ಬೆಂಗಳೂರು,: ರಾಜ್ಯದ ಹಲವೆಡೆ ಈ ತಿಂಗಳ 9ರ ವರೆಗೂ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಸೇರಿದಂತೆ ರಾಜ್ಯದ ವಿವಿದೆಡೆ ಮಳೆಯಾಗುವ ಸಾಧ್ಯೆತೆಯಿದೆ. ಪೂರ್ವ ದಿಕ್ಕಿನಿಂದ ಬೀಸುವ ಗಾಳಿಯಲ್ಲಿ ಹೆಚ್ಚು ತೇವಾಂಶದ ಪ್ರಮಾಣವಿರಲಿದ್ದು ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನ.9ರ ವರೆಗೂ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರು ಸುತ್ತಮುತ್ತ ಮೂರು ದಿನ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ನವೆಂಬರ್ 4ರಿಂದ ಐದು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ. ಮಂಗಳೂರು,ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Year: 2023
ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ನಿಯೋಗ ಹೋಗುವುದೇ ಸೂಕ್ತ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಪ್ರವಾಸ ಹೋಗುವ ಬದಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದೇ ಸೂಕ್ತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ರಾಜ್ಯವನ್ನು ತೀವ್ರ ಬರಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರದಿಂದಾಗಿ ಒಟ್ಟು ರೂ.33,710 ಕೋಟಿ ಬೆಳೆಹಾನಿಯಾಗಿದ್ದು, ಕೇಂದ್ರದಿಂದ ರೂ.17,901 ಕೋಟಿ ಪರಿಹಾರಕ್ಕೆ ಮನವಿ ನೀಡಲಾಗಿದೆ’ ಎಂದಿದ್ದಾರೆ. ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಿದ್ದ ಸಂದರ್ಭದಲ್ಲಿ ಹಸಿರು ಬರವೂ ಸೇರಿದಂತೆ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ನಮ್ಮ ಸರ್ಕಾರದ ಸಚಿವರುಗಳಾದ ಎನ್.ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಮತ್ತು ಕೃಷ್ಣ ಬೈರೇಗೌಡ ಅವರು ಕೇಂದ್ರದ ಕೃಷಿ ಕಾರ್ಯದರ್ಶಿಯವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ರಾಜ್ಯದ ಬರಪರಿಸ್ಥಿತಿಯ ಮಾಹಿತಿಯನ್ನು ನೀಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯಾಗಲೇ, ಅನುದಾನವಾಗಲೀ ಯಾವುದು ಬಂದಿಲ್ಲ ಎಂದು…
ಮುಸ್ಲಿಮರ ಮತಗಳಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ; ಜಮೀರ್ ಹೇಳಿಕೆಯ ವೀಡಿಯೋ ವೈರಲ್
ದೆಹಲಿ: ಮುಸ್ಲಿಮರೆಲ್ಲಾ ಒಗ್ಗಟ್ಟಾಗಿ ಮತದಾನ ಮಾಡಿದ್ದಕ್ಕೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಎಂದು ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಅವರ ಹೇಳಿಕೆ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವು ದೇಶವನ್ನು ವಿಭಜಿಸುತ್ತದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಆಗಸ್ಟ್ 25 ರಂದು ಜೈಪುರ ಪ್ರವಾಸ ಕೈಗೊಂಡಿದ್ದ ಜಮೀರ್ ಅಹ್ಮದ್ ಅವರು ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತಾಡಿದ ಸಂದರ್ಭದ ವೀಡಿಯೋ ವೈರಲ್ ಆಗಿದೆ. ‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಮರೇ ಕಾರಣ. ಮುಸ್ಲಿಂ ಮತಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕರ್ನಾಟಕದ ಮಸೀದಿಗಳಲ್ಲಿ ನಾವು ಸಭೆ ಮಾಡಿ, ಒಗ್ಗಟ್ಟು ಪ್ರದರ್ಶನಕ್ಕೆ ಮನವಿ ಮಾಡಿದ್ದೆವು. ಎಲ್ಲಾ ಹಂತ ರೀಚ್ ಮಾಡಿ ವಿಶ್ವಾಸ ಗಳಿಸಿದೆವು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು, ರಾಜಸ್ಥಾನದಲ್ಲೂ ಇದೇ ಸೂತ್ರ ಅನುಸರಿಸಿ ಎಂದು ಜಮೀರ್ ಅಹ್ಮದ್ ಕರೆ ನೀಡಿದ್ದರು.…
ಈ ‘ಗರಡಿ’ಯಲ್ಲಿ ಒಂದು ಕ್ಷಣ..!
ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಲಿ, ತುಮಕೂರು ಜಿಲ್ಲೆಯವರಿಗೆ ಸಿಎಂ ಸ್ಥಾನ ಸಿಗಲಿ; ರಾಜಣ್ಣ ವಾಕ್ ವೈಖರಿಯ ಅಚ್ಚರಿ
ತುಮಕೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಸಾಗಿರುವಾಗಲೇ ರಾಜಣ್ಣ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಇರುವವರೆಗೆ ನಾವೆಲ್ಲ ಸಿದ್ದರಾಮಯ್ಯ ಪರವಾಗಿದ್ದೇವರ, ಸಿದ್ದರಾಮಯ್ಯ ಹೊರತು ಪಡಿಸಿದರೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಎಂದು ಬಯಸುತ್ತೇವೆ ಎಂದು ರಾಜಣ್ಣ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ನೂತನ ಪೊಲೀಸ್ ಸಮುಚ್ಛಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಈಗ ಗೃಹ ಸಚಿವರಾಗಿದ್ದಾರೆ. ಮುಂದೆ ಅವರು ಏನು ಬೇಕಾದರೂ ಆಗಬಹುದು ಎಂದರು. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗುತ್ತಾರೆ ಅಂತಾದರೆ ನಾವೆಲ್ಲ ಸಂತೋಷ ಪಡುತ್ತೇವೆ. ನಾವೆಲ್ಲ ಮುಖ್ಯಮಂತ್ರಿ ಆದಂತೆ ಎಂದು ಭಾವಿಸುತ್ತೇನೆ ಎಂದೂ ರಾಜಣ್ಣ ಹೇಳಿದರು. ಪಕ್ಷದ ವಿಚಾರಗಳನ್ನು ಮಾತನಾಡದಂತೆ ಎಐಸಿಸಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ಆದರೂ…
ರೇವ್ ಪಾರ್ಟಿ ವೇಳೆ ಹಾವುಗಳ ಬಳಕೆ; ಬಿಗ್ ಬಾಸ್ ಸ್ಪರ್ದಿ ಸಹಿತ ಹಲವರ ವಿರುದ್ಧ ಕೇಸ್
ದೆಹಲಿ: ನೊಯ್ದಾ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ರೇವ್ ಪಾರ್ಟಿಗಾಗಿ ಹಾವಿನ ವಿಷ ಬಳಕೆ ಪ್ರಕರಣ ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ಯೂಟ್ಯೂಬರ್, ಪ್ರಭಾವಿ ಮತ್ತು ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ ಹಾಗೂ ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ 20 ಮಿ ಲೀ ವಿಷ ಹಾಗೂ ರೇವ್ ಪಾರ್ಟಿ ಸಮಯದಲ್ಲಿ ಬಳಕೆಯಾಗಿರುವ 9 ವಿಷಕಾರಿ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 5 ನಾಗರಹಾವು, 1 ಹೆಬ್ಬಾವು ಮತ್ತು 1 ಎರಡು ತಲೆಯ ಹಾವು, ಒಂದು ಕೇರೆ ಹಾವು ವಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಎನ್‌ಜಿಒ, ಹಾವಿನ ವಿಷ ಬಳಕೆಯ ರೇವ್ ಪಾರ್ಟಿ ವಿರುದ್ಧ ದೂರು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಎಲ್ವಿಶ್ ಯಾದವ್ ಅವರನ್ನು ಸಂಪರ್ಕಿಸಿ…
