದು 14,596 ಕೋಟಿ, ಕೇಂದ್ರ ನೀಡಿದ್ದು ಕೇವಲ 2,660 ಕೋಟಿ; ಸಿಎಂ ಆಕ್ರೋಶ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡಿದ GST ತೆರಿಗೆಯಲ್ಲಿ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ, 2023ರ ಏಪ್ರಿಲ್ ವೇಳೆಗೆ ಕರ್ನಾಟಕದಿಂದ 14,596 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ, ಈಗ ಕರ್ನಾಟಕಕ್ಕೆ ಮರಳಿ ಕೊಟ್ಟಿದ್ದು 2,660 ಕೋಟಿ ಮಾತ್ರ ಎಂದವರು ಕೇಂದ್ರ ಸರ್ಕಾರದ ಕ್ರಮದ ವಿರುದ್ದ ಸಿಟ್ಟು ಹೊರಹಾಕಿದ್ದಾರೆ.‌ 10,000 ಕೋಟಿ ತೆರಿಗೆ ಸಂಗ್ರಹವಾದ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ಮೊತ್ತವಾದ 13,000 ಕೋಟಿ ಹಂಚಿಕೆ ಮಾಡಲಾಗಿದೆ ಎಂದವರು ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. https://x.com/INCKarnataka/status/1722234314325393854? https://x.com/INCKarnataka/status/1722234314325393854?t=CxD3edxg1letpOIOp95Bwg&s=08

ವಿದ್ಯಾರ್ಥಿವೇತನವನ್ನು ಕಡಿತ: ಸರ್ಕಾರದ ಕ್ರಮಕ್ಕೆ ಯತ್ನಾಳ್ ಆಕ್ಷೇಪ

ಬೆಂಗಳೂರು: ವಿದ್ಯಾರ್ಥಿವೇತನವನ್ನು ಕಡಿತಗೊಳಿಸಿ ವೈದ್ಯರಾಗುವ ಕನಸು ಹೊತ್ತಿದ್ದ ಬಡ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರ ಆರ್ಥಿಕ ಹೊರೆಯನ್ನು ಹೊರೆಸಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸನಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಈ ಕ್ರಮಕ್ಕೆ ಆಕ್ಏಪ ವ್ಯಕ್ತಪಡಿಸರುವ ಅವರು, ಈ ವಿವೇಚನಾರಹಿತವಾದ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಆರ್ಥಿಕವಾಗಿ ಹಿಂದುಳಿದ meritorious ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕಾದದ್ದು ಸರ್ಕಾರದ ಕರ್ತವ್ಯ.ಈ ಕೂಡಲೇ ಈ ಪರಿಷ್ಕೃತ ಆದೇಶವನ್ನು ಹಿಂಪಡೆದು, ಬಡ ಕಾರ್ಮಿಕರ ಮಕ್ಕಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. https://x.com/BasanagoudaBJP/status/1722190236959023442?t=z9SQqSXrqdmThM724-ZgdA&s=08

ಲೈಂಗಿಕ ದೌರ್ಜನ್ಯ ಕೇಸ್: ಮುರುಗಾ ಶ್ರೀಗಳಿಗೆ ಬೇಲ್

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶ್ರೀಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹಲವು ತಿಂಗಳುಗಳಿಂದ ಬಂಧನದಲ್ಲಿರುವ ಶ್ರೀಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್, ಶ್ಯೂರಿಟಿ ಹಾಗೂ ಬಾಂಡ್‌ಗಳನ್ನು ನೀಡುವ ಜೊತೆಗೆ, ಶ್ರೀಗಳು ತಮ್ಮ ಪಾಸ್ ಪೋರ್ಟನ್ನು ಕೋರ್ಟ್ ವಶಕ್ಕೆ ನೀಡಬೇಕು, . ಹಾಗೂ ಚಿತ್ರದುರ್ಗಕ್ಕೆ ಹೋಗಬಾರದೆಂಬ ಷರತ್ತನ್ನು ವಿಧಿಸಿದೆ.