ಧಾರವಾಡ: ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯ ಮತ್ತೆ ಹೋರಾಟದ ಅಖಾಡಕ್ಕೆ ಧುಮುಕಿದೆ. ಕೂಡಲಸಂಗಮ ಧರ್ಮ ಕ್ಷೇತ್ರದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲೇ ಈ ಹೋರಾಟ ಆರಂಭವಾಗಿದೆ. ಈ ಹಿಂದೆಯೇ ಘೋಷಿಸಿದಂತೆ ಅಕ್ಟೊಬರ್ 8 ರಿಂದ 13 ರ ವರೆಗೆ ಈ ಮೀಸಲಾತಿ ಹೋರಾಟ ಮುಂದುವರಿಯಲಿದ್ದು, ಚಳುವಳಿ ಧಾರವಾಡದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಹಂತಗಳಲ್ಲಿ ಸತ್ಯಾಗ್ರಹ ನಡೆಯಲಿದೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಪಂಚಮಸಾಲಿ – ಗೌಡ – ಮಲೆಗೌಡ – ದೀಕ್ಷೆ ಲಿಂಗಾಯತ ರುಗಳಿಗೆ 2A ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳನ್ನು OBC ಮೀಸಲಾತಿಗೆ ಕೂಡಲೇ ಶಿಫಾರಸ್ಸು ಮಾಡುವಂತೆ , ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಈ ಹೋರಾಟ ನಡೆಯಲಿದೆ. ಅಕ್ಟೋಬರ್ 13 ನೇ ಶುಕ್ರವಾರ 2023…
Year: 2023
ಅತ್ತಿಬೆಲೆ ಪಟಾಕಿ ದುರಂತ; ಪೊಲೀಸರಿಂದ ಗೋದಾಮು ಮಾಲೀಕರ ಪುತ್ರನ ವಶ
ಬೆಂಗಳೂರು ರಾಜಧಾನಿ ಹೊರವಲಯದ ಆನೇಕಲ್ ಸಮೀಪದ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದಅಗ್ನಿ ದುರಂತ ಭಾರೀ ಸಾವು ನೋವಿಗೆ ಕಾರಣವಾಗಿದೆ. ಶನಿವಾರ ಅಪರಾಹ್ನ 3.30ರ ಸುಮಾರಿಗೆ ಲಾರಿಯಿಂದ ಪಟಾಕಿ ಇಳಿಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. 11 people dead in a major fire incident at a cracker godown near Attibele, close to Tamil Nadu- Karnataka border. Fire doused, emergency services team continues serach at location for survivors/casualties. Hosur is a major firecracker hub attracting customers from #Bengaluru pic.twitter.com/m0AxYoAAVu — Harish Upadhya (@harishupadhya) October 7, 2023 ಮೃತಪಟ್ಟವರು ಕಾರ್ಮಿಕರಾಗಿದ್ದು ಬಹುತೇಕರು ಮಂದಿ ತಮಿಳುನಾಡಿನ ಶಿವಕಾಶಿ ಮೂಲದವರೆನ್ನಲಾಗಿದೆ. ಗೋದಾಮಿನ ನಿರ್ಲಕ್ಷ್ಯದಿಂದ ದುರಂತಕ್ಕೆ ಸಂಭವಿಸಿದೆ. ಅಗ್ನಿಶಾಮಕ ನಿಯಮ ಉಲ್ಲಂಘನೆಯು ಈ…
ಅತ್ತಿಬೆಲೆ ಪಟಾಕಿ ದುರಂತ; ಮೃತರ ಸಂಖ್ಯೆ 15ಕ್ಕೆ ಏರಿಕೆ
