ರೈತ ಜಾಗೃತಿಗೆ ಮುನ್ನುಡಿ; ದೆಹಲಿಯಲ್ಲಿ ಅನ್ನದಾತರ ಚಿಂತನ-ಮಂಥನ

ನವದೆಹಲಿ: ರೈತರ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನಸೆಳೆಯಲು ಹಾಗೂ ರೈತಪರ ಕ್ರಮಗಳ ಜಾರಿಗೆ ಒತ್ತಾಯಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಮಾವೇಶ ಗಮನಸೆಳೆದಿದೆ. ನವಂಬರ್ 7 ರವರೆಗೆ ನಡೆಯುವ ಈ ಸಮಾವೇಶದಲ್ಲಿ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಕರ್ನಾಟಕದಿಂದಲೂ ರೈತ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದಾರೆ. ದೇಶಾದ್ಯಂತ ಇರುವ ರಾಜಕೀಯೇತರ ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದು, ಕರ್ನಾಟಕದಿಂದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್, ಧರ್ಮರಾಜ್, ದೇವನೂರು ನಾಗೇಂದ್ರಸ್ವಾಮಿ. ಚುಂಚರಾಯನಹುಂಡಿ ಗಿರಿ, ಮಹದೇವಸ್ವಾಮಿ ಭಾಗವಹಿಸಿದ್ದಾರೆ. ಪಂಜಾಬ್ ಜಗಜಿತ್ ಸಿಂಗ್ ದಲೈವಾಲಾ, ಮಧ್ಯ ಪ್ರದೇಶದ ಶಿವಕುಮಾರ್ ಕಕ್ಕ, ಹರಿಯಾಣದ ಅಭಿಮನ್ಯುಕೊಹರ್,  ಕೇರಳ ಕೆ ವಿ ಬಿಜು, ಉತ್ತರ ಪ್ರದೇಶ್ ಒರಿಸ್ಸಾ ಹಿಮಾಚಲ ಪ್ರದೇಶ ಮಹಾರಾಷ್ಟ್ರ ಬಿಹಾರ್ ಮುಂತಾದ ರಾಜ್ಯಗಳ ರೈತ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ದೇಶದ ರೈತ ಮುಖಂಡರ…

ಪೇಜಾವರ ಶ್ರೀಗಳ ತಂದೆ ಕೃಷ್ಣ ಭಟ್ ವಿಧಿವಶ

ಮಂಗಳೂರು: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥರ ತಂದೆ ವಿಧಿವಶರಾಗಿದ್ದಾರೆ. ಪೇಜಾವರ ಶ್ರೀಗಳ ತಂದೆ ಅಂಗಡಿಮಾರ್ ಕೃಷ್ಣ ಭಟ್ ಅವರು ವಯೋ ಸಹಜ ಸ್ಥಿತಿಯಲ್ಲಿದ್ದರು 102 ವರ್ಷ ಹರೆಯದ ಅವರು ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಬಾನುವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣ ಭಟ್ಟರು ಪುತ್ರ ವಿಶ್ವೇಶ್ವರ ಭಟ್ ಜೊತೆ ವಾಸವಿದ್ದರು. ಕೃಷಿಯ ಜೊತೆ, ವೈದಿಕ ವಿದ್ವಾಂಸರೂ ಆಗಿದ್ದ ಅವರು, ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ, ಭಜನೆ, ಪ್ರಾರ್ಥನಾ ಶ್ಲೋಕಗಳ ರಚನೆ ಮೂಲಕ ಆಸ್ತಿಕ ಗಮನಸೆಳೆದಿದ್ದರು. ಹಲವು ಪ್ರಶಸ್ತಿಗಳನ್ನು ಅವರು ಪಡೆದಿದ್ದರು. ಇವರ 12 ಮಕ್ಕಳ ಪೈಕಿ ಪೇಜಾವರ ಶ್ರೀಗಳು 8ನೇ ಮಗ. ಕೃಷ್ಣ ಭಟ್ಟರು ವೈದಿಕ ಪರಂಪರೆಯ ಸಾಧಕರು; ಪ್ರದೀಪ್ ಕಲ್ಕೂರ ತುಳು-ಕನ್ನಡ-ಸಂಸ್ಕೃತ ಬಾಷಾ ಪಾಂಡಿತ್ಯದಿಂದಾಗಿ ಸಾರಸ್ವತ ಹಾಗೂ ವೈದಿಕ ಕ್ಷೇತ್ರದಲ್ಲಿ ಅಂಗಡಿಮಾರ್ ಕೃಷ್ಣ ಭಟ್ಟರು ಗುರು ಶ್ರೇಷ್ಠರೆನಿಸಿದ್ದರು.…

