ಬೆಂಗಳೂರು: ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ತ್ವರಿತ ಪರಿಹಾರ ಕ್ರಮಕ್ಕೆ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವರು ತಾಲೂಕುಗಳಿಗೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಪರಿಶೀಲಿಸಬೇಕೆಂದು ತಿಳಿಇಸಿದ್ದಾರೆ. ಈ ಸಂಬಂಧ ಅವರು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ‘ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಎರಡು ವಾರಗಳ ಕಾಲ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಂಚರಿಸಿ, ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆಹಾನಿ ಸೇರಿದಂತೆ ಬರ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ, ವರದಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಎರಡು ವಾರಗಳ ಕಾಲ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಂಚರಿಸಿ, ಕುಡಿಯುವ ನೀರು, ಮೇವು, ಉದ್ಯೋಗ, ಬೆಳೆಹಾನಿ ಸೇರಿದಂತೆ ಬರ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ…
Year: 2023
ಗಾಜಾ ಕದನ: ಇಸ್ರೇಲ್ ವೈಮಾನಿಕ ದಾಳಿ; 50ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರ ಮಾರಣ ಹೋಮ
ಗಾಜಾ ಪಟ್ಟಿ: ಮಧ್ಯಪ್ರಾಚ್ಯಾದಲ್ಲಿ ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಮಾಸ್ ಸಂಘಟನೆಯನ್ನು ಗುರಿಯಾಗಿಸಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಭಾರೀ ಸಾವು-ನೋವಿಗೆ ಸಾಕ್ಷಿಯಾಗುತ್ತಿದೆ. ಹಮಾಸ್ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ಪಡೆ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಗಾಜಾದ ಮಾಘಜಿ ಶಿಬಿರದ ಮೇಲೆ ಇಸ್ರೇಲಿ ಪಡೆ ಶನಿವಾರ ರಾತ್ರಿ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲು ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 51 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೀನಿ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಿಂದಾಗಿ ಗಾಜಾ ಪಟ್ಟಿಯ ಉತ್ತರ ಭಾಗದ ಹಲವಾರು ವಸತಿ ಗೃಹಗಳು ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಡಪಾಯಿ ಮಹಿಳೆ ಬದುಕಲ್ಲಿ ‘ಸಂತೋಷ’ ಮೂಡಿಸಿದ ಸಚಿವ.. ಲಾಡ್ ನಡೆಗೆ ‘Hats Off’ ಎಂದ ಜನ
ಧಾರವಾಡ: ಸಚಿವ ಸಂತೋಷ್ ಲಾಡ್ ಒಂದಿಲ್ಲೊಂದು ವಿಚಾರಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಗಣಿ ಧಣಿಯಾಗಿ ಸಾವಿರಾರು ಮಂದಿಯ ಪಾಲಿಗೆ ಉದ್ಯೋಗದಾತನಾಗಿ ಗಮನಸೆಳೆದಿರುವ ಸಂತೋಷ್ ಲಾಡ್, ಜನಾನುರಾಗಿ ಶಾಸಕರಾಗಿ ಉತ್ತರ ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಇದೀಗ ಅವರು, ತಮ್ಮ ವಿಶೇಷ ನಡೆಯಿಂದಾಗಿ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಲಾಡ್ ಅವರು ‘ನೊಂದವರ ಪಾಲಿಗೆ ಆಶಾಕಿರಣ’ ಎಂಬುದು ಅವರ ಕ್ಷೇತ್ರದ ಜನರ ಅಂಬೋಣ. ಇದೀಗ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬದುಕಿಗೆ ಮಾರ್ಗದರ್ಶಿಯಾದ ಪರಿ ಶಹಬ್ಬಾಸ್‌ಗಿರಿ ಗಿಟ್ಟಿಸುವಂತೆ ಮಾಡಿದೆ. ಧಾರವಾಡ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಸಚಿವ ಲಾಡ್ ಅವರಿಗೆ ಶನಿವಾರ ಅಚ್ಚರಿಯ ಸನ್ನಿವೇಶವೊಂದು ಎದುರಾಗಿತ್ತು. ಪುಟ್ಟ ಮಗುವನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದ ಸ್ಥಿತಿಯನ್ನು ಕಂಡು ಅವರು ಮಮ್ಮಲ ಮರುಗಿದರು. ಮಹಿಳೆಯ ಬಳಿ ತೆರಳಿ ಕಷ್ಯಸುಖ ಆಲಿಸಿದರು. ಆಕೆಯ ಹಸಿವು ನೀಗಿಸಲು ಒಂದಷ್ಟು ಮೊತ್ತವನ್ನು ನೀಡಿದ ಲಾಡ್, ಆಕೆಗೆ ಸ್ವಾವಲಂಬಿ ಪಾಠ ಹೇಳಿದರು.…
ಡಿಕೆಶಿ ಕೇಸ್‌ಗೆ ‘ಬಿ ರಿಪೋರ್ಟ್’ ಸನ್ನಿಹಿತ.?