ಖಾಸಗಿ ಹೈಟೆಕ್ ಸ್ಕೂಲ್’ಗಳನ್ನೂ ನಾಚಿಸುವಂತಿದೆ BTM ಲೇಔಟ್’ನ ಸರ್ಕಾರಿ ಶಾಲೆಗಳು..ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಅವರ ಮನದಾಳದ ಮಾತು ಹೀಗಿದೆ…
ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಬಗ್ಗೆ ಇಚ್ಚಾಶಕ್ತಿ ಇದ್ದರೆ ಅಭಿವೃದ್ಧಿಶೀಲ ಕ್ಷೇತ್ರ ನಿರ್ಮಾಣ ಅಸಾಧ್ಯವಲ್ಲ ಎಂಬುದಕ್ಕೆ ಈ ಸರ್ಕಾರಿ ಶಾಲೆಗಳು ಉದಾಹರಣೆಯಂತಿದೆ. ಖಾಸಗಿ ಹೈಟೆಕ್ ಶಾಲೆಗಳನ್ನು ನಾಚಿಸುವಂತಿರುವ BTM ಲೇಔಟ್‌ನ ಸರ್ಕಾರಿ ಶಾಲೆಗಳು.. ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಮಂಜುನಾಥ್ ಅವರ ಮನದಾಳದ ಮಾತು ಹೀಗಿದೆ… ರಾಜಧಾನಿ ಬೆಂಗಳೂರು ಸೆರಗಿನಲ್ಲಿರುವ BTM ಲೇಔಟ್’ನಲ್ಲಿರುವ ಸರ್ಕಾರಿ ಶಾಲೆಗಳು ಖಾಸಗಿ ಕಾರ್ಪೊರೇಟ್ ಹೈಟೆಕ್ ಶಾಲೆಗಳನ್ನು ನಾಚಿಸುವ ರೀತಿಯಲ್ಲಿ ಅಭಿವೃದ್ಧಿ ಕಂಡಿವೆ. ಪದಪುಂಜಗಳ ಆಕರ್ಷಣೆಗೆ ಸಾಕ್ಷಿಯಾಗುವ ‘ಶಿಕ್ಷಣ ಕಾಶಿ’ ಎಂದರೇನು? ಅದು ಎಲ್ಲಿದೆ ಎಂದು ಹೂಡುತ್ತಾ ಸಾಗಿದವರಿಗೆ ಈ ಶಾಲೆಗಳು ಸಿಗುತ್ತವೆ. ಇವು ‘ಕಾಶಿಗಿಂತಲೂ’ ಮೇಲ್ಪಂಕ್ತಿಯಲ್ಲಿದೆ ಎಂದು ಗೊತ್ತಾಗುತ್ತದೆ. ತಾವರೆಕೆರೆ, ಕುವೆಂಪುನಗರ ಸುತ್ತಮುತ್ತಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದರೆ ಸಾಕು, ಹೊಸ ಪ್ರಪಂಚ ತೆರೆದುಕೊಂಡಂತೆ ಭಾಸವಾಗುತ್ತದೆ. ಆಕರ್ಷಕ ಕಟ್ಟಡ.. ಅದರೊಳಗೆ ವ್ಯವಸ್ಥಿತ ತರಗತಿಗಳು. ಶಿಸ್ತುಬದ್ಧ ವಿದ್ಯಾರ್ಥಿ ಸಮೂಹಕ್ಕೆ ಎಲ್ಲಿಲ್ಲದ ಪಾಠ-ಪ್ರವಚನ. ಯಾವುದೇ…
‘ಚೀತಾ’ ಚಿತ್ರಕ್ಕೆ ಮುನ್ನುಡಿ; ಪ್ರಜ್ವಲ್‌ಗೆ ನಾಯಕಿ ಯಾರೆಂಬುದೇ ನಿಗೂಢ
ನಟ ಪ್ರಜ್ವಲ್ ದೇವರಾಜ್ ಅಭಿನಯದ39ನೇ ಚಿತ್ರಕ್ಕೆ ಮುಹೂರ್ತ ನಡೆದಿದೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸುತ್ತಿರುವ ‘ಚೀತಾ’ ಸಿನಿಮಾ ಸೆಟ್ಟೇರಿರುವ ಬಗ್ಗೆ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನ HMT ಫ್ಯಾಕ್ಟರಿ ಆವರಣದಲ್ಲಿ ನಡೆದ “ಚೀತಾ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಕಲಾವಿದರು, ತಂತ್ರಜ್ಞರು ಹಾಜರಿದ್ದರು. ರಾಜಲಕ್ಷ್ಮೀ ಎಂಟರ್‌ಟೈನ್ಮೆಂಟ್’ ಬ್ಯಾನರಿನಲ್ಲಿ ಪ್ರತಿಭಾ ನರೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್, ಶಿವರಾಜ್ ಕೆ. ಆರ್. ಪೇಟೆ, ಗುರುರಾಜ್ ಜಗ್ಗೇಶ್, ಸಹಿತ ಅನೇಕ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆವ ‘ಚೀತಾ’ ನಾಯಕಿ ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ.
