ನವದೆಹಲಿ: ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. 13 ವರ್ಷಗಳ ಟೆಸ್ಟ್ ಪಯಣದ ನೆನಪುಗಳನ್ನು ಮೆಲುಕು ಹಾಕಿರುವ ಅವರು, ದೇಶಕ್ಕಾಗಿ ಏನಾದರೂ ಸಾಧಿಸಬೇಕೆಂಬ ಕನಸಿನೊಂದಿಗೆ ಭಾರತ ತಂಡದ ಬಿಳಿ ಜೆರ್ಸಿ ಧರಿಸಿದ್ದಾಗಿ ತಿಳಿಸಿದ್ದಾರೆ. “ಬಿಳಿ ಜೆರ್ಸಿಯನ್ನು ಬಿಟ್ಟು ಹೋಗುತ್ತಿದ್ದೇನೆ, ಆದರೆ ಅದರೊಂದಿಗೆ ಬೆಸೆದ ನೆನಪುಗಳನ್ನು ಎಂದಿಗೂ ಮರೆಯುವುದಿಲ್ಲ. ಪ್ರತಿಯೊಂದು ವಿಕೆಟ್, ಸವಾಲು, ಗಾಯ ಮತ್ತು ಪುನರಾಗಮನ ನನಗೆ ಹೊಸ ಪಾಠ ಕಲಿಸಿವೆ. ಟೆಸ್ಟ್ ಕ್ರಿಕೆಟ್ ನನಗೆ ಕೇವಲ ಒಂದು ಮಾದರಿಯಾಗಿರಲಿಲ್ಲ; ಅದು ನನ್ನ ಬದುಕಿನ ಅತ್ಯಂತ ವಿಶೇಷ ಭಾಗವಾಗಿತ್ತು” ಎಂದು ಬರೆದುಕೊಂಡಿದ್ದಾರೆ. ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲಿಸಿದ ಸಹ ಆಟಗಾರರು, ಕೋಚ್ಗಳು, ಕುಟುಂಬದವರು ಹಾಗೂ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅವಕಾಶ ನೀಡಿದ ಬಿಸಿಸಿಐ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ…
Year: 2026
ಪೋಲೆಂಡ್ನ ಕ್ರಾಕೋವ್ನಲ್ಲಿ ಗುಂಡಿನ ದಾಳಿ: ಐವರು ಸಾವು
ಕ್ರಾಕೋವ್: ಪೋಲೆಂಡ್ನ ಕ್ರಾಕೋವ್ ನಗರದ ಕೇಂದ್ರ ಭಾಗದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಬಂದೂಕುಧಾರಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆ ಚೌಕದ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ಲಾವ್ಕೋವ್ಸ್ಕಾ ರಸ್ತೆಯಿಂದ ಮಾರುಕಟ್ಟೆ ಚೌಕದತ್ತ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿ, ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಮತ್ತು ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದವು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ಗಳ ಜೊತೆಗೆ ವೈದ್ಯಕೀಯ ಹೆಲಿಕಾಪ್ಟರ್ ಬಳಸಲಾಯಿತು. ದಾಳಿಕೋರನನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಘಟನಾ ಪ್ರದೇಶದಿಂದ ದೂರವಿರುವಂತೆ ಸೂಚಿಸಲಾಗಿದೆ. ಘಟನೆಯ ಬಳಿಕ ಕ್ರಾಕೋವ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪೋಲೆಂಡ್ ಪ್ರಧಾನಿ…
ಬಾಬ್ರಿ ಕಟ್ಟಡ ಧ್ವಂಸ ವಿಚಾರ: ರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಎಂದು ಬಿಜೆಪಿ ಆರೋಪ
