ದೊಡ್ಡಬಳ್ಳಾಪುರದಲ್ಲಿ ಕಳ್ಳರ ಹಾವಳಿ; ಗುಜರಿ ವ್ಯಾಪಾರಿಯ ಗೂಡ್ಸ್ ವಾಹನ ಹೊತ್ತೊಯ್ದ ಖದೀಮರು

ಬೆಂಗಳೂರು: ದೊಡ್ಡಬಳ್ಳಾಪುರ ನಗರದಲ್ಲಿ ಗುಜರಿ ವ್ಯಾಪಾರಿಯ ಗೂಡ್ಸ್ ವಾಹನವನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ.

ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ಬಳಿಯ ಗುಜರಿ ಅಂಗಡಿ ಮಾಲೀಕ ನಿಸಾರ್ ಅಹ್ಮದ್ ಎಂಬುವರು ಕಳೆದ ಗುರುವಾರ ರಾತ್ರಿ ಎಂದಿನಂತೆ ಗುಜರಿ ಅಂಗಡಿ ಮುಂಭಾಗ ನಿಲ್ಲಿಸಿದ್ದ ಗೂಡ್ಸ್ ವಾಹನ ಅಶೋಕ್ ಲೇಲ್ಯಾಂಡ್ ದೋಸ್ತ್ ಮಾಡೆಲ್ ಗಾಡಿಯನ್ನು ಪಾರ್ಕ್ ಮಾಡಿ ಹೋಗಿದ್ದಾರೆ. ಬೆಳಗ್ಗೆ ಬರುವಷ್ಟರಲ್ಲಿ ವಾಹನ ನಾಪತ್ತೆಯಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಪತ್ನಿ ಸ್ತ್ರೀ ಸಂಘದಲ್ಲಿ 2 ಲಕ್ಷ್ಮ ರೂ. ಸಾಲ ಮಾಡಿ ಕೊಟ್ಟಿದ್ದು, ಜೊತೆಗೆ ಒಂದಷ್ಟು ಹಣ ಜೋಡಿಸಿ, 9 ಲಕ್ಷ್ಮ ಮೌಲ್ಯದ ಗಾಡಿಯನ್ನು ಗುಜರಿ ವಸ್ತುಗಳ ಸಾರಿಗೆಯ ಅನುಕೂಲ ದೃಷ್ಟಿಯಿಂದ ಕಳೆದ ಎರಡೂವರೆ ತಿಂಗಳ ಹಿಂದೆ ಗುಜರಿ ಅಂಗಡಿ ಮಾಲೀಕ ನಿಸಾರ್ ಅಹ್ಮದ್ ಖರೀದಿಸಿದ್ದರು. ತಮ್ಮ ಕುಟುಂಬಕ್ಕೆ ಗುಜರಿ ಅಂಗಡಿಯೇ ಜೀವನಾಧಾರ, ಇದಕ್ಕಾಗಿ ಹಲವು ವರ್ಷಗಳಿಂದ ದುಡಿದ ಹಣವನ್ನು ಗೂಡ್ಸ್ ವಾಹನ ಖರೀದಿಸಲು ಬಂಡವಾಳವನ್ನು ಹಾಕಿದ್ದೆ. ಇದೀಗ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ನಮಗೆ ಆಘಾತವಾಗಿದೆ. ಬ್ಯಾಂಕ್ ನವರು ಇಎಂಐ ಕಟ್ಟಿ ಗಾಡಿ ಸಿಗುತ್ತೆ ಅಂತಾ ಹೇಳುತ್ತಿದ್ದಾರೆ ಎಂದು ನಿಸಾರ್ ಅಹ್ಮದ್ ಕಣ್ಣಿರಿತ್ತಿದ್ದಾರೆ.

Related posts