ಮಂಗಳೂರು: ಕುದ್ರೋಳಿ ವೈಭವದ ದಸರಾ ಮಹೋತ್ಸವಕ್ಕೆ ತೆರೆ

ಮಂಗಳೂರು: ಮಂಗಳೂರು ವೈಭವದ ದಸರಾ ಮಹೋತ್ಸವಕ್ಕೆ ತೆರೆಬಿದ್ದಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 9 ದಿನ ನಡೆದ ಅದ್ದೂರಿ ನವರಾತ್ರಿ ಮಹೋತ್ಸವ ಮಂಗಳವಾರ ಸಂಜೆಯ ಅದ್ದೂರಿ ದಸರಾ ಮೆರವಣಿಗೆಯೊಂದಿಗೆ ಇತಿಹಾಸ ಬರೆಯಿತು. ಕುದ್ರೋಳಿ ಕ್ಷೇತ್ರದಿಂದ ಆರಂಭವಾದ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ತಬ್ಧಚಿತ್ರ ಗಮನಸೆಳೆಯಿತು. ದಸರಾ ಮಹೋತ್ಸವದ ರೂವಾರಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನೆರವೇರಿದ ದಸರಾ ಮೆರವಣಿಗೆಯಲ್ಲಿ ಸುಮಾರು ಒಂದು ಸಾವಿರ ಆಕರ್ಷಕ ಕೇರಳ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‍ಗಳು, ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ ಹಾಗೂ ದೇಶದ 60 ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ವೈಭವದ ಮೆರವಣಿಗೆ ತಡರಾತ್ರಿಯೂ ಮುಂದುವರಿದು ಬುಧವಾರ ನಸುಕಿನ ಜಾವ ಉತ್ಸವ ಮೂರ್ತಿಗಳ ವಿಸರ್ಜನೆಯೊಂದಿಗೆ ಸಮಾಪನಗೊಂಡಿತು. ಕುದ್ರೋಳಿ ಶ್ರೀ…

ಗಾಜಾದಲ್ಲಿ ಸಮಗ್ರ ಕದನ ವಿರಾಮಕ್ಕೆ ಪ್ಯಾಲೇಸ್ಟಿನಿಯನ್ ಅಧ್ಯಕ್ಷರ ಕರೆ

ರಮಲ್ಲಾ: ಇಸ್ರೇಲ್-ಪ್ಯಾಲೆಸ್ತೀನ್ ಸಮರದಿಂದಾಗಿ ಮಧ್ಯಪ್ರಾಚ್ಯ ಮತ್ತು ನೆರೆ ರಾಷ್ಟ್ರಗಳಲ್ಲಿ ಆತಂಕ ಮನೆಮಾಡುವಂತಾಗಿದೆ. ಉಭಯ ರಾಷ್ಟ್ರಗಳ ಸಂಘರ್ಷ ಭಾರೀ ಸಾವುನೋವಿಗೆ ಕಾರಣವಾಗಿರುವಂತೆಯೇ ಗಾಜಾದಲ್ಲಿ ಸಮಗ್ರ ಕದನ ವಿರಾಮಕ್ಕೆ ಪ್ಯಾಲೇಸ್ಟಿನಿಯನ್ ಅಧ್ಯಕ್ಷರು ಕರೆ ನೀಡಿದ್ದಾರೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಗಾಜಾದಲ್ಲಿ ಸಂಪೂರ್ಣ ಕದನ ವಿರಾಮಕ್ಕೆ ಕರೆ ನೀಡಿದರು. ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ರಮಲ್ಲಾದಲ್ಲಿರುವ ಅಧ್ಯಕ್ಷೀಯ ಪ್ರಧಾನ ಕಛೇರಿಯಲ್ಲಿ ಸಭೆ ನಡೆದಿದೆ. ಅಧ್ಯಕ್ಷ ಅಬ್ಬಾಸ್ ಅವರು ಎರಡೂ ಕಡೆಗಳಲ್ಲಿ ನಾಗರಿಕರ ಪ್ರಾಣಹಾನಿಯನ್ನು ಬಲವಾಗಿ ಖಂಡಿಸಿದರು ಮತ್ತು ಸಂಘರ್ಷದ ಎರಡೂ ಕಡೆಗಳಲ್ಲಿ ನಾಗರಿಕರು, ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡಲು ಒತ್ತಾಯಿಸಿದರು. ಗಾಜಾ, ವೆಸ್ಟ್ ಬ್ಯಾಂಕ್ ಅಥವಾ ಜೆರುಸಲೆಮ್‌ನಲ್ಲಿದ್ದರೂ, ಪ್ಯಾಲೆಸ್ಟೀನಿಯಾದವರನ್ನು ಅವರ ಮನೆಗಳು ಮತ್ತು ಭೂಮಿಯಿಂದ ಸ್ಥಳಾಂತರಿಸುವುದನ್ನು ನಿರಾಕರಿಸಿದರು. ಎಮ್ಯಾನುಯೆಲ್ ಮ್ಯಾಕ್ರನ್ ಗಾಜಾದಲ್ಲಿ ನಾಗರಿಕರನ್ನು ರಕ್ಷಿಸುವ ನಿರ್ಣಾಯಕ ಪ್ರಾಮುಖ್ಯತೆಯನ್ನು…

ಇಸ್ರೇಲ್-ಪ್ಯಾಲೆಸ್ತೀನ್ ಸಮರ: ಗಾಜಾ ಆರೋಗ್ಯ ವ್ಯವಸ್ಥೆ ಅಯೋಮಯ

ಟೆಲ್ ಅವಿವ್: ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ, ಗಾಜಾದಲ್ಲಿನ ವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಮಂಗಳವಾರ ಪತ್ರಿಕಾಗೋಷ್ಠಿಯನ್ನು ನಡೆಸಿ, ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಲ್ಲಿ ಭೀಕರ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಇಸ್ರೇಲಿ ದಾಳಿಗಳು 65 ವೈದ್ಯಕೀಯ ಸಿಬ್ಬಂದಿಗಳ ಸಾವು, 25 ಆಂಬ್ಯುಲೆನ್ಸ್‌ಗಳ ನಾಶ ಮತ್ತು 12 ಆಸ್ಪತ್ರೆಗಳು ಮತ್ತು 32 ಆರೋಗ್ಯ ಕೇಂದ್ರಗಳನ್ನು ನಿಷ್ಕ್ರಿಯಗೊಳಿಸಿದವು ಎಂದು ಅವರು ವರದಿ ಮಾಡಿದರು. ಇದಲ್ಲದೆ, ನಡೆಯುತ್ತಿರುವ ದಾಳಿಗಳು ಮತ್ತು ಇಂಧನದಂತಹ ಅಗತ್ಯ ಸಂಪನ್ಮೂಲಗಳ ಕೊರತೆಯಿಂದಾಗಿ ಮುಂಬರುವ ಗಂಟೆಗಳಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಅಲ್-ಕುದ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಠಾತ್ ದಾಳಿಯನ್ನು ಪ್ರಾರಂಭಿಸಿದಾಗ ಪ್ರಾರಂಭವಾದ ಸಂಘರ್ಷವು ಎರಡು ಕಡೆಯಿಂದ ಸಾವಿರಾರು ರಾಕೆಟ್‌ಗಳನ್ನು ಹಾರಿಸುವುದರೊಂದಿಗೆ ಮತ್ತು ಇಸ್ರೇಲ್ ವೈಮಾನಿಕ ದಾಳಿಯೊಂದಿಗೆ ಭಾರಿ ಹಗೆತನದ ವಿನಿಮಯಕ್ಕೆ ಸಾಕ್ಷಿಯಾಗಿದೆ. ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಮುತ್ತಿಗೆ…