ಬೆಂಗಳೂರು ರಾಜಧಾನಿ ಹೊರವಲಯದ ಆನೇಕಲ್ ಸಮೀಪದ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಶನಿವಾರ ಅಪರಾಹ್ನ 3.30ರ ಸುಮಾರಿಗೆ ಲಾರಿಯಿಂದ ಪಟಾಕಿ ಇಳಿಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಮೃತಪಟ್ಟವರು ಕಾರ್ಮಿಕರಾಗಿದ್ದು ಬಹುತೇಕರು ಮಂದಿ ತಮಿಳುನಾಡಿನ ಶಿವಕಾಶಿ ಮೂಲದವರೆನ್ನಲಾಗಿದೆ. ಗೋದಾಮಿನ ನಿರ್ಲಕ್ಷ್ಯದಿಂದ ದುರಂತಕ್ಕೆ ಸಂಭವಿಸಿದೆ ಎನ್ನಲಾಗಿದ್ದು, ಅಗ್ನಿಶಾಮಕ ನಿಯಮ ಉಲ್ಲಂಘನೆಯು ಈ ಅನಾಹತಕ್ಕೆ ಕಾರಣ ಎನ್ನಲಾಗಿದೆ. ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲಿಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ದುರ್ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ. 11 people dead in a major fire incident at a cracker godown near Attibele,…
ಅಮಾನತು ಶಿಕ್ಷೆ ಇಲ್ಲ ಎಂದ KSRTC; ನೌಕರ ವೃಂದ ನಿರಾಳ
ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ಜಾರಿಯಾದ ನಂತರ KSRTC ಸಿಬ್ಬಂದಿ ವರ್ಗಕ್ಕೆ ಅಮಾನತು ಗುಮ್ಮ ಕಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ವಿಚಾರ ಎಂದಿದೆ ಕೆಎಸ್ಸಾರ್ಟಿಸಿ.. ಈ ಕುರಿತಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ KSRTC, ಕೆಲವೊಂದು ಮಾಧ್ಯಮಗಳಲ್ಲಿ – ಶಕ್ತಿ ಎಫೆಕ್ಟ್ – 300 ಕ್ಕೂ ಅಧಿಕ ನಿರ್ವಾಹಕರ ಅಮಾನತು ಎಂಬುದಾಗಿ ಸುದ್ದಿ ಪ್ರಸಾರವಾಗುತ್ತಿರುವುದು ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟಪಡಿಸಿದೆ. ಇಷ್ಟು ಪ್ರಮಾಣದಲ್ಲಿ ಅಮಾನತು ಮಾಡಿರುವ ಸುದ್ದಿ ನಿಜಕ್ಕೂ ಊಹಾಪೋಹದಿಂದ ಕೂಡಿದೆ , ನಿರ್ದಿಷ್ಟ ನಿಗಮ/ ವಿಭಾಗ/ ಘಟಕ ನಮೂದಿಸದೇ ಅಸ್ಪಷ್ಟತೆಯಿಂದ ಕೂಡಿರುವ ವರದಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.