ಸಿದ್ದರಾಮಯ್ಯ ಆಮದು ಮುಖ್ಯಮಂತ್ರಿ; ಲೆಹರ್ ಸಿಂಗ್ ಗೇಲಿ

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಕಾಂಗ್ರೆಸ್ ಆಮದು ಮಾಡಿಕೊಂಡಿರುವ ಮುಖ್ಯಮಂತ್ರಿ ಎಂದು ಬಿಜೆಪಿ ಸಂಸದ ಲೆಹರ್ ಸಿಂಗ್ ಗೇಲಿ ಮಾಡಿದ್ದಾರೆ. ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಬಿಜೆಪಿ ಸಂಸದ ಲಹರ್ ಸಿಂಗ್ ತಿರುಗೇಟು ಕೊಟ್ಟಿರುವ ವೈಖರಿ ಇದು. “ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇರಲಿಲ್ಲವೇ? ಜೆಡಿಎಸ್ ನಿಂದ ಸಿದ್ದರಾಮಯ್ಯನವರನ್ನು ಆಮದು ಮಾಡಿಕೊಂಡು ಮುಖ್ಯಮಂತ್ರಿ ಮಾಡಲು ಕಾರಣವೇನು?” ಎಂದು ಲೆಹರ್ ಸಿಂಗ್ ಅವರು ಟ್ವೀಟ್ ಮಾಡಿ ಪ್ರಶ್ನೆ ಪ್ರಶ್ನೆ ಮಾಡಿದ್ದಾರೆ. Karnataka Industries Minister M.B.Patil has asked if there are no competent people in BJP to be Opposition leader and why we are after JDS leader H.D.Kumaraswamy to take the lead. First, they have to answer the question if there were no competent…

ಎರ್ನಾಕುಲಂ ಸ್ಫೋಟ ಪ್ರಕರಣ; ಸತ್ತವರ ಸಂಖ್ಯೆ 4ಕ್ಕೆ ಏರಿಕೆ

ಎರ್ನಾಕುಲಂ: ಕ್ರೈಸ್ತ ಧಾರ್ಮಿಕ ಕಾರ್ಯಕ್ರಮ ವೇಳೆ ಸಂಭವಿಸಿಧದ ಸರಣಿ ಬಾಂಬ್ ಸ್ಫೋಟದ ಗಾಯಾಳುಗಳ ಪೈಕಿ ಮತ್ತೊಬ್ಬರು ಮೃತಪಟ್ಟಿದ್ದು, ಘಟನೆಯಲ್ಲಿ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 29 ರಂದು ಧಾರ್ಮಿಕ ಸಭೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅನೇಕರು ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈ ಪೈಕಿ ಮತ್ತೊಬ್ಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಶಿವಮೊಗ್ಗ ಅನುಮಾನಾಸ್ಪದ ಬಾಕ್ಸ್ ಪ್ರಕರಣ: ಇಬ್ಬರ ವಶ

ಶಿವಮೊಗ್ಗ: ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ತಕರಣ ಸಂಬಂಧ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದಾಖಲೆ ಆಧರಿಸಿ ಪತ್ತೆ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು, ಮಾರುತಿ ಓಮಿನಿಯಲ್ಲಿ ಬಂದು ಬಾಕ್ಸ್‌ಗಳನ್ನು ಇಟ್ಟು ತೆರಳಿದ್ದ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.‌ ನವೆಂಬರ್ 3 ರಂದು ಈ ಬಾಕ್ಸ್ ಇಡಲಾಗಿತ್ತು. ಬಾಕ್ಸ್ ನಲ್ಲಿ ಸ್ಫೋಟಕ ವಸ್ತುಗಳು ದೊರೆತಿಲ್ಲ. ಆದರೆ ಈ ಅನುಮಾನಾಸ್ಪದ ಬಾಕ್ಸ್‌ನಲ್ಲಿ ಬಾಂಗ್ಲಾದೇಶದ ಹೆಸರಿದೆ. ಹಾಗಾಗಿ ಶಂಕಿತರು ಯಾಕಾಗಿ ಈ ಬಾಕ್ಸ್ ಇಟ್ಟರು, ಅವರ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ: ಅನುಮಾಸ್ಪದ ಬಾಕ್ಸ್‌ನಲ್ಲಿದ್ದುದು ಸ್ಫೋಟಕವಲ್ಲ ಎಂದ ಪೊಲೀಸರು