ಬೆಂಗಳೂರು: ‘ನನ್ನ ಮೇಲಿನ ಕೇಸ್ ಗೆ ಬಿ ರಿಪೋರ್ಟ್ ಬರೆಯುವ ಕಾಲ ಬರುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸುವ ಸಂಬಂಧ ಮಂತ್ರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಡಿಕೆಶಿ, ತಮ್ಮ ವಿರುದ್ಧ ಪ್ರಕರಣಗಳ ಬಗ್ಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. ಡಿ.ಕೆ. ಶಿವಕುಮಾರ್ ಅವರಿಗೆ ಐಟಿ, ಇಡಿ ನೋಟೀಸ್ ಕಿರುಕುಳ ಆರಂಭವಾಗಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗ ಆ ವಿಚಾರ ಬೇಡ. ಯಾರು ನೋಟಿಸ್ ನಿಡುತ್ತಾರೋ, ಏನು ಮಾಡುತ್ತಾರೋ ಮಾಡಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸಿರಬಹುದು. ನನ್ನ ಎಲ್ಲಾ ದಾಖಲೆಗಳು ಸಾರ್ವಜನಿಕವಾಗಿದೆ. ನಾನು ಹಾಗೂ ನನ್ನ ಹೆಂಡತಿ ಇಬ್ಬರೂ ತೆರಿಗೆ ಪಾವತಿದಾರರು. ಒಂದೇ ಕುಟುಂಬವಾದರೂ ನನ್ನು ಬೇರೆ, ಆಕೆಯದ್ದು ಬೇರೆ. ನಾನು ಹೆಚ್ಚಿಗೆ ಆಸ್ತಿ…
ಲೋಕಸಭಾ ಚುನಾವಣೆ ಹಿನ್ನೆಲೆ, ‘ಕೈ’ ನಾಯಕರ ಅನಗತ್ಯ ಹೇಳಿಕೆಗೆ ಬ್ರೇಕ್, ‘ಗ್ಯಾರಂಟಿ’ಗಷ್ಟೇ ಜೈ..
