ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಪೀಡಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಿದ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ನಾನು ಅನೇಕ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಒಂದು ಜಿಲ್ಲೆಗೂ ಒಂದು ರೂಪಾಯಿ ಹೋಗಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಇಂದು ಟೀಕಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 300 ಕೋಟಿಗೂ ಹೆಚ್ಚು ಹಣ ನೀಡಿದ್ದಾಗಿ ಹೇಳಿದ್ದಾರೆ. ಒಬ್ಬ ರೈತರಿಗೂ ಒಂದು ರೂಪಾಯಿ ನೀಡಿಲ್ಲ. ನಾವು ಜಿಲ್ಲೆಗಳ ರೈತರನ್ನು ಮಾತನಾಡಿಸಿದ್ದೇವೆ. ಬೆಳೆ ಮಾಹಿತಿ, ಭೇಟಿ ನೀಡಿದ ಮುಖಂಡರ ಬಗ್ಗೆ ಕೇಳಿದ್ದೇವೆ. ಒಬ್ಬರೂ ಬಂದಿಲ್ಲ ಎಂದಿದ್ದಾರೆ. ಭೀಕರ ಬರಗಾಲದಿಂದ ಜನರು ಗುಳೆ ಹೋಗುತ್ತಿದ್ದಾರೆ ಎಂದರು. ಬರದ ಕುರಿತು ಸಿಎಂ ಸುಳ್ಳು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ‘ಬರುತ್ತೆ ಸರ್, ಬರುತ್ತೆ ಸರ್’ ಎನ್ನುತ್ತಾರೆ. ಶಾಸಕರ ನಿಧಿ 50 ಲಕ್ಷ ಬಿಡುಗಡೆ ಮಾಡಿದ್ದಾಗಿ ತಿಳಿಸಿ ತಿಂಗಳಾಗಿದೆ. ಆದರೆ,…
Year: 2023
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೋ? 1994ರ ಪರಿಸ್ಥಿತಿ ಮರುಕಳಿಸುತ್ತಾ?
ಹಾಸನ: ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುತ್ತಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರ ಮೇಲೆ ಟೀಕಾಪ್ರಹಾರ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಸರಕಾರದ ಭವಿಷ್ಯದ ಬಗ್ಗೆ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲರನ್ನೂ ಕರೆದುಕೊಂಡು ಹೋಗಿ ಏನಾಗುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. I.N.D.I.A ಮೈತ್ರಿಕೂಟದಿಂದಲೇ ಒಬ್ಬೊಬ್ಬರಾಗಿ ಕಿತ್ತುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಕುತಂತ್ರಿಗಳು ಎಂದು ಹೇಳಿ ಅಖಿಲೇಶ್ ಯಾದವ್ ಹೊರಗೆ ಕಾಲಿಟ್ಟಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಆಮೇಲೆ ನಮ್ಮನ್ನು ಕರೆದೊಯ್ಯವಿರಂತೆ ಎಂದು ಟೀಕಿಸಿದರು. ಇದೆಲ್ಲ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಈ ಹಿಂದೆ ಏನೆಲ್ಲ ಆಗಿದೆ ಎಂದು ನೋಡಿದ್ದೇವೆ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾದಾಗ ಬಿಜೆಪಿಯಿಂದ ಅಂದು ಯಾರನ್ನೆಲ್ಲ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದರು, 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಯಾರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡರು? ಕೊನೆಗೆ 78 ಸ್ಥಾನಗಳಿಗೆ ಬಂದು ನಿಂತರು. 1989ರಲ್ಲಿ 180 ಸ್ಥಾನ ಪಡೆದು…
