ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ಯಮಿಗೆ ವಂಚಿಸಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಈ ಪ್ರಕರಣ ಕುರಿತಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉದ್ಯಮಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಪಡೆದು, ವಂಚನೆ ಮಾಡಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಇದೀಗ ಸಿಸಿಬಿ ವಶದಲ್ಲಿದ್ದಾರೆ. ಕಳೆದ ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಅವರನ್ನಿಂದು ತನಿಖಾ ತಂಡ ವಿಚಾರಣೆಗಾಗಿ ಕರೆದೊಯ್ದಿದೆ. ಸಿಸಿಬಿ ಕಚೇರಿಗೆ ಕರೆತಂದ ವೇಳೆ ವಾಹನದಿಂದ ಇಳಿಯುತ್ತಿದ್ದಂತೆಯೇ ಮಾಧ್ಯಮಗಳತ್ತ ನೋಡಿ ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡುತ್ತಾ ಕಟ್ಟಡ ಪ್ರವೇಶಿಸಿದ್ದಾರೆ. ‘ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ’ ಎಂದು ಹೇಳುತ್ತಾ ಸಿಸಿಬಿ ಕಚೇರಿ ಒಳಗಡೆ ತೆರಳಿದ್ದಾರೆ. ಈ ಪ್ರಕರಣದಲ್ಲಿ ಹೊಸಪೇಟೆ ಜಿಲ್ಲೆಯ ಹಿರೇ…
Year: 2023
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2ರಲ್ಲಿ 41,961 ವಿದ್ಯಾರ್ಥಿಗಳು ಉತ್ತೀರ್ಣ: ಸಿಎಂ ಸಂತಸ
ಬೆಂಗಳೂರು: SSLC ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಕಾರವು ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ವಿನೂತನ ಪದ್ಧತಿ ಜಾರಿ ಮಾಡಿದ್ದು, ಈ ವಿದ್ಯಾರ್ಥಿ ಸ್ನೇಹಿ ನಿಲುವಿನಿಂದಾಗಿ ಕಳೆದ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2 ರಲ್ಲಿ ಒಟ್ಟು 41,961 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶಿಕ್ಷಣ ಮುಂದುವರೆಸುವ ಅರ್ಹತೆ ಗಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರೆಗೆ ವರ್ಷಕ್ಕೊಮ್ಮೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. ಇದು ವಿದ್ಯಾರ್ಥಿಗಳ ಮೇಲೆ ಪರೀಕ್ಷಾ ಒತ್ತಡವನ್ನು ಹೆಚ್ಚಿಸಿ, ಅವರ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತಿತ್ತು ಜೊತೆಗೆ ವಾರ್ಷಿಕ ಮತ್ತು ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮತ್ತೊಂದು ವರ್ಷ ಕಾಯಲಾಗದೆ ಶಿಕ್ಷಣ ಮೊಟಕುಗೊಳಿಸುತ್ತಿದ್ದ ಉದಾಹರಣೆಗಳು ಸಾಕಷ್ಟಿದ್ದವು. ಈ ಎಲ್ಲಾ ಸಮಸ್ಯೆಗಳಿಗೆ…
ಸೆಪ್ಟೆಂಬರ್ 14-16: ಪುಣೆಯಲ್ಲಿ RSS ಅಖಿಲ ಭಾರತೀಯ ಸಮನ್ವಯ ಬೈಠಕ್
ಪುಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ ಸೆಪ್ಟೆಂಬರ್ 14ರಿಂದ 16ರವರೆಗೆ ಪುಣೆಯಲ್ಲಿ ನಡೆಯಲಿದೆ. ವಿವಿಧ ಕ್ಷೇತ್ರಗಳ 36 ಸಂಘ ಸಂಸ್ಥೆಗಳ 266 ಪ್ರಮುಖರು ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಈ ಬೈಠಕ್ ನಲ್ಲಿ ಪರಿಸರ ಸ್ನೇಹಿ ಜೀವನಶೈಲಿ, ಜೀವನಮೌಲ್ಯಾಧಾರಿತ ಕುಟುಂಬ ವ್ಯವಸ್ಥೆ, ಸಾಮರಸ್ಯಕ್ಕಾಗಿ ಪ್ರಾಧಾನ್ಯತೆ, ಸ್ವದೇಶಿ ನಡವಳಿಕೆ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಕುರಿತಾಗಿ ಬೈಠಕ್ ನಲ್ಲಿ ಚರ್ಚಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರ್‌ಎಸ್‌ಎಸ್ ಸ್ವಯಂಸೇವಕರು ರಾಷ್ಟ್ರಾದ್ಯಂತ ಶಾಖೆಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಶಾಖೆ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜೀವನದ ವಿವಿಧ ರಂಗಗಳ ಹಲವು ಚಟುವಟಿಕೆಗಳಲ್ಲಿ ಸ್ವಯಂಸೇವಕರು ನಿರತರಾಗಿದ್ದಾರೆ. ಈ ಎಲ್ಲಾ ಕಾರ್ಯಗಳು ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಕೆಲಸ. ಸಮನ್ವಯ ಬೈಠಕ್ ನಲ್ಲಿ ಭಾಗವಹಿಸುವ…
ಪ್ರಾಧಿಕಾರದ ಆದೇಶ ಪಾಲನೆ ಬೇಡ; ಸರ್ಕಾರಕ್ಕೆ ಕಾವೇರಿ ಜಲ ಸಂರಕ್ಷಣಾ ಸಮಿತಿ ಆಗ್ರಹ
ಬೆಂಗಳೂರು: ಕಾವೇರಿ ಪ್ರಾಧಿಕಾರದ ಆದೇಶ ಪಾಲನೆ ಬೇಡ ಎಂದು ಕಾವೇರಿ ಜಲ ಸಂರಕ್ಷಣಾ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಸಂಬಂಧ ನಿರ್ಣಯವೊಂದನ್ನು ಅಂಗೀಕರಿಸಿರುವ, ಕಾವೇರಿ ಜಲ ಸಂರಕ್ಷಣಾ ಸಮಿತಿಯು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶವನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಸರ್ಕಾರವ ಆಗ್ರಹಿಸಿದೆ. ಕಾವೇರಿ ಬಯಲಿನ ಸಮಸ್ಯೆ ಹರಿಯಲು ಹತ್ತು ಜನರ ಅಧ್ಯಯನ ತಂಡ ರಚಿಸಿ ರಚಿಸಲಾಯಿತು ಪರಿಣಿತರು ರೈತ ಮುಖಂಡರು ಕನ್ನಡ ಸಂಘಟನೆಗಳು ಒಳಗೊಂಡಂತೆ ರಚಿಸಲಾಯಿತು ಈ ಅಧ್ಯಯನ ತಂಡ ತಲಕಾವೇರಿ ಕೆ ಆರ್ ಎಸ್ ಜಲಾಶಯ, ಮೇಕೆದಾಟು ಬಿಳುಗುಂಡ್ಲು ಪ್ರದೇಶಗಳಿಗೆ ಹೋಗಿ ವಾಸ್ತವ ಸ್ಥಿತಿ ವರದಿ ತಯಾರಿಸಿ ನೈಜ ಚಿತ್ರಣ ಜನರಿಗೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವ ಸಮಿತಿ, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ಕಾರಣ ಬೆಂಗಳೂರು ಜನರ ಜಾಗೃತಿಗಾಗಿ ಶೀಘ್ರದಲ್ಲಿಯೇ ಕನ್ನಡಪರ ಜನಪರ ಸಂಘಟನೆಗಳ ಸಭೆ ಕರೆಯಲು…
ಕೋರ್ಟ್ ಹೆಸರಲ್ಲಿ ನಡೆಯಿತೇ ವಂಚನೆ; ಚೈತ್ರಾ ಪರ ವಾದ ಮಂಡಿಸದಂತೆ ಬಾರ್ ಕೌನ್ಸಿಲ್‌ಗೆ ಮನವಿ
ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಆರೋಪದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪರವಾಗಿ ವಾದ ಮಂಡಿಸಬಾರದೆಂದು ಒತ್ತಾಯಿಸಿ ಬಾರ್ ಕೌನ್ಸಿಲ್‌ಗೆ ಮನವಿ ಸಲ್ಲಿಕೆಯಾಗಿದೆ. ರಾಜ್ಯ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಯೂನಿಯನ್ ಅಧ್ಯಕ್ಷ ಮಾರ್ಕ್ ಆಂತೋನಿ ಅವರು ಕರ್ನಾಟಕ ಬಾರ್ ಕೌನ್ಸಿಲ್ ಹಾಗೂ ಬೆಂಗಳೂರು ವಕೀಲರ ಸಂಘಕ್ಕೆ ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಜಡ್ಜುಗಳ ಹೆಸರಲ್ಲಿ ವಂಚಿಸಿರುವ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ IPC 1860 (U/s-406, 419, 420, 170, 506, 120B)ರಡಿ ದೂರು ದಾಖಲಾಗಿದ್ದು, Crime No: 0206/2023 ಪ್ರಕರಣದಲ್ಲಿ ನ್ಯಾಯಾಲಯದ ಗೌರವಕ್ಕೆ ಚ್ಯುತಿ ತಂದಿರುವ ಆರೋಪಿಗಳ ಪರವಾಗಿ ವಾದಿಸದಂತೆ ಮಾನ್ಯ ವಕೀಲರಿಗೆ ಸೂಚಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರಿವ ದೂರಿನಲ್ಲಿ, ಚೈತ್ರಾ ಕುಂದಾಪುರ, ಗಗನ್ ಕಡೂರು ಹಾಗೂ ಮತ್ತಿತರರು…
