ಪೊಲೀಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರಿನ ಬಹುತೇಕ ಡಿಸಿಪಿಗಳು ಬದಲು

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಬಹಿರಂಗವಾಗಿದ್ದು, ಅನುಪಮ್ ಅಗರ್ವಾಲ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಮಂಗಳೂರು ಆಯುಕ್ತರಾಗಿ ಈ ವರೆಗೂ ಕುಲದೀಪ್ ಕುಮಾರ್ ಜೈನ್ ಕಾರ್ಯನಿರ್ಹಿಸುತ್ತಿದ್ದರು. ಇದೇ ವೇಳೆ, ಬೆಂಗಳೂರು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್. ಡಿ ಶರಣಪ್ಪ ಅವರನ್ನು ಡಿಐಜಿಪಿ ಪೊಲೀಸ್ ಅಕಾಡೆಮಿ ಮೈಸೂರಿಗೆ ವರ್ಗಾಯಿಸಲಾಗಿದೆ. ಇದೇ ವೇಳೆ ಬೆಂಗಳೂರಿನ ಬಹುತೇಕ ಡಿಸಿಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಪಟ್ಟಿ ಹೀಗಿದೆ: ಅನುಪಮ್ ಅಗರ್ವಾಲ್-ಮಂಗಳೂರು ಸಿಟಿ ಕಮಿಷನರ್ ಡಾ.ಶರಣಪ್ಪ-ಡಿಐಜಿಪಿ & ಡೈರೆಕ್ಟರ್, ಪೊಲೀಸ್ ಅಕಾಡೆಮಿ, ಮೈಸೂರು ಪಿ.ಕೃಷ್ಣಕಾಂತ್-ಎಐಜಿಪಿ(ಆಡಳಿತ ವಿಭಾಗ) ಕೆ.ಸಂತೋಷ್ ಬಾಬು-ಡಿಸಿಪಿ ಆಡಳಿತ ವಿಭಾಗ, ಬೆಂಗಳೂರು ನಗರ, ಅಬ್ದುಲ್ ಅಹದ್-ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ ಆರ್.ಶ್ರೀನಿವಾಸ್ ಗೌಡ- ಡಿಸಿಪಿ 2, ಸಿಸಿಬಿ…

Uncategorized

ಕ್ಷೀರ ಸಂಜೀವಿನಿ: ಮಹಿಳಾ ಹೈನುಗಾರರಿಗೆ ಬಮೂಲ್‌ನಿಂದ 2.5 ಲಕ್ಷ ರೂ. ಬಡ್ಡಿ ರಹಿತ ಸಾಲ

ದೊಡ್ಡಬಳ್ಳಾಪುರ: ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ದೃಷ್ಟಿಯಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ ಕಣಿವೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 10 ಜನ ಸದಸ್ಯರಿಗೆ ಹೈನುಗಾರಿಕೆಗೆ ಉತ್ತೇಜನ ನೀಡಲು ಸಾಲದ ರೂಪದಲ್ಲಿ ಬಡ್ಡಿ ರಹಿತವಾಗಿ ತಲಾ ರೂ.25,000 ರೂಗಳ ಚೆಕ್ ಗಳನ್ನು ಕ್ಷೀರ ಸಂಜೀವಿನಿ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ ಎಂದು ಬಮೂಲ್ ನಿರ್ದೆಶಕ ಬಿ.ಸಿ ಆನಂದ್ ಕುಮಾರ್ ತಿಳಿಸಿದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಕಣಿವೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕ್ಷೀರ ಸಂಜೀವಿನಿ ಯೋಜನೆಯಡಿ ಈ ಸಾಲವನ್ನು ಒಂದು ವರ್ಷದ ಅವಧಿಯವರೆಗೆ ಬಡ್ಡಿ ರಹಿತವಾಗಿ ನೀಡಲಾಗುತ್ತದೆ. ಸಾಲ ಪಡೆದ ಫಲಾನುಭವಿಯು ತಾವು ಸಾಲ ಪಡೆದ ಸಂಘಕ್ಕೆ ಹಾಲು ಪೂರೈಸುವ ಮೂಲಕ ಪ್ರತೀ ತಿಂಗಳು ಎರಡು ಸಾವಿರದಂತೆ ಸಂಘದ ಮೂಲಕ ಒಕ್ಕೂಟಕ್ಕೆ ಮರುಪಾವತಿ ಮಾಡಬೇಕಾಗಿದ್ದು,…