ನವದೆಹಲಿ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ದ್ವಂದ್ವ ನಿಲುವು ಹೊಂದಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ. ಬಾಬ್ರಿ ಕಟ್ಟಡ ಧ್ವಂಸ ಮತ್ತು ಇತರ ರಾಷ್ಟ್ರೀಯ ವಿಷಯಗಳ ಕುರಿತು ಕಾಂಗ್ರೆಸ್ ನಾಯಕತ್ವದ ಪ್ರತಿಕ್ರಿಯೆಗಳನ್ನು ಅವರು ಪ್ರಶ್ನಿಸಿದ್ದಾರೆ. ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತ್ರಿವೇದಿ, 1992ರ ಡಿಸೆಂಬರ್ 6ರಂದು ಬಾಬ್ರಿ ಕಟ್ಟಡ ಧ್ವಂಸಗೊಂಡಾಗ ಸೋನಿಯಾ ಗಾಂಧಿ ಭಾವುಕರಾಗಿದ್ದರು ಎಂಬ ವರದಿಗಳನ್ನು ಉಲ್ಲೇಖಿಸಿದರು. ಆದರೆ ಕಾಶ್ಮೀರಿ ಹಿಂದೂಗಳ ವಲಸೆ ಹಾಗೂ ಸಂಸತ್ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಇದೇ ರೀತಿಯ ಕಾಳಜಿ ತೋರಿಸಿರಲಿಲ್ಲವೇಕೆ ಎಂದು ಪ್ರಶ್ನಿಸಿದರು. ಸೋನಿಯಾ ಗಾಂಧಿ ವಿವಾದಿತ ಕಟ್ಟಡವನ್ನು ‘ಬಾಬ್ರಿ ಮಸೀದಿ’ ಎಂದು ಉಲ್ಲೇಖಿಸಿರುವ ವರದಿಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಅಂದು ದೂರದರ್ಶನದಲ್ಲಿ ಇಡೀ ದಿನ ನೇರ ಪ್ರಸಾರ ಇರದಿದ್ದಾಗ ಅವರು…
ಮ್ಯಾಂಚೆಸ್ಟರ್ ಸಿಟಿಗೆ ಸತತ ಮೂರನೇ ಸೋಲು: ಫಾರೆಸ್ಟ್ಗೆ 3-1 ಜಯ
ಮ್ಯಾಂಚೆಸ್ಟರ್: ಇಂಗ್ಲಿಷ್ ಪ್ರೀಮಿಯರ್ ಲೀಗ್ನಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡ ನಾಟಿಂಗ್ಹ್ಯಾಮ್ ಫಾರೆಸ್ಟ್ ವಿರುದ್ಧ 1-3 ಗೋಲುಗಳಿಂದ ಸೋಲು ಕಂಡಿದೆ. ಲಿಯಾಮ್ ಡೆಲಾಪ್ ಎರಡು ಗೋಲು ದಾಖಲಿಸಿ ಫಾರೆಸ್ಟ್ ಗೆಲುವಿನ ರೂವಾರಿಯಾದರು. ಆರನೇ ನಿಮಿಷದಲ್ಲಿ ಜೈರ್ ಕುನ್ಹಾ ಗೋಲು ಬಾರಿಸಿ ಫಾರೆಸ್ಟ್ಗೆ ಮುನ್ನಡೆ ತಂದುಕೊಟ್ಟರು. 18ನೇ ನಿಮಿಷದಲ್ಲಿ ಮಾಜಿ ಸಿಟಿ ಆಟಗಾರ ಡೆಲಾಪ್ ಮತ್ತೊಂದು ಗೋಲು ದಾಖಲಿಸಿದರು. ಹಿನ್ನಡೆ ತಗ್ಗಿಸಲು ಸಿಟಿ ಪ್ರಯತ್ನಿಸಿದರೂ ಎರ್ಲಿಂಗ್ ಹಾಲೆಂಡ್ ಅವರ ಗೋಲು ಪ್ರಯತ್ನವನ್ನು ಕುನ್ಹಾ ತಡೆದರು. ದ್ವಿತೀಯಾರ್ಧದಲ್ಲಿ ಡೆಲಾಪ್ ಮತ್ತೊಂದು ಗೋಲು ಬಾರಿಸಿ ಫಾರೆಸ್ಟ್ಗೆ 3-1ರ ಜಯ ಖಚಿತಪಡಿಸಿದರು. ಈ ಸೋಲಿನೊಂದಿಗೆ ಸಿಟಿ ಪ್ರೀಮಿಯರ್ ಲೀಗ್ನಲ್ಲಿ ಸತತ ಮೂರನೇ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡ ಅಗ್ರಸ್ಥಾನದ ಆರ್ಸೆನಲ್ಗಿಂತ ಆರು ಅಂಕ ಹಿಂದಿದೆ. ಬ್ರೈಟನ್ ಪಂದ್ಯದ ಫಲಿತಾಂಶದ ಆಧಾರದಲ್ಲಿ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ.
ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಜಲಾಶಯ ಕೈಬಿಡಬೇಡಿ: ಸಂಸದ ಡಾ.ಕೆ.ಸುಧಾಕರ್ ಆಗ್ರಹ
ಬೆಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಜಲಾಶಯವನ್ನು ಕೈಬಿಡದೆ, ಹಿಂದಿನ ವಿನ್ಯಾಸದಂತೆ ಕನಿಷ್ಠ 5ರಿಂದ 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಎತ್ತಿನಹೊಳೆ ಯೋಜನೆ ಅನುಷ್ಠಾನ ಕುರಿತು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶೀಘ್ರ ನೀರು ಪೂರೈಸಲು ಕಾಮಗಾರಿ ಚುರುಕುಗೊಳಿಸುವಂತೆ ಸೂಚಿಸಿದರು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಗುತ್ತಿಗೆದಾರರಿಗೆ ಬಾಕಿ ಪಾವತಿಸಿ ಕಾಮಗಾರಿ ಸ್ಥಗಿತವಾಗದಂತೆ ಕ್ರಮ ವಹಿಸಬೇಕು ಎಂದರು. ಬಳಿಕ ಮಾತನಾಡಿದ ಅವರು, ಹಿಂದಿನ ವಿನ್ಯಾಸದ ಬೈರಗೊಂಡ್ಲು ಜಲಾಶಯದಲ್ಲಿ 6 ಟಿಎಂಸಿ ನೀರು ಸಂಗ್ರಹಿಸುವ ಅವಕಾಶವಿತ್ತು. ಆದರೆ ಅದನ್ನು ಕೈಬಿಟ್ಟು ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿಯಲ್ಲಿ 1.6ರಿಂದ 1.8 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಿಸುವ ನಿರ್ಧಾರದಿಂದ ಮೂರು ಜಿಲ್ಲೆಗಳ ರೈತರಿಗೆ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಯೋಜನೆಯಡಿ ಒಟ್ಟು 24.1 ಟಿಎಂಸಿ…
ಕಲಬುರಗಿಯಲ್ಲಿ 6.06 ಎಕರೆ ಪ್ರದೇಶದಲ್ಲಿ ವಚನ ಮಂಟಪ ನಿರ್ಮಾಣ: ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲ್ಯಾಣ ನಾಡಿನ ಶರಣ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಸುಸಜ್ಜಿತ ‘ವಚನ ಮಂಟಪ’ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶರಣರ ತತ್ವಗಳು ಮತ್ತು ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಸಮ ಸಮಾಜದ ಆಶಯವನ್ನು ವಿಸ್ತರಿಸುವಲ್ಲಿ ವಚನ ಮಂಟಪ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ. ಕಲಬುರಗಿಯ ಕಪನೂರಿನಲ್ಲಿ 6.06 ಎಕರೆ ಪ್ರದೇಶದಲ್ಲಿ ವಚನ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಶರಣ ಶ್ರೇಷ್ಠರ ಪರಿಚಯ, ಅವರ ವಚನಗಳ ಪ್ರದರ್ಶನ ವ್ಯವಸ್ಥೆ, ವಸ್ತುಸಂಗ್ರಹಾಲಯ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ವಚನ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ತಜ್ಞರು ಸಿದ್ಧಪಡಿಸಿರುವ ವಿವಿಧ ವಿನ್ಯಾಸ ಮತ್ತು ಮಾದರಿಗಳನ್ನು ಪರಿಶೀಲಿಸಿ ಚರ್ಚಿಸಲಾಗಿದೆ. ಶರಣ ಪರಂಪರೆ, ಸಾಹಿತ್ಯ ಮತ್ತು ಸಮಾನತೆಯ ತತ್ವಗಳನ್ನು ಜನರಿಗೆ ತಲುಪಿಸುವ ಕೇಂದ್ರವಾಗಿ ವಚನ…