ವಂಚನೆ ಆರೋಪ; ಚೈತ್ರಾ ಕುಂದಾಪುರ ಬಂಧನ
ಬೆಂಗಳೂರು: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ಆರೋಪದಲ್ಲಿ ಹಿಂದೂ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ, ಬಿಜೆಪಿ ನಾಯಕ ಗಗನ್ ಕಡೂರು ಗ್ಯಾಂಗನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಕಲಿ ಆರೆಸ್ಸೆಸ್ ಪ್ರಚಾರಕರನ್ನು ಸೃಷ್ಟಿಸಿ ಬಿಜೆಪಿ ರಾಜ್ಯ ನಾಯಕರನ್ನೇ ವಂಚಿಸಿದ ಆರೋಪ ಚೈತ್ರಾ ಕುಂದಾಪುರ ಮೇಲಿದೆ. ತನ್ನ ವಾಕ್ಚಾತುರ್ಯ ಮೂಲಕ ಹಿಂದೂ ಕಾರ್ಯಕರ್ತರ ಮುಗ್ದತೆಯನ್ನು ಬಳಸಿ, ಬಿಜೆಪಿ ಟಿಕೆಟ್ ಕೊಡುವುದಾಗಿ ನಂಬಿಸಿದ್ದ ಚೈತ್ರಾ ಕುಂದಾಪುರ, ಬಿಜೆಪಿ ಯುವಮೋರ್ಚಾ ನಾಯಕ ಗಗನ್ ಕಡೂರು, ಉತ್ತರ ಕರ್ನಾಟಕದ ಹಾಲಶ್ರೀ ಸ್ವಾಮೀಜಿ ಸಹಿತ 7 ಮಂದಿಯ ವಿರುದ್ದ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ನಾಯಕರಾದ ಗೋವಿಂದ ಬಿ.ಪೂಜಾರಿ ಅವರು ಈ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದಾರೆ.…
ಸ್ಟಾರ್ ಫ್ರೂಟ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಅತ್ಯುತ್ತಮ ಆಹಾರ
ಸ್ಟಾರ್ ಫ್ರೂಟ್ ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಇವುಗಳಲ್ಲಿ ವಿಟಮಿನ್ ಸಿ, ಬಿ2, ಬಿ6, ಬಿ9 ವಿಟಮಿನ್‌ಗಳು, ಫೈಬರ್, ಪೊಟ್ಯಾಸಿಯಮ್, ಸತು, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಫೋಲೇಟ್, ತಾಮ್ರ, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಸ್ಟಾರ್ ಫ್ರೂಟ್ ಕೊಲೆಸ್ಟ್ರಾಲ್ ನನ್ನೆಯ ಕ್ರಿಯೆಯನ್ನು ತಡೆದು ರಕ್ತದಿಂದ ಕೊಬ್ಬಿನ ಅಣುಗಳನ್ನು ತೆಗೆದುಹಾಕುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಲು ಇದು ಉಪಯುಕ್ತವಾಗಿದೆ. ಅಲ್ಲದೇ, ತೂಕ ಇಳಿಕೆಗೂ ಸಹಾಯಕಾರಿಯಾಗಿರುವ ಈ ಹಣ್ಣಿನಲ್ಲಿರುವ ನಾರಿನಂಶವು ಚಯಾಪಚಯವನ್ನು ಸರಳಗೊಳಿಸುತ್ತದೆ.
“ವಯಸ್ಸಾಗುವಿಕೆ ತಡೆಯಲು ಕ್ಯಾರೆಟ್: ಮುಖದ ಆರೋಗ್ಯಕ್ಕೆ ಹೊತ್ತ ಉತ್ತಮ ಆಹಾರ”
ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮುಖದ ಸುಕ್ಕುಗಳು ಉಂಟಾಗುತ್ತವೆ ಮತ್ತು ಇದಕ್ಕೆ ಕಾರಣ ಪೌಷ್ಟಿಕಾಂಶದ ಕೊರತೆಯೇ. ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಅಧಿಕವಾಗಿದೆ ಮತ್ತು ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಮುಖದಲ್ಲಿ ಕಾಣಿಸಿಕೊಳ್ಳುವ ಸುಕ್ಕುಗಳು ಮತ್ತು ವಯಸ್ಸಾದ ಸಮಸ್ಯೆಗಳನ್ನು ತೊಡೆದುಹಾಕಲು ಕ್ಯಾರೆಟ್ ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತವೆ. ಇದರಿಂದ ಚರ್ಮದ ಸಮಸ್ಯೆ ದೂರವಾಗುತ್ತದೆ. ಇದರೊಂದಿಗೆ ಸೌಂದರ್ಯವೂ ಹೆಚ್ಚುತ್ತದೆ.