ಕಿಡ್ನಿ ಆರೋಗ್ಯಕ್ಕೆ ಯಾವ ಎಣ್ಣೆ ಸೂಕ್ತ? ಇಲ್ಲಿದೆ ಉತ್ತರ

ಕಿಡ್ನಿ ಮನುಷ್ಯನ ಪ್ರಮುಖ ಅಂಗ. ಕಡ್ನಿ ಆರೋಗ್ಯ ಕಾಪಾಡಿದಲ್ಲಿ ಆಯುಷ್ಯ ಹೆಚ್ಚಿದಂತೆ ಎಂಬ‌ನಂಬಿಕೆ ಇದೆ‌. ಕಿಡ್ನಿ ಆರೋಗ್ಯ ಕಾಪಾಡಲು ಉತ್ತಮ ಆಹಾರ ಪದ್ದತಿಯೂ ಮುಖ್ಯ. ಎಣ್ಣೆಯ ಬಳಕೆಗೂ ಪ್ರಮುಖ್ಯತೆ ನೀಡಬೇಕು. ಹಾಗಾದರೆ ಒಳ್ಳೆಯ ಎಣ್ಣೆ ಯಾವುದು ಎಂದರೆ ಹೇಗೆ ನಿರ್ಧರಿಸಲಿ? ಈ ಪ್ರಶ್ನೆಗೆ ಸಮಾಧಾನದ ಉತ್ತರ – ಆಲಿವ್ ಎಣ್ಣೆ ಒಳ್ಳೆಯ ಆಯ್ಕೆ. ಅದರಿಂದ ಹೃದಯ ಆರೋಗ್ಯವನ್ನು ಉತ್ತಮಗೊಳಿಸಬಹುದು. ಇದಲ್ಲದೆ, ಅದರಲ್ಲಿ ಅಪರ್ಯಾಪ್ತ ಕೊಬ್ಬುಗಳು ಮತ್ತು ವಿಟಮಿನ್-ಇ ಹಾಗೂ ಒಲೀಕ್ ಆಮ್ಲದ ಹೇರಳವಿದ್ದರಿಂದ ಅದು ನಮ್ಮ ಕಿಡ್ನಿಯ ಸಂರಕ್ಷಣೆಗೆ ಸಹಾಯಕವಾಗಿದೆ. ಆದ್ದರಿಂದ ಆಲಿವ್ ಎಣ್ಣೆಯನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉಪಯುಕ್ತವಾಗಿದೆ

