ಬಾಳೆಕಾಯಿ ಹೂವಿನ ದೋಸೆ ಆರೋಗ್ಯಪೂರ್ಣವೂ ಹೌದು

ಬಾಳೆ ಬಹೂಪಯೋಗಿ. ಬಾಳೆಯಲ್ಲಿ ಬಿಸಾಡುವ ಅಂಶಗಳೇ ಇಲ್ಲ. ಬಾಳೆ ಹೂವಿನಿಂದ ಹಿಡಿದು ಹಣ್ಣಿನವರೆಗೆ, ದಿಂಡಿನಿಂದ ಹಿಡಿದು ಎಲೆಯವರೆಗೆ ಎಲ್ಲವೂ ಉಪಯುಕ್ತ. ಬಾಳೆಯ ದಿಂಡು, ಕುಂಡಿಗೆ, ಕಾಯಿ, ಹಣ್ಣು, ಎಲೆ ಹೀಗೆ ಸರ್ವ ಭಾಗಗಳೂ ಆರೋಗ್ಯಕಾರಕ. ಅದರಲ್ಲಿನ ಇರುವ ಆರೋಗ್ಯಕರ ಅಂಶಗಳು ನಮ್ಮ ದೇಹವನ್ನು ಸೇರುತ್ತವೆ. ಅದರಲ್ಲೂ ಬಾಳೆಕಾಯಿ ಹೂವಿನ ದೋಸೆ ರುಚಿಯೂ ಹೌದು, ಆರೋಗ್ಯಪೂರ್ಣವೂ ಹೌದು. ಇದನ್ನು ಮಾಡುವ ವಿಧಾನವೂ ಬಲು ಸುಲಭ. ಬೇಕಾದ ಸಾಮಗ್ರಿ ಬಾಳೆಕಾಯಿ ಹೂ 1 ಕಪ್ ದೋಸೆ ಅಕ್ಕಿ 2 ಕಪ್ ಉದ್ದು ಅರ್ಧ ಕಪ್ ಉಪ್ಪು ರುಚಿಗೆ ತಕ್ಕಸ್ಟು ಮಾಡುವ ವಿಧಾನ ದೋಸೆಅಕ್ಕಿ, ಉದ್ದು 3 ರಿಂದ 4 ಗಂಟೆಗಳ ಕಾಲ ನೆನಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಾಳೆಕಾಯಿ ಹೂವನ್ನು ಸಣ್ಣ ಸಣ್ಣಗೆ ಹೆಚ್ಚಿ ಅದನ್ನು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡದ್ದನ್ನು ಎಲ್ಲವನ್ನು ಚೆನ್ನಾಗಿ ಕಲಸಿ ಬೇಕಾದಷ್ಟು ಉಪ್ಪು ಸೇರಿಸಿ 8 ಗಂಟೆಗಳ ಕಾಲ…

‘ಗೋಳಿ ಬಜೆ’ ಮಾಡುವ ವಿಧಾನ ಬಲು ಸುಲಭ.

ಕರಾವಳಿಯ ತಿಂಡಿ ತಿನಿಸುಗಳ ಪೈಕಿ ‘ಗೋಳಿ ಬಜೆ’ ಭಾರೀ ಫೇಮಸ್ಸು. ಮಂಗಳೂರು ಬಜ್ಜಿ ಎಂದೂ ಇದನ್ನು ಕರೆಯಲಾಗುತ್ತದೆ. ಇದೀಗ ಇದು ಕರಾವಳಿಯಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದನ್ನು ತಯಾರಿಸಲು ಅಪ್ರತಿಮ ಪಾಕ ಪ್ರವೀಣರಾಗಬೇಕಿಲ್ಲ. ಮಾಡುವ ವಿಧಾನ ಬಲು ಸುಲಭ.. ಇದನ್ನೂ ಓದಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ

ಬರಲಿದೆ ‘ಫಿಶ್ ವೇಪರ್ಸ್’; ಕರಾವಳಿ ಮೂಲದ ಉದ್ಯಮಿ ಸಾಧನೆಗೆ ಸಿಎಂ ಫುಲ್ ಖುಷ್

ಬೆಂಗಳೂರು: ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಕಾರ್ಯವೈಖರಿಗೆ ಹೊಸ ಆಯಾಮ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮೀನುಗಾರರ ಪಾಲಿಗೆ ಆಶಾವಾದಿಯಾಗಿದ್ದಾರೆ. ಮತ್ಯೋದ್ಯಮ ಉತ್ತೇಜನ ಉದ್ದೇಶದಿಂದ ವಿನೂತನ ಉದ್ದಿಮೆಗೆ ಮುನ್ನುಡಿ ಬರೆದಿದ್ದಾರೆ. ಮೀನಿನಿಂದ ಚಿಪ್ಸ್ ತಯಾರಿಸುವ ಸುಧಾರಿತ ಅವಿಷ್ಕಾರ ಈ ಉದ್ಯಮಿಯ ಗರಡಿಯಲ್ಲಿ ಸಾಧ್ಯವಾಗಿದ್ದು, ಇದೀಗ ಎಲ್ಲರ ಕುತೂಹಲ ಈ ಚಿಪ್ಸ್‌ನತ್ತ ನೆಟ್ಟಿದೆ. ಏನಿದು ಫಿಷ್ ವೇಪರ್ಸ್? ಮೀನುಗಾರಿಕೆ ಕರಾವಳಿಯ ಸಾಂಪ್ರದಾಯಿಕ ಕಸುಬುಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಆಹಾರ ಕ್ಷೇತ್ರಕ್ಕಷ್ಟೇ ಅಲ್ಲ, ಫಿಷ್ ಆಯಿಲ್ ಸಹಿತ ವಿವಿಧ ಉತ್ಪನ್ನಗಳಿಗಾಗಿ ರಫ್ತಾಗುತ್ತವೆ. ಆದರೂ ಮತ್ಯೋದ್ಯಮ ಕ್ಷೇತ್ರ ಆರ್ಥಿಕವಾಗಿ ಬಡವಾಗಿದ್ದು ಮೀನಿಗೆ ಬೇಡಿಕೆ ಸೃಷ್ಟಿಸಿ ಮೀನುಗಾರ ಕುಟುಂಬಕ್ಕೆ ವರದಾನವಾಗುವ ರೀತಿ ಉದ್ದಿಮೆ ಸ್ಥಾಪಿಸುವಲ್ಲಿ ದೇಶದ ಪ್ರತಿಷ್ಟಿತ ಆಹಾರೋದ್ಯಮ ಸಂಸ್ಥೆ ‘ಶೆಫ್ ಟಾಕ್’ ಸಂಸ್ಥೆಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ‘ಮತ್ಸ್ಯ ಬಂಧನ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.…