KSRTC ಗರಡಿಯಲ್ಲಿ ಉತ್ತರದ ತಂಡ; ಯಶೋಗಾಥೆಯ ಗುಟ್ಟು ತಿಳಿಯುವ ಕೌತುಕ
ಬೆಂಗಳೂರು: ಅತ್ಯುತ್ತಮ ಸಾರಿಗೆ ವ್ಯವಸ್ಥೆಗೆ ಹೆಸರಾಗಿರುವ ಕರ್ನಾಟಕದ ಜನಪ್ರಿಯ ಸಾರಿಗೆ ಸಂಸ್ಥೆ KSRTC ಇದೀಗ ವಿವಿಧ ರಾಜ್ಯಗಳ ಆಡಳಿತವರ್ಗದ ಗಮನಕೇಂದ್ರೀಕರಿಸುತ್ತಿವೆ. ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಯಶೋಗಾಥೆಯ ಗುಟ್ಟನ್ನು ತಿಳಿಯುವ ಪ್ರಯತ್ನ ಮಾಡಿದೆ. . ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಸಲಹೆಗಾರರಾದ ಡಾ. ಕೆ.ವಿ ರಾಜು, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್. ವೆಂಕಟೇಶ್ವರಲು, ಹಾಗೂ ವೃತ್ತಿಪರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೆ. ಷಣ್ಮುಗ ಸುಂದರಂ ನೇತೃತ್ವದ ಅಧಿಕಾರಿಗಳ ತಂಡವು ಬೆಂಗಳೂರಿನಲ್ಲಿ ಮಂಗಳವಾರ (ಸೆ.12ರಂದು) KSRTC ಕೇಂದ್ರ ಕಚೇರಿಗೆ ಭೇಟಿ ನೀಡಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ಪಡೆಯಿತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ತಂಡವು KSRTC ಅಧ್ಯಕ್ಷರೂ…
ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಾ ಇದ್ದರೆ ಅದಕ್ಕೆ ನೇರ ಕಾರಣ ಕೇಂದ್ರ ಸರ್ಕಾರ..! ಕಾಂಗ್ರೆಸ್ ಆರೋಪ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಾ ಇದ್ದರೆ ಅದಕ್ಕೆ ನೇರ ಕಾರಣ ಕೇಂದ್ರ ಸರ್ಕಾರ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ವಿರೋಧ ಪಕ್ಷ ಜೀವಂತವಾಗಿದಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನೀರು ನಿಲ್ಲಸಬಹುದಿತ್ತು. ನಾವು 2008 ರಲ್ಲಿ ವಿರೋಧ ಪಕ್ಷದಲ್ಲಿ ಇದ್ದಾಗ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದಿತ್ತು. ಆಗ ಪ್ರಧಾನಿಗಳಾಗಿದ್ದ ಮನಮೋಹನ್ ಸಿಂಗ್ ಅವರ ಬಳಿ ಮಾತನಾಡಿ ವೈಮಾನಿಕ ಸಮೀಕ್ಷೆ ಮಾಡಿಸಿ, ಸ್ಥಳದಲ್ಲೇ 1200 ಕೋಟಿ ಹಣವನ್ನು ಬಿಡುಗಡೆ ಆಗುವಂತೆ ಮಾಡಿದ್ದೆವು ಎಂದು ತಿಳಿಸಿದರು. ಕರ್ನಾಟಕದ 25 ಜನ ಎಂಪಿಗಳು ಬಿಜೆಪಿಯವರು. ಇದುವರೆಗೂ ಒಂದೇ ಒಂದು ಮಾತನ್ನು ಕಾವೇರಿ ನೀರಿನ ವಿಚಾರವಾಗಿ ಮಾತನಾಡಿಲ್ಲ. ರಾಜ್ಯದ ಬಗ್ಗೆ ಬದ್ದತೆ ಇಲ್ಲ ಬಿಜೆಪಿಯವರಿಗೆ ಎಂದು ಉಗ್ರಪ್ಪ ದೂರಿದರು. ಜನತಾಪಕ್ಷದಿಂದ ಬಿಜೆಪಿಯವರು ಹೊರ ಬರಲು ಕಾರಣ ದ್ವಿಸದಸ್ಯತ್ವ. ಅಂದರೆ…