‘ರಾಮರಾಜ್ಯದ ಅರುಣೋದಯವನ್ನು ಉದ್ಘಾಟಿಸುತ್ತೇವೆ’: ಯೋಗಿ ಆದಿತ್ಯನಾಥ್ ಸಂಕಲ್ಪ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಿಂದಾಗಿ ‘ಅಯೋಧ್ಯಾಧಾಮ’ದಲ್ಲಿ ಭಗವಾನ್ ರಾಮನ ಭವ್ಯ ಮಂದಿರವು ಪೂರ್ಣಗೊಳ್ಳುವ ಹಂತದಲ್ಲಿದ್ದು, 500 ವರ್ಷಗಳ ಬಹುನಿರೀಕ್ಷಿತ ಕನಸನ್ನು ಈ ಸಂದರ್ಭವು ನನಸಾಗಿಸಿದೆ. ಇನ್ನು ಮುಂದೆ ರಾಮರಾಜ್ಯ ಸ್ಥಾಪನೆಗೆ ಮುನ್ನುಡಿ ಬರೆಯುತ್ತೇವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಕಲ್ಪ ಮಾಡಿದ್ದಾರೆ. ಮಂಗಳವಾರ ಸಂಜೆ ಮಾನಸ ಸರೋವರ ರಾಮಲೀಲಾ ಮೈದಾನದಲ್ಲಿ ನಡೆದ ಭಗವಾನ್ ಶ್ರೀರಾಮನ ಪಟ್ಟಾಭಿಷೇಕ ಸಮಾರಂಭದಲ್ಲಿ ಮಹತ್ವದ ಭಾಷಣ ಮಾಡಿದ ಯೋಗಿ ಆದಿತ್ಯನಾಥ್ ಅವರು ರಾಮರಾಜ್ಯ ಸ್ಥಾಪನೆಯ ಘೋಷಣೆ ಮಾಡಿದರು. ಯೋಗಿ ಆದಿತ್ಯನಾಥ್ ಅವರು, ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಸರ್ಕಾರವು ಲಕ್ಷಾಂತರ ಬಡ ನಾಗರಿಕರಿಗೆ ಭಗವಾನ್ ರಾಮನ ಸಾಮ್ರಾಜ್ಯದ ತತ್ವಗಳನ್ನು ನಿಜವಾಗಿಸಲು ಹೇಗೆ ಪ್ರಯತ್ನಿಸಿದೆ ಎಂಬುದನ್ನು ಬೊಟ್ಟು ಮಾಡಿದರು. ಮನೆಗಳು, ನೈರ್ಮಲ್ಯ ಸೌಲಭ್ಯಗಳು, ಪೋಷಣೆ, ಆರೋಗ್ಯ ಮತ್ತು ಇತರ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ಇದನ್ನು ಸಾಧಿಸಲಾಗಿದೆ, ಈ ಸಾರ್ವಜನಿಕ ಕಲ್ಯಾಣ ಯೋಜನೆಗಳು…

ಕೈಯಲ್ಲಿ ಲಾಠಿಯಲ್ಲ, ಖಡ್ಗ.. ಮಹಾರಾಣಿ ‘ರೂಪ’ದಲ್ಲಿ ಐಪಿಎಸ್ ಅಧಿಕಾರಿ..!

ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಅವತಾರವನ್ನು ನವರಾತ್ರಿ ಸಿಂಗಾರ ಎಂದಾದರೂ ಅನ್ನಿ, ಅಥವಾ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಅವತಾರ ರೂಪಿಣಿ ಎಂದೂ ಅನ್ನಿ. ಆದರೆ ಈಕೆಯ ಈ ಸೊಗಸು-ಸೊಬಗಿನ ಅವತಾರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ನವರಾತ್ರಿ ಸಡಗರ ಎಲ್ಲೆಲ್ಲೂ ಆವರಿಸಿದೆ. ದಸರಾ ಸಂಭ್ರಮ ಇನ್ನೂ ಮನೆಮಾಡಿದೆ.. ಈ ಹಬ್ಬ ಸಂಭ್ರಮದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಬಿಡುಗಡೆಗೆ ಸಜ್ಜಾಗುವ ರೀತಿಯಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಸೊಬಗು-ಸೊಗಸಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರುತಾಗಿರುವ ಡಿ.ರೂಪಾ, ಪೊಲೀಸ್ ಇಲಾಖೆಯ ಕಾಯಕಕ್ಕಷ್ಟೇ ಸೀಮಿತಗೊಳಿಸಿಲ್ಲ. ಬಣ್ಣದ ಲೋಕಕ್ಕೂ ಸೈ ಎಣಿಸಕೊಳ್ಳುವ ರೀತಿಯ ಪ್ರತಿಭೆ ಅವರದ್ದು. ಕಾಲೇಜು ಜೀವನದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅವರದ್ದು. ಕಲಾವಿದೆಯಾಗಿಯೂ ಗಮನಸೆಳೆಯುತ್ತಿರುವ ಡಿ.ರೂಪಾ, ಆಗಾಗ್ಗೆ ಉಪನ್ಯಾಸ ನೀಡುತ್ತಾ ಯುವಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.…

ಬೆಂಗಳೂರಿಗೆ ಕನಕಪುರ ಸೇರ್ಪಡೆ ವಿಚಾರ; ಡಿಕೆಶಿ ಹೇಳಿಕೆಗೆ ಹೆಚ್ಡಿಕೆ ಟೀಕೆ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ಕುಮಾರಸ್ವಾಮಿ, ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದಿದ್ದಾರೆ. ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ಎನ್ನುವ ಇವರು; ಇಷ್ಟು ದಿನ ಶಾಸಕರಾಗಿ, ಸಚಿವರಾಗಿ…

ಹುಲಿ ಉಗುರು ಧರಿಸಿದ ಸಂತೋಷ್ ಬಂಧನ ನಂತರ ಇದೀಗ ಸೆಲೆಬ್ರೆಟಿಗಳಿಗೂ ನಡುಕ

ಬೆಂಗಳೂರು: ಹಳ್ಳಿಕಾರ್ ತಳಿ ಸಂರಕ್ಷಣೆ ಮೂಲಕ ಹೆಸರುವಾಸಿಯಾಗಿರುವ ವರ್ತೂರು ಸಂತೋಷ್​ ಅವರು ಹುಲಿ ಉಗುರು ಇರುವ ಲಾಕೆಟ್​ ಧರಿಸಿದ್ದ ಆರೋಪದಲ್ಲಿ ಬಂಧನವಾಗುತ್ತಿದ್ದಂತೆಯೇ ಅನೇಕ ಸೆಲೆಬ್ರೆಟಿಗಳಿಗೂ ಸಂಕಷ್ಟ ಎದುರಾಗಿದೆ. ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್​ ಮನೆಯಲ್ಲಿದ್ದ ವರ್ತೂರು ಸಂತೋಷ್​ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಬಳಿಕ ಈಗ ನಟ ದರ್ಶನ್​ ಹಾಗೂ ವಿನಯ್​ ಗುರೂಜಿ ವಿರುದ್ದವೂ ಆರೋಪ ಕೇಳಿಬಂದಿದೆ. ಈ ಸಂಬಂಧ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್​ ಅವರು ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆನ್ನಲಾದ ದೂರು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ನಟ ದರ್ಶನ್ ಧರಿಸಿದ್ದ ಬಂಗಾರದ ಚೈನ್’ನಲ್ಲಿ ಹುಲಿಯ ಉಗುರು ಇದೆ. ವಿನಯ್ ಗುರೂಜಿ ಅವರು ಹುಲಿಯ ಚರ್ಮದ ಮೇಲೆ ಕೂತಿರುತ್ತಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ವಿರುದ್ದದ್ದ ಕ್ರಮದ ರೀತಿಯಲ್ಲೇ ನಟ ದರ್ಶನ್, ವಿನಯ್ ಗುರೂಜಿ ಬಗ್ಗೆಯೂ ವಿಚಾರಣೆ ನಡೆಸಬೇಕೆಂದು ಶಿವಕುಮಾರ್​ ಮನವಿ…