ದೊಡ್ಡಬಳ್ಳಾಪುರ: ಲಿಂಗನಹಳ್ಳಿ ಡೇರಿ ಬಿಜೆಪಿ, ಜೆಡಿಎಸ್ ಬೆಂಬಲಿಗರ ತೆಕ್ಕೆಗೆ

ದೊಡ್ಡಬಳ್ಳಾಪುರ: ಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಡೇರಿಯೂ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರ ಪಾಲಾಗಿದೆ. 13 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಲಿಗರು ನಾಲ್ಕು ಜನ ಆಯ್ಕೆಯಾಗಿದ್ದಾರೆ. ಉಳಿಕೆ 8 ಮಂದಿ ಜೆಡಿಎಸ್, ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು, ಮೈತ್ರಿ ಸಾಧಿಸಿ ಅಧಿಕಾರಕ್ಕೇರಿದ್ದಾರೆ. ಮೂರು ಸ್ಥಾನಗಳಿಗೆ ಸಮ ಬಲದ ಮತದಾನ ಆಗಿ ಲಾಟರಿ ಮುಖಾಂತರ ಆಯ್ಕೆ ಮಾಡಲಾಯಿತು, ಇದರಲ್ಲಿ ಒಬ್ಬರು ಕಾಂಗ್ರೆಸ್ ಬೆಂಬಲಿಗರಾದರೆ, ಇಬ್ಬರು ಬಿಜೆಪಿ, ಜೆಡಿಎಸ್‌ನವರು ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿ ರಾಮಾಂಜಿನಪ್ಪ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, 25 ಮಂದಿ ಸ್ಪರ್ಧಿಸಿದ್ದರು. ಮುನೇಗೌಡ ಎಂ. ಸಂಜೀವ ಮೂರ್ತಿ ಎಸ್, ನಂಜಾಮರಿಯಪ್ಪ ಎಲ್.ಕೆ. ಪುಟ್ಟಮೂರ್ತಿ ಆರ್., ಮೂರ್ತಿ ಕೆ.ಎನ್., ಶ್ರೀನಿವಾಸ್ ಮೂರ್ತಿ ಎಲ್.ಎನ್., ಆಂಜಿನಪ್ಪ ಹೆಚ್., ಅಂಬಿಕಾ, ಶಶಿಕಲಾ, ಶಾಮಸುಂದರ್ ಎನ್., ರಾಜಣ್ಣ ಎಲ್.ಆರ್., ಮುನಿರಾಜು, ರಾಜಣ್ಣ ಟಿ ಸೇರಿದಂತೆ…

ಸೇವೆಯ ಹಿರಿಮೆ, ಪುರಸ್ಕಾರದ ಗರಿಮೆ; KSRTC ಮಡಿಲಿಗೆ ಮತ್ತೆರಡು ಪ್ರಶಸ್ತಿಗಳು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯವೈಖರಿಗೆ ಸಾಲು ಸಾಲು ಪುರಸ್ಕಾರಗಳು ಸಿಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಏಷ್ಯಾದಲ್ಲೇ ಅತ್ಯುತ್ತಮ ಎಂಬ ಪ್ರಶಸ್ತಿ ಪಡೆದಿರುವ KSRTCಗೆ ಇದೀಗ ಮತ್ತೆರಡು ಪ್ರಶಸ್ತಿಗಳು ಘೋಷಣೆಯಾಗಿವೆ. ಕಾಮಕಾಜಿ ಬಿ 2 ಬಿ ಮೀಡಿಯಾ ರವರು ಪ್ರತಿಷ್ಠಾಪಿಸಿರುವ 15ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್‌ ಹಾಗೂ ಸಪ್ಲೈ ಚೈನ್‌ ಲೀಡರ್‌ ಶಿಪ್‌ ಪ್ರಶಸ್ತಿಯು KSRTCಗೆ ಸಿಗಲಿವೆ. ಮತ್ತೆರಡು ಪ್ರಶಸ್ತಿಗಳು ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವರ್ಗಗಳಲ್ಲಿ ನಿಗಮಕ್ಕೆ ಪ್ರಶಸ್ತಿ ಲಭಿಸಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 14ರಂದು ಸೆಪ್ಟಂಬರ್‌ 2023 ಮುಂಬಯಿಯ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಭದ್ರಾ ಮೇಲ್ದಂಡೆ ಸಭೆ; ಮುಂದಿನ ವರ್ಷದೊಳಗೆ ಯೋಜನೆ ಅನುಷ್ಠಾನಗಿಳಿಸುವ ಗುರಿ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಮುಂದಿನ ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿ ರೈತರಿಗೆ ನೀರು ನೀಡಬೇಕೆಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದ್ದಾರೆ . ವಿಧಾನಸೌಧದಲ್ಲಿ ಅವರು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು, .ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣ ಚಿತ್ತಯ್ಯ ಹಾಗೂ ಕಾನೂನು ಇಲಾಖೆ ಕಾರ್ಯದರ್ಶಿ ಜಗದೀಶ್ ಸೇರಿದಂತೆ ಜಲಸಂಪನ್ನೂಲ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ವೇಗ ನೀಡುವ ಸಂಬಂಧ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆ ಭಾಗದ ಶಾಸಕರ ಹಾಗೂ ಸಂಸದರ ಸಭೆಯನ್ನ ಅತೀ ಶೀಘ್ರದಲ್ಲಿ ಕರೆಯುವುದಾಗಿ ಜಯಚಂದ್ರ ತಿಳಿಸಿದರು. ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ ಹಾಗೂ ನಾರಾಯಣಸ್ವಾಮಿ ಅವರ ಜೊತೆ ತಮ್ಮ ನೇತೃತ್ವದಲ್ಲಿ…

