ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಧಿಕಾರಿಗಳು ಮತ್ತು ಸೈನಿಕರನ್ನು ಬಿಜೆಪಿ ಪಕ್ಷದ ಮಾರ್ಕೆಟಿಂಗ್ ಏಜೆಂಟರನ್ನಾಗಿ ಪರಿವರ್ತಿಸಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಖರ್ಗೆ ಆರೋಪಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಜೆ.ಪಿ ನಡ್ಡಾ, ಮೋದಿ ಸರ್ಕಾರವು ಎಲ್ಲಾ ಯೋಜನೆಗಳ ಪರಿಪೂರ್ಣತೆ ಮತ್ತು ಎಲ್ಲಾ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಇದು ಬಡವರ ಹಿತಾಸಕ್ತಿಯನ್ನು ಹೊಂದಿರುವ ಯಾರಿಗೂ ಸಮಸ್ಯೆ ಆಗುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಬಡವರನ್ನು ಬಡತನದಲ್ಲಿಡಲು ಮಾತ್ರ ಆಸಕ್ತಿ ಹೊಂದಿದ್ದು, ಹಾಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಎದಿರೇಟು ಕೊಟ್ಟಿದ್ದಾರೆ.
Year: 2023
ಸೈನಿಕರನ್ನು ಬಿಜೆಪಿಯ ಮಾರ್ಕೆಟಿಂಗ್ ಏಜೆಂಟರನ್ನಾಗಿ ಪರಿವರ್ತಿಸಲಾಗಿದೆಯೇ? ‘ಕೈ’ಗೆ ನಡ್ಡಾ ಎದಿರೇಟು ಹೀಗಿದೆ
ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆ
ಮೈಸೂರು: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9ನೇ ದಿನವಾದ ಇಂದು ಎಲ್ಲೆಲ್ಲೂ ಆಯುಧ ಪೂಜೆಯ ಸಡಗರ ಗರಿಗೆದರಿದೆ. ಶಸ್ತ್ರಗಳಿಗೆ ಪೂಜೆಯಷ್ಟೇ ಅಲ್ಲ, ಯಂತ್ರಗಳಿಗೆ, ವಾಹನಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ. ದಸರಾ ಖ್ಯಾತಿಯ ಮೈಸೂರಿನಲ್ಲೂ ಆಯುಧ ಪೂಜೆ ಕೈಂಕರ್ಯ ಗಮನಸೆಳೆದಿದೆ. ಮೈಸೂರು ಅರಮನೆಯಲ್ಲಿ ಅರಸರ ಕಾಲದ ಆಯುಧಗಳಿಗೆ ಪೂಜೆ ನೆರವೇರುವುವುದು ಇಲ್ಲಿಯದೇ ಆದ ವಿಶೇಷ. ಯಧುವಂಶದ ಕುವರ ಯಧುವೀರ್ ಒಡೆಯರ್ ಉಪಸ್ಥಿತಿ ಕೂಡಾ ಗಮನಾರ್ಹ. ಇದೇ ವೇಳೆ ಮೈಸೂರು ದಸರಾದಲ್ಲಿ ಜಗತ್ತಿನ ಗಮನ ಕೇಂದ್ರೀಕರಿಸುವ ಜಂಬೂಸವಾರಿ ಮೆರವಣಿಗೆಗೂ ಸಕಲ ತಯಾರಿ ನಡೆದಿದೆ. ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅಕ್ಟೊಬರ್ 24) ನಡೆಯಲಿದ್ದು, ಅಂತಿಮ ಹಂತದ ತಯಾರಿ ನಡೆದಿವೆ.. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುವ ಸ್ತಬ್ಧಚಿತ್ರಗಳು ಜೊತೆಯಲ್ಲೇ ಗಜಪಡೆಗಳು ನಾಡಿನ ಅಧಿದೇವತೆ ಚಾಮುಂಡಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ‘ರಾಜಪಥ’ದಲ್ಲಿ ಸಾಗಲಿವೆ. ಜಂಬೂಸವಾರಿ ಮೆರವಣಿಗೆ ತಯಾರಿ ಹೀಗಿದೆ: ಮೈಸೂರು ಅರಮನೆಯ…
ಕಮಲ ಕಾರ್ಯಕರ್ತರ ಮೇಲೆ ದೌರ್ಜನ್ಯ; ತನಿಖೆಗೆ ಡಿವಿಎಸ್ ಸೇನೆ ರಚಿಸಿದ ಬಿಜೆಪಿ ಹೈಕಮಾಂಡ್