ಬೆಂಗಳೂರು: ‘ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷ ಹಾಗೂ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ನಾಯಕರಿಗೆ ಸೂಚನೆ ನೀಡಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೂ ಆದ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದಾರೆ. ಈ ಸಂಬಂಧ ಶನಿವಾರ ಮಂತ್ರಿಗಳ ಜತೆ ಉಪಹಾರಕೂಟದ ಸಭೆಯಲ್ಲಿ ಅವರು ನಡೆಸಿದ ಚರ್ಚೆ ವಿದ್ಯಮಾನಗಳ ಕೇಂದ್ರಬಿಂದುವಾಯಿತು. ಸಭೆ ಬಳಿಕ ಸಿಎಂ ನಿವಾಸದ ಬಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರವಾಗಿ ಅನಗತ್ಯ ಹೇಳಿಕೆ ನೀಡದಂತೆ ಮುಖ್ಯಮಂತ್ರಿಗಳು ನೇರವಾಗಿ ತಿಳಿಸಿದ್ದಾರೆ. ನಾನು ಸೇರಿದಂತೆ ಯಾರೊಬ್ಬರೂ ಈ ವಿಚಾರವಾಗಿ ಮಾತನಾಡುವುದು ಬೇಡ. ಮಾಧ್ಯಮಗಳು ಪ್ರಶ್ನೆ ಕೇಳುತ್ತಾರೆ, ಆದರೂ ಪ್ರತಿಕ್ರಿಯೆ ನೀಡಬೇಡಿ. ಮಾಧ್ಯಮಗಳ ರಾಜಕೀಯ ಬಲೆಗೆ ಬೀಳಬೇಡಿ ಎಂದು ಸೂಚಿಸಿದ್ದೇವೆ. ರಾಜ್ಯದ ಜನ ಐದು ವರ್ಷ ಅಧಿಕಾರ ಮಾಡಲು ಆಶೀರ್ವಾದ ಮಾಡಿದ್ದಾರೆ.…
ದೀಪಾವಳಿ ಪ್ರಯುಕ್ತ KSRTC 2000 ಹೆಚ್ಚುವರಿ ಬಸ್‌ಗಳ ವಿಶೇಷ ವ್ಯವಸ್ಥೆ
ಬೆಂಗಳೂರು: ದೀಪಾವಳಿ ಹಬ್ಬದ ಜೊತೆಗೆ ಸಾಲು ಸಾಲು ರಜೆಗಳಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2000 ಹೆಚ್ಚುವರಿ ಬಸ್‌ಗಳೊಂದಿಗೆ ವಿಶೇಷ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ KSRTC, 12.11.2023 ರಂದು ನರಕ ಚತುರ್ದಶಿ ಹಾಗೂ:14.11.2023 ರಂದು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. 10.11.2023 ರಿಂದ 12.11.2023 ರವರೆಗೆ ಬೆಂಗಳೂರಿನಿAದ ಈ ಕೆಳಕಂಡ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ 14.11.2023 ಹಾಗೂ 15.11.2023ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು,…
ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಅವಧಿ ವಿಸ್ತರಿಸಲು ಬಿಜೆಪಿ ಮನವಿ
ಬೆಂಗಳೂರು: ಮುಂಬರುವ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಅವಧಿ ವಿಸ್ತರಿಸಲು ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ. ಈ ಚುನಾವಣೆಗೆ ಸಂಬಂಧಿಸಿ ಮತದಾರರ ನೋಂದಣಿ ಅವಧಿಯನ್ನು ಸೆಪ್ಟೆಂಬರ್ 30ರಿಂದ ನವೆಂಬರ್ 6ರವರೆಗೆ ನಿಗದಿಪಡಿಸಲಾಗಿತ್ತು. ಅದನ್ನು ಮತ್ತೊಂದು ತಿಂಗಳು ಅಂದರೆ ಡಿಸೆಂಬರ್ 6ರವರೆಗೆ ವಿಸ್ತರಿಸಬೇಕೆಂದು ಬಿಜೆಪಿ ಬೆಂಗಳೂರು ಘಟಕದ ವತಿಯಿಂದ ವಿನಂತಿಸಲಾಗಿದೆ. ಈ ಸಂಬಂಧ ಬಿಜೆಪಿ ನಾಯಕರು ಇಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಡಾ|| ಸಿ.ಎನ್. ಅಶ್ವತ್ಥ್ಥನಾರಾಯಣ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು. ಬೆಂಗಳೂರು ನಗರವೊಂದರಲ್ಲೇ 50 ಲಕ್ಷ ಮತದಾರರಿದ್ದಾರೆ. ಅವರ ಮತದಾನದ ಹಕ್ಕನ್ನು ದೊರಕಿಸಲು ಅವರೆಲ್ಲರನ್ನು ಈ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ…
