ಜುಲೈ 15ರಿಂದ ಗ್ರಾಮ ಪಂಚಾಯಿತಿಗಳಲ್ಲೂ ಇ-ಖಾತಾ ವಿತರಣೆ; ರಾಜ್ಯ ಸರ್ಕಾರದ ತಯಾರಿ

ಬೆಂಗಳೂರು: ರಾಜ್ಯ ಸರ್ಕಾರ ಇ-ಖಾತಾ ವಿತರಣೆಯ ವ್ಯಾಪ್ತಿಯನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಇ-ಖಾತಾ ನೀಡುವ ಕಾರ್ಯ ಕ್ರಮೇಣ ಆರಂಭವಾಗಲಿದೆ. ಜುಲೈ 15ರಿಂದ ಈ ಯೋಜನೆ ಜಾರಿಗೆ ಬರಬಹುದಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಇನ್ನುಳಿದಂತೆ, ಈಗಾಗಲೇ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲೇ ಮಾತ್ರ ಇ-ಖಾತಾ ನೀಡಲಾಗುತ್ತಿದೆ. ಆದರೆ ಹೊಸ ಅಧೀನದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ಸಿದ್ಧತೆಯಲ್ಲಿದೆ. ಜುಲೈ 15ರಿಂದ ಈ ಯೋಜನೆ ಜಾರಿಗೆ ಬರಬಹುದಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಇ-ಖಾತಾ ಎಂಬುದೇನು?

ಈ ಸಂಬಂಧ ಕರ್ನಾಟಕ ಗ್ರಾಮಸ್ವರಾಜ್ – ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಅನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಮಾಡಬಹುದಾಗಿದ್ದು, ಆ ಆಸ್ತಿಗಳನ್ನು ಇ-ಖಾತಾ ವ್ಯವಸ್ಥೆಯಡಿ ತರಲು ಅವಕಾಶ ದೊರೆಯಲಿದೆ.

ಇ-ಖಾತಾ ಎಂದರೆ A ಖಾತಾ ಪ್ರಮಾಣಪತ್ರದ ಡಿಜಿಟಲ್ ರೂಪವಾಗಿದೆ. ಈ ವ್ಯವಸ್ಥೆಯ ಮೂಲಕ ಆಸ್ತಿಯ ಮಾಲೀಕತ್ವ, ಗಾತ್ರ, ಸ್ಥಳ, ಬಳಕೆಯ ಸ್ವರೂಪ (ವಸತಿ ಅಥವಾ ವಾಣಿಜ್ಯ) ಸೇರಿದಂತೆ ಪೂರಕ ಮಾಹಿತಿಯನ್ನು ಡಿಜಿಟಲ್ ಮಾಧ್ಯಮದಲ್ಲಿ ಪಡೆಯಬಹುದಾಗಿದೆ.

ಇ-ಖಾತಾ ದಿಂದ ಆಸ್ತಿ ಸಂಬಂಧಿತ ದಾಖಲೆಗಳಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ. ಹಾಗೆಯೇ ಖರೀದಿ ಅಥವಾ ಮಾರಾಟ ಸಮಯದಲ್ಲಿ ಮೋಸದ ಸಾಧ್ಯತೆಯೂ ಕಡಿಮೆಯಾಗುತ್ತದೆ. ಈಗ ರಾಜ್ಯದಲ್ಲಿ ಇ-ಖಾತಾ ನೋಂದಣಿ ಕಡ್ಡಾಯವಾಗಿದ್ದು, ಆಧುನಿಕ ಪದ್ದತಿಯ ಆಸ್ತಿ ನಿರ್ವಹಣೆಗೆ ದಾರಿ ಸಾಗಿದೆ.

Related posts