ನವೆಂಬರ್ 9ರಂದು ಅರಮನೆ ಮೈದಾನದಲ್ಲಿ ಸೇವಾದಳದ ಶತಮಾನೋತ್ಸವ ಸಮಾವೇಶ
ನವೆಂಬರ್ 9ರಂದು ಅರಮನೆ ಮೈದಾನದಲ್ಲಿ ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಸೇವಾದಳದ ಉಸ್ತುವಾರಿ ಸಲೀಂ ಅಹ್ಮದ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 9ರಂದು ಅರಮನೆ ಮೈದಾನದಲ್ಲಿ ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಸೇವಾದಳದ ಅಧ್ಯಕ್ಷರಾದ ಲಾಲ್ ಜಿ ಅವರು ಧ್ವಜಾರೋಹಣ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಸಚಿವರುಗಳು ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದೇ ತಿಂಗಳ 28ರಂದು ಸೇವಾದಳ ನೂರು ವರ್ಷಗಳನ್ನು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಮೂಲಕ ಸೇವಾದಳದ ಇತಿಹಾಸದ ಬಗ್ಗೆ ದೇಶಕ್ಕೆ ಸಂದೇಶ ರವಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸೇವಾದಳದ…
ಕತಾರ್‌ನಲ್ಲಿ ‘ಕನ್ನಡ ರಾಜ್ಯೋತ್ಸವ’; ಹೀಗೊಂದು ಆಕರ್ಷಣೆ.. ‘ಪ್ರೇಮಲೋಕ-2’ ಸುಳಿವು
ಕತಾರ್: ಕರ್ನಾಟಕ ಸಂಘ ಕತಾರ್, ೬೮ ನೇ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಿತು. ದೋಹಾದ ಡಿ.ಪಿಎಸ್ ಶಾಲೆಯ 1500ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ ಸಭಾಂಗಣದಲ್ಲಿ ಆಡಳಿತ ಮಂಡಳಿಯಿಂದ ಕನ್ನಡದ ದೀಪ ಹಚ್ಚುವ ಹಾಗೂ ಕೆ.ಎಸ್.ನಿಸಾರ್ ಅಹ್ಮದ್ ರಚಿತ ಜೋಗದ ಸಿರಿ ಬೆಳುಕಿನಲ್ಲಿ ಗಾನ ಮತ್ತು ಸಂಘದ ಅಧ್ಯಕ್ಷರಾದ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಪ್ರಾರಂಭವಾದ ಕಾರ್ಯಕ್ರಮವು ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್ ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಕರ್ಷಣೆ ಪಡೆಯಿತು. ಸಭೆಯನ್ನು ಸ್ವಾಗತ ಮಾಡುತ್ತ ಮಹೇಶ್ ಗೌಡ ಅವರು ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದರು. ಮುಂದಿನ ವರ್ಷ ಕರ್ನಾಟಕ ಸಂಘಕ್ಕೆ ರಜತ ಮಹೋತ್ಸವದ ಸಂಭ್ರಮ, ಈ ಸಂಭ್ರಮವನ್ನು ವಿಜರುಮಬನೆಯಿಂದ ನಡೆಸಿಕೊಡುವುದಾಗಿ ಸಭೆಗೆ ತಿಳಿಸಿದರು. ಕತಾರ್ ನಲ್ಲಿನ…
ವಿಸಿ ನಾಲೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ದುರ್ಮರಣ
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಙೀಕರ ಅಪಘಾತ ಐವರನ್ನು ಬಲಿತೆಗೆದುಕೊಂಡಿದೆ. ಪಾಂಡವಪುರ ಸಮೀಪದ ಬನಘಟ್ಟದ ಬಳಿ ಮಂಗಳವಾರ ಸಂಜೆ ಕಾರು ವಿಸಿ ನಾಲೆಗೆ ಬಿದ್ದು ಐವರು ಸಾವನ್ನಪ್ಪಿದಾರೆ. ಮೈಸೂರು ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ವಿಸಿ ನಾಲೆಗೆ ಬಿದ್ದಿದೆ. ಕಾರಿನಲ್ಲಿದ್ದವರಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಹೊರತೆಗೆದಿದ್ದಾರೆ.
