ಹನೂರು ಪೊಲೀಸರ ಕಾರ್ಯಾಚರಣೆ; ಮನೆ ಹಿತ್ತಲಲ್ಲಿ ಗಾಂಜಾ ಬೆಳೆದಿದ್ದ ಖದೀಮನ ಸೆರೆ

ಚಾಮರಾಜನಗರ: ಹನೂರು ತಾಲ್ಲೂಕಿನ ಜೀರಿಗೆ ಗದ್ದೆ ಗ್ರಾಮದಲ್ಲಿ ಅಕ್ರಮವಾಗಿ ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ‌. ತಾಲೂಕಿನ ಜೀರಿಗೆ ಗದ್ದೆ ಗ್ರಾಮದ ಮಾದೇಶ್ (35) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ತನ್ನ ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಮಾಹಿತಿ ಆಧರಿಸಿ ನಿರೀಕ್ಷಕ ಶಶಿಕುಮಾರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಹನೂರು ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಆರೋಪಿ ತನ್ನ ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ 14 ಕೆಜಿ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಮುಖ್ಯ ಪೇದೆಗಳಾದ ರಾಘವೇಂದ್ರ ,ದೊಡ್ಡ ವೀರಶೆಟ್ಟಿ, ಚಂದ್ರು ಪೇದೆಗಳಾದ ಶಿವಕುಮಾರ್, ರಾಮಕೃಷ್ಣ, ರಾಜು, ಸಂತೋಷ್ , ತಾಲೂಕು ವೈದ್ಯಧಿಕಾರಿಗಳಾದ ಡಾ.ಪ್ರಕಾಶ್ ಹಾಗೂ ಸಹಿತ ಹನೂರು ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಮೂರನೇ ಜನ್ಮ ಸಿಕ್ಕಿದೆ: ಮಾಜಿ ಸಿಎಂ ಹೆಚ್ಡಿಕೆ 

ಬೆಂಗಳೂರು: ದೇವರು, ರಾಜ್ಯದ ಜನರು ಹಾಗೂ ತಂದೆ ತಾಯಿಯ ಆಶೀರ್ವಾದ, ವೈದ್ಯರ ಆರೈಕೆಯಿಂದ ನನಗೆ ಮೂರನೇ ಜನ್ಮ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ವಹಿಸಬಾರದು. ಏನೇ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ಎಚ್ಚೆತ್ತು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಅವರು ಜನತೆಯಲ್ಲಿ ವಿನಂತಿ ಮಾಡಿಕೊಂಡರು. ಅನಾರೋಗ್ಯದಿಂದ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಪೂರ್ಣ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಈ ಸಂದರ್ಭದಲ್ಲಿ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಐದು ದಿನಗಳಿಂದ ನಾಡಿನ ಜನರು, ಅಭಿಮಾನಿಗಳು, ಹಿತೈಷಿಗಳು, ಮಾಧ್ಯಮ ಸ್ನೇಹಿತರು, ಆತಂಕದಿಂದ ಕಾಯುತ್ತಿದ್ದರು. ಪ್ರಥಮವಾಗಿ ಭಗವಂತನಿಗೆ, ತಂದೆತಾಯಿಗಳ ಅವರಿಗೆ ಹಾಗೂ ಆಸ್ಪತ್ರೆಯ ಎಲ್ಲಾ ವೈದ್ಯವೃಂದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು. ತಮ್ಮ ಆರೋಗ್ಯ ಕೈತಪ್ಪಿ ಆಸ್ಪತ್ರೆಗೆ ದಾಖಲಾದ ಸಂದರ್ಭವನ್ನು ವಿವರಿಸಿದ ಮಾಜಿ ಮುಖ್ಯಮಂತ್ರಿ ಅವರು;…

ಕ್ಯಾರೆಟ್ ಜ್ಯೂಸ್ ಹಲವು ಸಮಸ್ಯೆಗಳಿಗೆ ರಾಮಬಾಣ..!

