ಬೆಂಗಳೂರು: ಶ್ರಾವಣ ಮಾಸದ ಅದ್ಧೂರಿ ಹಬ್ಬ ಎಂದೇ ಗುರುತಾಗಿರುವ ವರಮಹಾಲಕ್ಷ್ಮೀ ಪೂಜೆಯನ್ನು ನಾಡಿನೆಲ್ಲೆಡೆ ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಕೊರೋನಾ ಸಂಕಟ ಕಾಲದಲ್ಲೂ ಅದೃಷ್ಟ ಲಕ್ಷ್ಮಿಯ ಪೂಜಾ ಕೈಂಕರ್ಯಕ್ಕೆ ಯಾವುದೇ ಅಡ್ಡಿಯಾಗಿಲ್ಲ.
ಈ ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದೇ ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ತಮ್ಮ ನೂತನ ಗೃಹ ಕಚೇರಿಯನ್ನು ಆರಂಭಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ 7 ಮಿನಿಸ್ಟರ್ಸ್ ಕ್ವಾಟರ್ಸ್ ನ 4ನೇ ನಂಬರ್ ನಿವಾಸದಲ್ಲಿನ ಗೃಹ ಕಚೇರಿಯಿಂದಲೇ ಎಲ್ಲಾ ಸಾರ್ವಜನಿಕ ಭೇಟಿ, ಕಾರ್ಯಕಲಾಪಗಳನ್ನು ನಿರ್ವಹಿಸಲಿದ್ದೇನೆ ಎಂದಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಈ ಶುಭ ದಿನದಂದು ಸ್ಯಾಂಕಿ ರಸ್ತೆಯಲ್ಲಿರುವ 7 ಮಿನಿಸ್ಟರ್ಸ್ ಕ್ವಾಟರ್ಸ್ ನ 4ನೇ ನಂಬರ್ ನಿವಾಸದಲ್ಲಿ ನನ್ನ ಗೃಹ ಕಚೇರಿ ಆರಂಭಿಸಲಿದ್ದೇನೆ. ಇಂದಿನಿಂದ ಎಲ್ಲಾ ಸಾರ್ವಜನಿಕ ಭೇಟಿ, ಕಾರ್ಯಕಲಾಪಗಳನ್ನು ಅಲ್ಲಿಂದಲೇ ನಿರ್ವಹಿಸಲಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಶುಭ ಹಾರೈಕೆಗಳು ಇರಲಿ ಎಂದು ಕೋರುತ್ತೇನೆ. pic.twitter.com/LUkrNNK4nK
— Dr Sudhakar K (Modi ka Parivar) (@DrSudhakar_) July 31, 2020