ಬಿಜೆಪಿಯಲ್ಲಿ ವ್ಯಕ್ತಿಗೆ ಸ್ಥಾನವಲ್ಲ, ಕಾರ್ಯಕರ್ತನಿಗೆ ಸ್ಥಾನ; ‘ಅಭ್ಯರ್ಥಿ ನಾನೇ ಎಂದು’ ಹೇಳಲಾಗಲ್ಲ; ನಳಿನ್ ಕುಮಾರ್ ಕಟೀಲ್
ಮಂಗಳೂರು: ಬಿಜೆಪಿ ಬಂಟ್ವಾಳ ಮಂಡಲ ಕಾರ್ಯ ನಿರ್ವಹಣಾ ತಂಡದ ಸಭೆಯು ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವಪ್ಪ ಪೂಜಾರಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಬಂಟ್ವಾಳ ಮಂಡಲದಲ್ಲಿ ಬಿಜೆಪಿಯ ಇತೀಚಿನ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಭಾಗವಹಿಸಿ ಮಾತಾಡುತ್ತಾ “ಬಿಜೆಪಿ ರಾಷ್ಟ್ರಭಕ್ತ ಕಾರ್ಯಕರ್ತರ ಪಾರ್ಟಿಯಾಗಿದ್ದು, ರಾಷ್ಟ್ರಹಿತಕ್ಕಾಗಿ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಮ್ಮ ಹಿರಿಯರು ಶ್ರಮಿಸಿ ಕಟ್ಟಿದ ಪಾರ್ಟಿ ಬಿಜೆಪಿ. ಹಾಗಾಗಿ ಜವಾಬ್ದಾರಿಯ ಕಾರ್ಯಕರ್ತರಾದ ನಮಗೆ ಕಮಲದ ಚಿಹ್ನೆ ಮಾತ್ರ ನಮ್ಮ ಕಣ್ಮುಂದೆ ಇರುತ್ತೆ ಹೊರತು ವ್ಯಕ್ತಿಯಲ್ಲ ಎಂದರು. ನಾನೇ ಅಭ್ಯರ್ಥಿ’ ಎಂಬ ವಾದ ಅಪ್ರಸ್ತುತ: ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರು ಉನ್ನತವಾದ ಸ್ಥಾನವನ್ನು ಪಡೆಯುವುದಕ್ಕೆ ಸಾಧ್ಯ. ಇಲ್ಲಿ ಪಕ್ಷಕ್ಕಾಗಿ ಶ್ರಮಿಸುವ ಕಟಿಬದ್ಧ ಕಾರ್ಯಕರ್ತ ಶಾಸಕನಾಗಬಹುದು ಅಥವಾ ಸಂಸದನಾಗಬಹುದು. ಆದರೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು…
ಲೋಕಸಭಾ ಚುನಾವಣೆಯಲ್ಲಿ ರೈತರ ಬೆಂಬಲ ಯಾವ ಪಕ್ಷಕ್ಕೆ? 20 ರಾಜ್ಯಗಳಲ್ಲಿ ಪಂಚಾಯತ್ ಸಮಾವೇಶದಲ್ಲಿ ತೀರ್ಮಾನ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ರೈತರು ಯಾವ ಪಕ್ಷವನ್ನು ಬೆಂಬಿಸಬೇಕು ಎಂಬ ಬಗ್ಗೆ ನಿರ್ಧರಿಸಲು ದೇಶಾದ್ಯಂತ 20 ರಾಜ್ಯಗಳಲ್ಲಿ ರೈತರ ಕಿಸಾನ್ ಮಹಾ ಪಂಚಾಯತ್ ಸಮಾವೇಶ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ರಾಷ್ಟ್ರೀಯ ಸಭೆ ತೀರ್ಮಾನಿಸಿದೆ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಂಘಟನೆಯ ಎರಡು ದಿನಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೈತರು ಯಾವ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳಲು 20 ರಾಜ್ಯಗಳಲ್ಲಿ ಕಿಸಾನ್ ಮಹಾಪಂಚಾಯತ್ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು ಅಂತಿಮವಾಗಿ ನವ ದೆಹಲಿಯಲ್ಲಿ 2024ರ ಫೆಬ್ರವರಿ 26ರಂದು 10 ಲಕ್ಷ ರೈತರ ದೆಹಲಿ ಚಲೋ ರ್ಯಲಿ ನಡೆಸಿ ಅಂತಿಮ ಘೋಷಣೆ ಪ್ರಕಟಿಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ, ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ತಿಳಿಸಿದ್ದಾರೆ. ಸಭೆಯ ತೀರ್ಮಾನಗಳ ಕುರಿತು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರೂ ಆದ ಕುರುಬೂರು ಶಾಂತಕುಮಾರ್ ಸಹಿತ ವಿವಿಧ ರಾಜ್ಯಗಳ…
ಪ್ರಿಯಾಂಕಾ ‘ಬೊಕ್ಕೆ’ಯಲ್ಲಿ ‘ಹೂ’ಗಳೇ ಮಾಯ.. ಕೈ ನಾಯಕರು ಗಲಿಬಿಲಿ.. ಇದು ‘ಪುಷ್ಪಗುಚ್ಛ ಹಗರಣ’ ಎಂದು BJP ಗೇಲಿ
ಇಂದೋರ್: ಪಂಚ ರಾಜ್ಯಗಳ ಚುನಾವಣಾ ಸಮರ ಒಂದಿಲ್ಲೊಂದು ಕುತೂಹಲದ ಕೇಂದ್ರಬಿಂದುವಾಗುತ್ತಿದೆ. ಈ ನಡುವೆ ಮಧ್ಯಪ್ರದೇಶದಲ್ಲಿ ಕೈ ಪಾಳಯದ ಸನ್ನಿವೇಶವೊಂದು ಗಮನಸೆಳೆದಿದೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ ಗೆದ್ದೇ ಗೆಲ್ಲಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ನಾಯಕರನ್ನು ಕರೆಸಿಕೊಂಡು ಭರ್ಜರಿ ಪ್ರಚಾರ ನಡೆಸುತ್ತಿದೆ. ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಸಹಿತ ಘಟಾನುಘಟಿ ನಾಯಕರ ಆಗಮನವಾಗುತ್ತಿದ್ದು, ಅವರ ಆಗಮನ ಸಂದರ್ಭದಲ್ಲಿ ಸ್ವಾಗತಿಸಲು ನಾಯಕರು ಮುಗಿಬೀಳುತ್ತಿದ್ದಾರೆ. ಇದೇ ಸನ್ನಿವೇಶ ಎಡವಟ್ಟಿಗೂ ಸಾಕ್ಷಿಯಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾಗಿಯಾದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಪ್ರಿಯಾಂಕಾ ಅವರನ್ನು ಅಭಿನಂದಿಸುವ ವೇಳೆ ನೀಡಿದ ಪುಷ್ಪಗುಚ್ಛದಲ್ಲಿ ಹೂವೇ ಇರಲಿಲ್ಲ. ಬೊಕ್ಕೆಯನ್ನು ಖರೀದಿಸಿದಾಗ ಕಲರ್‌ಫುಲ್ ಹೂಗಳಿದ್ದವು. ಆದರೆ, ಅದೇ ಬೊಕ್ಕೆ ವೇದಿಕೆಯನ್ನು ಏರಿದಾಗ ಅದರಲ್ಲಿ ಹೂವುಗಳು ಮಾಯವಾಗಿದ್ದವು. ಗೌರವ ಸ್ವೀಕರಿಸಿದ ಪ್ರಿಯಾಂಕಾ, ತನಗೆ ನೀಡಿದ ಬೊಕ್ಕೆಯನ್ನು ಕಂಡು ಗಲಿಬಿಲಿಗೊಂಡರು. ಇದೇನಿದು ಇದರಲ್ಲಿ ಹೂವೇ ಇಲ್ಲ ಎಂದು ಪ್ರಿಯಾಂಕಾ ಪ್ರಶ್ನಿಸಿದರು. ಈ…
ಸರ್ಕಾರದ ಖಜಾನೆಯಿಂದ ಮೊಗೆಮೊಗೆದು ಸಿಎಂ ಮಜಾ? ಇದು ‘ಮಜಾವಾದ’ ಎಂದ ಪ್ರತಿಪಕ್ಷ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತ ಪ್ರತಿಪಕ್ಷ ನಾಯಕರ ನಡುವಿನ ಜಟಾಪಟಿ ಮುಂದುವರಿದಿದ್ದು, ಇದೀಗ ಬರಗಾಲ ಸಂದರ್ಭದಲ್ಲಿ ಸಿಎಂ ಮಜಾ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಸಮಾಜವಾದ ಮತ್ತು ಬಡವರ ಹೆಸರು ಹೇಳಿಯೇ ರಾಜಕಾರಣ ಮಾಡುತ್ತಾ ಬಂದಿರುವ ಸಿದ್ದರಾಮಯ್ಯ ಅವರು ವಾಸ್ತವದಲ್ಲಿ ಮಜಾವಾದಿ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ ಎಂದು ಗೇಲಿ ಮಾಡಿದೆ. ‘ರಾಜ್ಯದಲ್ಲಿ ಬರ ಆವರಿಸಿದೆ, ಹೈನುಗಾರರು ಕಣ್ಣೀರು ಹಾಕಿ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ, ರೈತರು ಗುಳೆ ಹೊರಟಿದ್ದಾರೆ. ಜನೋಪಯೋಗಿ ಕಾರ್ಯಗಳಿಗೆ ಅನುದಾನ ನೀಡಲು ದುಡ್ಡಿಲ್ಲ ಎನ್ನುವ ಸಚಿವರೆಲ್ಲ ಸರ್ಕಾರಿ ಖರ್ಚಿನಲ್ಲಿ ಹೊಸ ಐಷಾರಾಮಿ ಕಾರುಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ’ ಎಂದಿರುವ ಬಿಜೆಪಿ, ಸಿದ್ದರಾಮಯ್ಯರವರು ಸರ್ಕಾರದ ಖಜಾನೆಯಿಂದ ಮೊಗೆಮೊಗೆದು ಮಜಾ ಮಾಡುತ್ತಿದ್ದಾರೆ ಎಂದು ಟೀಕಿಸಿದೆ. ಸಮಾಜವಾದ ಮತ್ತು ಬಡವರ ಹೆಸರು ಹೇಳಿಯೇ ರಾಜಕಾರಣ ಮಾಡುತ್ತಾ ಬಂದಿರುವ @siddaramaiah ಅವರು ವಾಸ್ತವದಲ್ಲಿ…
‘ನಾಲ್ಕೂ ಸದನಗಳ ಸದಸ್ಯರಾಗಿದ್ದ ಡಿ.ಬಿ.ಚಂದ್ರೇಗೌಡ’; ನಾಯಕನ ಅಗಲಿಕೆಗೆ ರವಿ ಶೋಕ
ಬೆಂಗಳೂರು: ನನ್ನ ಆತ್ಮೀಯರೂ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತು ಹೀಗೆ ನಾಲ್ಕೂ ಸದನಗಳ ಸದಸ್ಯರಾಗಿದ್ದ ಚಿಕ್ಕಮಗಳೂರಿನ ನಾಯಕರು, ರಾಜ್ಯದ ಹಿರಿಯ ರಾಜಕಾರಣಿ, ವಿಧಾನಸಭೆಯ ಅಧ್ಯಕ್ಷರಾಗಿ, ರಾಜ್ಯದ ಸಚಿವರಾಗಿ ಅಪ್ರತಿಮ ಸೇವೆ ಸಲ್ಲಿಸಿದ ರಾಜಕೀಯ ಮುತ್ಸದ್ದಿ, ಉತ್ತಮ ಸಂಸದೀಯ ಪಟು ಡಿ. ಬಿ.ಚಂದ್ರೇಗೌಡರು ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಗಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಸಂಸ್ಕøತ ನಡವಳಿಕೆಯ ರಾಜಕಾರಣಿಯಾಗಿದ್ದ ಡಿ.ಬಿ.ಚಂದ್ರೇಗೌಡರ ಅಗಲಿಕೆಯ ರಾಜಕೀಯ ಕ್ಷೇತ್ರಕ್ಕೆ, ಚಿಕ್ಕಮಗಳೂರಿನ ಜನತೆಗೆ ತುಂಬಲಾರದ ನಷ್ಟ. ಇಹಕಾಯವನ್ನಗಲಿದ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಅಗಲಿಕೆಯ ದುಃಖ ಮತ್ತು ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಬಂಧು ಮಿತ್ರರಿಗೆ ಮತ್ತು ಅಭಿಮಾನಿ ವರ್ಗಕ್ಕೆ ನೀಡಲಿ ಎಂದು ರವಿ ಪ್ರಾರ್ಥಿಸಿದ್ದಾರೆ.