‘ಪೇರಳೆ ಚಿಗುರು ತಂಬುಳಿ’ ರುಚಿ ಮಾತ್ರವಲ್ಲ ಆರೋಗ್ಯಪೂರ್ಣವೂ ಹೌದು

ಪೇರಳೆ ರುಚಿ ಮಾತ್ರ ಅಲ್ಲ ಆರೋಗ್ಯ ವೃದ್ಧಿ ಕೂಡಾ ಹೌದು. ಔಷಧಿ ಮಾದರಿಯ ವಸ್ತುಗಳ ತಯಾರಿಯಲ್ಲೂ ಈ‌ ಸೀಬೆಹಣ್ಣು ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲಾ ಕಾಲದಲ್ಲೂ ಸಿಗುವ ಸೀಬೆಯ ಬೇರೆ ಭಾಗಗಳು ಕೂಡ ತುಂಬಾ ಉಪಯುಕ್ತ. ಅದರ ಚಿಗುರೆಲೆಯ ‘ತಂಬುಳಿ’ ಹಳ್ಳಿ ಸೊಗಡಿನ ಖಾದ್ಯಗಳಲ್ಲೊಂದು. ಅದನ್ನು ತಯಾರಿಸುವ ವಿಧಾನವೂ ಸುಲಭ. ಬೇಕಾದ ಸಾಮಾಗ್ರಿ: ತೆಂಗಿನತುರಿ 1 ಕಪ್ ಜೀರ 1 ಚಮಚ ಕಾಯಿಮೆಣಸು 1 ಪೇರಳೆ ಚಿಗುರು 2 ಕಪ್ ಮಜ್ಜಿಗೆ ಅಥವಾ ಮೊಸರು 1 ಕಪ್ ಎಣ್ಣೆ 2 ಚಮಚ ಬೆಳ್ಳುಳ್ಳಿ 4 ( ಬೇಕಾದಲ್ಲಿ) ಕೆಂಪು ಮೆಣಸು 1 ಸಾಸಿವೆ 1 s ಕರಿಬೇವು ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ: ಮೊದಲಿಗೆ ಪೇರಳೆ ಚಿಗುರನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು…

‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ

ಬಾಳೆ ಹಣ್ಣಿನ ಪ್ರಯೋಜನ ನಿಮಗೆ ಗೊತ್ತಾ? ಈ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಮತ್ತಷ್ಟು ಬಲ, ಚೈತನ್ಯ ಹೆಚ್ಚುವುದು. ಹಾಗಾಗಿ ಯಾವುದಾದರೊಂದು ಖಾದ್ಯದ ರೂಪದಲ್ಲಿ ಬಾಳೆಹಣ್ಣನ್ನು ಸೇವಿಸುವವರು ಹಲವಾರು. ಈ ಪೈಕಿ ‘ಬಾಳೆ ಹಣ್ಣಿನ ದೋಸೆ’ ಕೂಡಾ ಒಂದು. ಆದರೆ ಇದನ್ನು ಮಾಡುವ ವಿಧಾನ ಬಹಳಷ್ಟು ಮಂದಿಗೆ ತಿಳಿದಿರಲ್ಲ. ಇದರ ತಯಾರಿ ಬಲು ಸುಲಭ. ಇಲ್ಲಿದೆ ನೋಡಿ ‘ಬಾಳೆ ಹಣ್ಣಿನ ದೋಸೆ’ ಮಾಡುವ ವಿಧಾನ.. ಇದನ್ನೂ ಮಾಡಿ ನೋಡಿ.. ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’  

ಕರಾವಳಿ ಶೈಲಿಯ ‘ಕೋರಿ ಪುಳಿಮುಂಚಿ’

ನಾಟಿ ಕೋಳಿ ಖಾದ್ಯ ಮಾಂಸಾಹಾರಿ ಪ್ರಿಯರ ಬಾಯಲ್ಲಿ ನೀರೂರಿಸುವುದಂತೂ ಸತ್ಯ. ಅದರಲ್ಲೂ ಕರಾವಳಿ ಶೈಲಿಯ ‘ಕೋರಿ ಪುಳಿಮುಂಚಿ’ ಅಂದರೆ ಇನ್ನೂ ಅಚ್ಚುಮೆಚ್ಚು. ಈ ‘ಕೋರಿ ಪುಳಿಮುಂಚಿ’ ತಯಾರಿ ವಿಧಾನ ಗೊತ್ತಾ? ಇಲ್ಲಿದೆ ನೋಡಿ.. ಇದನ್ನೂ ಓದಿ.. ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’   