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನ.24ರಂದು ಬಿಡುಗಡೆ

ನಟಿ ರಮ್ಯಾ ತಮ್ಮ ‘ಆ್ಯಪಲ್ ಬಾಕ್ಸ್ ಸ್ಟುಡಿಯೋ’ ಸಂಸ್ಥೆ ಮೂಲಕ ನಿರ್ಮಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ರಾಜ್​ ಬಿ ಶೆಟ್ಟಿಗೆ ಜೊತೆಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ರಿಲೀಸ್ ಬಗ್ಗೆ ಆ್ಯಪಲ್ ಬಾಕ್ಸ್ ಸೋಶಿಯಲ್ . ಮೀಡಿಯಾ ತಾಣದಲ್ಲಿ ಮಾಹಿತಿನವೆಂಬರ್ 24ರಂದು ಚಿತ್ರ ಬಿಡುಗಡೆ ಅಗಲಿದೆ ಎಂದು ತಂಡ ಮಾಹಿತಿ ನೀಡಿದೆ.  

ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣ: 6 ಮಂದಿ ಬಂಧನ

ಕೋಲಾರ: ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಕೋಲಾರ ಪೊಲೀಸರು ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಬಳಿ ಆರು ಮಂದಿಯನ್ನು ಬಂಧಿಸಿದ್ದಾರೆ. ಹತ್ಯೆ ಆರೋಪಿಗಳು ಅವಿತಿದ್ದ ಸ್ಥಳವನ್ನು ಪತ್ತೆಮಾಡಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೊಪಾಯಿಗಳನ್ನು ಶರಣಾಗಲು ಸೂಚಿಸಿದರು. ಆದರೆ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದರೆಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಹಳೇ ವೈಷಮ್ಯವೇ ಈ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಕೇಂದ್ರ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಜಗದ್ವಿಖ್ಯಾತ ಮೈಸೂರು ದಸರಾ; ವೈಭವದ ದೃಶ್ಯ ಸೊಬಗನ್ನು ಸಾಕ್ಷೀಕರಿಸಿದ ಜನಸ್ತೋಮ

ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಅದ್ದೂರಿಯಾಗಿ ನೆರವೇರಿದೆ. ವಿಜಯದಶಮಿ ದಿನವಾದ ಇಂದು ಮೈಸೂರು ಅರಮನೆ ಮುಂಬಾಗ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ,ಶಿವಕುಮಾರ್ ಸೇರಿದಂತೆ ಸಚಿವರು ಅಧಿಕಾರಿಗಳು, ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊತ್ತು ಸಾಗಿದ ಸನ್ನಿವೇಶ ಗಮನಸೆಳೆಯಿತು. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದವು. ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಿದ ಜಂಬೂಸವಾರಿ ಮೆರವಣಿಗೆಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ವಿಶೇಷ ಆಕರ್ಷಣೆಗೆ ಪಾತ್ರವಾದವು. ಸುಮಾರು 5ರಿಂದ 7 ಕಿಲೋ ಮೀಟರ್ ವರೆಗೆ ಜಂಬೂ ಸವಾರಿ ಸಾಗಿದ್ದು ರಾಜರಸ್ತೆಯ ಇಕ್ಕೆಲೆಗಳಲ್ಲಿ ಜನಸ್ತೋಮ ಈ ವೈಭವದ ದೃಶ್ಯ ಸೊಬಗನ್ನು ಸಾಕ್ಷೀಕರಿಸಿತು. ಶತಮಾನಗಳ‌‌ ಇತಿಹಾಸ ಹೊಂದಿರುವ ಮೈಸೂರು ದಸರಾ ಕರ್ನಾಟಕದ ಕೀರ್ತಿಯ ಕಳಶ. ಅಂಬಾರಿಯಲ್ಲಿ ವೀರಾಜಮಾನಳಾಗಿರುವ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ಮುಖ್ಯಮಂತ್ರಿಗಳೊಂದಿಗೆ ಪುಷ್ಪಾರ್ಚನೆ…