ಹಿಮಾಚಲ ಪ್ರದೇಶದಲ್ಲಿ ಮಳೆ, ಪ್ರವಾಹ; 60 ಕ್ಕೂ ಹೆಚ್ಚು ಮಂದಿ ಬಳಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ, ಪ್ರವಾಹಕ್ಕೆ 60 ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದೆ. ಬಳಿ ಭಾರೀ ಮಳೆಯು ಹಿಮಾಚಲ ಪ್ರದೇಶವನ್ನು ಬಿಕ್ಕಟ್ಟಿನ ಸ್ಥಿತಿಗೆ ದೂಡಿದೆ, ಮೇಘಸ್ಫೋಟ, ಭೂಕುಸಿತಗಳು ಮತ್ತು ರಸ್ತೆ ಅವಘಡಗಳು 60 ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿವೆ ಸಈನಿ ಭೂ ಕುಸಿತ ಪ್ರಕರಣಗಳಲ್ಲಿ ಹಲವಾರು ಸಮಾಧಿಯಾಗಿದ್ದು ಅನೇಕ ವಾಹನಗಳೂ ಅವಶೇಷಗಳ ಅಡಿಯಲ್ಲಿ ಸಿಲುಕಿವೆ. ಅವುಗಳನ್ನು ಹೊರತೆಗೆಯಲು ಅವಿರತ ಪ್ರಯತ್ನಗಳು ನಡೆದಿವೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ಎರಡರಲ್ಲೂ ಮಳೆ ಅವಾಂತರ ಮುಂದುವರೆದಿದೆ. ಮುಂದಿನ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಪ್ರತ್ಯೇಕವಾದ ಇನ್ನೂ ಗಣನೀಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕು; ಆಗಸ್ಟ್ 20ರಿಂದ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕಾಗಲಿದೆ. ಕರ್ನಾಟಕದಾದ್ಯಂತ ಆಗಸ್ಟ್​ 20ರಿಂದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ ಸಹಿತ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 20ರ ನಂತರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ವಿಶ್ಲೇಷಿಸಿದೆ.

ನವೆಂಬರ್ 2 ರಿಂದ 15 ರವರೆಗೆ ಹಾಸನಾನೆಂಬೆ ಜಾತ್ರೆ; ಮಹಾ ವೈಭವಕ್ಕೆ ತಯಾರಿ

ಹಾಸನ: ಪುರಾಣ ಪ್ರಸಿದ್ಧ ಹಾಸನಾಂಬೆ ಜಾತ್ರಗೆ ಮುಹೂರ್ತ ನಿಗದಿಯಾಗಿದ್ದು, ಈ ಬಾರಿ ನವೆಂಬರ್ 2 ರಿಂದ ನವೆಂಬರ್ 15ರವರೆಗೆ ವಿಶೇಷ ಮಹೋತ್ಸವ ನಡೆಯಲಿದೆ. ಹಾಸನಾಂಬೆ ಜಾತ್ರೆಯ ತಯಾರಿ ಸಂಬಂಧ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ರಾಜಣ್ಣ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯ ಹೇಮಾವತಿ ಸಭಾಂಗಣದ ಸಭೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಗಳಿರುವುದರಿಂದ ಸುಸೂತ್ರ ತಯಾರಿ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ಜಾತ್ರೆಯಲ್ಲಿ ಈ ವರ್ಷ 14 ದಿನಗಳು 24 ಗಂಟೆ ದೇವಿಯ ದರ್ಶನ ಮಾಡಬಹುದಾಗಿದೆ.

“OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ “OMG 2” ಸಿನಿಮಾ ಖ್ಯಾತಿಯ ಶಿಖರವನ್ನೇರಿದೆ. ಸ್ವಾತಂತ್ರ್ಯ ದಿನದಂದು ಭರ್ಜರಿ ಪ್ರದರ್ಶನದೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿದೆ. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರೀಯ ರಾಜಾ ದಿನವಾದ ಮಂಗಳವಾರ “OMG 2” ಚಿತ್ರವು ತನ್ನ ಅತ್ಯಧಿಕ ಏಕದಿನ ಸಂಗ್ರಹವನ್ನು ಸಾಧಿಸಿದೆ. ಈ ಮೂಲಕ ಈ ವಾರ 100 ಕೋಟಿ ರೂಪಾಯಿ ಮಾರ್ಕ್ ಅನ್ನು ಮೀರುವ ನಿರೀಕ್ಷೆ ಹುಟ್ಟಿದೆ. ಮಂಗಳವಾರದಂದು “OMG 2” ಚಿತ್ರವು 18.5 ಕೋಟಿ ರೂಪಾಯಿ ಗಳಿಸಿದ್ದು ಮೊದಲ ಐದು ದಿನಗಳಲ್ಲಿ ಬರೋಬ್ಬರಿ 73.67 ಕೋಟಿ ರೂಪಾಯಿ ಆದಾಯ ಗಳಿಸಿದೆ. https://www.youtube.com/watch?v=Y6ZKXqM7HNQ

ಪರಿಷತ್ ನಾಮಕರಣ; ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಹೆಸರು ಫೈನಲ್

ಬೆಂಗಳೂರು: ವಿಧಾನ ಪರಿಷತ್ತಿನ ಖಾಲಿ ಇರುವ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಪ್ರಕ್ರಿಯೆ ಇದೀಗ ರೋಚಕ ಘಟ್ಟ ತಲುಪಿದೆ. ಪರಿಷತ್ತಿನ ಮೂರು ನಾಮನಿರ್ದೇಶನ ಸ್ಥಾನಗಳಿಗೆ ಮಾಜಿ ಸಚಿವೆ ಉಮಾಶ್ರೀ ಎಂ.ಆರ್. ಸೀತಾರಾಮ್ ಹಾಗೂ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಹೆಸರನ್ನು ಅಂತಿಮಗೊಳಿಸಿರುವ ಸರ್ಕಾರ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಿದೆ. ಉಮಾಶ್ರೀ ಅವನ್ನು ಕಲಾವಿದರ ಕೋಟಾದಡಿ ಪರಿಗಣಿಸಿದರೆ, ಎಂ.ಆರ್.ಸೀತಾರಾಮ್ ಅವರನ್ನು ಶಿಕ್ಷಣ ಕ್ಷೇತ್ರದ ಕೋಟಾದಡಿ ಪರಿಗಣಿಸಲಾಗಿದೆ. ಹಾಗೂ ಸುಧಾಮ್ ದಾಸ್ ಅವರನ್ನು ಸಮಾಜಸೇವೆ ಹೆಸರಲ್ಲಿ ಪರಿಗಣಿಸಿ ನಾಮನಿರ್ದೇಶನ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ಕಾವೇರಿ ವಿವಾದ; ನೀರಿಗಾಗಿ ತಮಿಳುನಾಡು ಮೊರೆ

ದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕ್ಯಾತೆ ತೆಗೆದಿದೆ. ತಮ್ಮ ರಾಜ್ಯಕ್ಕೆ 24,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಬೆಳೆದು ನಿಂತಿರುವ ಬೆಳೆಗಾಗಿ 24, 000 ಕ್ಯೂಸೆಕ್ಸ್ ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿದೆ. ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ ಮುಂದಿನ 15 ದಿನಗಳವರೆಗೆ ಪ್ರತಿದಿನ 0.864 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಈ ತಿಂಗಳ 11 ರಂದು ಸೂಚಿಸಿತ್ತು. ಆದರೆ, ಕರ್ನಾಟಕ ಸರ್ಕಾರ ನೀರು ಬಿಟ್ಟಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಗಮನಸೆಳೆದಿದೆ.

ವಾಘಾ ಗಾಡಿಯಲ್ಲಿ ಹೀಗೊಂದು ‘ಬೀಟಿಂಗ್‌ ರಿಟ್ರೀಟ್‌’ ರೋಮಾಂಚನ

ಅಮೃತಸರ: ಭಾರತ ಸ್ವಾತಂತ್ರ್ಯ ದಿನದಂದು ಭಾರತ-ಪಾಕಿಸ್ತಾನ ಗಡಿ ರೊನಾಂಚಕಾರಿ ಸನ್ನಿವೇಶಕ್ಕೆ saaಕ್ಷಿಯಾಯಿರು, ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಮಂಗಳವಾರ ರೋಚಕ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮ ಗಮನಸೆಳೆಯಿತು. ಗಡಿ ಭದ್ರತಾ ಪಡೆಯ ಯೋಧರು ಹಾಗೂ ಪಾಕಿಸ್ತಾನಿ ರೇಂಜರ್ ಗಳು ಜಂಟಿಯಾಗಿ ಬೀಟಿಂಗ್‌ ರಿಟ್ರೀಟ್‌ ನಡೆಸಿದರು. ಯೋಧರ ಕಸರತ್ತನ್ನು ಸಾಕ್ಷೀಕರಿಸಿದ ಉಭಯ ದೇಶಗಳ ಜನರು ಮೂಕ ವಿಸ್ಮಿತರಾದರು. #WATCH | The beating retreat ceremony underway at the Attari-Wagah border in Punjab’s Amritsar on the occasion of #IndependenceDay pic.twitter.com/JufrsoqMOh — ANI (@ANI) August 15, 2023

207.15 ಕೋಟಿ ರೂಪಾಯಿ ಆದಾಯ ಗಳಿಸಿದ “ಜೈಲರ್”

ರಜನಿಕಾಂತ್ ಅಭಿನಯದ “ಜೈಲರ್” ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಹೊಸ ದಾಖಲೆಗಳನ್ನು ಸ್ಥಾಪಿಸಿದೆ. ಸ್ವಾತಂತ್ರ್ಯ ದಿನದಂದು “ಜೈಲರ್” 33 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರವು ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ಸಾಧಿಸಿದ ₹ 200 ಕೋಟಿ ಮೈಲಿಗಲ್ಲನ್ನು ದಾಟಿದೆ. ಶುಕ್ರವಾರ ₹ 25.75 ಕೋಟಿ, ಶನಿವಾರ ₹ 34.3 ಕೋಟಿ, ಭಾನುವಾರ ₹42.2 ಕೋಟಿ ರೂಪಾಯಿ ಗಳಿಸಿದ್ದ “ಜೈಲರ್”, ಸ್ವಾತಂತ್ರ್ಯ ದಿನದಂದು ಭರ್ಜರಿ ಚೇತರಿಕೆ ಕಂಡು ₹33 ಕೋಟಿ ಕಲೆಕ್ಷನ್ ಮಾಡಿದೆ. ಪ್ರದರ್ಶನ ಕಂಡ ಆರಂಭದ ಆರು ದಿನಗಳ ಅವಧಿಯಲ್ಲಿ ಭಾರತದ ಎಲ್ಲಾ ಭಾಷೆಗಳಿಗೆ ಚಿತ್ರ 207.15 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ.  

