ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೋಂಕು; 500 ದಾಟಿದ ಕಂಟೈನ್ಮೆಂಟ್ ಪ್ರದೇಶ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಹೆಚ್ಚಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಸುಮಾರು 43 ವಾರ್ಡ್ ಗಳಲ್ಲಿ ಕಂಟೈನ್ ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ಇದೀಗ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ 500 ದಾಟಿದೆ.

ಚಾಮರಾಜಪೇಟೆ, ಕೆ.ಆರ್ ಮಾರುಕಟ್ಟೆ, ಛಲವಾದಿಪಾಳ್ಯ, ಪಾದರಾಯನಪುರ, ಧರ್ಮರಾಯಸ್ವಾಮಿ ದೇವಸ್ಥಾನ, ಬಾಪುಜಿ ನಗರ ಮಂಗನಪಾಳ್ಯ ಕೆಂಗೇರಿ, ಸಿಂಗಸಂದ್ರ, ಹೊಂಗಸಂದ್ರ, ಸಿದ್ದಾಪುರ, ವಿಶ್ವೇಶಪುರಂ, ಆಜಾದ್ ನಗರ, ರಾಯಪುರಂ, ಸಂಪಂಗಿರಾಮನಗರ. ಭಾರತಿ ನಗರ, ವಸಂತ್ ನಗರ, ಗಾಂಧಿ ನಗರ, ಸುಭಾಷ್ ನಗರ, ಓಕಳಿಪುರಂ, ಅಗ್ರಹಾರ ದಾಸರಹಳ್ಳಿ, ಶಾಂತಲ ನಗರ, ಸುಧಾಮ ನಗರ, ಕಾಟನ್‌ಪೇಟ್, ಬಿನ್ನಿಪೇಟೆ, ಹೊಂಬೇಗೌಡ ನಗರ, ಲಕ್ಕಸಂದ್ರ, ಬೆಳ್ಳಂದೂರು, ಕೋರಮಂಗಲ, ಬಸವನಗುಡಿ, ಜಯನಗರ, ಶ್ರೀನಗರ, ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ, ಗಿರಿನಗರ, ಕತ್ರಿಗುಪ್ಪೆ, ಬೈರಸಂದ್ರ, ಮಡಿವಾಳ, ಬೊಮ್ಮನಹಳ್ಳಿ, ಸಹಿತ ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡುಬಂದಿದ್ದು ಈ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವೈಸಲಾಗುತ್ತಿದೆ.

Related posts