ಸಿದ್ದು Vs ಡಿಕೆಶಿ ವ್ಯತಿರಿಕ್ತ ಅಭಿಮತ..! ಸಿಎಂ ಬದಲಾವಣೆ ಸನ್ನಿಹಿತವೇ?
ಬೆಂಗಳೂರು: ಬಿಜೆಪಿ ಸಾಮ್ರಾಜ್ಯವನ್ನು ಮೆಟ್ಟಿ ರಾಜ್ಯದ ಗದ್ದುಗೆ ಏರಿರುವ ಕೈ ಸಾಮ್ರಾಜ್ಯದಲ್ಲೂ ಒಡಕಿನ ಲಕ್ಷಣಗಳು ಗೋಚರಿಸಿವೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಅಸಮಾಧಾನಗೊಂಡಿದ್ದಾರೆ, ಇನ್ನೊಂದೆಡೆ ಸಿಎಂ ಬದಲಾವಣೆ ಸಾಧ್ಯತೆಗಳ ಬಗ್ಗೆ ಪ್ರತಿಪಕ್ಷಗಳ ವಿಶ್ಲೇಷಣೆ ಕೂಡಾ ರಾಜಕೀಯ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಂಚಿಕೊಳ್ಳುವ ಸೂತ್ರ ರೂಪಿಸಲಾಗಿದೆ ಎಂಬ ಮಾತುಗಳೂ ಕೆಪಿಸಿಸಿ ಮೊಗಸಾಲೆಯಲ್ಲಿ ಪ್ರತಿಧ್ವನಿಸುತ್ತಿದೆ. ಈ ಕುರಿತಂತೆ ಸಚಿವ ರಾಜಣ್ಣ ಸಹಿತ ಸಿದ್ದರಾಮಯ್ಯ ಆಪ್ತರು ಹೇಳಿಕೆಗಳನ್ನು ನೀಡುತ್ತಾ ಸಿದ್ದರಾಮಯ್ಯ ಅವರೇ ೫ ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಹೇಳುವ ಮೂಲಕ ಸುದ್ದಿಗಳಿಗೆ ಗುದ್ದು ಕೊಡುತ್ತಿದ್ದಾರೆ. ಈ ಕುರಿತಂತೆ ಹೊಸಪೇಟೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ‘ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಹೇಳಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರು ಸಿದ್ದರಾಮಯ್ಯ…
ಲಂಚಾವತಾರ: ಇಬ್ಬರು ಇಡಿ ಅಧಿಕಾರಿಗಳ ಬಂಧನ
ದೆಹಲಿ : ರಾಜಸ್ಥಾನದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಾರ್ಯಾಚರಣೆ ನಡೆದಿರುವಂತೆಯೇ, ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಬ್ಬರು ಇಡಿ ಅಧಿಕಾರಿಗಳನ್ನೂ ಬಂಧಿಸಿದೆ. ಗುರುವಾರ ಅಲ್ವಾರ್‌ನಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಾದ ನೌಲ್ ಕಿಶೋರ್ ಮೀನಾ ಮತ್ತು ಅವರ ಸಹಾಯಕರನ್ನು ಬಂಧಿಸಿದೆ. ಮಣಿಪುರದ ಚಿಟ್ ಫಂಡ್ ಕಂಪನಿಯೊಂದರ ಪ್ರಕರಣ ಸಂಬಂಧಿಸಿದಂತೆ ಮಹಿಳೆಗೆ 17 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸುತ್ತಿದ್ದ ವೇಳೆ ಇಡಿ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಸಿಬಿ ಮೂಲಗಳು ತಿಳಿಸಿವೆ.