ಬರ ಪೀಡಿತ ಜಿಲ್ಲೆಗಳಿಗೆ 324 ಕೋಟಿ ರೂ ಪರಿಹಾರ ಬಿಡುಗಡೆ
ಬೆಂಗಳೂರು: ರಾಜ್ಯದ ಬರ ಪೀಡಿತ ಜಿಲ್ಲೆಗಳಿಗೆ ಪರಿಹಾರ ಕ್ರಮಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ. 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಎಂದು ಈ ಹಿಂದೆ ರಾಜ್ಯ ಸರ್ಕಾರ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 324 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಜಿಲ್ಲಾವಾರು ಹಂಚಿಕೆ ಹೀಗಿದೆ: ಬೆಂಗಳೂರು (ನಗರ)- 7.50 ಕೋ.ರೂ. ಬೆಂಗಳೂರು (ಗ್ರಾ) – 6 ಕೋ.ರೂ. , ರಾಮನಗರ – 7.50 ಕೋ.ರೂ. ಕೋಲಾರ – 9 ಕೋ.ರೂ. ಚಿಕ್ಕಬಳ್ಳಾಪುರ – 9 ಕೋ.ರೂ. ತುಮಕೂರು -15 ಕೋ.ರೂ. ಚಿತ್ರದುರ್ಗ – 9 ಕೋ.ರೂ. ದಾವಣಗೆರೆ – 9 ಕೋ.ರೂ. ಚಾಮರಾಜನಗರ – 7.50 ಕೋ.ರೂ. ಮೈಸೂರು – 13.5 ಕೋ.ರೂ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತಲ್ಲಣ ಸೃಷ್ಟಿಸಿದ ಕಂಪನ
ದೆಹಲಿ: ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭಾರತದ ಹಲವೆಡೆಯೂ ಕಂಪನದ ಅನುಭವವಾಗಿದೆ. ಭಾರತದ ರಾಜಧಾನಿ ದೆಹಲಿಯಲ್ಲೂ ಕಂಪನದ ಅನುಭವಗಳಾಗಿವೆ. ದೆಹಲಿ ಹೊರವಲಯ ಹಾಗೂ ನೋಯ್ಡಾ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಬಹುಮಹಡಿ ಕಟ್ಟಡಗಳಲ್ಲಿನ ನಿವಾಸಿಗಳು ಪ್ರಾಣ ಭೀತಿಯಿಂದ ಪಾರಾಗಲು ಕಟ್ಟಡದಿಂದ ಹೊರಬಂದ ಪ್ರಸಂಗ ನಡೆದಿದೆ. ಉತ್ತರ ಪ್ರದೇಶದ ಲಕ್ನೋ, ಬಸ್ತಿ, ಬಾರಾಬಂಕಿ, ಅಮೇಥಿ, ಗೋರಖ್‌ಪುರ ಸಹಿತ ಉತ್ತರ ಭಾರತದ ಹಲವೆಡೆ ಭೂಮಿ ನಡುಗಿದ ಅನುಭವವಾಗಿದೆ. ಬಿಹಾರದ ಪಾಟ್ನಾ, ಕತಿಹಾರ್ ಮೊದಲಾದೆಡೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನೇಪಾಳದಲ್ಲಿ ಪ್ರಬಲ ಭೂಕಂಪ; ಕ್ಕೂ ಹೆಚ್ಚು ಮಂದಿ ಸಾವು
ಕಠ್ಮಂಡು: ಹಿಮಾಲಯ ರಾಷ್ಟ್ರ ನೇಪಾಳ ಪ್ರಬಲ ಭೂಕಂಪದಿಂದಾಗಿ ಮತ್ತೊಮ್ಮೆ ನಲುಗಿದೆ. ಭೂಕಂಪದ ಪರಿಣಾಮ 128 ಮಂದಿ ಸಾವನ್ನಪ್ಪಿ, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ನೇಪಾಳದ ಪಶ್ಚಿಮ ಗಡಿ ಭಾಗದಲ್ಲಿ ಕಂಪನ ಕೇಂದ್ರೀಕರಿಸಿದ್ದು ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ನೇಪಾಳದಲ್ಲಿ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ.
