ಲೈವ್ ವರದಿ ವೇಳೆ ಹೆಲಿಕಾಪ್ಟರ್ ಪತನ; ಮೂವರ ಸಾವು

ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಲೈವ್ ಸುದ್ದಿ ವರದಿ ಮಾಡುತ್ತಿದ್ದ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಪಾರ್ಕಿಂಗ್ ಲಾಟ್‌ಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಯಾನ್ ಫೆರ್ನಾಂಡೋ ಕಣಿವೆಯ ಚಾಟ್ಸ್‌ವರ್ತ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ್ದ ಬಸ್‌-ಎಸ್‌ಯುವಿ ಅಪಘಾತದ ದೃಶ್ಯಗಳನ್ನು ‘ಎನ್‌ಬಿಸಿ ನ್ಯೂಸ್’ಗಾಗಿ ಹೆಲಿಕಾಪ್ಟರ್ ಮೂಲಕ ಚಿತ್ರೀಕರಿಸಲಾಗುತ್ತಿತ್ತು. ಸಂಜೆ ಸುಮಾರು 7 ಗಂಟೆ ವೇಳೆಗೆ ಹೆಲಿಕಾಪ್ಟರ್ ಏಕಾಏಕಿ ನಿಯಂತ್ರಣ ಕಳೆದುಕೊಂಡು ಕಟ್ಟಡವೊಂದರ ಪಾರ್ಕಿಂಗ್ ಸ್ಥಳಕ್ಕೆ ಅಪ್ಪಳಿಸಿದೆ. ಘಟನೆಯ ದೃಶ್ಯಗಳು ಹೆಲಿಕಾಪ್ಟರ್‌ನಲ್ಲಿದ್ದ ಕ್ಯಾಮೆರಾದಲ್ಲಿ ದಾಖಲಾಗಿವೆ. ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪಾರ್ಕಿಂಗ್ ಲಾಟ್‌ನಲ್ಲಿದ್ದ ನಾಲ್ಕು ಕಾರುಗಳು ಹಾಗೂ ಎರಡು ಶೇಖರಣಾ ಕಂಟೈನರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಎನ್‌ಬಿಸಿ ವಾಹಿನಿಯ ಲೈವ್ ಪ್ರಸಾರದ ವೇಳೆ ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸುದ್ದಿ ನಿರೂಪಕಿ ಕಾಲೀನ್ ವಿಲಿಯಮ್ಸ್ ಭಾವುಕರಾಗಿ ಪ್ರಸಾರವನ್ನು ಸ್ಥಗಿತಗೊಳಿಸಿದರು. ಹೆಲಿಕಾಪ್ಟರ್‌ನಲ್ಲಿ ಎಷ್ಟು…

ಮಂಗಳೂರು ಜೈಲು ಜಾಮರ್ ವಿವಾದ: ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ತೆರೆ, ತಾಂತ್ರಿಕ ಪರಿಹಾರಕ್ಕೆ ಒತ್ತು ನೀಡಲು ವಕೀಲ ಮನೋರಾಜ್ ರಾಜೀವ ಅಗ್ರಹ

ಮಂಗಳೂರು: ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ಸಿಗ್ನಲ್ ಜಾಮರ್‌ಗೆ ಸಂಬಂಧಿಸಿದ ವಿವಾದವನ್ನು ರಾಜಕೀಯ ಆರೋಪ-ಪ್ರತ್ಯಾರೋಪದ ಬದಲು ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಶೀಲನೆಯ ಮೂಲಕ ಪರಿಹರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್‌ಟಿಐ ವಿಭಾಗದ ಅಧ್ಯಕ್ಷ, ವಕೀಲ ಮನೋರಾಜ್ ರಾಜೀವ ಪ್ರತಿಪಾದಿಸಿದ್ದಾರೆ . ಜೈಲು ಜಾಮಾರ್ ವ್ಯವಸ್ಥೆಯಿಂದ ಸಾರ್ವಜನಿಕರು ಪರದಾಡುವಂಟಾಗಿದ್ದಾರೆ, ಆ ವಿಚಾರವನ್ನು ಮುಂದಿಟ್ಟು ಕೆಲವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಕಾನೂನು ತಜ್ಞರೂ ಆದ ಮನೋರಾಜ್ ರಾಜೀವ್ ಬೇಸರ ವ್ಯಕ್ತಪಡಿಸಿದ್ಧತೆ. ಈ ಕುರಿತಂತೆ ಅವರು ಮಂಗಳೂರಿನಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿ ಗಮನಸೆಳೆಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹದ ಭದ್ರತೆ ಹಾಗೂ ಕಾರಾಗೃಹದೊಳಗೆ ಅನಧಿಕೃತ ಮೊಬೈಲ್ ಫೋನ್ ಬಳಕೆಯನ್ನು ತಡೆಯುವುದು ಅತ್ಯಗತ್ಯ. ಆದರೆ ಕಾರಾಗೃಹದ ಹೊರಭಾಗದಲ್ಲಿರುವ ನ್ಯಾಯಾಲಯಗಳು, ವಕೀಲರು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಕಾನೂನುಬದ್ಧ…