ಕಾರ್ಕಳ ‘ಪರಶುರಾಮ ಥೀಮ್ ಪಾರ್ಕ್’ ಬಗ್ಗೆ ಶಾಸಕ ಸುನಿಲ್ ಕುಮಾರ್ ಹೇಳಿದ್ದು ಹೀಗೆ

ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಕಾಂಗ್ರೆಸ್ ಹಬ್ಬಿಸಿದ್ದ ಸುಳ್ಳಿನ ಕತೆಯನ್ನು, ಅಸಲಿ ಸತ್ಯಾಂಶಗಳ ಮೂಲಕ ಬೆತ್ತಲುಗೊಳಿಸಿದ ಮಾಜಿ ಸಚಿವರಾದ ಶ್ರೀ @karkalasunil pic.twitter.com/zFYqOdTBFM — BJP Karnataka (@BJP4Karnataka) October 21, 2023

ಉನ್ನತ ಶಿಕ್ಷಣ ಇಲಾಖೆಯಲ್ಲಿ ಬೋಧಕ ಹುದ್ದೆಗಳ ಭರ್ತಿಗೆ ಸಿಎಂ ಸೂಚನೆ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಬ್ಯಾಕ್‌ಲಾಗ್ ಹುದ್ದೆಗಳನ್ನು ಆದ್ಯತೆಯ ಮೇಲೆ ಭರ್ತಿ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಿದ ನಂತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಕಾರ್ಯಕ್ರಮಗಳ ಕ್ಯಾಲೆಂಡರ್ ರೂಪಿಸುವ ಚಿಂತನೆ ಇದೆ. ಇದರಿಂದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಬೇರೆ ಬೇರೆ ಅವಧಿಯ ವ್ಯತ್ಯಾಸಗಳಿಗೆ ಕಡಿವಾಣ ಬೀಳಬಹುದು. ಹಾಗಾಗಿ ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಪ್ರಯತ್ನ ನಡೆಸುವಂತೆಯೂ ಅಧಿಕಾರಿಗಳಿಗೆ ಎಂದು ಸಿಎಂ ತಿಳಿಸಿದರು.

ಮಂಗಳೂರು ಶಾರದೋತ್ಸವ ಶತಮಾನೋತ್ಸವ.. ಕಣ್ಮನ ಸೆಳೆದ ವಿಗ್ರಹ

ಮಂಗಳೂರು : ಬಂದರು ನಗರಿಯಲ್ಲಿ ನವರಾತ್ರಿ ಉತ್ಸವದ ರಂಗು ಆವರಿಸಿದೆ. ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ, ಆಚಾರ್ಯ ಮಠ ವಠಾರದಲ್ಲಿ ಪೂಜಿಸಲ್ಪಡುವ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ 101ನೇ ವರ್ಷದ ಮಂಗಳೂರು ಶಾರದಾ ಮಹೋತ್ಸವ ಪ್ರಯುಕ್ತ ಗಮನಸೆಳೆದಿದೆ. ಶ್ರೀ ಗೋಕರ್ಣ ಪರ್ತಗಾಳಿ ಮಠದ ಮಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಭೇಟಿನೀಡಿದ್ದು ಶಾರದಾ ಮಾತೆಗೆ ಪೂಜೆ ಸಲ್ಲಿಸಿ ನೆರೆದ ಭಜಕರಿಗೆ ಆಶೀರ್ವದಿಸಿದರು. ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಬಳಿಕ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ಗೊಂಡ ಸ್ಥಳಕ್ಕೆ ಶ್ರೀಗಳವರು ಆಗಮಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಡಾ . ಉಮಾನಂದ ಮಲ್ಯ, ದೇವಳದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ ಹಾಗೂ ಸಹಸ್ರಾರು ಭಜಕರು ಉಪಸ್ಥಿತರಿದ್ದರು.

KSRTC ಚಾಲನಾ ಸಿಬ್ಬಂದಿ ನೇಮಕಾತಿಗೆ ಗ್ರೀನ್ ಸಿಗ್ನಲ್; 

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ಜಾರಿ ನಂತರ KSRTC ಬಲವೂ ಹೆಚ್ಚಿದೆ. ಸಂಸ್ಥೆಯ ಆದಾಯವೂ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೆಚ್ಚುವರಿ ಬಸ್ ಸೇರ್ಪಡೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ತಡ, ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿ ನೇಮಕಾತಿಗೂ ಹಸಿರು ನಿಶಾನೆ ಸಿಕ್ಕಿದೆ. ಸಾರಿಗೆ ಸಂಸ್ಥೆಗಳಲ್ಲಿ‌ ಕಳೆದ 8 ವರ್ಷಗಳಿಂದ ಅಂದರೆ 2016 ರಲ್ಲಿನ ನೇಮಕಾತಿ ನಂತರ ಯಾವುದೇ ನೇಮಕಾತಿ ಆಗಿರಲಿಲ್ಲ. ಈ ಸಂಬಂಧ 4 ಸಾರಿಗೆ ಸಂಸ್ಥೆಗಳಲ್ಲಿ 2016ರಿಂದ ಇಲ್ಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13669 ಖಾಲಿ ಹುದ್ದೆಗಳಿದ್ದವು. ಈ ಬಗ್ಗೆ 13,000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ 6500 ಚಾಲನಾ ಸಿಬ್ಬಂದಿ ಹಾಗೂ 300 ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಸರ್ಕಾರದಿಂದ…

ಮಾನವಸಹಿತ ಗಗನಯಾನ​ದ ಮೊದಲ ಹಾರಾಟ ಪರೀಕ್ಷೆ ಯಶಸ್ವಿ; ಇಸ್ರೋ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ಶ್ರೀಹರಿಕೋಟ: ಮಾನವಸಹಿತ ಗಗನಯಾನ​ದಲ್ಲೂ ಭಾರತ ಯಶೋಗಾಥೆಗೆ ಮುನ್ನುಡಿ ಬರೆದಿದೆ. ಮಾನವಸಹಿತ ಗಗನಯಾನ​ದ ಮೊದಲ ಹಾರಾಟ ಪರೀಕ್ಷೆ ಯಶಸ್ವಿಯಾಗಿದ್ದು ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ. After the successful launch of the Chandrayaan-3, our nation is ready to take its next giant stride in the realm of space. Today the @isro launched #Gaganyaan's TV-D1 Test Flight into space scripting another remarkable space odyssey. My heartfelt congratulations to our… pic.twitter.com/X2rfHWX9t8 — Amit Shah (Modi Ka Parivar) (@AmitShah) October 21, 2023 ಇಂದು ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ…

ರಸ್ತೆ, ಚರಂಡಿ, ಕಸ ಸಮಸ್ಯೆಗೆ ಸಿಗದ ಮುಕ್ತಿ; ಅಧಿಕಾರಿಗಳೊಂದಿಗೆ ಸಾರ್ವಜನಿಕರ ವಾಗ್ವಾದ.. ‘ಕೈ’ ಸದಸ್ಯರಿಂದ ಬಹಿಷ್ಕಾರ

ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳ ಅಗಲೀಕರಣ, ಕಸದ ಸಮಸ್ಯೆ, ರಸ್ತೆಗಳಲ್ಲಿನ ಗುಂಡಿ, ಒಳಚರಂಡಿ, ಖಾತೆಗಳ ಸಮಸ್ಯೆಗಳಿಗೆ ಶೀಘ್ರವಾಗಿ ಮುಕ್ತಿ ನೀಡಿ ಎಂದು ಶಾಸಕ ಧೀರಜ್ ಮುನಿರಾಜುಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರಸಭೆ ಆವರಣದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು ನಗರದಲ್ಲಿನ ರಸ್ತೆಗಳು ಅಭಿವೃದ್ಧಿಯಾಗದೆ, ಗುಂಡಿಗಳೆ ತುಂಬಿವೆ. ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಕಳೆದ 50 ವರ್ಷಗಳಿಂದ ಇದ್ದ ರಸ್ತೆಗಳೇ ಇಂದು ಇವೆ. ನಗರಕ್ಕೆ ತಕ್ಕಂತೆ ಒಂದೇ ಒಂದು ರಸ್ತೆಗಳು ಅಗಲೀಕರಣ ಆಗಿಲ್ಲ. ಪ್ರಮುಖ ವಾರ್ಡ್ ಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಬೀದಿ ದೀಪಗಳು ಇಲ್ಲವಾಗಿದೆ. ಒಂದನೇ ವಾರ್ಡ್ ರಾಜೀವ್ ಗಾಂಧಿ ಕಾಲೋನಿ ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದಾಗಿದೆ ಎಂದು ಅಳಲು ತೋಡಿಕೊಂಡರು. ರೆವೆನ್ಯೂ ಸೈಟ್ ಗಳಿಗೆ ನಗರಸಭೆಯಿಂದ ಖಾತೆ ನೀಡಲು ಬರುವುದಿಲ್ಲ. ಖಾತೆ ಇಲ್ಲದ ಸೈಟ್ ಗಳಲ್ಲಿ ಮನೆಗಳ…

ಒಕ್ಕಲಿಗರ ಬಗ್ಗೆ ಅವಹೇಳನ ಆರೋಪ; ಸಾಹಿತಿ ಪ್ರೊ.ಭಗವಾನ್ ವಿರುದ್ಧ ಕೇಸ್

ಮೈಸೂರು: ಒಕ್ಕಲಿಗರ ಬಗ್ಗೆ ಸಾಹಿತಿ ಪ್ರೊ.ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪ ಕುರಿತಂತೆ ಮೈಸೂರಿನಲ್ಲಿ ಪ್ರಕರಣ ದಾಖಲಾಗಿದೆ. ಒಕ್ಕಲಿಗರ ಬಗ್ಗೆ ಸಾಹಿತಿ ಪ್ರೊ.ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪ ಕುರಿತಂತೆ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಗಂಗಾಧರ್ ಅವರು ನೀಡಿದ ದೂರಿನ ಆಧಾರದಲ್ಲಿ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ

ಪಂಚರಾಜ್ಯ ಸಮರ; ಗೆಲ್ಲುವ ಕುದುರೆಗಳ ಹುಡುಕಾಟದಲ್ಲಿ ಬಿಜೆಪಿ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಭಾರತೀಯ ಜನತಾ ಪಕ್ಷ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಕಸರತ್ತು ನಡೆಸಿದೆ. ಮಧ್ಯಪ್ರದೇಶ ವಿಧಾನಸಭಾ ಅಖಾಡಕ್ಕೆ 92 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ. ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ವಾರಾಂತ್ಯದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಮಧ್ಯಪ್ರದೇಶದ 94 ವಿಧಾನಸಭಾ ಸ್ಥಾನಗಳಿಗೆ ಈಗಾಗಲೇ 92 ಹೆಸರುಗಳು ಅಂತಿಮಗೊಂಡಿದೆ. ಎಲ್ಲವೂ ಸರಿಯಾಗಿ ನಡೆದರೆ, ಈ ಅಭ್ಯರ್ಥಿಗಳನ್ನು ಮಧ್ಯಪ್ರದೇಶದ ಐದನೇ ಪಟ್ಟಿಯಲ್ಲಿ ಪ್ರಕಟಿಸಲಾಗುವುದು. ನವೆಂಬರ್ 17 ರಂದು ನಡೆಯಲಿರುವ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ 136 ಹೆಸರುಗಳು ಸೇರಿದಂತೆ ನಾಲ್ಕು ಪಟ್ಟಿಗಳನ್ನು ಬಿಡುಗಡೆ ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜಸ್ಥಾನ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದಂತೆ, ಸಿಇಸಿ ಸಭೆಯಲ್ಲಿ 84ಕ್ಕೂ ಹೆಚ್ಚು ಸ್ಥಾನಗಳ ಬಗ್ಗೆ ಚರ್ಚೆಗಳು ನಡೆದವು, ಈ ಪೈಕಿ ಸರಿಸುಮಾರು 79 ಸ್ಥಾನಗಳಿಗೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ರಾಜಸ್ಥಾನಕ್ಕೆ ಬಿಜೆಪಿ…

ಪೊಲೀಸ್ ಸ್ಮರಣೋತ್ಸವ; ಪ್ರಧಾನಿಯಿಂದ ಗೌರವ

ನವದೆಹಲಿ: ಪೊಲೀಸ್ ಸ್ಮರಣೋತ್ಸವದ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್ ಸಿಬ್ಬಂದಿಯನ್ನು ಗೌರವಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು X ನಲ್ಲಿ ಪೋಸ್ಟ್ ಮಾಡಿ ಪೊಲೀಸರ ಕರ್ತವ್ಯವನ್ನು ಕೊಂಡಾಡಿದ್ದಾರೆ. “ಪೊಲೀಸ್ ಸ್ಮರಣಾರ್ಥ ದಿನದಂದು, ನಮ್ಮ ಪೊಲೀಸ್ ಸಿಬ್ಬಂದಿಯ ಅವಿರತ ಸಮರ್ಪಣೆಯನ್ನು ನಾವು ಶ್ಲಾಘಿಸುತ್ತೇವೆ. ಅವರು ಉತ್ತಮ ಬೆಂಬಲದ ಆಧಾರ ಸ್ತಂಭಗಳು, ಸವಾಲುಗಳ ಮೂಲಕ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತಾರೆ. ಸೇವೆಗೆ ಅವರ ಅಚಲವಾದ ಬದ್ಧತೆಯು ವೀರತೆಯ ನಿಜವಾದ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಅಂತಿಮ ತ್ಯಾಗ ಮಾಡಿದ ಎಲ್ಲಾ ಸಿಬ್ಬಂದಿಗೆ ಹೃತ್ಪೂರ್ವಕ ನಮನಗಳು” ಎಂದವರು ಹೇಳಿದ್ದಾರೆ. On Police Commemoration Day, we laud the relentless dedication of our police personnel. They are pillars of great support, guiding citizens through challenges and ensuring safety. Their…