ಶಿವಮೊಗ್ಗ: ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವ ಎರಡು ಅನುಮಾನಾಸ್ಪದ ಬಾಕ್ಸ್‌ಗಳ ಕುರಿತಂತೆ ಎದ್ದಿರುವ ಆತಂಕ ಕೊನೆಗೂ ನಿವಾರಣೆಯಾಗಿದೆ. ಪತ್ತೆಯಾಗಿರುವ ಬಾಕ್ಸ್‌ಗಳಲ್ಲಿ ಬಾಂಬ್ ಇರಬಹುದೆಂಬ ಭೀತಿ ಕಾಡಿತ್ತು. ಈ ಕುರಿತಂತೆ ಪರಿಶೀಲಿಸಿರುವ ಪೊಲೀಸರು, ಪತ್ತೆಯಾಗಿರುವ ಬಾಕ್ಸ್‌ನಲ್ಲಿ ಸ್ಫೋಟಕದ ಪುಡಿ ಇದ್ದುದಲ್ಲ, ಬದಲಾಗಿ ಅದರಲ್ಲಿರುವುದು ಉಪ್ಪು ಎಂದು ದೃಢಪಡಿಸಿದ್ದಾರೆ. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ಭಾನುವಾರ ಬಾಕ್ಸ್‌ಗಳು ಪತ್ತೆಯಾಗಿದ್ದು ವಾತಸುದಾರರಿಲ್ಲದ ಈ ಬಾಕ್ಸ್ ಬಗ್ಗೆ ಅಂತೆ-ಕಂತೆಗಳ ಸುದ್ದಿ ಹರಡಿತ್ತು. ಇದೀಗ ಪೊಲೀಸ್ ಪರಿಶೀಲನೆ ನಂತರ ಗೊಂದಲಗಳು ಬಗೆಹರಿದಂತಾಗಿದೆ.‌

ಬರ ಪರಿಹಾರ; ಕೇಂದ್ರಕ್ಕೆ ನಿಯೋಗ ಕರೆದೊಯ್ಯಲು ಸಿದ್ದ: ಸಿಎಂ

ಬೆಂಗಳೂರು: ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ‘ರೈತ ಸಾಂತ್ವನ ಯಾತ್ರೆ’ ಕೈಗೊಳ್ಳುವುದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ, ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ. ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದಿದ್ದಾರೆ.‌ ಮುಖ್ಯಮಂತ್ರಿಯವರ ಹೇಳಿಕೆಯನ್ನು ಸಿಎಂ ಕಚೇರಿ ಸರಣಿ ಟ್ವೀಟ್ ಮೂಲಕ ಅನಾವರಣ ಮಾಡಿದೆ.‌ ‘ರೈತ ಸಾಂತ್ವನ ಯಾತ್ರೆಯ ನಂತರ ತಮ್ಮ ಅನುಭವವನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ಮಾತ್ರವಲ್ಲ ಕೇಂದ್ರ ಬಿಜೆಪಿ ಸರ್ಕಾರದ ಜೊತೆಯಲ್ಲಿಯೂ ಹಂಚಿಕೊಂಡರೆ ರಾಜ್ಯಕ್ಕೆ ಅನುಕೂಲವಾಗಬಹುದು. ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬರಪರಿಹಾರದ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಕೆಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿವರ ಖಂಡಿತ ತಿಳಿದಿದೆ ಎಂದು ಭಾವಿಸುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೊಸ ಬೆಳವಣಿಗೆಯಲ್ಲಿ  ಕುಮಾರಸ್ವಾಮಿ ಅವರು ಕೇಂದ್ರದಲ್ಲಿ…

ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಗುಂಡಿನ ಚಕಮಕಿ; ಅರಣ್ಯ ಸಿಬ್ಬಂದಿ ಗುಂಡಿಗೆ ಬೇಟೆಗಾರ ಬಲಿ

