ಹಿಂದೂ ಮುಖಂಡ ಅರುಣ್​ಕುಮಾರ್ ಪುತ್ತಿಲ ವಿರುದ್ಧ FIR

ಶಿವಮೊಗ್ಗ: ಕರಾವಳಿ ಮಲೆನಾಡಿನ ಹಿಂದೂ ಕಾರ್ಯಕರ್ತರಿಗೆ ಸ್ಫೂರ್ತಿಯ ನಾಯಕನೆನಿಸಿರುವ ಅರುಣ್​ಕುಮಾರ್ ಪುತ್ತಿಲ ವಿರುದ್ಧ ಪೊಲೀಸರೂ ಮುನಿಸಿಕೊಂಡಿದ್ದಾರೆ.

ಹಿಂದೂ ಮುಖಂಡ ಅರುಣ್​ಕುಮಾರ್ ಪುತ್ತಿಲ ವಿರುದ್ಧ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರುಣ್​ಕುಮಾರ್ ಪುತ್ತಿಲ ಅವರು ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿದೆ. ಪ್ರಚೋದನಕಾರಿ‌ ಹೇಳಿಕೆ ನೀಡಿದ ಆರೋಪವನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಈ ನಡುವೆ, ರಾಗಿಗುಡ್ಡ ಪ್ರದೇಶಕ್ಕೆ ಬಿಜೆಪಿ ಸಹಿತ ವಿವಿಧ ಪಕ್ಷಗಳ ಅನೇಕ ನಾಯಕರು ಭೇಟಿ ನೀಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು ಹಿಂದೂ ಮುಖಂಡ ಅರುಣ್​ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

Related posts