ಹಾಡೋನಹಳ್ಳಿ ಬಳಿ ಹಿಟ್ ಅಂಡ್ ರನ್: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ದೊಡ್ಡಬಳ್ಳಾಪುರ: ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾಡೋನಹಳ್ಳಿ ಬಳಿ ಮಂಗಳವಾರ ಸಂಜೆ ನಡೆದಿದೆ. ಹಾಡೋನಹಳ್ಳಿ ನಿವಾಸಿ ದೇವರಾಜ್(44) ಮೃತ ದುರ್ದೈವಿ. ಬೈಕ್‌ ಗೆ ಹೊಡೆದ ಕಾರು ಚಾಲಕ ಸ್ಥಳದಿಂದ  ಪರಾರಿಯಾಗಿದ್ದಾನೆ. ಕಾರಿನಲ್ಲಿ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಬಂದು ದೇವರ ದರ್ಶನ ಪಡೆದು ದೊಡ್ಡಬಳ್ಳಾಪುರ ಕಡೆ ಹೋಗುವ ವೇಳೆ ಕಾರು ದೊಡ್ಡಬಳ್ಳಾಪುರದಿಂದ ಹಾಡೋನಹಳ್ಳಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ‌ ಹೊಡೆದಿದೆ. ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

‘ಭಾರತಾಂಬೆ’ಯಾಗಿ ಗಮನಸೆಳೆದ ‘ಶ್ರೀ ಕಟೀಲೇಶ್ವರಿ’; ಕರಾವಳಿಯ ಪುಣ್ಯಕ್ಷೇತ್ರದಲ್ಲಿ ವಿಶೇಷ ರೀತಿ ಸ್ವಾತಂತ್ರ್ಯೋತ್ಸವ

ಮಂಗಳೂರು: ಜಗದಾಂಬೆ ಶ್ರೀ ಕಟೀಲೇಶ್ವರಿ ಇಂದು ಭಾರತಾಂಭೆಯಾಗಿ ಗಮನಸೆಳೆದದ್ದು ವಿಶೇಷ. ಸ್ವಾತಂತ್ರ್ಯೋತ್ಸವ ದಿನದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ವಿಗ್ರಹವು ರಾಷ್ಟ್ರಧ್ವಜದ ಬಣ್ಣದ ವಸ್ತ್ರಾಲಂಕಾರದಿಂದ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿತ್ತು. ಕರಾವಳಿಯ ಪುಣ್ಯಕ್ಷೇತ್ರ ಕಟೀಲಿನಲ್ಲೂ ದೇಶಭಕ್ತಿಯ ಮಹಾ ಹಬ್ಬವನ್ನು ಆಚರಿಸಲಾಯಿತು. ಹಿಂದೂ ಧಾರ್ಮಿಕ ಹಬ್ಬಗಳಂದು ವಿಶೇಷ ಕೈಂಕರ್ಯಗಳಿಂದ ಭಕ್ತರನ್ನು ಕೈಬೀಸಿ ಕರೆಯುವ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಈ ರೀತಿಯ ಆಕರ್ಷಣೆ ಕಂಡುಬಂತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅನುವಂಶೀಯ ಹಿರಿಯ ಅರ್ಚಕರಾದ ಅನಂತ ಆಸ್ರಣ್ಣ ಅವರ ಪುತ್ರ ಶ್ರೀಕರ ಆಸ್ರಣ್ಣ ಅವರ ಕೈಚಳಕದಿಂದಾಗಿ ದೇವಿ ಇಂದು ಭಾರತ ಮಾತೆಯಾಗಿ ಕಂಗೊಳಿಸಿದ್ದಾಳೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಶ್ರೀಕರ ಆಸ್ರಣ್ಣ ಅವರು ಈ ರೀತಿಯ ಅಲಂಕಾರ ಮಾಡಿ ಕೈಂಕರ್ಯ ನೆರವೇರಿಸುತ್ತಿದ್ದಾರೆ ಎಂದು ಅನಂತ ಆಸ್ರಣ್ಣ ತಿಳಿಸಿದ್ದಾರೆ.  https://www.youtube.com/watch?v=2A912hJMCdU&feature=youtu.be ವಿಶೇಷ ರೀತಿ ಸ್ವಾತಂತ್ರ್ಯೋತ್ಸವ: ಶ್ರೀ ಕ್ಷೇತ್ರ ಕಟೀಲಿನ…