ಬೆಂಗಳೂರು ವಿವಿ: ವಿಚಾರ ಸಂಕಿರಣ ಭವಿಷ್ಯದ ಜ್ಞಾನವೃದ್ಧಿಗೆ ಪೂರಕ: ಡಾ.ಎಂ.ಗೋವಿಂದರಾಜು ಅಭಿಮತ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಆಯೋಜಿಸಿದ್ಧ “ಬೌದ್ಧ ಧರ್ಮ ಮತ್ತು ಮಹಿಳಾ ಸಬಲೀಕರಣದ ಕುರಿತು ಬಾಬಾಸಾಹೇಬ್ ಅಂಬೇಡ್ಕರ್ ರವರ ತಾತ್ವಿಕ ಚಿಂತನೆಗಳು” ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಸ್ಟಡೀಸ್ ನ ನಿರ್ದೇಶಕ ಪ್ರೊ.ಟಿ.ಎಚ್.ಮೂರ್ತಿ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಕೃಷಿ ಎಂಜಿನಿಯರ್ ಎಸ್. ಸಿದ್ದಯ್ಯ ಇವರು ವಿವಿಧ ದೃಷ್ಟಿಕೋನಗಳ ಮೂಲಕ ವಿವಿಧ ಆಯಾಮ ಹಾಗೂ ಪ್ರಚಲಿತ ವಸ್ತುಸ್ಥಿತಿಯ ಬಗ್ಗೆ ವಿಸ್ತಾರವಾಗಿ ವಿಚಾರ ಮಂಡಿಸಿದರು. ಕಾರ್ಯಕ್ರಮದ ನಿರ್ದೇಶಕ ಡಾ.ಎಂ. ಗೋವಿಂದರಾಜು ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ವಿಷಯದಲ್ಲಿ ವಿಚಾರ ಸಂಕಿರಣಗಳು ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನ ಸಂಪಾದನೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ…
‘ಗ್ಯಾರೆಂಟಿ’ಗಳಿಂದ ಬರ ಪರಿಹಾರಕ್ಕೆ ಅಡ್ಡಿಯಾಗಿಲ್ಲ : ಸಿಎಂ
ಗ್ಯಾರಂಟಿ ಕಾರ್ಯಕ್ರಮಗಳಿಗೆ ಅಗತ್ಯವಿರುವ ಅನುದಾನವನ್ನು ಬಜೆಟ್ ನಲ್ಲಿ ನೀಡಲಾಗಿದೆ, ಹಾಗಾಗಿ ಬರ ಪರಿಸ್ಥಿತಿಯಿಂದ ಗ್ಯಾರಂಟಿ ಯೋಜನೆಗಳಿಗೆ ತೊಂದರೆಯಿಲ್ಲ.ಅವು ಯಾವುದೇ ಅಡೆತಡೆಯಿಲ್ಲದೆ ಎಂದಿನಂತೆ ಅರ್ಹ ಫಲಾನುಭವಿಗಳನ್ನು ತಲುಪಲಿವೆ. – ಮುಖ್ಯಮಂತ್ರಿ @siddaramaiah pic.twitter.com/jHKhqU7Rnv — CM of Karnataka (@CMofKarnataka) October 7, 2023
ಬಿಜೆಪಿ ರಾಜ್ಯಾದ್ಯಕ್ಷರ ನೇಮಕ ವಿಳಂಬ; ವರಿಷ್ಠರ ಬಗ್ಗೆ ಡಿವಿಎಸ್ ಅಸಮಾಧಾನ
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ವಿಳಂಬ ಬಗ್ಗೆ ಸಂಸದ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ನೇಮಕ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. ಯಾವ ಸಂದರ್ಭದಲ್ಲಿ ಏನು ಆಗಬೇಕಿತ್ತೋ ಆಗಿಲ್ಲ. ಇದು ಕಾರ್ಯಕರ್ತರ ಮೇಲೆ ಪ್ರಭಾವ ಬೀರಿದೆ. ಏನಪ್ಪ ನಮ್ಮ ಪಕ್ಷದಲ್ಲಿ ಹೀಗಾಯಿತು ಎಂಬ ಬೇಸರ ಇದೆ ಎಂದರು. ಆದಷ್ಟು ಬೇಗ ಈ ಪ್ರಕ್ರಿಯೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಡಿವಿಎಸ್, ಹೈಕಮಾಂಡ್ ಶೀಘ್ರವೇ ನೇಮಕ ಮಾಡುವಂತೆ ಈಗಲೂ ಮನವಿ ಮಾಡುತ್ತೇನೆ ಎಂದರು. ಸೋತ ಮೇಲೆ ಬಿಜೆಪಿ ರಾಜ್ಯ ನಾಯಕರ ಜತೆ ಚರ್ಚೆಯಾಗುತ್ತಿಲ್ಲ ಎಂಬ ಸಣ್ಣ ನೋವಿದೆ. ರಾಷ್ಟ್ರೀಯ ವಿಚಾರದ ಬಗ್ಗೆ ತೀರ್ಮಾನ ಮಾಡುವಾಗ ನಮ್ಮನ್ನು ಹೊರಗಿಡುತ್ತಾರೆ ಎಂದವರು ಹೇಳಿದರು.
ಏಷ್ಯನ್ ಗೇಮ್ಸ್: ಶತಕ ಪದಕ ಗೆದ್ದ ಭಾರತೀಯ ಆಟಗಾರರಿಗೆ ಪ್ರಧಾನಿ ಅಭಿನಂದನೆ
ದೆಹಲಿ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ಭಾರತ 100 ಪದಕಗಳ ಗಡಿಯನ್ನು ತಲುಪಿದೆ. ಫೈನಲ್’ನಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆ ವಿರುದ್ಧ 14-9 ಅಂತರದಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕ ಗಳಿಸುವ ಮೂಲಕ ಚಿನ್ನದ ಬೇಟೆಯಲ್ಲಿ ಭಾರತವನ್ನು ಐತಿಹಾಸಿಕ ದಾಖಲೆಯತ್ತ ಕೊಂಡೊಯ್ದಿದೆ. ಏಷ್ಯನ್ ಗೇಮ್ಸ್’ನಲ್ಲಿ ಶತಕ ಪದಕ ಗೆದ್ದ ಭಾರತೀಯ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದಿರುವ ಪ್ರಧಾನಿ ಮೋದಿ, ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ. A momentous achievement for India at the Asian Games! The people of India are thrilled that we have reached a remarkable milestone of 100 medals. I extend my…
ಹಿಂದೂ ಮುಖಂಡ ಅರುಣ್ಕುಮಾರ್ ಪುತ್ತಿಲ ವಿರುದ್ಧ FIR
ಶಿವಮೊಗ್ಗ: ಕರಾವಳಿ ಮಲೆನಾಡಿನ ಹಿಂದೂ ಕಾರ್ಯಕರ್ತರಿಗೆ ಸ್ಫೂರ್ತಿಯ ನಾಯಕನೆನಿಸಿರುವ ಅರುಣ್ಕುಮಾರ್ ಪುತ್ತಿಲ ವಿರುದ್ಧ ಪೊಲೀಸರೂ ಮುನಿಸಿಕೊಂಡಿದ್ದಾರೆ. ಹಿಂದೂ ಮುಖಂಡ ಅರುಣ್ಕುಮಾರ್ ಪುತ್ತಿಲ ವಿರುದ್ಧ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರುಣ್ಕುಮಾರ್ ಪುತ್ತಿಲ ಅವರು ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿದೆ. ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪವನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ನಡುವೆ, ರಾಗಿಗುಡ್ಡ ಪ್ರದೇಶಕ್ಕೆ ಬಿಜೆಪಿ ಸಹಿತ ವಿವಿಧ ಪಕ್ಷಗಳ ಅನೇಕ ನಾಯಕರು ಭೇಟಿ ನೀಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು ಹಿಂದೂ ಮುಖಂಡ ಅರುಣ್ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.
ಏಷ್ಯನ್ ಗೇಮ್ಸ್: ಶತಕ ಪಾದಕಗಳೊಂದಿಗೆ ಐತಿಹಾಸಿಕ ಸಾಧನೆ ಮಾಡಿದ ಭಾರತ
ಹಾಂಗ್ಝೌ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಪದಕ ಗಳಿಕೆಯಲ್ಲಿ ಶತಕದ ಸಾಧನೆಗೂ ಭಾರತ ಪಾತ್ರವಾಗಿದೆ. ಏಷ್ಯನ್ ಗೇಮ್ಸ್ 19ನೇ ಆವೃತ್ತಿಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ಮಹಿಳಾ ಕಬಡ್ಡಿ ತಂಡ ಫೈನಲ್ನಲ್ಲಿ ಚೀನಾದ ತೈಪೈ ತಂಡದ ವಿರುದ್ಧ ಜಯಶಾಲಿಯಾಗಿ ಈ ಶತಕದ ಸಂಭ್ರಮ ಆಚರಿಸಿದೆ. ಕಬಡ್ಡಿಯಲ್ಲಿ ಗೆದ್ದ ಚಿನ್ನದ ಪಾದಕಕಗಳೊಂದಿಗೆ ಭಾರತ 100 ಪದಕಗಳ ಗುರಿಯನ್ನು ತಲುಪಿದೆ. यही वो लम्हा है जिसने भारत को 100वां पदक दिलाया! 👑 🥇 भारतीय महिला #कबड्डी टीम ने चीनी ताइपे की टीम को 26-25 से रोमांचक मुकाबले में हराकर स्वर्ण पदक हासिल किया। भारतीय टीम को ढेरों बधाई!#AsianGames23 pic.twitter.com/k2ICBeM6iu — Ankit Kumar Avasthi (@kaankit) October…