ಅಯೋಧ್ಯೆಯಲ್ಲಿ 10ನೇ ದೀಪೋತ್ಸವ ಸಂಭ್ರಮ: 30 ಲಕ್ಷಕ್ಕೂ ಅಧಿಕ ದೀಪಗಳ ಬೆಳಕಿನಲ್ಲಿ ರಾಮನ ನಗರಿ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 10ನೇ ಆವೃತ್ತಿಯ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಸರಯೂ ನದಿಯ 56 ಘಾಟ್ಗಳಲ್ಲಿ 30 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಲಾಗಿದೆ. ದೀಪೋತ್ಸವದ ಸಿದ್ಧತೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎನ್ಸಿಸಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ದೀಪಗಳ ವ್ಯವಸ್ಥೆ ಮಾಡಿದರು. ಸರಯೂ ನದಿ ತೀರದಲ್ಲಿ 2,151 ವೇದಾಚಾರ್ಯರು ಮತ್ತು ಪೂಜಾರಿಗಳಿಂದ ಮಹಾ ಆರತಿ ನೆರವೇರಿಸಲಾಯಿತು. ಸ್ಥಳೀಯವಾಗಿ ನಿರ್ಮಿಸಿದ 2,100 ಡ್ರೋನ್ಗಳ ಮೂಲಕ ಆಕಾಶದಲ್ಲಿ ರಾಮಾಯಣದ ಸನ್ನಿವೇಶಗಳನ್ನು ಪ್ರದರ್ಶಿಸಲಾಯಿತು. 12 ವೇದಿಕೆಗಳಲ್ಲಿ ಸುಮಾರು 2,500 ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಲಾವೋಸ್ ಮತ್ತು ದಕ್ಷಿಣ ಆಫ್ರಿಕಾದ ಕಲಾವಿದರು ಅಂತರರಾಷ್ಟ್ರೀಯ ರಾಮಲೀಲಾ ಪ್ರದರ್ಶನ ನೀಡಿದರು. ಎಂಟು ನಿಮಿಷಗಳ ಲೇಸರ್ ಶೋ, 20…
ಟೆಸ್ಟ್ ಕ್ರಿಕೆಟ್ಗೆ ಮೊಹಮ್ಮದ್ ಶಮಿ ನಿವೃತ್ತಿ: 13 ವರ್ಷಗಳ ಪಯಣ ಅಂತ್ಯ
ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 13 ವರ್ಷಗಳ ಟೆಸ್ಟ್ ಪಯಣಕ್ಕೆ ತೆರೆ ಎಳೆದಿರುವ ಶಮಿ ಸಾಧನೆಯನ್ನು ಬಿಸಿಸಿಐ ಸ್ಮರಿಸಿ, ಭಾರತೀಯ ವೇಗದ ಬೌಲಿಂಗ್ನಲ್ಲಿ ಒಂದು ಯುಗ ರೂಪಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದೆ. 64 ಟೆಸ್ಟ್ ಪಂದ್ಯಗಳಲ್ಲಿ 27.71ರ ಸರಾಸರಿಯಲ್ಲಿ 229 ವಿಕೆಟ್ ಪಡೆದಿರುವ ಶಮಿ, ಆರು ಬಾರಿ ಇನಿಂಗ್ಸ್ನಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಭಾರತದ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. 2013ರ ನವೆಂಬರ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಮಾಜಿ ಕೋಚ್ ರವಿಶಾಸ್ತ್ರಿ ಶಮಿ ಬೌಲಿಂಗ್ನ್ನು ಶ್ಲಾಘಿಸಿದ್ದು, ವಿಶ್ವದ ಯಾವುದೇ ಬೌಲರ್ ಅವರಷ್ಟು ಉತ್ತಮವಾಗಿ ಚೆಂಡನ್ನು ಸೀಮ್ ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2025ರ ಫೆಬ್ರವರಿಯ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡದ…