ಚಾಮರಾಜನಗರ: ರಕ್ಷಿತಾರಣ್ಯದಲ್ಲಿ ವನ್ಯಜೀವಿ ಬೇಟೆಯಾಡುತ್ತಿದ್ದವರ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ನಡೆದಿದ್ದು ಕಾರ್ಯಾಚರಣೆಯಲ್ಲಿ ವ್ಯಕ್ತಿಯೊಬ್ನ ಬಲಿಯಾಗಿದ್ದಾನೆ. ಭಾನುವಾರ (ನವೆಂಬರ್ 5) ಬೆಳ್ಳಂಬೆಳಗ್ಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಬ್ಬ ಕಳ್ಳ ಬೇಟೆಗಾರನನ್ನು ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ. ಸುಮಾರು ಎಂಟು ಮಂದಿಯಿದ್ದ ಬೇಟೆಗಾರರ ​​ಗುಂಪು ಸಾಂಬಾರ್ ಜಿಂಕೆಯನ್ನು ಕೊಂದು ಹಾಕಿತ್ತು. ಈ ವೇಳೆ ಮಾರ್ಧನಿಸಿದ ಗುಂಡಿನ ಸದ್ದು ಕೇಳಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ಅರಣ್ಯ ಸಿಬ್ಬಂದಿಯು ಬೇಟೆಗಾರರನ್ನು ಪತ್ತೆಮಾಡಿದ ಸಂದರ್ಭದಲ್ಲಿ ಕಿಡಿಗೇಡಿಗಳು ಪರಾರಿಯಾಗಲೆತ್ನಿಸಿದ್ದಾರೆ. ಅರಣ್ಯ ಸಿಬ್ಬಂದಿ ಹಿಂಬಾಲಿಸಿದಾಗ ಬೇಟೆಗಾರರು ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರೆ. ಆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಬೇಟೆಗಾರ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಹಾಗೂ ಜಿಲ್ಲಾ ಅಧಿಕಾರಿಗಳು ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ನಿಗಮಕ್ಕೂ, ನೌಕರರಿಗೂ ಚೈತನ್ಯ ತುಂಬಿದ ‘ವಿದ್ಯಾಚೇತನ’; ಮತ್ತೊಂದು ಯಶೋಗಾಥೆ ಬರೆದ KSRTC

ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಚಿವರಾದ ನಂತರ ರಾಜ್ಯದ ಸಾರಿಗೆ ನಿಗಮದ ಪಾಲಿಗೆ ಅದೇನೋ ಅದೃಷ್ಟ. ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಜಾರಿಯಿಂದಾಗಿ ಸಾರಿಗೆ ನಿಗಮ ಭಾರೀ ಲಾಭ ಪಡೆದುಕೊಂಡಿದ್ದರೆ,  ನಿಗಮಗಳ ನೌಕರರಿಗೂ ಬಂಪರ್ ಕೊಡುಗೆಗಳು ಸಿಗುತ್ತಿವೆ. ಇದೀಗ ‘ವಿದ್ಯಾಚೇತನ’ ಯೋಜನೆಯಲ್ಲಿ ಕೂಡ KSRTC ಯಶೋಗಾಥೆ ಬರೆದಿದೆ. ನೌಕರರಷ್ಟೇ ಅಲ್ಲ, ಇಡೀ KSRTC ಪರಿವಾರದವರ ಮೊಗದಲ್ಲಿ ಮಂದಹಾಸ ಮೂಡಿದೆ.. ಬೆಂಗಳೂರು: ಸಾರಿಗೆ ನಿಗಮ KSRTCಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ರೂಪಿಸಲಾಗಿರುವ ‘ವಿದ್ಯಾಚೇತನ ಯೋಜನೆ’ಯು ಯಶೋಗಾಥೆ ಬರೆದಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ನೀಡುವ ಮೊತ್ತ ನಾಲೈದು ಪಟ್ಟು ಏರಿಕೆಯಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಸಿಕ್ಕರುವುದರಿಂದಾಗಿ KSRTC ನೌಕರರ ಕುಟುಂಬದಲ್ಲಿ ಉತ್ಸಾಹ ಕಂಡುಬಂದಿದೆ. ಪ್ರತಿ ವರ್ಷ ನೂರರ ಗಡಿ ಮುಟ್ಟದ ‘ವಿದ್ಯಾಚೇತನ’ ಅರ್ಜಿಗಳ ಸಂಖ್ಯೆ, ಈ ವರ್ಷ 4 ಸಾವಿರದ ಹತ್ತಿರ ತಲುಪಿರುವುದು…

ಪಂಚ ರಾಜ್ಯ ಮತ ಸಮರ; ರಾಜಸ್ಥಾನದ ಕೈ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ

ದೆಹಲಿ: ಪಂಚ ರಾಜ್ಯಗಳ ಚುನಾವಣೆ ಜಿದ್ದಾ ಜಿದ್ದಿಯ ಅಖಾಡವಾಗಿ ಪರಿಣಂಇಸಿಧದು ಕಾಂಗ್ರೆಸ್ ತನ್ನ ಹುರಿಯಾಳುಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 23 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತಗಳ ಎಣಿಕೆ ನಡೆಯಲಿದೆ.