ದೆಹಲಿ: ತಮಿಳುನಾಡಿಗೆ ಸರ್ಕಾರದಿಂದ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನಡೆದಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಸಂಘರ್ಷದ ಕಿಚ್ಚು ಹಚ್ಚಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ನಾಯಕರ ತಂಡವನ್ನು ತಮಿಳುನಾಡಿಗೆ ಕಳುಹಿಸಿ ಪರಿಶೀಲನೆ ನಡೆಸಲಿದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ , ತಮಿಳುನಾಡಿಗೆ ಭೇಟಿ ನೀಡಲು ನಾಲ್ವರು ಸದಸ್ಯರ ನಿಯೋಗವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಸದರಾದ ಡಾ. ಸತ್ಯಪಾಲ್ ಸಿಂಗ್, ಪಿ.ಸಿ ಮೋಹನ್ ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಡಿ. ಪುರಂದರೇಶ್ವರಿ, ಅವರು ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಈ ಸಮಿತಿಯು ತಮಿಳುನಾಡಿಗೆ ಭೇಟಿ ನೀಡಿ ವರದಿ ತಯಾರಿಸಿ ಹೈಕಮಾಂಡ್ಗೆ ಸಲ್ಲಿಸಲಿದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ: ಮಸೀದಿ ಮೇಲೆ ಇಸ್ರೇಲ್ ದಾಳಿ; ಸರಣಿ ಕಾರ್ಯಾಚರಣೆಯಲ್ಲಿ 13 ಮಂದಿ ಸಾವು
ಟೆಲ್ ಅವಿವ್: ಮಧ್ಯ ಪ್ರಾಚ್ಯಾದಲ್ಲಿ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ತೀವ್ರಗೊಂಡಿದ್ದು ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದೆ. ಹಮಾಸ್ ಉಗ್ರರ ಹತ್ತದಗಿಸಲು ಪಣ ತೊಟ್ಟಿರುವ ಇಸ್ರೇಲ್ ಸೇನೆ ಗಾಜಾಪಟ್ಟಿಯಲ್ಲಿನ ವೆಸ್ಟ್ ಬ್ಯಾಂಕ್ನ ಜೆನಿನ್ ನಗರದಲ್ಲಿರುವ ಅಲ್-ಅನ್ಸಾರ್ ಮಸೀದಿ ಸಂಕೀರ್ಣ ಮೇಲೆ ವೈಮಾನಿಕ ದಾಳಿ ನಡೆಸಿದೆ. ಮಸೀದಿ ಆವರಣದಲ್ಲಿ ಭಯೋತ್ಪಾದಕ ಸಂಘಟನೆ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಕಮಾಂಡ್ ಸೆಂಟರ್ ಇರುವ ಬಗ್ಗೆ ಮಾಹಿತಿ ಕಲೆಹಾಕಿರುವ ಇಸ್ರೇಲ್ ಸೇನೆ ಈ ವೈಮಾನಿಕ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಮಕ್ಕಳು ಸೇರಿದಂತೆ 13 ಪ್ಯಾಲೆಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಈ ನಡುವೆ, ಗಾಜಾವನ್ನು ವಶಪಡಿಸಿಕೊಳ್ಳುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತೊಮ್ಮೆ ಹೇಳಿದ್ದಾರೆ.
ಬ್ರಿಟಿಷರ ಕಾನೂನಿಗೆ ಭಾರತೀಯತೆಯ ಸ್ಪರ್ಶ; ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬದಲಾಯಿಸಲು 3 ಹೊಸ ಕಾನೂನು ಜಾರಿ; ಅಮಿತ್ ಶಾ ಘೋಷಣೆ
ನವದೆಹಲಿ: ಸಮಾಜದ ಸುರಕ್ಷೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪೊಲೀಸರನ್ನು ಗೌರವಿಸಿದ ಸುಸಂದರ್ಭ. ದೇಶಾದ್ಯಂತ ಶನಿವಾರ ‘ಪೊಲೀಸ್ ಸಂಸ್ಮರಣಾ’ ದಿನವನ್ನು ಗೌರವ ಭಕ್ತಿಯಿಂದ ಆಚರಿಸಲಾಯಿತು. ನಾಡು ರಕ್ಷಿಸುವ ಪೊಲೀಸರ ಅಬ್ಯುದಯ ಸಂಬಂಧ ಹಲವಾರು ಕಾರ್ಯಕ್ರಮಗಳನ್ನೂ ಸರ್ಕಾರ ಘೋಷಿಸುವ ಮೂಲಕ ‘ಪೊಲೀಸ್ ಸಂಸ್ಮರಣಾ’ ದಿವನ್ನು ಅರ್ಥಪೂರ್ಣಗೊಳಿಸಿತು. ರಾಷ್ಟ್ರ ರಾಜಧಾನಿ ದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ‘ಪೊಲೀಸ್ ಸಂಸ್ಮರಣಾ’ ದಿನದಂದು ಹುತಾತ್ಮ ಪೊಲೀಸ್ ರಿಗೆ ಗೌರವ ಸಲ್ಲಿಸಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ, ಕೇಂದ್ರ ಗೃಹ ಕಾರ್ಯದರ್ಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಾತಂತ್ರ್ಯದ ನಂತರ ದೇಶದ ಆಂತರಿಕ ಭದ್ರತೆ ಮತ್ತು ಅದರ ಗಡಿಗಳ ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ 36,250…
ರೌಡಿ ಶೀಟರ್ ಬರ್ಬರ ಹತ್ಯೆ; ಬೆಚ್ಚಿ ಬಿದ್ದ ಕಲ್ಪತರು ನಾಡು
ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಹಂತಕಪಡೆ ಅಟ್ಟಹಾಸ ಮೆರೆದಿದೆ. ತುಮಕೂರು ನಗರದ ಬಂಡಿಮನೆ ಚೌಟ್ರಿ ಬಳಿ ಕುಖ್ಯಾತ ರೌಡಿಶೀಟರ್ ಮಾರುತಿ ಅಲಿಯಾಸ್ ಪೊಲಾರ್ಡ್ (34) ಹತ್ಯೆ ನಡೆದಿದೆ. ಹಟ್ಟಿ ಮಂಜ ಕೊಲೆ ಪ್ರಕರಣ ಸೇರಿದಂತೆ ಹಲವು ಕೇಸ್ಗಳಲ್ಲಿ ಕೊಡಿಗೇನಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಮಾರುತಿ ಭಾಗಿಯಾಗಿದ್ದ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಎಎಸ್ಪಿ ಮರಿಯಪ್ಪ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶನಿವಾರ ರಾತ್ರಿ ಸ್ನೇಹಿತರ ಗ್ಯಾಂಗ್ ಜೊತೆ ಮಂಜ ಕುಡಿದು ಗಲಾಟೆ ಮಾಡಿದ್ದ ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲೇ ಈತ ಕೊಲೆಯಾಗಿದ್ದು ಪರಿಚಿತರಿಂದಲೇ ಈತ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
‘ಟಗರು ಪಲ್ಯ’ ಬಗ್ಗೆ ಕುತೂಹಲ
‘ಘೋಸ್ಟ್’ ನಿರ್ದೇಶಕ ಶ್ರೀನಿಯ ಸಾಲು ಸಾಲು ಪ್ರಶ್ನೆ; ಉತ್ತರ ‘ಘೋಸ್ಟ್ 2’ನಲ್ಲಿ
‘ಘೋಸ್ಟ್’ ನಿರ್ದೇಶಕ ಶ್ರೀನಿ ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ‘ಘೋಸ್ಟ್’ ಬಗ್ಗೆ ಮೆಚ್ಚುಗೆ ವ್ಯಕ್ತಗಿದ್ದರಿಂದ ಇದೀಗ ಮತ್ತೊಂದು ಹಿಟ್ ಸಿನಿಮಾ ನೀಡಲು ಮುಂದಾಗಿರುವ ಶ್ರೀನಿ ‘ಘೋಸ್ಟ್ 2’ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶ್ರೀನಿ ‘ಘೋಸ್ಟ್ 2.0’ ಬರಲಿದೆ ಎಂದಿದ್ದಾರೆ. ‘ದಳವಾಯಿ ಬದುಕಿದ್ದಾನ ? Underpass ಒಲ್ಗಡೆ cars, bikes ಹೆಂಗ್ ಬಂತು? Shivanna statue ಒಳಗಡೆ ಹೆಂಗ್ ಹೋದ್ರು? Boats operate ಮಾಡ್ತಿದ್ದೋರು ಯಾರು? ದಳವಾಯಿ ಮಗ ಯಾರು ?’ ಎಂಬ ಸಾಲು ಸಾಲು ಪ್ರಶ್ನೆಗಳನ್ನು ಬರೆದಿರುವ ಶ್ರೀನಿ ‘All questions will be answered in GHOST 2.0’ ಎಂದು ಪೋಸ್ಟ್ ಹಾಕಿದ್ದಾರೆ. ದಳವಾಯಿ ಬದುಕಿದ್ದಾನ ? Underpass ಒಲ್ಗಡೆ cars, bikes ಹೆಂಗ್ ಬಂತು ?Shivanna statue ಒಳಗಡೆ ಹೆಂಗ್ ಹೋದ್ರು ? Boats operate ಮಾಡ್ತಿದ್ದೋರು ಯಾರು ?ದಳವಾಯಿ…
