ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ನಂತರ ಕಾಂಗ್ರೆಸ್ ಪಕ್ಷ ಸೇರುವವರ ಸಂಖ್ಯೆ ಬೆಳೆಯುತ್ತಲೇ ಇದೆ ಎಂದಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಬಿಜೆಪಿ ತೊರೆದು ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವವರ ದೊಡ್ಡ ಪಟ್ಟಿ ಇದೆ. ಅದನ್ನು ಈಗ ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ, ಶ್ರೀನಿವಾಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಇಂದು ಪೂರ್ಣಿಮಾ ಶ್ರೀನಿವಾಸ್ ಅವರ ಜೊತೆ ಕಾರ್ಪೊರೇಟರ್ ನರಸಿಂಹ ನಾಯಕ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವವರ ದೊಡ್ಡ ಪಟ್ಟಿ ಇದೆ. ಅದನ್ನು ಈಗ ಬಹಿರಂಗಪಡಿಸುವುದಿಲ್ಲ. ಒಬ್ಬೊಬ್ಬರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಈ ಪ್ರಕ್ರಿಯೆ ಇಲ್ಲಿಗೆ ನಿಲ್ಲಬಾರದು. ಪ್ರತಿ ಬೂತ್ ಹಾಗೂ ಹಳ್ಳಿಗಳಲ್ಲಿ ಇದೇ ರೀತಿ ಕಾರ್ಯಕ್ರಮಗಳನ್ನು ಮಾಡಿ ಅಲ್ಲಿನ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದರು. ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ…

ಕಾಂಗ್ರೆಸ್ ಸೇರುವ ಮೂಲಕ ಹೊಸ ರಾಜಕೀಯ ಮನ್ವಂತರ; ಪೂರ್ಣಿಮಾ ಶ್ರೀನಿವಾಸ್: 

ಬೆಂಗಳೂರು: ಕಾಂಗ್ರೆಸ್ ಸೇರುವ ಮೂಲಕ ಹೊಸ ರಾಜಕೀಯ ಮನ್ವಂತರ ಆರಂಭವಾಗಿದೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬವನ್ನು ಎ.ಕೃಷ್ಣಪ್ಪ ಅವರ ಕುಟುಂಬ ಎಂದು ಗುರುತಿಸುತ್ತಾರೆ. ನನ್ನನ್ನು ಕಾಂಗ್ರೆಸ್ ಕೃಷ್ಣಪ್ಪ ಅವರ ಮಗಳು ಎಂದು ಗುರುತಿಸುತ್ತಾರೆ. ಎಲ್ಲರ ಅಪೇಕ್ಷೆ ಮೇರೆಗೆ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದರು. ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar, ಸಿಎಂ @siddaramaiah ಅವರ ಸಮ್ಮುಖದಲ್ಲಿ ಬಿಜೆಪಿ ಮುಖಂಡರಾದ ಪೂರ್ಣಿಮಾ ಶ್ರೀನಿವಾಸ್, ಶ್ರೀನಿವಾಸ್, ನರಸಿಂಹ ನಾಯಕ್ ಅವರು ತಮ್ಮ ಅಪಾರ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ @SaleemAhmadINC, @ChandrappaBn, ಮಾಜಿ ಸಿಎಂ @moilyv,… pic.twitter.com/r0q6pfoSus — Karnataka Congress (@INCKarnataka) October 20, 2023 ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಸೇರ್ಪಡೆಯಿಂದ ಪಕ್ಷಕ್ಕೂ…

ಕಾಂಗ್ರೆಸ್ ಸೇರಿದ ನಾಯಕರಿಗೆ ರಾಜಕೀಯವಾಗಿ ಅನ್ಯಾಯವಾಗಲು ಬಿಡಲ್ಲ; ಸಿಎಂ 

ಬೆಂಗಳೂರು: ಕಾಂಗ್ರೆಸ್ ಸೇರಿದ ನಾಯಕರಿಗೆ ರಾಜಕೀಯವಾಗಿ ಅನ್ಯಾವಾಗಲು ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಮತ್ತು ಶ್ರೀನಿವಾಸ್ ಸಹಿತ ಪ್ರಮುಖ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೂರ್ಣಿಮಾ ಮತ್ತು ಶ್ರೀನಿವಾಸ್ ಸಾಮಾಜಿಕ ನ್ಯಾಯದ ಪರವಾಗಿರುವವರು. ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿದ್ದರು. ಈಗ ಕಾಂಗ್ರೆಸ್ ಗೆ ಬಂದಿದ್ದಾರೆ. ಇವರಿಗೆ ರಾಜಕೀಯವಾಗಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಪರವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ನಮ್ಮ ಕಾಂಗ್ರೆಸ್ . ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿ ಎ.ಕೃಷ್ಣಪ್ಪ, ಪೂರ್ಣಿಮಾ ಮತ್ತು ಶ್ರೀನಿವಾಸ್ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಬಿಜೆಪಿ ಜಾತಿ ತಾರತಮ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಎಲ್ಲಾ ಜಾತಿಯ ಬಡವರು ಮತ್ತು ಶೂದ್ರ ಸಮುದಾಯದವರು ಇದನ್ನು ಸರಿಯಾಗಿ…

ದೊಡ್ಡಬಳ್ಳಾಪುರ: ಮಹಿಷ ಉತ್ಸವ ಆಚರಣೆಗೆ ತಯಾರಿ 

ದೊಡ್ಡಬಳ್ಳಾಪುರ; ಅಕ್ಟೋಬರ್ 22ರಂದು ನಗರದಲ್ಲಿ ಮಹಿಷ ಉತ್ಸವ ಆಚರಣೆ ಮಾಡಲಾಗುವುದು ಎಂದು ದಲಿತ ವಿಮೋಚನಾ ಸೇನೆಯ ರಾಜ್ಯಾಧ್ಯಕ್ಷ ಮಾ.ಮುನಿರಾಜು ಹೇಳಿದ್ದಾರೆ. ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲ್ಲೂಕು ಮಹಿಷ ಉತ್ಸವ ಆಚರಣ ಸಮಿತಿ ವತಿಯಿಂದ ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಕನ್ನಡ ಜಾಗೃತ ಭವನದಲ್ಲಿ ದ್ರಾವಿಡ ಸಂಸ್ಕೃತಿಯ ಮಹರಾಜ ಮಹಾದೇವ ಹರಹಂತ‌ ಮಹಿಷ ಉತ್ಸವವನ್ನ ಏರ್ಪಡಿಸಲಾಗಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಚಾರವಾದಿಗಳು, ಇತಿಹಾಸತಜ್ಞರು, ಪ್ರಗತಿಪರ ಚಿಂತಕರಾದ ಕಲಬುರುಗಿಯ ಪ್ರೊ ವಿಠಲ್ ವಗ್ಗನ್ ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು. ಇತಿಹಾಸದಲ್ಲಿ ಹುದುಗಿ ಹೋಗಿರುವ ಶೂದ್ರ ಹಾಗೂ ಮೂಲನಿವಾಸಿಗಳ ಸಂಸ್ಕೃತಿಯನ್ನು ಮುನ್ನೆಲೆಗೆ ತಂದು ದ್ರಾವಿಡ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು. ಆಯಾ ಜಾತಿ ಜನಾಂಗಗಳ ಸಾಂಸ್ಕೃತಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ. ನಾವು ಯಾರ ವಿರುದ್ಧವೂ ಈ ಆಚರಣೆಯನ್ನು ಮಾಡುತ್ತಿಲ್ಲ,…

ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಲ್ಲಿ ಕರೆಂಟ್ ನೀಡಿ; ರೈತರ ಮೊರೆ

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಕೇಂದ್ರದ ರೈತರು ತಮ್ಮ ನೀರಾವರಿ ಬೆಳೆಗೆ ರಾತ್ರಿ ವೇಳೆಯಲ್ಲಿ ಕರೆಂಟ್ ನೀಡುತ್ತಿರುವದರ ವಿರುದ್ಧ ಬೇಸತ್ತು ಹಗಲಿನಲ್ಲಿ ಕರೆಂಟ್ ನೀಡಲು ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ರೈತರ ಪಂಪ್ಸೆಟ್ ಗಳಿಗೆ ತಡೆರಹಿತವಾಗಿ 5 ಗಂಟೆಗಳ ಕಾಲ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ ರಾತ್ರಿಯ ಸಮಯದಲ್ಲಿ ಬೆಳೆಗಳಿಗೆ ನೀರು ಬಿಡಲು ಆಗುತ್ತಿಲ್ಲ, ಮತ್ತು ಇತ್ತೀಚೆಗೆ ಚಿರತೆಗಳ ಕಾಟ ಹೆಚ್ಚಾಗುತ್ತಿರುವುದರಿಂದ ತೋಟಗಳ ಕಡೆ ಹೋಗಲು ಭಯಭೀತರಾಗಿದ್ದೇವೆ ಎಂದು ರೈತರು ಅಧಿಕಾರಿಗಳ ಗಮನಸೆಳೆದಿದ್ದಾರೆ. ಹಗಲಿನಲ್ಲಿ 5 ಗಂಟೆ ನಿರಂತರ ಕರೆಂಟ್ ನೀಡಲು ಸಾಧ್ಯವಾಗದಿದ್ದರೆ, 5 ಗಂಟೆಗಳ ಕಾಲ ಕೊಡುತ್ತಿರುವ ವಿದ್ಯುತ್ತನ್ನು ಬೆಳಗ್ಗೆ 3:00 ಗಂಟೆ ಕಾಲ ರಾತ್ರಿ 2 ಗಂಟೆಗಳ ಕಾಲ ರಾತ್ರಿ ಕೊಡುವಂತೆ ಮತ್ತೆ 6:00 ಗಂಟೆ ಕೊಡುವ ಸಿಂಗಲ್ ಕರೆಂಟ್ ಕೊಡುವುದು ತೆಗೆಯುವುದು ಮಾಡುತ್ತಿದ್ದೀರಾ ಸಿಂಗಲ್ ಕರೆಂಟ್ ಅನ್ನು ನಿರಂತರವಾಗಿ ಕೊಡಬೇಕು…

ಅಂದು ಈಶ್ವರಪ್ಪ ತಲೆದಂಡಕ್ಕೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ! ಈಗ ಶರಣ ಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುತ್ತಾರ?

ಬೆಂಗಳೂರು: ಕಲಬುರಗಿ ಜಿಲ್ಲೆ ಶಿರೋಳ್ಳಿ ಗ್ರಾಮದಲ್ಲಿನ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿವ ಶರಣ್ ಪ್ರಕಾಶ್ ಪಾಟೀಲ್ ಮೇಲಿನ ಆರೋಪವು ಸಿಎಂ ಸಿದ್ದರಾಮಯ್ಯ ಅವರಿಗೂ ಸವಾಲೆಂಬಂತಾಗಿದೆ. ತನ್ನ ಸಾವಿಗೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕಾರಣ ಎಂಬ ಶಿವಕುಮಾರ್ ಆಡಿಯೋ ವೈರಲ್ ಆಗಿದ್ದು, ತಮ್ಮ ಪಕ್ಷದ ಕಾರ್ಯಕರ್ತನ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರೂ ರೊಚ್ಚಿಗೆದ್ದಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರನೊಬ್ಬ ಡೆತ್ ನೋಟ್‌ನಲ್ಲಿ ಈಶ್ವರಪ್ಪ ಹೆಸರು ಉಲ್ಲೇಖಿಸಿದ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದ ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆಗೆ ಪಟ್ಟುಹಿಡಿದಿದ್ದರು. ಒತ್ತಡಕ್ಕೆ ಮಣಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪರ ರಾಜೀನಾಮೆ ಪಡೆದಿದ್ದರು. ಇದೀಗ ಅದೇ ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ದವೂ ಆರೋಪ ಕೇಳಿಬಂದಿದೆ. ಅದರಲ್ಲೂ ಸಾವಿಗೆ ಶರಣಾಗುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನದೇ ಧ್ವನಿಯಲ್ಲಿ ಸಚಿವರ ವಿರುದ್ದ…

ಸಮರ ಸಂತ್ರಸ್ತ ಪ್ಯಾಲೆಸ್ಟೈನ್‌ಗೆ ಅಮೇರಿಕಾ ನೆರವು, ಹಮಾಸ್‌ ವಿಧ್ವಂಸಗಳ ಬಗ್ಗೆ ಆಕ್ರೋಶ

ನ್ಯೂಯಾರ್ಕ್: ಸಮರ ಸಂತ್ರಸ್ಥ ಪ್ಯಾಲೆಸ್ಟೈನ್‌ಗೆ ನೆರವು ಘೋಷಿಸಿರುವ ಅಮೇರಿಕಾ ಅಧ್ಯಕ್ಷ ಜೋ ಬೈಡನ್, ಹಮಾಸ್‌ನ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ಟೆಲ್ ಅವಿವ್‌ಗೆ ಭೇಟಿ ನೀಡಿದ ಬಳಿಕ ಅಮೆರಿಕಾಗೆ ಹಿಂದಿರುಗುವಾಗ ಬುಧವಾರ ಏರ್-ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋ ಬೈಡನ್ ಅವರು ಈಜಿಪ್ಟ್‌ನಿಂದ 20 ಟ್ರಕ್‌ಗಳ ಸಹಾಯವನ್ನು ಗಾಜಾದಲ್ಲಿ ಮುತ್ತಿಗೆ ಹಾಕಿದ ಎನ್‌ಕ್ಲೇವ್‌ಗೆ ಅನುಮತಿಸಲಾಗುವುದು, ಒಮ್ಮೆ ರಸ್ತೆಯ ಉದ್ದಕ್ಕೂ ಗುಂಡಿಗಳು ಮತ್ತು ಇಸ್ರೇಲಿ ವೈಮಾನಿಕ ದಾಳಿಯಿಂದ ಹಾನಿಯನ್ನು ಸರಿಪಡಿಸಲಾಗುತ್ತದೆ ಎಂದರು.

ಪಂಚರಾಜ್ಯ ಸಮರ; ಮಧ್ಯಪ್ರದೇಶ ಕಾಂಗ್ರೆಸ್ ಹುರಿಯಾಳುಗಳ 2ನೇ ಪಟ್ಟಿ ಪ್ರಕಟ

ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಶುರುವಾಗಿದೆ. ಇದೇ ವೇಳೆ ಮಧ್ಯಪ್ರದೇಶ ವಿಧಾನಸಭಾ ಕ್ಷೇತ್ರಗಳ ಪೈಕಿ 88 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ 88 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಹಿಂದಿನ ಪಟ್ಟಿಯಿಂದ ಮೂವರು ಅಭ್ಯರ್ಥಿಗಳನ್ನು ಸಹ ಬದಲಾಯಿಸಲಾಗಿದೆ. ಮೊರೆನಾ ವಿಧಾನಸಭಾ ಕ್ಷೇತ್ರದಿಂದ ದಿನೇಶ್ ಗುರ್ಜರ್, ದಿಮಾನಿಯಿಂದ ರವೀಂದ್ರ ಸಿಂಗ್ ತೋಮರ್, ಗ್ವಾಲಿಯರ್‌ನಿಂದ ಸುನೀಲ್ ಶರ್ಮಾ, ಗುಣಾ (ಎಸ್‌ಸಿ) ಕ್ಷೇತ್ರದಿಂದ ಪಂಕಜ್ ಲನೇರಿಯಾ ಅವರನ್ನು ಪಕ್ಷ ಕಣಕ್ಕಿಳಿಸಿದೆ. ದಾತಿಯಾದಿಂದ ಅವಧೇಶ್ ನಾಯಕ್ ಬದಲಿಗೆ ರಾಜೇಂದ್ರ ಭಾರತಿ, ಪಿಚೋರ್‌ನಿಂದ ಶೈಲೇಂದ್ರ ಸಿಂಗ್ ಬದಲಿಗೆ ಅರವಿಂದ್ ಸಿಂಗ್ ಲೋಧಿ, ಗೋಟೆಗಾಂವ್ ಎಸ್‌ಸಿ ಸ್ಥಾನದಿಂದ ಶೇಖರ್ ಚೌಧರಿ ಬದಲಿಗೆ ನಾರದ ಪ್ರಸಾದ್ ಪ್ರಜಾಪತಿ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಿದೆ. 230 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಭಾನುವಾರ 144…

ಬಿಜೆಪಿ ಕಾರ್ಯಕರ್ತನ ಸಾವಿನ ಪ್ರತಿಧ್ವನಿ; ಸಚಿವ ಶರಣಪ್ರಕಾಶ್ ಪಾಟೀಲ್ ರಾಜೀನಾಮೆಗೆ ಹೆಚ್ಚಿದ ಒತ್ತಡ

ಬೆಂಗಳೂರು: ಕಲಬುರಗಿಯಲ್ಲಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಕಿರುಕುಳದಿಂದ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ಸಮೀಪದ ಶಿರೋಳ್ಳಿಯ  ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಎಂಬವರು ಸಾವಿಗೆ ಮುನ್ನ ಮಾಡಿದ್ದಾರೆನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಕಿರುಕುಳವೇ ಸಾವಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ. ಈ ಆಡಿಯೊವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಚಿವರ ರಾಜೀನಾಮೆಗೆ ಆಗ್ರಹಿಸಿದೆ. ಕಲ್ಬುರ್ಗಿಯಲ್ಲಿ ಸಚಿವ @S_PrakashPatil ಅವರಿಂದ ಇನ್ನಿಲ್ಲದ ಕಿರುಕುಳಕ್ಕೊಳಗಾಗಿದ್ದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಅವರು ಇಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಶಿವಕುಮಾರ್ ಅವರ ಸಾವಿಗೆ ನೇರ ಹೊಣೆ ಸಚಿವ ಶರಣ ಪ್ರಕಾಶ್ ಪಾಟೀಲ್. ಸಿಎಂ @siddaramaiah ಅವರು, ಕೂಡಲೇ ಸಚಿವ ಶರಣ ಪ್ರಕಾಶ್ ಪಾಟೀಲ್‌ರನ್ನು ಸಂಪುಟದಿಂದ ಕೈ… pic.twitter.com/kNgjGvJquI — BJP…

ದಸರಾ ವಿಶೇಷ ಬಸ್ ಸವಾರಿ.‌. KSRTC ಪ್ರಯಾಣಿಕರ ರಥಗಳಿಗೆ ಪೂಜೆ

ಬೆಂಗಳೂರು: ನಾಡಿನೆಲ್ಲೆಡೆ ದಸರಾ ಸಡಗರ ಆವರಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಾಳಯದಲ್ಲೂ ಸಂಭ್ರಮ ಮನೆ ಮಾಡಿದೆ. ಆದರೆ ಇದು ಪೂಜಾ ಕೈಂಕರ್ಯದ ಸಡಗರವಲ್ಲ, ಸೇವಾ ತಯಾರಿಯ ಸಡಗರ. ನಾಡಹಬ್ಬ ದಸರಾ ಪ್ರಯುಕ್ತ ನಾಡಿನ ಜನತೆಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಎಲ್ಲಾ ವಿಭಾಗಗಳಲ್ಲಿ ದಸರಾ ವಿಶೇಷ ಕಾರ್ಯಾಚರಣೆಗೆ‌ ವಿದ್ಯುಕ್ತವಾಗಿ‌ ಬಸ್ಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ಅಲಂಕೃತ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಮೂಲಕ ದಸರಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು‌. ಚಾಲಕ‌ ನಿರ್ವಾಹಕರಿಗೆ ಸಿಹಿ ಹಂಚಿ ಶುಭ ಕೋರಲಾಯಿತು. ಈ‌‌‌ ಸಂದರ್ಭದಲ್ಲಿ ಕೇಂದ್ರ‌ ಕಚೇರಿಯ ಹಿರಿಯ ಅಧಿಕಾರಿಗಳು, ಕೇಂದ್ರೀಯ ವಿಭಾಗದ ಅಧಿಕಾರಿಗಳು, ಕೆಂಪೇಗೌಡ ಬಸ್ ನಿಲ್ದಾಣದ‌ ಅಧಿಕಾರಿಗಳು…