ಪಾಂಡವಪುರದಲ್ಲಿ ಖಾಕಿ ಕ್ರೌರ್ಯ; ಆರೆಸ್ಸೆಸ್ ಪ್ರತಿಭಟನೆಗೆ ಬೆಚ್ಚಿದ ಎಸ್ಪಿ; ತಪ್ಪಿತಸ್ತ ಪೊಲೀಸರ ವಿರುದ್ದ ಕ್ರಮದ ಭರವಸೆ

ಮಂಡ್ಯ: ಪಾಂಡವಪುರ RSS ಕಚೇರಿಯಿಂದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಘಟಕರನ್ನು ತಡರಾತ್ರಿಯಲ್ಲಿ ಏಕಾಏಕಿ ಬಂಧಿಸಿದ ಪೋಲೀಸರ ದುರ್ನಡತೆಯನ್ನು ಖಂಡಿಸಿ ಮತ್ತು RSS ಕಛೇರಿಯೊಳಗೆ ಶೂ ಹಾಕಿಕೊಂಡು ಕ್ರೌರ್ಯ ಮೆರೆದ ಪೋಲಿಸರ ಬೂಟಾಟಿಕೆಯನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಪಾಂಡವಪುರ ಪೋಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಮಣಿದ ಪೋಲೀಸ್ ಇಲಾಖೆ ದುಂಡಾವರ್ತನೆ ತೋರಿದ DYSP ಹಾಗೂ ಇನ್ಸ್ ಪೆಕ್ಟರ್ ರವರುಗಳನ್ನು ತಕ್ಷಣವೇ ಬೇರೆಡೆಗೆ ಕರ್ತವ್ಯಕ್ಕೆ ವರ್ಗಾಯಿಸಿ ಅವರುಗಳ ಮೇಲೆ ಸುಮೋಟೋ ಕೇಸ್ ದಾಖಲಿಸಿ ಬೇರೆ ಜಿಲ್ಲೆಯ ಅಡೀಷನಲ್ ಎಸ್.ಪಿ. ಯವರ ಮೂಲಕ ಇಲಾಖಾ ತನಿಖೆ ನಡೆಸುವುದಾಗಿಯೂ ಹಾಗೂ ತನಿಖೆ ವೇಳೆ ಆರೋಪಿತರು ಹಸ್ತಕ್ಷೇಪ ನಡೆಸದಂತೆ ಕ್ರಮ ಕೈಗೊಳ್ಳುವುದಾಗಿಯೂ ಮತ್ತು ತನಿಖಾ ವರದಿ ಬಂದ ಕೂಡಲೇ ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ಮಂಡ್ಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಬಹಿರಂಗವಾಗಿ ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿದ ಮೇರೆಗೆ ಪಾಂಡವಪುರ ಪೋಲೀಸ್ ಠಾಣೆಯೆದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Related posts