ದಿನನಿತ್ಯ ಕ್ಯಾರೆಟ್ ತಿಂದರೆ, ಜ್ಯೂಸ್ ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ. ಕ್ಯಾರೆಟ್ (ಕ್ಯಾರೋಟೆನ್) ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸಮೃದ್ಧವಾಗಿ ಹೊಂದಿದ ವಿಟಮಿನ್ ಎಯಾಗಿದೆ. ಇದರಿಂದ ನಾವು ಹೊಂದುವ ಆರೋಗ್ಯ ಪ್ರಯೋಜನಗಳಿವೆ: ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.. ವಿಟಮಿನ್ ಎಯ ಅಭಾವದ ಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ. ಆದರೆ, ಕ್ಯಾರೆಟ್ ಅಥವಾ ಅದರ ಜ್ಯೂಸ್ ಕುಡಿಯುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗದು ಎಂದು ಹೇಳಲಾಗದು. ಅದು ಆರೋಗ್ಯದಾಯಕ ಆಹಾರವೇ ಹೊರತು ಪರಿಪೂರ್ಣ ಔಷಧಿ ಆಗಲ್ಲ.  ಸಮಸ್ಯೆಗಳ ಪರಿಹಾರವಲ್ಲ. ಸಮಸ್ಯೆಗಳನ್ನು ಕಡಿಮೆಗೊಳಿಸಲು ಅಥವಾ ನಿವಾರಣೆಗೆ ಸಹಾಯ ಮಾಡಬಹುದು. ಯಾವಾಗಲೂ ವೈದ್ಯರ ಸಲಹೆಯನ್ನು ಪಡೆದು, ಅವರಿಂದ ಉಪಯುಕ್ತ ಸಲಹೆಯನ್ನು ಪಡೆಯಬಹುದು. ಕ್ಯಾರೆಟ್ ಅಥವಾ ಅದರ ಜ್ಯೂಸ್ ಕುಡಿಯಲು ಆಯ್ಕೆ ಮಾಡಿಕೊಳ್ಳಬೇಕು.

Uncategorized

ರೋಗನಿರೋಧಕ ಶಕ್ತಿ ವೃದ್ಧಿಗೆ ಮೂಸಂಬಿ ಸೂಕ್ತವೇ?

ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವ ಸಂದರ್ಭದಲ್ಲಿ ನೆಗಡಿ, ಜ್ವರ, ಸೋಂಕುಗಳು ಹೆಚ್ಚು ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಿಸಲು ಮೊಸಂಬಿ ಒಂದು ಉತ್ತಮ ರಾಮಬಾಣವಾಗಿದ್ದು, ಇದರ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ರಂಜಕ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಲ್, ಆ್ಯಂಟಿ ಅಲ್ಸರ್ ಗುಣಗಳಿವೆ. ಈ ಜ್ಯೂಸ್ ಕುಡಿಯಲು ಅನೇಕರು ಆಸಕ್ತಿ ಹೊಂದಿದ್ದು, ಈ ಜ್ಯೂಸ್​ನ ಆರೋಗ್ಯ ಪ್ರಯೋಜನಗಳನ್ನು ಇಂತಿವೆ. ಮೊಸಂಬಿಯ ರಸವು ದೇಹದಿಂದ ತ್ಯಾಜ್ಯ ಮತ್ತು ವಿಷವನ್ನು ತೆಗೆದುಹಾಕುವುದರ ಜತೆಗೆ ಇದು ಶಕ್ತಿಯುತ ಡಿಟಾಕ್ಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಪಿತ್ತರಸದ ಸ್ರವಿಸುವಿಕೆಯನ್ನು ಹೆಚ್ಚಿಸುವುದರೆ ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಜೀರ್ಣ, ಕರುಳಿನ ಚಲನಶೀಲತೆ ಮತ್ತು ಇತರ ಜಠರಗರುಳಿನ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಜ್ಯೂಸ್ ಕುಡಿಯುವುದರಿಂದ ಪ್ರಯೋಜನ…

ಆಪರೇಷನ್ ಹಸ್ತ; ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಕಾಂಗ್ರೆಸ್

ಭೋಪಾಲ್‌: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಸಂಕಟದ ಪರಿಸ್ಥಿತಿ ಎದುರಾಗಿದೆ. ಹಾಲಿ ಶಾಸಕರೂ ಸೇರಿದಂತೆ 9 ಮಂದಿ ಪ್ರಭಾವಿ ನಾಯಕರು ಆಪರೇಷನ್ ಹಸ್ತಕ್ಕೆ ಗುರಿಯಾಗಿದ್ದಾರೆ. ಒಂಬತ್ತು ನಾಯಕರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಭೋಪಾಲ್‌ನಲ್ಲಿರುವ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಹಿರಿಯ ನಾಯಕರಾದ ಕಮಲ್ ನಾಥ್ ಮತ್ತು ರಣದೀಪ್ ಸುರ್ಜೆವಾಲಾ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಸಮರಕ್ಕೆ ರಾಜಕೀಯ ಪಕ್ಷಗಳು ತಯಾರಿಯಲ್ಲಿರುವಾಗಲೇ ಈ ಪಕ್ಷಾಂತರ ಪರ್ವ ಬಿಜೆಪಿಗೆ ಸವಾಲೆಂಬಂತಾಗಿದೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕೆ.ಎಲ್.ರಾಹುಲ್ ಭೇಟಿ; ದೇವರ ದರ್ಶನ ಪಡೆದ ಕ್ರಿಕೆಟಿಗ

ದೊಡ್ಡಬಳ್ಳಾಪುರ: ಖ್ಯಾತ ಕ್ರಿಕೆಟಿಗ, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್ .ರಾಹುಲ್ ಪತ್ನಿ ಆಥಿಯಾ ಶೆಟ್ಟಿ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಸಧ್ಯ ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ಮಾದರಿಯ ಏಷ್ಯಾ ಕಪ್‌ಗೆ ಅಂತಿಮ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದರು, ಆದರೆ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದರಿಂದ ಮೊದಲೆರಡು ಪಂದ್ಯಗಳಿಂದ ದೂರ ಸುಳಿದಿದ್ದಾರೆ. ಶನಿವಾರ ಮಧ್ಯಾಹ್ನ 12.30 ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಭಕ್ತರು ಮುಗಿಬಿದ್ದರು. ಈಒ ಕ್ರಿಷ್ಣಪ್ಪ,ಸಿಬ್ಬಂದಿ ನಂಜಪ್ಪ, ವೆಂಕಟೇಶ್ ಅವರು ಪೂಜೆ, ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.

ಮತ್ತೊಂದು ಸಾಧನೆಯತ್ತ ಭಾರತ; ‘ಸೂರ್ಯಯಾನ’ದ ಯಶಸ್ವೀ ಹೆಜ್ಜೆ

ಶ್ರೀಹರಿಕೋಟಾ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲಷ್ಟೇ, ಭಾರತ ಮತ್ತೊಂದು ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ಭಾರತದ ಮಹತ್ವಾಕಾಂಕ್ಷೆಯ ಸೂರ್ಯ ಯಾನ ಆಂಗವಾಗಿ ‘ಆದಿತ್ಯಾ L1’ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೋ ಸಾರಥ್ಯದಲ್ಲಿ ಆದಿತ್ಯಾ ಎಲ್ 1 ನೌಕೆಯನ್ನು ಹೊತ್ತ ಪಿಎಲ್ಎಲ್ ವಿ- ಸಿ-57 ರಾಕೆಟ್ ಬೆಳಗ್ಗೆ 11.50ಕ್ಕೆ ನಭಕ್ಕೆ ಹಾರಿತು. ಪಿಎಸ್ ಎಲ್ ವಿ ಸಿ 57 ನೌಕೆ ಎಲ್ಲ ಮೂರೂ ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸಿ ನೌಕೆಯನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ತಲುಪಿಸಿತು ಎಂದು ಇಸ್ರೋ ಹೇಳಿದೆ. Aditya-L1 started generating the power.The solar panels are deployed. The first EarthBound firing to raise the orbit is scheduled for September 3, 2023, around 11:45 Hrs. IST pic.twitter.com/AObqoCUE8I — ISRO (@isro)…

ಈ ಬಾರಿ ಪಂಚಮಸಾಲಿಗಳ ಪರಿಣಾಮಕಾರಿ ಹೋರಾಟ; ಸಮುದಾಯಕ್ಕೆ ಜಗದ್ಗುರು ಕರೆ ಹೀಗಿದೆ..

ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟ ಇದೀಗ ಮತ್ತೊಂದು ಮಜಲಿನತ್ತ ಸಾಗಿದ್ದು, ಸೆಪ್ಟಂಬರ್ 10 ಭಾನುವಾರದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತೀವ್ರ ಹೋರಾಟಕ್ಕೆ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ. ಸೆಪ್ಟೆಂಬರ 3ರ ಬದಲು ಸೆಪ್ಟಂಬರ್ 10 ಭಾನುವಾರದಂದು ನಿಪ್ಪಾಣಿಯಲ್ಲಿ ಬೆಳಗಾವಿ ಹಾಗೂ ಶೈಕ್ಷಣಿಕ ಜಿಲ್ಲಾ ಮಟ್ಟದ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟಕ್ಕೆ ಚಾಲನೆ ಅಂಗವಾಗಿ ನಿಪ್ಪಾಣಿ ತಾಲ್ಲೂಕಿನ ಪೂರ್ವಭಾವಿ ಶ್ರಾವಣ ಸಂದೇಶ ಸಭೆ ಯಶಸ್ವೀಯಾಗಿ ನಡೆಯಿತು. ನಿಪ್ಪಾಣಿ ತಾಲ್ಲೂಕಿನ ಪೂರ್ವಭಾವಿ ಶ್ರಾವಣ ಸಂದೇಶ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಶಶಿಕಾಂತ ನಾಯಕ, ತಾಲೂಕು ಅಧ್ಯಕ್ಷ ಕಿರಣ್ ಪಾಂಗ್ ರೀ , ಪಂಚಸೇನಾ ಅಧ್ಯಕ್ಷ ರವಿ ಗುಲಗಳೆ , ರೈತ ನಾಯಕ ರಮೇಶ್ ಪಾಟೀಲ, ಗಳತಗ ಬಸವರಾಜ ಪಾಟಿಲ್, ಜಿಲ್ಲಾ ಯುವ ಅಧ್ಯಕ್ಷ ಗುಂಡು ಪಾಟೀಲ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷ ಸಿದಗೌಡ ಪಾಟಿಲ್, ಕಾರ್ಯಾಧ್ಯಕ್ಷ ಅಶೋಕ ಹರಗಾಪುರೆ, ತಾಲ್ಲೂಕು…

ಮಾದಪ್ಪನ ಸನ್ನಿಧಿಗೆ ಭಕ್ತರ ಹೊಳೆ; ಹುಂಡಿಯಲ್ಲಿ ಬರೋಬ್ಬರಿ 2.38 ಕೋ.ರೂ. ಸಂಗ್ರಹ

ಚಾಮರಾಜನಗರ : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ, ಹನೂರುತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಭಕ್ತರಿಂದ ಕೊಟ್ಯಾನ್ತರ ರೂಪಾಯಿ ಕಾಣಿಕೆ ಹರಿದುಬರುತ್ತಿದೆ. ಶುಕ್ರವಾರ ಕ್ಷೇತ್ರದಲ್ಲಿ ನಡೆದ ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.38 ಕೋಟಿ ರೂಪಾಯಿ ಸಂಗ್ರಹವಾಗಿದೆ. ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಿಗ್ಗೆ ಸಾಲೂರು ಬೃಹನ್ಮಠಾಧ್ಯಕ್ಷ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತ್ ನಲ್ಲಿ ಎಣಿಕೆ ಮಾಡಲಾಯಿತು. ಈ ಬಾರಿ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಕಳೆದ 36 ದಿನಗಳ ಅವಧಿಯಲ್ಲಿ 2 ಕೋಟಿ 38 ಲಕ್ಷದ 43 ಸಾವಿರದ 177 ರೂಪಾಯಿ ಹಣ, 63 ಗ್ರಾಂ ಚಿನ್ನ ಹಾಗೂ 3.173 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ದೇವಾಲಯದ ಅಧಿಕಾರಿಗಳು…