ಹೈಜಾಕ್ ಬೆದರಿಕೆ ಪತ್ರ: ಲಕ್ನೋಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ತುರ್ತು ವಾಪಸ್
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಪತ್ರವೊಂದು ಪತ್ತೆಯಾಗಿ ಆತಂಕ ಸೃಷ್ಟಿಯಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹರಿದಾಡುತ್ತಿದ್ದು, ಪತ್ರ ಸಿಕ್ಕ ಬೆನ್ನಲ್ಲೇ ವಿಮಾನವನ್ನು ತುರ್ತಾಗಿ ಏರ್ಪೋರ್ಟ್ ಲ್ಯಾಂಡ್ ಮಾಡಲಾಗಿದೆ ಎನ್ನಲಾಗಿದೆ. ಪ್ರಯಾಣಿಕರು ಬಾತ್ ರೂಮ್ಗೆ ಹೋದಾಗ ಪತ್ರ ಪತ್ತೆ ಆಗಿದೆ ಎನ್ನಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಶನಿವಾರ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಬೆಂಗಳೂರಿಗೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದ X ನಲ್ಲಿ ಸಾರ್ವಜನಿಕರು ಪೋಸ್ಟ್ ಹಾಕಿದ್ದಾರೆ. ಟರ್ಮಿನಲ್-1ರಿಂದ ಟೇಕ್ಆಫ್ ಆದ ವಿಮಾನದ ಶೌಚಾಲಯದಲ್ಲಿ ಕ್ಯಾಬಿನ್ ಸಿಬ್ಬಂದಿಗೆ ಕೈಬರಹದ ಪತ್ರವೊಂದು ಪತ್ತೆಯಾಗಿದೆ. ‘ಸಂಜೆ 6.30ಕ್ಕೆ ಈ ವಿಮಾನ ಹೈಜಾಕ್ ಆಗಲಿದೆ. ನಿರ್ಲಕ್ಷಿಸಿ, ಪರಿಣಾಮ ಎದುರಿಸಿ’ ಎಂಬ ಸಂದೇಶ ಅದರಲ್ಲಿ ಇತ್ತು ಎನ್ನಲಾಗಿದೆ. ತಕ್ಷಣ…
ಮೀಸಲಾತಿ ಹಕ್ಕೊತ್ತಾಯ; ಡಿ.10ರಂದು ಬೆಳಗಾವಿಯಲ್ಲಿ ಪಂಚಮಸಾಲಿಗಳ ಉಪವಾಸ ಸತ್ಯಾಗ್ರಹ
ಬೆಂಗಳೂರು: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ವಿಜಯೋತ್ಸವದ ಅಂಗವಾಗಿ ಹಾಗೂ ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ನಡೆಯಲಿರುವ ಪಂಚಮಸಾಲಿ ಸಮುದಾಯದ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಸಂಘಟನಾ ಸಭೆ ನಡೆಯಿತು. ಪಂಚಮಸಾಲಿ ಸಮುದಾಯಕ್ಕೆ ರಾಜ್ಯದ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪಸಮುದಾಯಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಮೆರಿಕದ ಪಂಚಮಸಾಲಿ ಮಹಾಸಭಾದ ಸಂಚಾಲಕ ಚಂದ್ರಕಾಂತ್ ಯತ್ನಾತ್ತಿ, ಪಂಚಮಗೌಡ ದ್ಯಾಮನಗೌಡ, ಕಾಕತೀಯ ರಾಜು ಬಾಗೇವಾಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ವಿದ್ಯಾರ್ಥಿ ಪರಿಷತ್ಗೆ ನೇಮಕ LPVP ವಿದ್ಯಾರ್ಥಿ ಪರಿಷತ್ನ ರಾಜ್ಯ ಘಟಕದ ಅಧ್ಯಕ್ಷರಾಗಿ ಬೆಂಗಳೂರಿನ ಜೆಎಸ್ಎಸ್ ಕಾಲೇಜಿನ ಬಿ.ಟಿ. ಜೀವನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಬಿರಾದರ್ ಅವರನ್ನು ನೇಮಕ ಮಾಡಲಾಯಿತು. ಅವರಿಗೆ ಸೇವಾ ಜವಾಬ್ದಾರಿಯ ಪ್ರತಿಜ್ಞೆ ಬೋಧಿಸಲಾಯಿತು. ಪ್ರಸಾದ ದಾಸೋಹಿಗಳಾದ ತ್ರಿಭುವನ್ ಗೌಡ ಮತ್ತು…