Uncategorized

ಕಾವೇರಿ ಕಿಚ್ಚು; ಸರ್ಕಾರದ ವಿರುದ್ದ ರೈತರ ರೊಚ್ಚು; ರಾಜ್ಯಾದ್ಯಂತ ಸಂಸದರ ಕಚೇರಿಗಳಿಗೆ ಲಗ್ಗೆ

ಮೈಸೂರು: ರಾಜ್ಯದಲ್ಲಿ ಕಾವೇರಿ ಕಿಚ್ಚು ಸರ್ಕಾರ ಹಾಗೂ ರಾಜಕೀಯ ಪಕ್ಷಗಳಿಗೆ ಸವಾಲೆಂಬಂತಾಗಿದೆ. ಸರ್ಕಾರದ ವಿರುದ್ದ ರೈತರ ರೊಚ್ಚುಗೆದ್ದಿದ್ದು ರಾಜ್ಯಾದ್ಯಂತ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿವೆ. ರಾಜ್ಯಾದ್ಯಂತ ಸಂಸದರ ಕಚೇರಿಗಳಿಗೂ ಲಗ್ಗೆ ಹಾಕಿ ಕೇಂದ್ರದಲ್ಲಿ ರಾಜ್ಯದ ಪರ ಧ್ವನಿ ಎತ್ತುವಂತೆ ಒತ್ತಡ ಹೇರುವ ಪ್ರಯತ್ನವೂ ನಡೆಯಿತು. ಕರ್ನಾಟಕದ ವಿವಿಧ ಜಿಲ್ಲೆಗಳ ಲೋಕಸಭಾ ಸದಸ್ಯರ ಕಚೇರಿ ಮುಂದೆ ಬೆಳಿಗ್ಗೆಯೇ ಜಮಾಯಿಸಿದ ರೈತ ಸಂಘಟನೆಗಳ ಕಾರ್ಯಕರ್ತರು, ಪ್ರತಿಭಟನೆ ನಡೆಸಿ ಒತ್ತಾಯ ಪತ್ರ ಸಲ್ಲಿಸಿದರು. ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ ಧಾರವಾಡ, ಬೆಳಗಾವಿ, ಗುಲ್ಬರ್ಗ, ಗದಗ್ ಜಿಲ್ಲೆಗಳ ಲೋಕಸಭಾ ಸದಸ್ಯರ ಕಚೇರಿ ಮುಂದೆ ರಾಜ್ಯ ರೈತ ಸಂಘಟನೆ ಒಕ್ಕೂಟ, ಕನ್ನಡ ಪರ ಸಂಘಟನೆಗಳು ರಾಜ್ಯ ಕಬ್ಬು ಬೆಳೆಗಾರ ಸಂಘ ಪ್ರತಿಭಟನೆ ನಡೆಸಿತು.  ತಾವು ಲೋಕಸಭಾ ಸದಸ್ಯರಾಗಿ ಕೂಡಲೇ ರೈತರ  ಒತ್ತಾಯಗಳ ಬಗ್ಗೆ…

Uncategorized

‘ಪಪ್ಪಾಯಿ’ಆಹಾರ ಮತ್ರವಲ್ಲ ಆರೋಗ್ಯ ಕಾಪಾಡುವ ಮನೆ ಮದ್ದು..!