ಮಾವಿನ ಹಣ್ಣು ಕ್ಯಾಂಡಿ; ಸವಿರುಚಿ ಅನುಭವಿಸಲು ಇದು ಸಕಾಲ

ಮಾವಿನ ಹಣ್ಣಿನಲ್ಲಿ ಬಗೆಬಗೆಯ ಖಾದ್ಯ ತಯಾರಿಸಬಹುದು. ಅದೇ ಹಣ್ಣಿನಲ್ಲಿ ಐಸ್ ಕ್ರೀಮ್ ಕೂಡಾ ತಯಾರಿಸುತ್ತಾರೆ. ಅದರ ಕ್ಯಾನದಿ ಕೂಡಾ ಸಕತ್ ರುಚಿ. ನೀವೂ ಮಾವಿನಹಣ್ಣು ಕ್ಯಾಂಡಿ ಕಂಡಿದ್ದೀರಾ? ಸವಿರುಚಿ ಅನುಭವಿಸಿದ್ದೀರಾ? ಮನೆಯಲ್ಲೇ ಕ್ಯಾಂಡಿ ತಯಾರಿಸಿ ಸವಿರುಚಿ ಅನುಭವಿಸಲು ಇದು ಸಕಾಲ. ಬೇಕಾದ ಸಾಮಗ್ರಿ: ಮಾವಿನಹಣ್ಣು 3 ಸಕ್ಕರೆ 13 ತೆಂಗಿನ ಹಾಲು 2 ಕಪ್ ಏಲಕ್ಕಿ ಹುಡಿ 1 ಚಮಚ ಮಾಡುವ ವಿಧಾನ ಮೊದಲಿಗೆ ಮಾವಿನಹಣ್ಣಿನ ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಬೇಕು. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಹುಡಿ ಹಾಕಿ ಇನ್ನೊಂದು ಸಲ ರುಬ್ಬಿಕೊಳ್ಳಬೇಕು. ನಂತರ ಸ್ವಲ್ಪ ಕಾಯಿಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಲಾಸ್ ಅಥವಾ ಕ್ಯಾಂಡಿ ಮೇಕರ್’ಗೆ ಹಾಕಿ 7-8 ಗಂಟೆಗಳ ಕಾಲ deep fridge ನಲ್ಲಿ ಇಟ್ಟರೆ ರುಚಿಯಾದ ಮಾವಿನಹಣ್ಣು ಕ್ಯಾಂಡಿ ಸವಿಯಲು ಸಿದ್ಧ. ಇದನ್ನೂ ಮಾಡಿ…

ರುಚಿ, ಆರೋಗ್ಯಕರ ‘ಬಾಳೆಹಣ್ಣು ಒರೆಯೋ ಕೇಕ್’

ಬಾಳೆಹಣ್ಣು ಒರೆಯೋ ಕೇಕ್ ಬಗ್ಗೆ ಕೇಳಿರಬಹುದು. ಆದರೆ ಮಾಡುವ ವಿಧಾನ ಗೊತ್ತಾ? ಇಲ್ಲಿದೆ ನೋಡಿ ಈ ವಿಶಿಷ್ಟ ಕೇಕ್ ತಯಾರಿಸುವ ಮಾರ್ಗದರ್ಶಿ ಸೂತ್ರ.. ಬೇಕಾದ ಸಾಮಗ್ರಿ ಬಾಳೆಹಣ್ಣು 8 ಗೋಧಿ ಹುಡಿ 2 ಕಪ್ ತೆಂಗಿನಕಾಯಿ ಹುಡಿ ಅರ್ಧ ಕಪ್ ಒರೆಯೋ ಕೇಕ್ 1 ಕಪ್ ಜೇನುತುಪ್ಪ 4 ಚಮಚ ಎಣ್ಣೆ ಅರ್ಧ ಕಪ್ ಬೆಲ್ಲ ಅರ್ಧ ಕಪ್ ಬೇಕಿಂಗ್ ಸೋಡಾ ಅರ್ಧ ಚಮಚ ಹಾಲು 2.5 ಕಪ್ ಮಾಡುವ ವಿಧಾನ ಮೊದಲಿಗೆ ಬಾಳೆಹಣ್ಣನ್ನು ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಬಾಳೆಹಣ್ಣನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲ ,ಜೇನುತುಪ್ಪ, ಎಣ್ಣೆ, ಸ್ವಲ್ಪ ಹಾಲು ಹಾಕಿ ಕಲಸಬೇಕು. ಗೋಧಿಹುಡಿ, ತೆಂಗಿನಕಾಯಿಹುಡಿ, ಬೇಕಿಂಗ್ ಸೋಡಾ, ಹಾಲು ಹಾಕಿ ಚೆನ್ನಾಗಿ ಇನ್ನೊಂದ್ ಸಲ ಕಲಸಬೇಕು. ನಂತರ ಒರಿಯೋ ಹಾಕಿ ಚೆನ್ನಾಗಿ ಕಲಸಿ ಒಂದು ಕಾಡಾಯಿ…

ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’

ಮಳೆಗಾಲ ಆರಂಭವಾಗುತ್ತಿದೆ. ಅಲ್ಲೋ ಇಲ್ಲೋ ಹೋಗಿ ತುಂತುರು ಮಳೆಗೆ ನೆಂದು ಶೀತಾ ಆಗಿಬಿಟ್ಟರೆ? ಹುಷಾರ್.. ಆದರೂ ಮನೆಯಲ್ಲಿ ಮನೆ ಮದ್ದು ಅಥವಾ ಶುಂಠಿ-ಜೀರಿಗೆ ಕಷಾಯ ಮಾಡಿಟ್ಟುಕೊಳ್ಳಿ. ಮಳೆಗಾಲ, ಛಳಿಗಾಲದಲ್ಲಿ ಮನೆಯಲ್ಲಿ ಬೆಚ್ಚಗೆ ಕುಳಿತು ಕಾಫಿ-ಟೀ ಕುಡಿಯುವ ಹಿತವಾದ ಅನುಭವ ಈ ಶುಂಠಿ-ಜೀರಿಗೆ ಕಷಾಯ ಕುಡಿಯುವುದರಲ್ಲೂ ಆಗುತ್ತದೆ. ಶೀತ, ಜ್ವರ, ನೆಗಡಿ, ಕಫ, ಗಂಟಲು ಕೆರತ ಉಂಟಾದರೆ ಅದಕ್ಕೆ ಈ ಕಷಾಯ ರಾಮಬಾಣ.. ಜೀರ್ಣಕ್ರಿಯೆಯೂ ಸುಲಭ.. ಸುಖಕರ ನಿದ್ರೆಗೂ ಅನುಕೂಲ.. ಈ ಕಷಾಯ ಪುಡಿ ತಯಾರಿಸುವ ವಿಧಾನವೂ ಸುಲಭ..

ಹಳ್ಳಿ ಸೊಗಡಿನ ತಿಂಡಿ ‘ಹಲಸಿನ ಹಣ್ಣಿನ ಮುಳ್ಕ’

ಬೇಸಿಗೆ ಸಂದರ್ಭದಲ್ಲಿ ಹಲಸಿನ ಹಣ್ಣು ಯಥೇಚ್ಛವಾಗಿ ಸಿಗುತ್ತವೆ. ನೂರಾರು ಖಾದ್ಯಗಳಿಗೆ ಬಳಸಲ್ಪಡುವ ಹಲಸಿನ ಹಣ್ಣು ನಳಪಾಕಕ್ಕೂ ಹೆಸರುವಾಸಿ. ಅದರಲ್ಲೂ ‘ಹಲಸಿನ ಹಣ್ಣಿನ ಮುಳ್ಕ’ ಹಳ್ಳಿ ಸೊಗಡಿನ ತಿಂಡಿಗಲ್ಲೊಂದು. ಅದನ್ನು ಮಾಡುವ ವಿಧಾನ ಗೊತ್ತಾ..? ಇದನ್ನೂ ಓದಿ.. ‘ಜಾಕ್ ಫ್ರೂಟು’ ಟೇಸ್ಟೂ ಹೌದು, ಸ್ವೀಟೂ ಹೌದು.. ಅದರ ದೋಸೆ? ಇಲ್ಲಿದೆ ನೋಡಿ ‘ಹಲಸಿನ ಹಣ್ಣಿನ ದೋಸೆ’