ಪಪ್ಪಾಯಿ ನಿತ್ಯದ ಬದುಕಿನಲ್ಲಿ ಸವಿಯಾದ ಆಹಾರ. ಈ ಹಣ್ಣು ಆಹಾರ ಮಾತ್ರವಲ್ಲ, ಆರೋಗ್ಯ ಕಾಪಾಡುವ ಮನೆ ಮದ್ದೂ ಹೌದು. ಆರೋಗ್ಯಕ್ಕೆ ಚೈತನ್ಯ ತುಂಬುವ ಪಪ್ಪಾಯಿ ಚರ್ಮ ಸೌಂದರ್ಯಕ್ಕೂ ಸಹಕಾರಿ. ಹಾಗಾಗಿ ಇದನ್ನು ಬಹುಪಯೋಗಿ ಹಣ್ಣು ಎಂದು ಕರೆಯಲಾಗುತ್ತದೆ. ಪಪ್ಪಾಯಿಯಲ್ಲಿ ಪಪೈನ್ ಎಂಬ ಏನ್ಜೈಮ್ ಇದೆ ಯಾವದು ಸತ್ತುಹಾಕಲಾಗದ ಮೈಲನ ಅಣುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪಪ್ಪಾಯಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಳಂಕಗಳನ್ನು ಕಡಿಮೆ ಮಾಡುತ್ತದೆ ಮತ್ತು ಮುಖ ಚೊಕ್ಕಟವಾಗುತ್ತದೆ. ಪಪ್ಪಾಯಿಯ ಫೇಸ್ ಪ್ಯಾಕ್ ಉಪಯೋಗಿಸುವುದರಿಂದ ಚರ್ಮ ನವೀಕರಣವಾಗಲೂ ಹಾಗೂ ಚರ್ಮ ಹಳೆಯಾಗದಂತೆ ಕಾಪಾಡಲು ಸಹಾಯ ಮಾಡುತ್ತದೆ. ನಯವಾದ ಪಪ್ಪಾಯಿಯನ್ನು ಬಳಸಿದಾಗ, ಅದರಲ್ಲಿರುವ ಅನೇಕ ವಿಟಮಿನ್ಸ್ ಮತ್ತು ಮೈನರಲ್ಸ್ ಚರ್ಮಕ್ಕೆ ಪೋಷಣೆ ಒದಗಿಸುತ್ತವೆ ಮತ್ತು ಚರ್ಮವನ್ನು ಹೊಳೆಯಾಗಿಸುತ್ತವೆ. ಪಪ್ಪಾಯಿ ಸೇವನೆಯು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಉಪಯುಕ್ತವಾದದ್ದು. ಅದನ್ನು ನಿಯಮಿತವಾಗಿ ಸೇವಿಸಲು ಮತ್ತು ಮುಖ ಮೇಲೆ ಫೇಸ್ ಪ್ಯಾಕ್…

ಕೂದಲು, ಚರ್ಮಕ್ಕೆ ನಿಂಬೆಯ ಸಿಪ್ಪೆ ಒಳ್ಳೆಯವು, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ

ನಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳು ಅನೇಕ. ಈ ಹಣ್ಣು ರೋಗ ನಿವಾರಣೆಯಲ್ಲಿ ತುಂಬಾ ಸಹಾಯಕವಾಗಿದೆ. ಅನೇಕ ಜನರು ನಿಂಬೆಹಣ್ಣನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಇದು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಅದರಲ್ಲಿರುವ ವಿಟಮಿನ್ ಸಿ ರೋಗ ನಿರೋಧನಾ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಂಬೆಯ ಸಿಪ್ಪೆಗಳು ಕೂದಲು ಮತ್ತು ಚರ್ಮಕ್ಕೆ ಒಳ್ಳೆಯವು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದರಲ್ಲಿರುವ ಪಾಲಿಫಿನಾಲ್ ಫ್ಲೇವನಾಯ್ಡ್‌ಗಳು ಸಹಾಯಕವಾಗಿವೆ. ನಿಂಬೆ ಸಿಪ್ಪೆ ತ್ವಚೆಯ ಅಣುಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಹೊಳಪಿಸುತ್ತದೆ. ನಿಂಬೆಯ ಸಿಪ್ಪೆ ಗಾಯವನ್ನು ಗುಣಮಾಡುತ್ತದೆ. ಮನೋಲ್ಲಾಸಕ್ಕೆ ಮತ್ತು ಮನಸ್ಸಿನ ಸ್ಥಿತಿಯನ್ನು ಸುಧಾರಿಸಲು ನಿಂಬೆಯ ಸಿಪ್ಪೆಗಳ ಸೇವನೆ ಉತ್ತಮ. ನಿಂಬೆಯ ಸಿಪ್ಪೆಯನ್ನು ಸಾಬೂನುಗಳಲ್ಲಿ ಬಳಸಿದಾಗ, ಅದು ತ್ವಚೆಗೆ ಅತಿಯಾದ ರಕ್ಷಣೆಯನ್ನು ನೀಡುತ್ತದೆ. ನಿಂಬೆಯ ಸಿಪ್ಪೆಗಳನ್ನು ಸಾಬೂನುಗಳ ಮತ್ತು ಕ್ರೀಮ್‌ಗಳಲ್ಲಿ ಬಳಸಿದಾಗ, ಅವು ತ್ವಚೆಯ ಅಣುಗಳನ್ನು ಸುಧಾರಿಸುವ ಗುಣವನ್ನು ಹೊಂದಿವೆ

ದೇಶಕ್ಕೆ ಈಗ ಅಗತ್ಯವಿರುವುದು ‘ಒಂದು ರಾಷ್ಟ್ರ, ಒಂದು ಶಿಕ್ಷಣ’; ಕೇಜ್ರಿವಾಲ್

ದೆಹಲಿ; ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆಯ ಕುರಿತ ಚರ್ಚೆನಡೆದಿರುವಾಗಲೇ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕುರೂಹಲಕಾರಿ ಅಭಿಪ್ರಾಯ ಮುಂದಿಟ್ಟಿದ್ದಾರೆ, ನಮಗೆ ‘ಒಂದು ರಾಷ್ಟ್ರ, ಒಂದು ಶಿಕ್ಷಣ’ ಅವಶ್ಯಕವಿದೆ ಎಂದು ಅವರು ಹೇಳಿದ್ದಾರೆ. ಹರಿಯಾಣದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ, ಕೇಜ್ರಿವಾಲ್, ಬಿಜೆಪಿಯ ನಿಲುವಿನ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದರು. ತಮ್ಮ ದೃಷ್ಟಿಯಲ್ಲಿ, ಚುನಾವಣೆಗಳ ಸಂಖ್ಯೆಗಿಂತ ಗುಣಮಟ್ಟದ ಶಿಕ್ಷಣವೇ ಪ್ರಾಧಾನ್ಯವುಳ್ಳದ್ದು. ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಮಟ್ಟದ ಶಿಕ್ಷಣ ಹಾಗೂ ಗೌರವ ಸಿಗಬೇಕು ಎಂದು ಪ್ರತಿಪಾದಿಸಿದರು, ಸಾಮಾನ್ಯ ಜನರಿಗೆ ಸಾಧಾರಣ ಚುನಾವಣೆಯಿಂದ ಏನು ಲಾಭವಿದೆ ಎಂದು ಪ್ರಶ್ನಿಸಿದ ಕೇಜ್ರಿವಾಲ್, ರಾಷ್ಟ್ರದ ಶಿಕ್ಷಣ ಮತ್ತು ಸಾಮಾಜಿಕ ಸ್ಥಿತಿಯ ಮೇಲೆ ಗಮನಕೇಂದ್ರೀಕರಿಸುವ ಅಗತ್ಯವಿದೆ ಎಂದರು. #WATCH | Bhiwani, Haryana: On 'One Nation, One Election', Delhi CM Arvind Kejriwal says, "The BJP has come up with…